ಈ ಕೋರ್ಸ್ ಒಳಗೊಂಡಿದೆ
ಸಿಹಿನೀರಿನ ಮೀನುಗಳಲ್ಲಿ ರೋಹು ಸಹ ಒಂದು ಬಗೆಯಾಗಿದ್ದು, ಇದು ಕಾರ್ಪ್ ಕುಟುಂಬಕ್ಕೆ ಸೇರಿದ್ದಾಗಿದೆ. ಈ ಮೀನುಗಳು ಭಾರತದಲ್ಲಿ ಮತ್ತು ಆಗ್ನೇಯ ಏಷ್ಯಾಭಾಗದಲ್ಲಿ ವಿಶೇಷವಾದ ಜನಪ್ರಿಯತೆಯನ್ನು ಪಡೆದಿದೆ. ಈ ಮೀನುಗಳನ್ನು ರೂಯಿ ಅಥವಾ ತಪ್ರಾ ಎಂದೂ ಸಹ ಕರೆಯಲಾಗುತ್ತದೆ. ರೋಹು ಮೀನಗಳು ಅತ್ಯಂತ ರುಚಿಕರವಾಗಿರುವ ಕಾರಣ ಮತ್ತು ಸುವಾಸನೆಯನ್ನು ಹೊಂದಿರುವ ಕಾರಣ ಇದು ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.
ಉತ್ತಮವಾದ ಸಾಕಣೆ ಪದ್ಧತಿಯ ಮೂಲಕ ರೋಹು ಮೀನುಗಳನ್ನು ನಿರ್ವಹಣೆ ಮಾಡಿದರೆ, ರೈತರು ಅದರಿಂದ ಉತ್ತಮ ಲಾಭವನ್ನು ಗಳಿಸಬಹುದು. ರೋಹು ಮತ್ತು ಕ್ಯಾಟ್ಲಾ ಮೀನುಗಳು ಆಕಾರ ಮತ್ತು ಗಾತ್ರದಲ್ಲಿ ಒಂದೇ ರೀತಿ ಇರುವ ಕಾರಣ ಸಾಮಾನ್ಯವಾಗಿ ಜನರು ಇವುಗಳನ್ನು ಗುರುತಿಸುವುದರಲ್ಲಿ ಗೊಂದಲಕ್ಕೊಳಗಾಗುತ್ತಾರೆ.
ರೋಹು ಮೀನುಗಳು ಭಾರತದಲ್ಲಿ ಹೆಚ್ಚಿನ ಬೇಡಿಕೆಯ ಜೊತೆಗೆ ಜನಪ್ರಿಯತೆಯನ್ನು ಸಹ ಪಡೆದುಕೊಂಡಿದೆ. ಈ ಮೀನುಗಳಿಂದ ವಿವಿಧ ಬಗೆಯ ಸ್ವಾದಿಷ್ಟವಾದ ಆಹಾರವನ್ನು ತಯಾರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಈ ಮೀನುಗಳನ್ನು ಫಿಶ್ ಫ್ರೈ ಅಥವಾ ಫಿಶ್ ಕರಿ ತಯಾರಿಸಲು ಹೆಚ್ಚಾಗಿ ಬಳಸಲಾಗುತ್ತದೆ. ರೋಹು ಮೀನುಗಳು ಪ್ರತಿ ಕೆಜಿಗೆ ಸುಮಾರು 120 ರಿಂದ 160 ರೂಪಾಯಿಯ ವರೆಗೆ ಮಾರುಕಟ್ಟೆ ಬೆಲೆಯನ್ನು ಹೊಂದಿರುತ್ತದೆ.
ಈ ಸಾಕಣೆಯಲ್ಲಿರುವ ಮಾರುಕಟ್ಟೆ ಅವಕಾಶವನ್ನು ಗಮನಿಸಿ ffreedom ಅಪ್ಲಿಕೇಶನ್ ರೋಹು ಮೀನು ಸಾಕಣೆ ಕುರಿತಂತೆ ಸಮಗ್ರ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಈ ಸಾಕಣೆಯನ್ನು ಮಾಡಿ ಯಶಸ್ಸನ್ನು ಪಡೆದಿರುವ ಸಾಧಕರು ರೋಹು ಮೀನು ಸಾಕಣೆ ಕುರಿತಂತೆ ಉತ್ತಮ ಮಾರ್ಗದರ್ಶನವನ್ನು ಮಾಡಲಿದ್ದಾರೆ. ಈ ಕೋರ್ಸ್ ಮೂಲಕ ನೀವೂ ಸಹ ಅದರ ಸಂಪೂರ್ಣ ಲಾಭವನ್ನು ಪಡೆಯಬಹುದು.