ಈ ಕೋರ್ಸ್ ಒಳಗೊಂಡಿದೆ
ಮೂಸಂಬಿ ಬೆಳೆ ಇದು ಒಂದು ತೋಟಗಾರಿಕೆ ಬೆಳೆಯಾಗಿದೆ. ಮೂಸಂಬಿ ಹಣ್ಣಿನಲ್ಲಿ ವಿಟಮಿನ್ ಸಿ ಜೀವಸತ್ವ ಅಧಿಕವಾಗಿದೆ. ಯಾವುದೇ ಪ್ರಶ್ನೆಗಳಿಲ್ಲದೆ ಈ ಹಣ್ಣುಗಳನ್ನು ಯಾರು ಕೂಡ ಸೇವಿಸಬಹುದು. ಈ ಹಣ್ಣಿನ ಜ್ಯೂಸ್ ಒಂದು ಇಂಜೆಕ್ಷನ್ ಗೆ ಸಮಾನವಂತೆ. ನಿಮಗೆ ಗೊತ್ತಿರುವ ಹಾಗೆ ಮುಸುಂಬಿ ಮತ್ತು ಕಿತ್ತಳೆಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಇದಕ್ಕೆ ಮಾರ್ಕೆಟ್ ನಲ್ಲಿ ಹೆಚ್ಚು ಬೇಡಿಕೆ ಇದೆ . ಸಾಮಾನ್ಯ ದಿನಗಳಿಗಿಂತ ಹಬ್ಬ ಹರಿದಿನಗಳಲ್ಲಿ ಸಾಕಷ್ಟು ಬೇಡಿಕೆ ಇರುವಂತಹ ಕಿತ್ತಲೆ ಮತ್ತು ಮೂಸುಂಬಿ ಕೃಷಿಯನ್ನು ನೀವು ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಮಾಡಿದರೆ ಉತ್ತಮ ಲಾಭವನ್ನು ಗಳಿಸಬಹುದು. ಈ ಹಣ್ಣು ಶೀತ ಮತ್ತು ಕೆಮ್ಮಿಗೆ ಈ ಹಣ್ಣು ಅತ್ಯುತ್ತಮ ಪರಿಹಾರವಾಗಿದೆ. ಇನ್ನು ಮೂಸಂಬಿ ರಸ ಜೀರ್ಣಕಾರಿ ಚಟುವಟಿಕೆಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಆಮ್ಲ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗೆಯೇ ಹೊಟ್ಟೆಯ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.