ಈ ಕೋರ್ಸ್ ಒಳಗೊಂಡಿದೆ
ರೇಷ್ಮೆಯನ್ನು ಜವಳಿಯ ರಾಣಿ ಎಂದೂ ಸಹ ಕರೆಯುತ್ತಾರೆ. ಭಾರತ 15ನೇ ಶತಮಾನದಿಂದ ರೇಷ್ಮೆ ಬೆಳೆಯನ್ನು ಬೆಳೆಯುತ್ತಿದೆ. ಭಾರತೀಯ ಪರಂಪರೆಯಲ್ಲಿ ರೇಷ್ಮೆಯ ಉಡುಗೆಗಳನ್ನು ತೊಡುವುದು ಒಂದು ಹೆಮ್ಮೆಯ ವಿಚಾರ ಎಂದು ಹೇಳಬಹುದು. ಶುಭ ಸಮಾರಂಭಗಳಲ್ಲಿ ರೇಷ್ಮೆಯು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಸಹ ಇದು ಉತ್ತಮ ಬೇಡಿಕೆ ಮತ್ತು ಬೆಲೆಯನ್ನು ಹೊಂದಿದೆ.
ವಿಶ್ವದ ಅತಿ ಹೆಚ್ಚು ರೇಷ್ಮೆ ಯನ್ನು ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಮತ್ತು ಚೀನಾ ಮೊದಲನೇ ಸ್ಥಾನದಲ್ಲಿದೆ. ಚೀನಾ ಅತಿ ಹೆಚ್ಚು ರೇಷ್ಮೆ ಉತ್ಪಾದಿಸಿದರೂ ಗುಣಮಟ್ಟದ ವಿಷಯದಲ್ಲಿ ಭಾರತಕ್ಕೆ ಅದು ಸ್ಪರ್ಧೆ ಒಡ್ಡುವ ಶಕ್ತಿಯನ್ನು ಹೊಂದಿಲ್ಲ ಎಂದು ಹೇಳಬಹುದು. ಭಾರತದ ರೇಷ್ಮೆಯು ಜಗತ್ತಿನಾದ್ಯಂತ ಅತಿ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ರೇಷ್ಮೆಗೆ ಕರ್ನಾಟಕದಲ್ಲಿ ಸಹ ವಿಶೇಷ ಸ್ಥಾನಮಾನವಿದೆ. ಇಡೀ ಏಷ್ಯಾದಲ್ಲೇ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಇರುವುದು ನಮ್ಮ ಕರ್ನಾಟಕದ ರಾಮನಗರದಲ್ಲಿ ಎಂಬುದು ನಾವು ಹೆಮ್ಮೆ ಪಡುವ ವಿಷಯವಾಗಿದೆ.
2017 ರಲ್ಲಿ ಸುಮಾರು ಒಂಬತ್ತುವರೆ ಸಾವಿರ ಮೆಟ್ರಿಕ್ ಟನ್ ನಷ್ಟು ರೇಷ್ಮೆಯನ್ನು ನಾವು ಉತ್ಪಾದಿಸಿದ್ದೇವೆ. ಅಲ್ಲಿಂದಾಚೆಗೆ ಈ ಮೊತ್ತ ಪ್ರತಿವರ್ಷವೂ ಸಹ ಹೆಚ್ಚಿಗೆ ಆಗುತ್ತಲೇ ಇದೆ. ಹೀಗಾಗಿ ಇಡೀ ದೇಶದಲ್ಲೇ ನಮ್ಮ ಕರ್ನಾಟಕ ರೇಷ್ಮೆ ಉತ್ಪಾದನೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನವನ್ನು ಆಂಧ್ರಪ್ರದೇಶ ಅಲಂಕರಿಸಿದೆ. ಈ ಕೋರ್ಸ್ ಮೂಲಕ ನೀವೂ ಸಹ ಈ ರೇಷ್ಮೆಯ ಕೃಷಿ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ.