4.5 from 17.1K ರೇಟಿಂಗ್‌ಗಳು
 4Hrs 29Min

ನರ್ಸರಿ ಬಿಸಿನೆಸ್ ಕೋರ್ಸ್ - ತಿಂಗಳಿಗೆ 5 ಲಕ್ಷ ಗಳಿಸಿ!

5 ಲಕ್ಷಗಳ ಮಾಸಿಕ ಆದಾಯದೊಂದಿಗೆ ಲಾಭದಾಯಕ ಸಸ್ಯ ನರ್ಸರಿಯನ್ನು ನಡೆಸಲು ಕಲಿಯಿರಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

What is Plant Nursery?
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(152)
ಬಿಸಿನೆಸ್ ಕೋರ್ಸ್‌ಗಳು(108)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
4Hrs 29Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
ಇನ್ಶೂರೆನ್ಸ್ ಪ್ಲಾನಿಂಗ್ ,ಬಿಸಿನೆಸ್ ಅವಕಾಶಗಳು, Completion Certificate
 
 

ತೋಟಗಾರಿಕೆಯಲ್ಲಿ ತಮ್ಮ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ವ್ಯಕ್ತಿಗಳಿಗಾಗಿ ಈ ಪ್ಲಾಂಟ್ ನರ್ಸರಿ ಬಿಸಿನೆಸ್ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಲಾಭದಾಯಕ ಸಸ್ಯ ನರ್ಸರಿಯನ್ನು ಆರಂಭಿಸುವುದರ ಮೇಲೆ ಕೇಂದ್ರೀಕರಿಸಿ, ಈ ಕೋರ್ಸ್ ನಿಮಗೆ ಸಾಲಿಡ್ ಬಿಸಿನೆಸ್ ಪ್ಲಾನ್ ಅಭಿವೃದ್ಧಿಪಡಿಸುವುದು, ಸರಿಯಾದ ಸಸ್ಯಗಳನ್ನು ಆಯ್ಕೆ ಮಾಡುವುದು ಮತ್ತು ನಿಮ್ಮ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಹೇಗೆ ಮಾರುಕಟ್ಟೆ ಮಾಡುವುದು ಎಂದು ಕಲಿಸುತ್ತದೆ.

ಭಾರತದಲ್ಲಿ, ಪ್ಲಾಂಟ್ ನರ್ಸರಿ ಬಿಸಿನೆಸ್ ಅಪಾರ ಸಾಮರ್ಥ್ಯವನ್ನು ಹೊಂದಿದೆ, ಮತ್ತು ಸರಿಯಾದ ವಿಧಾನದೊಂದಿಗೆ ನೀವು ಈ ಬಿಸಿನೆಸ್ ನಲ್ಲಿ ತಿಂಗಳಿಗೆ 5 ಲಕ್ಷ ಅಥವಾ ಅದಕ್ಕೂ ಹೆಚ್ಚು ಗಳಿಸಬಹುದು. ಈ ಕೋರ್ಸ್ ಮಾರುಕಟ್ಟೆ ಸಂಶೋಧನೆ, ಹಣಕಾಸು ಯೋಜನೆ ಮತ್ತು ಸೂಕ್ತವಾದ ಸಸ್ಯ ಪ್ರಭೇದಗಳನ್ನು ಆಯ್ಕೆ ಮಾಡುವುದು ಸೇರಿದಂತೆ ಯಶಸ್ವಿ ಸಸ್ಯ ನರ್ಸರಿಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಅಂಶಗಳನ್ನು ಒಳಗೊಂಡಿದೆ. ಯಶಸ್ಸನ್ನು ಸಾಧಿಸಲು ಅಗತ್ಯವಿರುವ ವಿವಿಧ ಬಿಸಿನೆಸ್ ಮಾಡಲ್ ಗಳು ಮತ್ತು ತಂತ್ರಗಳ ಬಗ್ಗೆಯೂ ಸಹ ನೀವು ಕಲಿಯುವಿರಿ.

ಅನುಭವಿ ತೋಟಗಾರರಾಗಿರಲಿ ಅಥವಾ ಸಂಪೂರ್ಣ ಆರಂಭಿಕರಾಗಿರಲಿ, ನಿಮ್ಮ ಸ್ವಂತ ಪ್ಲಾಂಟ್ ನರ್ಸರಿ ಬಿಸಿನೆಸ್ ಪ್ರಾರಂಭಿಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. ಒಳಾಂಗಣ ಮತ್ತು ಹೊರಾಂಗಣ ಸಸ್ಯ ಮಾರಾಟ, ಕಾಲೋಚಿತ ಸಸ್ಯ ಮಾರಾಟ, ಮತ್ತು ಸಾವಯವ ಮತ್ತು ಪರಿಸರ ಸ್ನೇಹಿ ಸಸ್ಯಗಳ ಉತ್ಪಾದನೆ ಸೇರಿದಂತೆ ವಿವಿಧ ಸಸ್ಯ ನರ್ಸರಿ ಬಿಸಿನೆಸ್ ಕಲ್ಪನೆಗಳನ್ನು ನೀವು ಕಂಡುಕೊಳ್ಳುವಿರಿ.

5 ಯಶಸ್ವಿ ನರ್ಸರಿ ಬಿಸಿನೆಸ್ ಮಾಲೀಕರಾಗಿರುವ ಶ್ರೀ ಬಾಲರಾಜ್, ಶ್ರೀ ಪ್ರಕಾಶ್, ಶ್ರೀ ವೆಂಕಟೇಶ್, ಶ್ರೀ ವಿಕ್ಟರ್ ಪಾಲ್, ಮತ್ತು ಶ್ರೀ ಆದರ್ಶ್ ಅವರು ಈ ಪ್ಲಾಂಟ್ ನರ್ಸರಿ ಬಿಸಿನೆಸ್ ಕೋರ್ಸ್ ಅನ್ನು ಮುನ್ನಡೆಸುತ್ತಾರೆ. ಇವರೆಲ್ಲರೂ ಈ ಕ್ಷೇತ್ರದಲ್ಲಿ 5-20 ವರ್ಷಗಳ ಅನುಭವವನ್ನು ಹೊಂದಿದ್ದಾರೆ, ಹೆಚ್ಚುವರಿಯಾಗಿ, ನರ್ಸರಿ ವ್ಯಾಪಾರ ಸಹಕಾರ ಸಂಘದ ಕಾರ್ಯದರ್ಶಿ ಶ್ರೀ ಚನ್ನಗೌಡ ಅವರು ಈ ಕೋರ್ಸ್‌ನ ಅಗತ್ಯ ಒಳನೋಟಗಳನ್ನು ಒದಗಿಸುತ್ತಾರೆ.

ಈ ಕೋರ್ಸ್‌ನ ಅಂತ್ಯದ ವೇಳೆಗೆ, ಯಶಸ್ವಿ ಪ್ಲಾಂಟ್ ನರ್ಸರಿ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ನಡೆಸುವುದು ಎಂಬುದರ ಬಗ್ಗೆ ನೀವು ಸಮಗ್ರ ತಿಳುವಳಿಕೆಯನ್ನು ಹೊಂದಿರುತ್ತೀರಿ. ಪ್ರಾಯೋಗಿಕ ತರಬೇತಿ ಮತ್ತು ತಜ್ಞರ ಮಾರ್ಗದರ್ಶನದೊಂದಿಗೆ, ಸಸ್ಯಗಳ ಮೇಲಿನ ನಿಮ್ಮ ಉತ್ಸಾಹವನ್ನು ಲಾಭದಾಯಕ ವ್ಯವಹಾರವಾಗಿ ಪರಿವರ್ತಿಸಲು ನೀವು ಸುಸಜ್ಜಿತರಾಗಿರುತ್ತೀರಿ. ಈಗಲೇ ನೋಂದಾಯಿಸಿ ಮತ್ತು ನಿಮ್ಮ ಯಶಸ್ವಿ ಪ್ಲಾಂಟ್ ನರ್ಸರಿ ಬಿಸಿನೆಸ್ ಪ್ರಾರಂಭಿಸಲು ಮೊದಲ ಹೆಜ್ಜೆ ಇರಿಸಿ!

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಪ್ಲಾಂಟ್ ನರ್ಸರಿ ಬಿಸಿನೆಸ್ ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು 

  • ತಮ್ಮ ಪ್ಯಾಷನ್ ಅನ್ನು ಲಾಭದಾಯಕ ಉದ್ಯಮವನ್ನಾಗಿಸಲು ಬಯಸುವ ಹವ್ಯಾಸಿ ತೋಟಗಾರರು   

  • ತಮ್ಮ ಅಸ್ತಿತ್ವದಲ್ಲಿರುವ ಬಿಸಿನೆಸ್ ಗೆ ಹೊಸ ಆದಾಯದ ಸ್ಟ್ರೀಮ್ ಅನ್ನು ಸೇರಿಸಲು ಬಯಸುವ ವ್ಯಕ್ತಿಗಳು

  • ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದ ವಿದ್ಯಾರ್ಥಿಗಳು ಮತ್ತು ವೃತ್ತಿಪರರು

  • ಪ್ಲಾಂಟ್ ನರ್ಸರಿ ಬಿಸಿನೆಸ್ ನಡೆಸುವ ಬಗ್ಗೆ ತಿಳಿದುಕೊಳ್ಳಲು ಬಯಸುವವರು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಪ್ಲಾಂಟ್ ನರ್ಸರಿ ಬಿಸಿನೆಸ್ ಪ್ರಾರಂಭಿಸುವ ಮತ್ತು ನಿರ್ವಹಿಸುವ ಅಗತ್ಯ ಅಂಶಗಳು

  • ಮಾರುಕಟ್ಟೆ ಸಂಶೋಧನೆ, ಹಣಕಾಸು ಯೋಜನೆ ಮತ್ತು ಸರಿಯಾದ ಸಸ್ಯ ಜಾತಿಗಳನ್ನು ಆಯ್ಕೆ ಮಾಡುವ ತಂತ್ರಗಳು

  • ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ ಸೇರಿದಂತೆ ಸಸ್ಯಗಳನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವ ತಂತ್ರಗಳು

  • ಸಮಗ್ರ ಬಿಸಿನೆಸ್ ಪ್ಲಾನ್ ಅಭಿವೃದ್ಧಿಪಡಿಸುವುದು ಹೇಗೆ ಎಂಬುದರ ಬಗ್ಗೆ ತಿಳಿಯಿರಿ

  • ಸಸ್ಯಗಳನ್ನು ಬೆಳೆಸಲು ಮತ್ತು ನಿರ್ವಹಿಸಲು ವೆಚ್ಚ-ಪರಿಣಾಮಕಾರಿ ವಿಧಾನಗಳು

 

