4.4 from 3.8K ರೇಟಿಂಗ್‌ಗಳು
 1Hrs 42Min

ರಂಬುಟಾನ್ ಹಣ್ಣು ಕೃಷಿ ಕೋರ್ಸ್ - ಎಕರೆಗೆ 2 ಲಕ್ಷ ಗಳಿಸಿ

ನಮ್ಮ ರಂಬುಟಾನ್ ಹಣ್ಣಿನ ಕೃಷಿ ಕೋರ್ಸ್‌ನೊಂದಿಗೆ ನೀವು ಸಹ ಎಕರೆಗೆ 2 ಲಕ್ಷ ಗಳಿಸುವ ರಹಸ್ಯವನ್ನು ತಿಳಿಯಿರಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Rambutan Fruit Farming Course Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(42)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 42Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

ಲಾಭದಾಯಕ ಹಣ್ಣಿನ ಕೃಷಿ ವ್ಯವಹಾರವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗಾಗಿ ಈ ರಂಬುಟಾನ್ ಹಣ್ಣಿನ ಕೃಷಿ ಕೋರ್ಸ್ ಅನ್ನು  ವಿನ್ಯಾಸಗೊಳಿಸಲಾಗಿದೆ. ರಂಬುಟಾನ್ ಹಣ್ಣನ್ನು ಬೆಳೆಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಕೋರ್ಸ್ ಹೆಚ್ಚು ಕೇಂದ್ರೀಕರಿಸುತ್ತದೆ ಮತ್ತು ಅದನ್ನು ಬೆಳೆಸುವ ಬಗ್ಗೆ ಸಮಗ್ರ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ.

ರಂಬುಟಾನ್ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ಸ್ ಮತ್ತು ಮಿನರಲ್ಸ್ ಅನ್ನು ಹೊಂದಿರುವ ಉಷ್ಣವಲಯದ ಹಣ್ಣಾಗಿದ್ದು, ಇದು ಹೆಚ್ಚು ಆರೋಗ್ಯಕರ ಮತ್ತು ರುಚಿಕರವಾಗಿದೆ ಮತ್ತು ಈ ಕಾರಣಕ್ಕೆ ಇದು ಹೆಚ್ಚು ಜನಪ್ರಿಯವಾಗುತ್ತಿದೆ.  ಸಾಮಾನ್ಯವಾಗಿ ರಂಬುಟಾನ್ ಕಂಡುಬರದ ದೇಶಗಳಲ್ಲಿ ಉತ್ತಮವಾದ ರಫ್ತು ಸಾಮರ್ಥ್ಯವನ್ನು ಕೂಡ ಇದು ಹೊಂದಿದೆ. 

ಭಾರತದಲ್ಲಿ, ರಂಬುಟಾನ್ ಕೃಷಿಯು ಇನ್ನೂ ಆರಂಭಿಕ ಹಂತದಲ್ಲಿದೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಕೃಷಿಯ ಭಾಗವಾಗಲು ಬಯಸುವವರಿಗೆ ಇದು ಪರಿಪೂರ್ಣ ಅವಕಾಶವಾಗಿದೆ. ಸರಿಯಾದ ಮಣ್ಣನ್ನು ಆರಿಸುವುದರಿಂದ ಹಿಡಿದು ಹಣ್ಣನ್ನು ಕೊಯ್ಲು ಮಾಡುವವರೆಗೆ ರಂಬುಟಾನ್ ಹಣ್ಣುಗಳನ್ನು ಬೆಳೆಯುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನಮ್ಮ ಕೋರ್ಸ್ ನಿಮಗೆ ಕಲಿಸುತ್ತದೆ.

ರಂಬುಟಾನ್ ಹಣ್ಣಿನ ಕೃಷಿ ಕೋರ್ಸ್ ಮಣ್ಣಿನ ಸಿದ್ಧತೆ, ನೆಡುವಿಕೆ, ನಿರ್ವಹಣೆ ಮತ್ತು ಕೊಯ್ಲು ಸೇರಿದಂತೆ ರಂಬುಟಾನ್ ಹಣ್ಣಿನ ಕೃಷಿಯ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ನೀವು ವಿವಿಧ ರೀತಿಯ ರಂಬುಟಾನ್ ಮರಗಳ ಬಗ್ಗೆ ಕಲಿಯುವಿರಿ ಮತ್ತು ಭಾರತೀಯ ಹವಾಮಾನಕ್ಕೆ ಯಾವುದು ಹೆಚ್ಚು ಸೂಕ್ತವಾಗಿದೆ ಎಂಬುದನ್ನು ತಿಳಿಯುತ್ತೀರಿ. ಮರಗಳ ಆರೋಗ್ಯವನ್ನು ಕಾಪಾಡುವ ವಿವಿಧ ಟೆಕ್ನಿಕ್ ಗಳ ಬಗ್ಗೆ ಮತ್ತು ಹಣ್ಣುಗಳನ್ನು ಕೊಯ್ಲು ಮಾಡುವ ವಿಧಾನಗಳ ಬಗ್ಗೆಯೂ ನೀವು ಕಲಿಯುವಿರಿ.

ರಂಬುಟಾನ್ ಕೃಷಿಯ ಪ್ರಾಯೋಗಿಕ ಅಂಶಗಳ ಜೊತೆಗೆ, ಮಾರ್ಕೆಟಿಂಗ್ ಮತ್ತು ರಫ್ತು ಅವಕಾಶಗಳ ಬಗ್ಗೆ ಸಹ ಉಪಯುಕ್ತ ಮಾಹಿತಿಯನ್ನು ಈ ಕೋರ್ಸ್ ಒಳಗೊಂಡಿದೆ. ಈ ಕೋರ್ಸ್‌ನಿಂದ ನೀವು ಪಡೆಯುವ ಜ್ಞಾನ ಮತ್ತು ಕೌಶಲ್ಯದಿಂದ, ನೀವು ನಿಮ್ಮ ಸ್ವಂತ ಯಶಸ್ವಿ ರಂಬುಟಾನ್ ಹಣ್ಣಿನ ಕೃಷಿ ವ್ಯವಹಾರವನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ ಮತ್ತು ಪ್ರತಿ ಎಕರೆಗೆ 2 ಲಕ್ಷ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. 

ದರ್ಬೆ ಚಂದ್ರಸೇಖರ ಚೌಕಾ ಅವರು ಮಂಜೇಶ್ವರ, ಮಿಯಾಪುದೂರಿನ 77 ವರ್ಷದ ರೈತ. ತಮ್ಮ ರಂಬುಟಾನ್ ಹಣ್ಣಿನ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಥವಾ ವಿಸ್ತರಿಸಲು ಬಯಸುವವರಿಗೆ ಅವರು ಈ ಕೋರ್ಸ್ ಮೂಲಕ ಪರಿಪೂರ್ಣ ಮಾರ್ಗದರ್ಶನ ಮಾಡಲಿದ್ದಾರೆ.  

ಈಗಲೇ ರಂಬುಟಾನ್ ಹಣ್ಣಿನ ಕೃಷಿ ಕೋರ್ಸ್‌ಗೆ ನೋಂದಾಯಿಸಿ ಮತ್ತು ರುಚಿಕರವಾದ ಮತ್ತು ಆರೋಗ್ಯಕರ ಹಣ್ಣಿನ ಲಾಭವನ್ನು ಹೇಗೆ ಪಡೆಯುವುದು ಎಂದು ತಿಳಿಯಿರಿ. ರಂಬುಟಾನ್ ಕೃಷಿಯ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುವ ನಿಟ್ಟಿನಲ್ಲಿ  ಮತ್ತು ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.