ಈ ಕೋರ್ಸ್ ಒಳಗೊಂಡಿದೆ
ಫಂಗೈ ಕೃಷಿಯ ಜಗತ್ತಿನಲ್ಲಿ ರೋಮಾಂಚಕಾರಿ ಪ್ರಯಾಣವನ್ನು ಕೈಗೊಳ್ಳಲು ನೀವು ಸಿದ್ಧರಿದ್ದೀರಾ? ಹಾಗಿದ್ದರೆ, ನಿಮ್ಮದೇ ಸ್ವಂತ ಅಣಬೆ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಸಂಪೂರ್ಣ ಪ್ರಾಯೋಗಿಕ ಮಾರ್ಗದರ್ಶಿಯನ್ನು ನಿಮಗೆ ಒದಗಿಸಲು ನಮ್ಮ ಈ ಆಯ್ಸ್ಟರ್ ಮಶ್ರೂಮ್ ಫಾರ್ಮಿಂಗ್ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಆರೋಗ್ಯಕರ ಮತ್ತು ಸಾವಯವ ಆಹಾರಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಅಣಬೆ ಕೃಷಿಯು ಗಮನಾರ್ಹ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದರ ಜೊತೆಗೆ ಜಾಗತಿಕ ಮಶ್ರೂಮ್ ಮಾರುಕಟ್ಟೆಯು 2027 ರ ವೇಳೆಗೆ ಸುಮಾರು $69.3 ಶತಕೋಟಿ ಮೌಲ್ಯವನ್ನು ತಲುಪುವ ನಿರೀಕ್ಷೆಯಿದೆ. ಭಾರತದಲ್ಲಿ, ಅಣಬೆ ಉದ್ಯಮವು 2020-2025ರ ಅವಧಿಯಲ್ಲಿ 11.4% CAGR ನಲ್ಲಿ ಬೆಳೆಯುವ ನಿರೀಕ್ಷೆಯಿದೆ. ಈ ಉದ್ಯಮದಲ್ಲಿ ಹೂಡಿಕೆ ಮಾಡಲು ಬಯಸುವ ಉದ್ಯಮಿಗಳಿಗೆ ಇದು ಲಾಭದಾಯಕ ಅವಕಾಶವನ್ನು ಒದಗಿಸುತ್ತದೆ.
ನಮ್ಮ ಈ ಆಯ್ಸ್ಟರ್/ಸಿಂಪಿ ಮಶ್ರೂಮ್ ಫಾರ್ಮಿಂಗ್ ಕೋರ್ಸ್, ಅಣಬೆ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ಪ್ರಾಯೋಗಿಕ ಜ್ಞಾನವನ್ನು ನಿಮಗೆ ಒದಗಿಸುತ್ತದೆ. ಫಾರ್ಮ್ ಅನ್ನು ಸೆಟ್ ಅಪ್ ಮಾಡುವುದು, ಸರಿಯಾದ ಸಬ್ಸ್ಟ್ರೇಟ್ ಆಯ್ಕೆ ಮಾಡುವುದು, ಕೊಯ್ಲು ಮಾಡುವುದು, ಪ್ಯಾಕೇಜಿಂಗ್ ಮಾಡುವುದು ಮತ್ತು ನಿಮ್ಮ ಅಣಬೆಗಳನ್ನು ಮಾರಾಟ ಮಾಡುವುದು ಮುಂತಾದ ಎಲ್ಲವನ್ನೂ ಈ ಕೋರ್ಸ್ ಒಳಗೊಂಡಿದೆ. ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಮತ್ತು ಇಳುವರಿಯನ್ನು ಹೆಚ್ಚಿಸುವ ಬಗ್ಗೆ ಕೂಡ ಮಾಡ್ಯೂಲ್‌ಗಳನ್ನು ಈ ಕೋರ್ಸ್ ಒಳಗೊಂಡಿದೆ.
ಈ ಕೋರ್ಸ್ ಅನ್ನು ಪಡೆದುಕೊಳ್ಳುವ ಮೂಲಕ, ನೀವು ಅಣಬೆ ಕೃಷಿ ಬಿಸಿನೆಸ್ ಬಗ್ಗೆ, ಅದರ ಅವಕಾಶಗಳ ಬಗ್ಗೆ ಮತ್ತು ಯಶಸ್ವಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ನಡೆಸಲು ಅಗತ್ಯವಿರುವ ವಿವಿಧ ಹಂತಗಳ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಪಡೆಯುತ್ತೀರಿ.
ನಿಮ್ಮ ಎಲ್ಲಾ ಸಂದೇಹವನ್ನು ಪರಿಹರಿಸಲು ನಿಮಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. ffreedom appನಲ್ಲಿ ಇಂದೇ ನಮ್ಮ ಆಯ್ಸ್ಟರ್/ಸಿಂಪಿ ಮಶ್ರೂಮ್ ಫಾರ್ಮಿಂಗ್ ಕೋರ್ಸ್‌ಗೆ ನೋಂದಾಯಿಸಿ ಮತ್ತು ಉದ್ಯಮಶೀಲತೆಯತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ತಮ್ಮ ಆದಾಯದ ಸ್ಟ್ರೀಮ್ ಗಳನ್ನು ವೈವಿಧ್ಯಗೊಳಿಸಲು ಬಯಸುವ ಅಥವಾ ಕೃಷಿ ಮಾಡಲು ಪರ್ಯಾಯ ಬೆಳೆಗಳನ್ನು ಹುಡುಕುತ್ತಿರುವ ರೈತರು
ಅಣಬೆ ಫಾರ್ಮ್ ಅನ್ನು ಹೊಸ ಬಿಸಿನೆಸ್ ಆಗಿ ಪ್ರಾರಂಭಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು
ಸುಸ್ಥಿರ ಕೃಷಿ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ಆಸಕ್ತಿ ಹೊಂದಿರುವ ಸರ್ಕಾರೇತರ ಸಂಸ್ಥೆಗಳು (NGOಗಳು) ಅಥವಾ ಸಮುದಾಯ ಸಂಸ್ಥೆಗಳು
ಶೆಫ್ ಗಳು ಅಥವಾ ಆಹಾರ ವಿಜ್ಞಾನಿಗಳಂತಹ ಆಹಾರ ಉದ್ಯಮದಲ್ಲಿನ ವೃತ್ತಿಪರರು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಸಿಂಪಿ ಅಣಬೆ ಕೃಷಿ ತಂತ್ರಗಳ ಬಗ್ಗೆ ಪ್ರಾಯೋಗಿಕ ಮಾಹಿತಿ
ಸಾಮಾನ್ಯ ರೋಗಗಳು ಮತ್ತು ಕೀಟಗಳನ್ನು ಹೇಗೆ ತಡೆಗಟ್ಟುವುದು ಮತ್ತು ನಿರ್ವಹಿಸುವುದು ಎಂಬುದರ ಕುರಿತು ಜ್ಞಾನವನ್ನು ಪಡೆದುಕೊಳ್ಳಿ
ಮಾರುಕಟ್ಟೆ, ಹಣಕಾಸು ಯೋಜನೆ ಮತ್ತು ನಿರ್ವಹಣೆ ಸೇರಿದಂತೆ ಅಣಬೆ ಕೃಷಿಯ ಬಿಸಿನೆಸ್ ಅಂಶಗಳನ್ನು ತಿಳಿದುಕೊಳ್ಳಿ
ಸಿಂಪಿ ಅಣಬೆಗಳ ಪೌಷ್ಟಿಕಾಂಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ
ಅಣಬೆ ಕೃಷಿಯ ಪರಿಸರದ ಪ್ರಭಾವವನ್ನು ವಿವರವಾಗಿ ಅರ್ಥಮಾಡಿಕೊಳ್ಳಿ
ಅಧ್ಯಾಯಗಳು