ಅಧ್ಯಾಯಗಳು 

  • ಮಾರ್ಗದರ್ಶಕರ ಪರಿಚಯ: ಈ ಕೋರ್ಸ್ ನ ಮಾರ್ಗದರ್ಶಕರ ಹಿನ್ನಲೆ ಮತ್ತು ಅವರ ಸಾಧನೆಯ ಹಾದಿಯ ಬಗ್ಗೆ ವಿವರವಾದ ಮಾಹಿತಿ. 
  • ಪ್ಲಾಂಟ್ ನರ್ಸರಿ ಬಿಸಿನೆಸ್ ಏಕೆ?: ಪ್ಲಾಂಟ್ ನರ್ಸರಿ ಬಿಸಿನೆಸ್ ನ ಸಾಮರ್ಥ್ಯದ ಬಗ್ಗೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಅನ್ವೇಷಿಸಿ.
  • ಸರಿಯಾದ ಸ್ಥಳವನ್ನು ಆಯ್ಕೆ: ಸೂಕ್ತವಾದ ಸ್ಥಳ, ಹವಾಮಾನ ಮತ್ತು ಮೂಲಸೌಕರ್ಯ ಅಗತ್ಯತೆಗಳ ಬಗ್ಗೆ ವಿವರವಾಗಿ ತಿಳಿಯಿರಿ.
  • ವಿವಿಧ ರೀತಿಯ ನರ್ಸರಿಗಳು: ಒಳಾಂಗಣ, ಹೊರಾಂಗಣ ಮತ್ತು ಕಾಲೋಚಿತ ಸೇರಿದಂತೆ ವಿವಿಧ ರೀತಿಯ ನರ್ಸರಿಗಳನ್ನು ಅನ್ವೇಷಿಸಿ.
  • ಅಗತ್ಯ ಉಪಕರಣಗಳು ಮತ್ತು ಸಿಬ್ಬಂದಿ: ನರ್ಸರಿ ಪ್ರಾರಂಭಿಸಲು ಅಗತ್ಯವಿರುವ ಸಲಕರಣೆಗಳು ಮತ್ತು ಸಿಬ್ಬಂದಿಗಳ ಬಗ್ಗೆ ತಿಳಿಯಿರಿ.
  • ಸೋರ್ಸಿಂಗ್ ಮತ್ತು ಮಾರಾಟ ಸಸ್ಯಗಳು: ಸಸ್ಯಗಳನ್ನು ಸೋರ್ಸಿಂಗ್, ಸಂಗ್ರಹಣೆ ಮಾಡುವ ಬಗ್ಗೆ ಮತ್ತು ಮಾರಾಟದ ಪ್ರಕ್ರಿಯೆಗಳ ಬಗ್ಗೆ ತಿಳಿಯಿರಿ.
  • ಹಣಕಾಸು ಯೋಜನೆ ಮತ್ತು ನಿರ್ವಹಣೆ: ನಿಮ್ಮ ನರ್ಸರಿಗೆ ಹಣಕಾಸು ಯೋಜನೆ, ಬಜೆಟಿಂಗ್ ಮಾಡುವ ಬಗ್ಗೆ ತಿಳಿಯಿರಿ.
  • ಕಾನೂನು ಮತ್ತು ರೇಗುಲೇಟರಿ ಅಗತ್ಯತೆಗಳು: ನರ್ಸರಿಯನ್ನು ಪ್ರಾರಂಭಿಸಲು ಕಾನೂನು ಮತ್ತು ರೇಗುಲೇಟರಿ ಅಗತ್ಯತೆಗಳ ಬಗ್ಗೆ ತಿಳಿಯಿರಿ.
  • ಮಾರ್ಕೆಟಿಂಗ್ ಮತ್ತು ಟಾರ್ಗೆಟ್ ಕಸ್ಟಮರ್: ಪೊಟೆನ್ಷಿಯಲ್ ಗ್ರಾಹಕರನ್ನು ತಲುಪಲು ಗ್ರಾಹಕರ ನಡವಳಿಕೆ ಮತ್ತು ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ಅಧ್ಯಯನ ಮಾಡಿ.
  • ಸ್ಪರ್ಧೆ ಮತ್ತು ಸುಸ್ಥಿರತೆ: ನರ್ಸರಿ ಬಿಸಿನೆಸ್ ನಲ್ಲಿನ ಸ್ಪರ್ಧೆ, ಸುಸ್ತಿರತೆ ಮತ್ತು ಲಾಭದಾಯಕತೆಯ ಬಗ್ಗೆ ತಿಳಿಯಿರಿ.
  • ನರ್ಸರಿ ಬಿಸಿನೆಸ್ ನ ಸವಾಲುಗಳು: ನರ್ಸರಿ ಮಾಲೀಕರು ಎದುರಿಸುವ ಸಾಮಾನ್ಯ ಸವಾಲುಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಜಯಿಸುವುದು ಎಂಬುದರ ಬಗ್ಗೆ ತಿಳಿಯಿರಿ.

 

ಸಂಬಂಧಿತ ಕೋರ್ಸ್‌ಗಳು