4.4 from 5.9K ರೇಟಿಂಗ್‌ಗಳು
 2Hrs 49Min

ನಿಂಬೆ ಕೃಷಿ ಕೋರ್ಸ್ - ಎಕರೆಗೆ 4 ಲಕ್ಷ ಸಂಪಾದಿಸಿ

ನಿಂಬೆ ಕೃಷಿಯ ಸಾಮರ್ಥ್ಯವನ್ನು ತಿಳಿಯಿರಿ ಮತ್ತು ನಮ್ಮ ಕೋರ್ಸ್‌ನೊಂದಿಗೆ ಯಶಸ್ಸಿನ ಫಲವನ್ನು ಪಡೆದುಕೊಳ್ಳಿ!

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Lemon Farming Course Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(147)
ಬಿಸಿನೆಸ್ ಕೋರ್ಸ್‌ಗಳು(105)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 49Min
 
ಪಾಠಗಳ ಸಂಖ್ಯೆ
19 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

ಲಾಭದಾಯಕ ಕೃಷಿ ಬಿಸಿನೆಸ್ ಅನ್ನು  ಪ್ರಾರಂಭಿಸಲು ನೀವು ಆಸಕ್ತಿ ಹೊಂದಿದ್ದೀರಾ? ಹಾಗಿದ್ದರೆ ನಿಂಬೆ ಕೃಷಿ ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ!

ನಿಂಬೆ ಕೃಷಿಯು ಅದರ ಹೆಚ್ಚಿನ ಲಾಭದಾಯಕ ಸಾಮರ್ಥ್ಯದಿಂದಾಗಿ ಇತ್ತೀಚೆಗೆ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ. ಇದರಲ್ಲಿ ನೀವು ಸರಿಯಾದ ಜ್ಞಾನ ಮತ್ತು ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಕರೆಗೆ 4 ಲಕ್ಷಗಳವರೆಗೆ ಗಳಿಸಬಹುದು! ನಿಂಬೆ ಕೃಷಿಯ ಕುರಿತಾದ ಈ ಸಮಗ್ರ ಕೋರ್ಸ್ ನಿಮಗೆ ಈ ಕೃಷಿಯ ಕುರಿತಾದ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ಒದಗಿಸುತ್ತದೆ.  

ನಮ್ಮ ಈ ಕೋರ್ಸ್ ನಿಂಬೆಯನ್ನು ಬೆಳೆಯುವುದರಿಂದ ಹಿಡಿದು ಅತ್ಯಾಧುನಿಕ ಕೃಷಿ ತಂತ್ರಗಳವರೆಗೆ ಎಲ್ಲ ಅಗತ್ಯ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ನಿಂಬೆ ಫಾರ್ಮ್‌ಗೆ ಸರಿಯಾದ ಮಣ್ಣು, ಹವಾಮಾನ ಮತ್ತು ಸ್ಥಳವನ್ನು ಹೇಗೆ ಆಯ್ಕೆ ಮಾಡುವುದು ಮತ್ತು ನಿಮ್ಮ ಸಸ್ಯಗಳನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ಸಹ ನೀವು ಕಲಿಯುವಿರಿ. ಜೊತೆಗೆ ನಿಮ್ಮ ಬೆಳೆಗೆ ಅಪಾಯವನ್ನುಂಟುಮಾಡುವ ಕೀಟಗಳನ್ನು ಮತ್ತು ರೋಗಗಳನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ.

ಬಿ.ವಿ.ತಿಪ್ಪೇಸ್ವಾಮಿ ಮತ್ತು ಮಾಳಸಿದ್ದಪ್ಪ ಕುದರಿ ಅವರ ವ್ಯಾಪಕವಾದ ನಿಂಬೆ ಕೃಷಿ ಅನುಭವವು ಅವರನ್ನು ಈ ಕೋರ್ಸ್ ನ ಆದರ್ಶ ಮಾರ್ಗದರ್ಶಕರನ್ನಾಗಿ ಮಾಡುತ್ತದೆ. ಬಿ.ವಿ.ತಿಪ್ಪೇಸ್ವಾಮಿ ಅವರು 4 ನಿಂಬೆ ಗಿಡಗಳಿಂದ ಆರಂಭಿಸಿ ಈಗ 40 ಎಕರೆ ನಿಂಬೆ ತೋಟ ಹೊಂದಿ ಕೋಟಿಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಮಾಳಸಿದ್ದಪ್ಪ ಕುದರಿ ಅವರು 3 ಎಕರೆಯಲ್ಲಿ ನಿಂಬೆ ಬೆಳೆಯಲು ಆರಂಭಿಸಿದರು ಮತ್ತು ಅವರು ತಮ್ಮ ಕಠಿಣ ಪರಿಶ್ರಮದಿಂದ ಇನ್ನೂ 4 ಎಕರೆ ಖರೀದಿಸಲು ಉತ್ಸುಕರಾಗಿದ್ದಾರೆ. 

ನೆಡುವಿಕೆಯಿಂದ ಕೊಯ್ಲು ಮಾಡುವವರೆಗೆ ನಿಂಬೆ ಕೃಷಿಯ ಪ್ರತಿಯೊಂದು ಪ್ರಕ್ರಿಯೆಯ ಬಗ್ಗೆ ನಮ್ಮ ಮಾರ್ಗದರ್ಶಕರು ನಿಮಗೆ ಸರಿಯಾದ ಮಾರ್ಗದರ್ಶನ ಮಾಡುತ್ತಾರೆ. ಜೊತೆಗೆ ಗರಿಷ್ಠ ಲಾಭಕ್ಕಾಗಿ ನಿಮ್ಮ ನಿಂಬೆ ಬೆಳೆಯನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವ ಬಗ್ಗೆ ಸಹ ಅಮೂಲ್ಯವಾದ ಒಳನೋಟಗಳನ್ನು ಅವರು ನಿಮಗೆ ಒದಗಿಸುತ್ತಾರೆ. ನಿಮ್ಮ ನಿಂಬೆ ಕೃಷಿ ಬಿಸಿನೆಸ್ ನಲ್ಲಿ ದೀರ್ಘಾವಧಿಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಮತ್ತು ನಿಮ್ಮ ಹಣಕಾಸುಗಳನ್ನು ನಿರ್ವಹಿಸಲು ಮತ್ತು ನಿಮ್ಮ ಲಾಭವನ್ನು ಉತ್ತಮಗೊಳಿಸಲು ಸಹ ನೀವು ಈ ಕೋರ್ಸ್ ನಲ್ಲಿ ಕಲಿಯುವಿರಿ.  

ನಿಂಬೆ ಫಾರ್ಮ್ ಅನ್ನು ಹೇಗೆ ಪ್ರಾರಂಭಿಸಬೇಕು ಎಂದು ತಿಳಿಯಬೇಕೇ? ಹಾಗಿದ್ದರೆ ನಿಮ್ಮ ಫಾರ್ಮ್‌ಗಾಗಿ ಹಣವನ್ನು ಹೊಂದಿಸುವ ಮತ್ತು ಅದನ್ನು ಸರಿಯಾಗಿ ನಿರ್ವಹಿಸುವ ಅತ್ಯುತ್ತಮ ಅಭ್ಯಾಸಗಳ ಬಗ್ಗೆ ಎಲ್ಲಾ ಅಗತ್ಯ ಮಾಹಿತಿಯನ್ನು ನಮ್ಮ ಕೋರ್ಸ್ ನಿಮಗೆ ಒದಗಿಸುತ್ತದೆ. ಈಗಲೇ ನೋಂದಾಯಿಸಿ ಮತ್ತು ಲಾಭದಾಯಕ ನಿಂಬೆ ಕೃಷಿಯ ಪ್ರತಿಫಲವನ್ನು ಪಡೆದುಕೊಳ್ಳಲು ಪ್ರಾರಂಭಿಸಿ!

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಲಾಭದಾಯಕ ಕೃಷಿ ಬಿಸಿನೆಸ್ ಅನ್ನು ಹುಡುಕುತ್ತಿರುವ ಉದ್ಯಮಿಗಳು

  • ತಮ್ಮ ಬೆಳೆ ಉತ್ಪಾದನೆಯನ್ನು ವೈವಿಧ್ಯಗೊಳಿಸಲು ಆಸಕ್ತಿ ಹೊಂದಿರುವ ರೈತರು 

  • ನಿಂಬೆ ತೋಟವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು

  • ತಮ್ಮ ಜ್ಞಾನವನ್ನು ಹೆಚ್ಚಿಸಲು ಬಯಸುವ ಕೃಷಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು

  • ಲಾಭದಾಯಕ ನಿಂಬೆ ಕೃಷಿ ತಂತ್ರದ ಬಗ್ಗೆ ತಿಳಿದುಕೊಳ್ಳಲು ಬಯಸುವವರು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ನಿಂಬೆ ಕೃಷಿ ಮತ್ತು ಉತ್ಪಾದನೆಯ ಬೇಸಿಕ್ಸ್

  • ಮಣ್ಣಿನ ಆಯ್ಕೆ ಮತ್ತು ತಯಾರಿಕೆಯ ಉತ್ತಮ ಅಭ್ಯಾಸಗಳು

  • ನಿಂಬೆ ಗಿಡಗಳನ್ನು ನೆಡುವ ಮತ್ತು ಆರೈಕೆ ಮಾಡುವ ತಂತ್ರಗಳು

  • ಕೀಟಗಳು ಮತ್ತು ರೋಗಗಳನ್ನು ನಿರ್ವಹಿಸುವ ವಿಧಾನಗಳು

  • ಗರಿಷ್ಠ ಲಾಭಕ್ಕಾಗಿ ನಿಂಬೆ ಬೆಳೆಗಳನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವ ತಂತ್ರಗಳು

 

ಅಧ್ಯಾಯಗಳು 

  • ನಿಂಬೆ ಕೃಷಿ ಕೋರ್ಸ್ ಪರಿಚಯ: ಈ ಮಾಡ್ಯೂಲ್‌ನಲ್ಲಿ, ನಿಮಗೆ ಕೋರ್ಸ್ ಮತ್ತು ಅದರ ಉದ್ದೇಶಗಳನ್ನು ಪರಿಚಯಿಸಲಾಗುತ್ತದೆ. ಕೋರ್ಸ್‌ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆಯೂ ನೀವು ಕಲಿಯುವಿರಿ. 
  • ಮಾರ್ಗದರ್ಶಕರ ಪರಿಚಯ: ನಿಮ್ಮ ಪರಿಣಿತ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಅವರ ಅನುಭವ ಮತ್ತು ಅರ್ಹತೆಗಳ ಬಗ್ಗೆ ತಿಳಿದುಕೊಳ್ಳಿ.
  • ನಿಂಬೆ ಕೃಷಿಯನ್ನು ಏಕೆ ಆರಿಸಬೇಕು?: ಈ ಮಾಡ್ಯೂಲ್‌ನಲ್ಲಿ, ಮಾರುಕಟ್ಟೆಯ ಬೇಡಿಕೆ ಮತ್ತು ಲಾಭಗಳ ಸಾಮರ್ಥ್ಯ ಸೇರಿದಂತೆ ನಿಂಬೆ ಕೃಷಿಯ ಪ್ರಯೋಜನಗಳ ಬಗ್ಗೆ ನೀವು ಕಲಿಯುವಿರಿ.
  • ನಿಂಬೆ ಕೃಷಿಗೆ ಹೂಡಿಕೆ ಮತ್ತು ಹಣಕಾಸು: ನಿಂಬೆ ಫಾರ್ಮ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ಹೂಡಿಕೆಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ತಿಳಿಯಿರಿ.
  • ನಿಂಬೆ ಪ್ರಭೇದಗಳ ವಿಧಗಳು: ಈ ಮಾಡ್ಯೂಲ್‌, ವಿವಿಧ ರೀತಿಯ ನಿಂಬೆಹಣ್ಣುಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ಒಳಗೊಂಡಿದೆ. ವಿವಿಧ ಪ್ರದೇಶಗಳಿಗೆ ಯಾವ ಪ್ರಭೇದಗಳು ಉತ್ತಮವೆಂದು ಸಹ ನೀವು ಕಲಿಯುವಿರಿ.
  • ನಿಂಬೆ ಕೃಷಿಗಾಗಿ ಸೂಕ್ತ ಮಣ್ಣು ಮತ್ತು ಹವಾಮಾನ: ಈ ಮಾಡ್ಯೂಲ್‌, ಯಶಸ್ವಿ ನಿಂಬೆ ಕೃಷಿಗೆ ಸೂಕ್ತವಾದ ಮಣ್ಣಿನ ಮತ್ತು ಹವಾಮಾನ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಒದಗಿಸುತ್ತದೆ. 
  • ನಿಂಬೆ ಕೃಷಿಯಲ್ಲಿ ಕಾರ್ಮಿಕರ ನಿರ್ವಹಣೆ: ನಿಂಬೆ ಕೃಷಿಗೆ ಅಗತ್ಯವಿರುವ ಕಾರ್ಮಿಕರ ಪ್ರಮಾಣ ಮತ್ತು ನಿಮ್ಮ ಕಾರ್ಮಿಕ ಬಲವನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸುವುದು ಎಂಬುದರ ಕುರಿತು ತಿಳಿಯಿರಿ.
  • ನಿಂಬೆ ಕೃಷಿಗಾಗಿ ಭೂಮಿ ತಯಾರಿ ತಂತ್ರಗಳು: ಈ ಮಾಡ್ಯೂಲ್, ನಿಂಬೆ ಕೃಷಿಗಾಗಿ ಭೂಮಿ ಸಿದ್ದತೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.  
  • ಪರಿಣಾಮಕಾರಿ ರಸಗೊಬ್ಬರ ಮತ್ತು ಕಳೆ ನಿಯಂತ್ರಣ ವಿಧಾನಗಳು: ಆರೋಗ್ಯಕರ ನಿಂಬೆ ಬೆಳವಣಿಗೆಗೆ ಅಗತ್ಯವಾದ ರಸಗೊಬ್ಬರಗಳು ಮತ್ತು ನಿಂಬೆ ಕೃಷಿಗಾಗಿ ಪರಿಣಾಮಕಾರಿ ಕಳೆ ನಿಯಂತ್ರಣ ವಿಧಾನಗಳ ಬಗ್ಗೆ ತಿಳಿಯಿರಿ.
