ಈ ಕೋರ್ಸ್ ಒಳಗೊಂಡಿದೆ
ಗುಲಾಬಿ ಹೂವು ಯಾವಾಗಲೂ ಅದರ ಸೌಂದರ್ಯ ಮತ್ತು ಪರಿಮಳಕ್ಕಾಗಿ ಹೆಚ್ಚಿನ ಮೆಚ್ಚುಗೆ ಪಡೆದಿದೆ. ಎಲ್ಲಾ ಪೂಜೆ, ಸನ್ಮಾನ, ಮದುವೆ, ಸೌಂದರ್ಯದ ವಿಷಯಕ್ಕೆ ಬಂದರೆ ಈ ಗುಲಾಬಿ ಹೂವು ಮೊದಲ ಸ್ಥಾನವನ್ನು ಪಡೆದಿದೆ. ಇನ್ನು ಈ ಗುಲಾಬಿ ಹೂವು ಪೂಜೆ ಮತ್ತು ಅಲಂಕಾರಕ್ಕೆ ಮಾತ್ರವಲ್ಲದೆ ಈ ಹೂವನ್ನು ಪ್ರೀತಿಯ ಸಂಕೇತ ಎಂದು ಕೂಡ ಕರೆಯಲಾಗುತ್ತದೆ. ಗುಲಾಬಿ ಹೂವುಗಳನ್ನು ಸಡಿಲವಾದ ಹೂವುಗಳಾಗಿ ಅಥವಾ ಕತ್ತರಿಸಿದ ಹೂವುಗಳಾಗಿ ಮಾರಾಟ ಮಾಡಲಾಗುತ್ತದೆ. ಸಡಿಲವಾದ ಹೂವಿನ ವ್ಯಾಪಾರದಲ್ಲಿ ಹೂಮಾಲೆ ತಯಾರಿಕೆಗೆ ಸೂಕ್ತವಾದ ಸಂಪೂರ್ಣ ಅಭಿವೃದ್ಧಿ ಹೊಂದಿದ ಹೂವುಗಳನ್ನು ಮಾರಾಟ ಮಾಡಲಾಗುತ್ತದೆ. ನಾವು ನಿಮಗೆ ಈ ಕೋರ್ಸ್ ನಲ್ಲಿ ಮೆರಾಬುಲ್ ಗುಲಾಬಿ ಕೃಷಿ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡುತ್ತಿದ್ದೇವೆ.