ಈ ಕೋರ್ಸ್ ಒಳಗೊಂಡಿದೆ
ಫಿಶ್ ಹ್ಯಾಚರಿ ಎಂದರೆ ಮೀನಿನ ಮೊಟ್ಟೆಗಳನ್ನು ಅವು ಮೊಟ್ಟೆಯೊಡೆಯುವವರೆಗೆ ಕಾವುಕೊಡುವ ಮತ್ತು ಪೋಷಿಸುವ ಒಂದು ವ್ಯವಸ್ಥೆಯಾಗಿದೆ. ಫ್ರೈ ಎಂದು ಕರೆಯಲ್ಪಡುವ ಮೀನುಗಳನ್ನು ಸಾಮಾನ್ಯವಾಗಿ ಮೀನು ಕೊಳ, ಕೆರೆಗಳಲ್ಲಿ ಸಾಕಣೆ ಮಾಡಲಾಗುತ್ತದೆ. ಇಂದು ಸುಮಾರು 40% ನಷ್ಟು ಮೀನುಗಳು ಮಾನವರಿಗೆ ಆಹಾರವಾಗಿ ಹ್ಯಾಚರಿಗಳಲ್ಲಿ ಉತ್ಪಾದಿಸಲಾಗುತ್ತದೆ.
ಇಂದು ಹ್ಯಾಚರಿ ಕೇಂದ್ರಗಳು ಜನಪ್ರಿಯವಾಗಲು ಪ್ರಮುಖ ಕಾರಣವೆಂದರೆ, ಜನಸಂಖ್ಯೆಯು ಹೆಚ್ಚುತ್ತಿರುವಂತೆ ಆಹಾರಕ್ಕಾಗಿ ಹೆಚ್ಚುತ್ತಿರುವ ಬೇಡಿಕೆ, ನೈಸರ್ಗಿಕ ಮೀನಿನ ಜನಸಂಖ್ಯೆಯನ್ನು ಕಡಿಮೆ ಮಾಡುವ ಅತಿಯಾದ ಮೀನುಗಾರಿಕೆಯ ಪರಿಣಾಮಗಳು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳು. ಹ್ಯಾಚರಿ ಕೇಂದ್ರಗಳು ಆಹಾರ ಮೂಲಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಫಿಶ್ ಹ್ಯಾಚರಿಗಳಲ್ಲಿ ಹಲವಾರು ಪ್ರಯೋಜನಗಳಿವೆ.
ಹ್ಯಾಚರಿ ಕೇಂದ್ರಗಳು ಮಾಂಸಾಹಾರಿ ಮೀನುಗಳಿಗೆ ಆಹಾರದ ಮೂಲಗಳನ್ನು ಒದಗಿಸುತ್ತವೆ. ಮಿತಿಮೀರಿದ ಮೀನುಗಾರಿಕೆ ಅಥವಾ ಆವಾಸಸ್ಥಾನ ನಾಶದಿಂದ ಕ್ಷೀಣಿಸಿದ ಮೀನಿನ ಜನಸಂಖ್ಯೆಯನ್ನು ಉಳಿಸಿಕೊಳ್ಳಲು ಮತ್ತು ಪುನರ್ನಿರ್ಮಿಸಲು ಈ ಫಿಶ್ ಹ್ಯಾಚರಿಗಳು ಸಹಾಯ ಮಾಡುತ್ತವೆ.
ಈ ಕೋರ್ಸ್ ಅನ್ನು ಯಾರು ಪಡೆಯಬಹುದು?
ಸ್ವಂತ ಫಿಶ್ ಹ್ಯಾಚರಿ ಬಿಸಿನೆಸ್ ಪ್ರಾರಂಭಿಸಲು ಆಸಕ್ತಿ ಹೊಂದಿರುವವರಿಗೆ
ಮೀನು ಸಾಕಣೆಯಲ್ಲಿ ಹಿನ್ನೆಲೆ ಹೊಂದಿರುವವರಿಗೆ.
ವಾಣಿಜ್ಯ ಉದ್ದೇಶಗಳಿಗಾಗಿ ಮೀನುಗಳನ್ನು ಸಾಕಲು ಮತ್ತು ಸಂತಾನೋತ್ಪತ್ತಿ ಮಾಡಲು ಆಸಕ್ತಿ ಹೊಂದಿರುವವರು.
ಒಟ್ಟಿನಲ್ಲಿ ಕಡಿಮೆ ಬಂಡವಾಳದಲ್ಲಿ ಅಧಿಕ ಲಾಭ ಪಡೆಯಲು ಬಯಸುವವರು ಈ ಕೋರ್ಸ್ ಮಾಡಬಹುದು.
ನೀವು ಈ ಕೋರ್ಸ್ ನಿಂದ ಏನನ್ನು ಕಲಿಯುತ್ತೀರಿ
ಫಿಶ್ ಹ್ಯಾಚರಿ ಪ್ರಕ್ರಿಯೆ ಹೇಗೆ?