  • ನೀರಾವರಿ ಮತ್ತು ಬೆಳೆ ವೈವಿಧ್ಯೀಕರಣ: ಈ ಮಾಡ್ಯೂಲ್‌ನಲ್ಲಿ, ನಿಂಬೆ ಕೃಷಿಗೆ ಸೂಕ್ತವಾದ ನೀರಾವರಿ ವಿಧಾನಗಳ ಬಗ್ಗೆ ಮತ್ತು ನಿಂಬೆ ಗಿಡಗಳಿಗೆ ಅಗತ್ಯ ನೀರು ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಸಹ  ನೀವು ಕಲಿಯುವಿರಿ.
  • ನಿಂಬೆ ಕೃಷಿಯಲ್ಲಿ ಕೀಟ ನಿರ್ವಹಣೆ ಮತ್ತು ಸಸ್ಯ ಸಂರಕ್ಷಣೆ: ನಿಂಬೆ ಸಸ್ಯಗಳಿಗೆ ಸಾಮಾನ್ಯವಾಗಿ ಬಾಧಿಸುವ ಕೀಟಗಳು ಮತ್ತು ರೋಗಗಳ ಬಗ್ಗೆ ಜೊತೆಗೆ ಅದನ್ನು ನಿಯಂತ್ರಣ ಮತ್ತು ತಡೆಗಟ್ಟುವ ಬಗ್ಗೆ ತಿಳಿಯಿರಿ.
  • ನಿಂಬೆ ಬೆಳವಣಿಗೆ ಮತ್ತು ಅಭಿವೃದ್ಧಿ ಹಂತಗಳು: ಈ ಮಾಡ್ಯೂಲ್, ನಿಂಬೆ ಬೆಳವಣಿಗೆಯ ವಿವಿಧ ಹಂತಗಳ ಬಗ್ಗೆ ಮತ್ತು ಅದರ ನಿರ್ವಹಣೆಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ. 
  • ನಿಂಬೆ ಕೃಷಿಯಲ್ಲಿ ಸುಗ್ಗಿಯ ನಂತರದ ನಿರ್ವಹಣೆ ಮತ್ತು ಸಂಸ್ಕರಣೆ: ಈ ಮಾಡ್ಯೂಲ್‌ನಲ್ಲಿ, ಸರಿಯಾದ ಸಮಯದಲ್ಲಿ ನಿಂಬೆಹಣ್ಣುಗಳನ್ನು ಹೇಗೆ ಕೊಯ್ಲು ಮಾಡುವುದು ಮತ್ತು ಕೊಯ್ಲಿನ ನಂತರದಲ್ಲಿ ನಿರ್ವಹಣೆ ಮತ್ತು ಶೇಖರಣೆ ಮಾಡುವ ಬಗ್ಗೆ ನೀವು ಕಲಿಯುವಿರಿ.
  • ನಿಂಬೆ ಕೃಷಿಗಾಗಿ ಮಾರ್ಕೆಟಿಂಗ್ ತಂತ್ರಗಳು: ಮಾರುಕಟ್ಟೆ ಸಂಶೋಧನೆ ಮತ್ತು ವಿಶ್ಲೇಷಣೆ ಜೊತೆಗೆ ನಿಮ್ಮ ನಿಂಬೆ ಬೆಳೆಯನ್ನು ಸರಿಯಾಗಿ ಮಾರ್ಕೆಟಿಂಗ್ ಮಾಡಲು ಪರಿಣಾಮಕಾರಿ ತಂತ್ರಗಳ ಬಗ್ಗೆ ತಿಳಿಯಿರಿ.
  • ನಿಂಬೆ ಉತ್ಪನ್ನದ ಮೌಲ್ಯಮಾಪನ ಮತ್ತು ಬೆಲೆ: ಈ ಮಾಡ್ಯೂಲ್, ಗರಿಷ್ಠ ಲಾಭದಾಯಕತೆಗೆ ನಿಂಬೆ ಬೆಲೆಯ ಮೇಲೆ ಪರಿಣಾಮ ಬೀರುವ ವಿವಿಧ ಅಂಶಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. 
  • ನಿಂಬೆ ಕೃಷಿಯಲ್ಲಿ ಆದಾಯ ಮತ್ತು ಲಾಭದ ಲೆಕ್ಕಾಚಾರ: ನಿಂಬೆ ಕೃಷಿಯ ಆದಾಯ ಮತ್ತು ಲಾಭ ಲೆಕ್ಕಾಚಾರದ ಬಗ್ಗೆ ಮತ್ತು ನಿಮ್ಮ ಹಣಕಾಸನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಬಗ್ಗೆ ವಿವರವಾಗಿ ತಿಳಿಯಿರಿ.
  • ನಿಂಬೆ ಕೃಷಿಯಲ್ಲಿ ಸವಾಲುಗಳನ್ನು ನಿವಾರಿಸುವುದು: ಈ ಮಾಡ್ಯೂಲ್, ನಿಂಬೆ ಕೃಷಿಯಲ್ಲಿ ಎದುರಿಸುವ ಸಾಮಾನ್ಯ ಸವಾಲುಗಳ ಬಗ್ಗೆ ಮತ್ತು ಅದನ್ನು ಪರಿಣಾಮಕಾರಿಯಾಗಿ ಜಯಿಸುವ ಬಗ್ಗೆ ತಿಳಿಸುತ್ತದೆ. 
  • ಯಶಸ್ವಿ ನಿಂಬೆ ಕೃಷಿಗಾಗಿ ತಜ್ಞರ ಸಲಹೆ: ಈ ಮಾಡ್ಯೂಲ್‌ನಲ್ಲಿ, ನಿಮ್ಮ ನಿಂಬೆ ಕೃಷಿ ಬಿಸಿನೆಸ್ ನ ಉತ್ತಮ ಅಭ್ಯಾಸಗಳನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಬಗ್ಗೆ ಪರಿಣಿತ ಮಾರ್ಗದರ್ಶಕರಿಂದ ಸಲಹೆಗಳನ್ನು ಪಡೆಯುತ್ತೀರಿ. 

 

ಸಂಬಂಧಿತ ಕೋರ್ಸ್‌ಗಳು