//=$aboutHtml?>
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
3Hrs 32Min
ಪಾಠಗಳ ಸಂಖ್ಯೆ
15 ವೀಡಿಯೊಗಳು
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
ಹಲಸನ್ನು ವಿಶ್ವದ ಅತಿದೊಡ್ಡ ಹಣ್ಣು ಎಂದು ಗುರುತಿಸಲಾಗುತ್ತದೆ. ಮನುಷ್ಯನ ಅರೋಗ್ಯಕ್ಕೆ ಈ ಹಣ್ಣು ಉತ್ತಮ ಕೊಡುಗೆಯನ್ನು ನೀಡುವುದರಿಂದ ಇದನ್ನು ಸೂಪರ್ ಫುಡ್ ಎಂದು ಸಹ ಕರೆಯಲಾಗುತ್ತದೆ. ಬಹಳಷ್ಟು ದೇಶದಲ್ಲಿ ಈ ಹಲಸನ್ನು ಮಾಂಸಾಹಾರಕ್ಕೆ ಪರ್ಯಾಯವಾಗಿ ಸಹ ಬಳಸಲಾಗುತ್ತದೆ. ಕ್ಯಾನ್ಸರ್ ಪೀಡಿತರಿಗೆ ಬಿಳಿ ರಕ್ತ ಕಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಹಣ್ಣಿನ ಪಾತ್ರ ಮಹತ್ವದ್ದು ಎಂದೂ ಸಹ ತಿಳಿದುಬಂದಿದೆ. ಈ ಎಲ್ಲ ಕಾರಣಗಳಿಗೆ ಹಲಸಿಗೆ ವಿಶ್ವದಾದ್ಯಂತ ಬಹಳಷ್ಟು ಬೇಡಿಕೆ ಸಹ ಇದೆ.
ಹಲಸಿನ ಹಣ್ಣನ್ನು ಬೆಳೆಯುವುದರಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಕೇರಳ ಮತ್ತು ತಮಿಳುನಾಡು ಈ ಹಣ್ಣಿನ ಬೆಳೆಯುವುದರಲ್ಲಿ ಇತರೆ ರಾಜ್ಯಗಳಿಗಿಂತ ಮುಂದಿವೆ. ಕೇರಳ ಹಲಸಿಗೆ “ರಾಜ್ಯದ ಹಣ್ಣು” ಎಂಬ ಬಿರುದನ್ನೂ ಸಹ ನೀಡಿದೆ. ಈ ಹಣ್ಣಿಗೆ ಇರುವ ಬೇಡಿಕೆ ಮತ್ತು ದೊಡ್ಡ ಮಾರುಕಟ್ಟೆ ಅವಕಾಶವನ್ನು ಗಮನದಲ್ಲಿಟ್ಟುಕೊಂಡು ffreedom ಅಪ್ಲಿಕೇಶನ್ ಹಲಸಿನ ಹಣ್ಣಿನ ಕೃಷಿ ಕುರಿತಂತೆ ಸಮಗ್ರವಾದ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಹಲಸಿನ ಹಣ್ಣಿನ ಕೃಷಿಯನ್ನು ಯಶಸ್ವಿಯಾಗಿ ಮಾಡಿರುವ ಸಾಧಕರು ನಿಮಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ.