ಈ ಕೋರ್ಸ್ ಒಳಗೊಂಡಿದೆ
ಯಳಗ ಕುರಿ ಸಾಕಣಿಕೆ ಇದು ಉತ್ತರ ಕರ್ನಾಟಕದಲ್ಲಿ ಕಂಡು ಬರುವ ಒಂದು ತಳಿಯಾಗಿದೆ. ಇವುಗಳು ಬಿಳಿ ಬಣ್ಣದಿಂದ ಕೂಡಿದ್ದು, ಮೂಗು ನೇರವಾಗಿರುತ್ತದೆ. ಹಾಗೂ ಕಣ್ಣಿನ ಸುತ್ತಲೂ ಕಪ್ಪು ಪಟ್ಟಿಯನ್ನು ಹೊಂದಿರುತ್ತದೆ. ಈ ಕುರಿಗಳನ್ನು ಹೆಚ್ಚಾಗಿ ಬಾಗಲಕೋಟೆ ಜಿಲ್ಲೆಯ ಬದಾಮಿ, ಬೀಳಗಿ, ಹುನಗುಂದ ಹಾಗೂ ಮುಧೋಳ ಗಳಲ್ಲಿ ಕಾಣಬಹುದು. ಟಗರು ಕುರಿಗಳು ಸುಮಾರು ೫೫ ಕಿ. ಗ್ರಾಂ ತೂಕ ಉಳ್ಳದ್ದಾಗಿರುತ್ತವೆ. ಹೆಣ್ಣು ಕುರಿಗಳು ಸುಮಾರು ೩೫ ಕಿ. ಗ್ರಾಂ ತೂಕ ಉಳ್ಳದ್ದಾಗಿರುತ್ತವೆ. ಟಗರು ಮರಿಗಳು ಮೂರು ತಿಂಗಳಿಗೆ ೨೧ ಕಿ. ಗ್ರಾಂ ಹಾಗೂ ಕುರಿ ಮರಿಗಳು ೧೯ ಕಿ. ಗ್ರಾಂ ತೂಕ ಪಡೆಯುತ್ತವೆ. ಈ ಕುರಿಗಳ ಸಾಕಣಿಕೆ ಹೇಗೆ ಈ ಕುರಿಗಳನ್ನು ರೈತ ಮಹಳೆಯೊಬ್ಬರು ಸಾಕಣಿಕೆ ನಡೆಸಿ ಹೇಗೆ ಆದಾಯ ಗಳಿಸುತ್ತಿದ್ದಾರೆ ಎಂಬುವುದನ್ನು ಈ ಕೋರ್ಸ್ ನಲ್ಲಿ ತಿಳಿಸುಯತ್ತಿದ್ದೇವೆ.