ಫಿಶ್ ಹ್ಯಾಚರಿ ಬಿಸಿನೆಸ್ ಅನ್ನು ಸ್ಥಾಪಿಸುವುದು ಹೇಗೆ?
ಮೀನು ಸಾಕಣೆ ಮತ್ತು ಸಂತಾನೋತ್ಪತ್ತಿ ಪ್ರಕ್ರಿಯೆ ಹೇಗೆ?
ಮೀನಿನ ಆಯ್ಕೆ ಮತ್ತು ಚುಚ್ಚುಮದ್ದು ಹೇಗೆ ನೀಡಬೇಕು?
ಮಾರ್ಕೆಟಿಂಗ್, ಪ್ಯಾಕಿಂಗ್ ಮತ್ತು ಶಿಪ್ಪಿಂಗ್ ಹೇಗೆ ಮಾಡಬೇಕು?
ಈ ಬಿಸಿನೆಸ್‌ನಿಂದ ಲಾಭ ಮತ್ತು ನಷ್ಟಗಳೇನು?
ಅಧ್ಯಾಯಗಳು
ಫಿಶ್ ಹ್ಯಾಚರಿ ಬಿಸಿನೆಸ್‌ನ ಪರಿಚಯ: ಮೀನಿನ ಮೊಟ್ಟೆಗಳನ್ನು ಕಾವು ಕೊಟ್ಟು ಅವುಗಳನ್ನು ಪ್ರೈಯನ್ನಾಗಿಸಿ, ಅವುಗಳನ್ನು ಮಾರಾಟ ಮಾಡಲಾಗುತ್ತದೆ. ಮೀನು ಮರಿಗಳನ್ನು ಸರ್ಕಾರಿ ಸಂಸ್ಥೆಗಳು, ಲಾಭೋದ್ದೇಶವಿಲ್ಲದ ಸಂಸ್ಥೆಗಳು ಅಥವಾ ಖಾಸಗಿ ವ್ಯವಹಾರಗಳಿಂದ ನಿರ್ವಹಿಸಬಹುದು.
ಮಾರ್ಗದರ್ಶಕರನ್ನು ಭೇಟಿ ಮಾಡಿ: ಈ ಕೋರ್ಸ್ ನಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹತ್ತಿಕಾಟಿ ಗ್ರಾಮದ ರಾಮು ಅವರಿಂದ ಫಿಶ್ ಹ್ಯಾಚರಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.
ಫಿಶ್ ಹ್ಯಾಚರಿ ಸಮೀಕ್ಷೆ: ಕಲೆ ಮತ್ತು ವಿಜ್ಞಾನ: ಫಿಶ್ ಹ್ಯಾಚರಿ ಮೀನು ಮೊಟ್ಟೆಯಿಡುವಿಕೆಯ ಕಾರ್ಯಕ್ಷಮತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸುವ ಪ್ರಕ್ರಿಯೆಯಾಗಿದೆ.
ಫಿಶ್ ಹ್ಯಾಚರಿ ಸ್ಥಾಪನೆಗೆ ಅಗತ್ಯ ಮಾಹಿತಿ: ನೀವು ಫಿಶ್ ಹ್ಯಾಚರಿ ಕೇಂದ್ರವನ್ನು ಸ್ಥಾಪಿಸಲು ಬೇಕಾಗಿರುವ ಎಲ್ಲಾ ಅಗತ್ಯ ಮಾಹಿತಿಯನ್ನು ಇಲ್ಲಿ ಪಡೆಯುವಿರಿ. ಸ್ಥಳ ಹೇಗಿರಬೇಕು, ಪರವಾನಿಗಿ, ಪೋಷಣೆ ಹೇಗಿರಬೇಕು ಎಂಬುವುದನ್ನು ಇಲ್ಲಿ ಕಲಿಯುವಿರಿ.
ಫಿಶ್ ಹ್ಯಾಚರಿಗಾಗಿ ಸೂಕ್ತವಾದ ಸ್ಥಳ: ನೀವು ಫಿಶ್ ಹ್ಯಾಚರಿ ಕೇಂದ್ರವನ್ನು ನಿರ್ಮಿಸುವಾಗ ಉತ್ತಮ ಸ್ಥಳವನ್ನು ಆಯ್ಕೆ ಮಾಡಬೇಕು. ಶುದ್ಧ ನೀರು, ಪೂರಕ ಹವಾಮಾನ, ಸಂಚಾರ, ಲ್ಯಾಂಡ್ ಕಾಸ್ಟ್ ಮುಂತಾದವುಗಳನ್ನು ನೋಡಿಕೊಂಡು ಸ್ಥಳವನ್ನು ಆಯ್ಕೆ ಮಾಡಬೇಕು.
ಫಿಶ್ ಹ್ಯಾಚರಿ ಬಿಸಿನೆಸ್ ಆರಂಭಿಸಲು ಹಂತ - ಹಂತದ ಮಾಹಿತಿ: ಬಿಸಿನೆಸ್ ಪ್ಲಾನ್ ಹೇಗೆ ಮಾಡಿಕೊಳ್ಳುವುದು, ಮಾರುಕಟ್ಟೆ ಹೇಗೆ ಎಂಬ ಹಂತ ಹಂತದ ಮಾಹಿತಿ ಇಲ್ಲಿದೆ.
ಬಂಡವಾಳ, ಪರವಾನಗಿಗಳು ಮತ್ತು ನೋಂದಣಿ: ಫಿಶ್ ಹ್ಯಾಚರಿಗೆ ಎಷ್ಟು ಬಂಡವಾಳ ಬೇಕು, ಯಾವೆಲ್ಲ ಪರವಾನಗಿಗಳು ಬೇಕು ಮತ್ತು ನೋಂದಣಿ ಹೇಗೆ ಮಾಡಿಕೊಳ್ಳಬೇಕು ಎಂಬುವುದನ್ನು ಈ ಕೋರ್ಸ್ ನಲ್ಲಿ ಮಾಹಿತಿ ಪಡೆಯುವಿರಿ.
ಫಿಶ್ ಹ್ಯಾಚರಿ ಕೇಂದ್ರ ಗಳಿಗೆ ಮೀನು ತಳಿಗಳನ್ನು ಹೇಗೆ ಆಯ್ಕೆ ಮಾಡುವುದು: ಸೂಕ್ತವಾದ ಹ್ಯಾಚರಿ ಕೇಂದ್ರಗಳಿಗೆ ಮೀನು ತಳಿಗಳನ್ನು ಆಯ್ಕೆ ಮಾಡುವಾಗ,ಅವುಗಳ ಬೆಳವಣಿಗೆಯ ದರ, ರೋಗ ನಿರೋಧಕತೆ ಮುಂತಾದವುಗಳ ಬಗ್ಗೆ ಗಮನ ಹರಿಸಬೇಕು.
ಹ್ಯಾಚರಿಯಿಂದ ಉತ್ತಮ ಗುಣಮಟ್ಟದ ಮೀನು ತಳಿಗಳನ್ನು ಕೊಯ್ಲು ಮಾಡುವುದು: ಯಾವ ತಳಿಯ ಮೀನುಗಳನ್ನು ಆಯ್ಕೆ ಮಾಡಬೇಕು, ಯಾವ ಫಿಶ್ ಸೀಡ್ ಗಳನ್ನು ಕೊಯ್ಲು ಮಾಡಬೇಕು ಎಂಬುವುದನ್ನು ಈ ಕೋರ್ಸ್ ನಲ್ಲಿ ಕಲಿಯುವಿರಿ.
ಫಿಶ್ ಹ್ಯಾಚರಿ ಬಿಸಿನೆಸ್: ಆಹಾರ ಮತ್ತು ಕಾರ್ಮಿಕರ ನಿರ್ವಹಣೆ: ಈ ಬಿಸಿನೆಸ್‌ನಲ್ಲಿ ಮೀನುಗಳಿಗೆ ಆಹಾರವನ್ನು ಹೇಗೆ ನಿರ್ವಹಣೆ ಮಾಡಬೇಕು, ಕಾರ್ಮಿಕರನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುವುದನ್ನು ಈ ಕೋರ್ಸ್ ನಲ್ಲಿ ಕಲಿಯುವಿರಿ.
ಮಾರ್ಕೆಟಿಂಗ್ ಮತ್ತು ಮಾರಾಟದ ತಂತ್ರಗಳು: ಫಿಶ್ ಹ್ಯಾಚರಿಯನ್ನು ಮಾರ್ಕೆಟಿಂಗ್ ಹೇಗೆ ಮಾಡುವುದು ಮತ್ತು ಮಾರಾಟದ ತಂತ್ರಗಳು ಏನು ಎಂಬುವುದನ್ನು ಈ ಕೋರ್ಸ್ ನಲ್ಲಿ ಕಲಿಯುವಿರಿ.
ಫಿಶ್ ಸೀಡ್ ಗಳ ಪ್ಯಾಕಿಂಗ್ ಮತ್ತು ಸಾಗಣೆ: ಫಿಶ್ ಸೀಡ್ ಗಳನ್ನು ಹೇಗೆ ಪ್ಯಾಕಿಂಗ್ ಮಾಡಬೇಕು ಮತ್ತು ಯಾವ ರೀತಿಯಲ್ಲಿ ಸಾಕಣೆ ಮಾಡಬೇಕು ಎಂಬುವುದನ್ನು ಇಲ್ಲಿ ಕಲಿಯುವಿರಿ.
ಯುನಿಟ್ ಎಕಾನಮಿ: ಈ ಹ್ಯಾಚರಿಗೆ ತಗುಲುವ ಒಟ್ಟು ಖರ್ಚು ವೆಚ್ಚುಗಳು ಒಟ್ಟು ಉಳಿಯುವ ಉಳಿತಾಯದ ಬಗ್ಗೆ ಈ ಮಾಡ್ಯೂಲ್‌ನಲ್ಲಿ ಕಲಿಯುವಿರಿ.