ಈ ಕೋರ್ಸ್ ಒಳಗೊಂಡಿದೆ
ಆರ್ಕಿಡ್ ಹೂವುಗಳು ಕಲಾತ್ಮಕವಾಗಿ ಬಹಳ ಆಹ್ಲಾದಕರವಾದ ಹೂವುಗಳಾಗಿವೆ. ಇದನ್ನು ಮದುವೆಗಳಲ್ಲಿ ಅಲಂಕರಿಸಲು ಬಳಸಲಾಗುತ್ತದೆ. ನಮ್ಮ ದೇಶದಲ್ಲಿ ಮಾರಾಟವಾಗುವ 80 ಪ್ರತಿಶತ ಆರ್ಕಿಡ್‌ಗಳನ್ನು ಥೈಲ್ಯಾಂಡ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂಬುವುದು ನಿಮಗೆ ತಿಳಿದಿದೆಯೇ? ಹಾಗಾದರೆ ನಾವು ಏಕೆ ಈ ಹೂವಿನ ಕೃಷಿ ಮಾಡಿ ಆದಾಯ ಗಳಿಸಬಾರದು? ಈ ಹೂವಿನ ಕೃಷಿ ಮಾಡಿ ನೀವು ಎಕರೆಗೆ 24 ಲಕ್ಷ ಆದಾಯ ಗಳಿಸಬಹುದು. ಇಲ್ಲಿ ನಾವು ನಿಮಗೆ ಈ ಹೂವಿನ ಕೃಷಿಯನ್ನು ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೋರ್ಸ್ ನಲ್ಲಿ ನೀಡುತ್ತೇವೆ. ಆರ್ಕಿಡ್‌ಗಳನ್ನು ಬೆಳೆಸಲು ಅಗತ್ಯವಿರುವ ವರ್ಗೀಕರಣ, ಹವಾಮಾನ, ಪ್ರಸರಣ ವಿಧಾನ, ರಸಗೊಬ್ಬರಗಳು, ನೀರಾವರಿ ಇತ್ಯಾದಿಗಳ ಬಗ್ಗೆ ತಿಳಿಯಿರಿ.