4.4 from 3.9K ರೇಟಿಂಗ್‌ಗಳು
 2Hrs 38Min

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಪ್ರತಿ ಎಕರೆಯಿಂದ ವರ್ಷಕ್ಕೆ 14 ಲಕ್ಷ ಆದಾಯ ಗಳಿಸಿ!

ಸುಸ್ಥಿರವಾಗಿ ಮತ್ತು ಲಾಭದಾಯಕವಾಗಿ ಕೃಷಿ ಮಾಡಲು ಕ್ರಾಂತಿಕಾರಿ ಮಾರ್ಗವನ್ನು ಅನ್ವೇಷಿಸಿ! ನೈಸರ್ಗಿಕ ಕೃಷಿಕರಾಗಿ ಮತ್ತು ಎಕರೆಗೆ 14 ಲಕ್ಷ ಆದಾಯ ಗಳಿಸಿ.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Zero Budget Natural Farming Course Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(42)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 38Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
Completion Certificate
 
 

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ (ZBNF) ಸಾವಯವ ಮತ್ತು ನೈಸರ್ಗಿಕ ಕೃಷಿಯ ಮೂಲಕ ವೆಚ್ಚವನ್ನು ಕಡಿಮೆ ಮಾಡಿ ಲಾಭವನ್ನು ಹೆಚ್ಚಿಸಲು ಬಯಸುವ ರೈತರಿಗೆ ಲಾಭದಾಯಕ ಆಯ್ಕೆಯಾಗಿದೆ. ಈ ಕೃಷಿ ಮೂಲಕ ಪ್ರತಿ ವರ್ಷ ಎಕರೆಗೆ 14 ಲಕ್ಷಗಳನ್ನು ಗಳಿಸುವ ಸಾಮರ್ಥ್ಯವನ್ನು ಈ ಕೋರ್ಸ್‌ ಒಳಗೊಂಡಿದೆ. 

"ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿಯನ್ನು ಹೇಗೆ ಆರಂಭಿಸುವುದು" ಎಂಬ ಪ್ರಶ್ನೆಗೆ ಉತ್ತರಿಸಲು ಈ ಕೋರ್ಸ್‌ ಅನ್ನು ವಿನ್ಯಾಸಗೊಳಿಸಲಾಗಿದ್ದು, ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವವರಿಗೆ ಸೂಕ್ತವಾಗಿದೆ. ಈ ಕೃಷಿಯಲ್ಲಿ ಒಂದು ದಶಕದ ಅನುಭವ ಹೊಂದಿರುವ ಪ್ರಸಿದ್ಧ ಕೃಷಿ ತಜ್ಞ ಸತ್ಯಪ್ಪ ಈ ಕೋರ್ಸ್‌ನ ಮಾರ್ಗದರ್ಶಕರಾಗಿದ್ದಾರೆ. 

ಇಂದು ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ನೀವು ಈ ಕೃಷಿಯನ್ನು ಮಾಡಿ ಲಾಭ ಗಳಿಸಿಕೊಳ್ಳಬಹುದು. ಈ ಕೋರ್ಸ್‌ ಮೂಲಕ ನೀವು ಶೂನ್ಯ ಬಂಡವಾಳದಲ್ಲಿ ಕೃಷಿಯನ್ನು ಹೇಗೆ ಆರಂಭಿಸುವುದು, ಬೀಜದ ಆಯ್ಕೆಯಿಂದ ಹಿಡಿದು ಮಣ್ಣಿನ ಆರೋಗ್ಯದಿಂದ ನೀರಿನ ನಿರ್ವಹಣೆಯವರೆಗೆ ನೀವು ಮಾಡ್ಯೂಲ್‌ ರೂಪದಲ್ಲಿ ಮಾಹಿತಿಯನ್ನು ಪಡೆಯಬಹುದು. 

ಕೋರ್ಸ್‌ನ ಕೊನೆಯಲ್ಲಿ ಸಾವಯವ ಮತ್ತು ಸುಸ್ಥಿರ ಕೃಷಿ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಲಾಭ ಪಡೆಯಲು ಬೇಕಾದ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳುವಿರಿ. ನಿಮ್ಮ ಪ್ರದೇಶದಲ್ಲಿ ಅದರ ಕಾರ್ಯಸಾಧ್ಯತೆ ಅಥವಾ ಹೊಸ ಕೃಷಿ ವಿಧಾನಕ್ಕೆ ಪರಿವರ್ತನೆಯ ಸವಾಲುಗಳಂತಹ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ನೀವು ಕಾಳಜಿಯನ್ನು ಹೊಂದಿದ್ದರೆ, ಈ ಕೋರ್ಸ್‌ ವಿಡಿಯೋ ವೀಕ್ಷಿಸಿ ಪ್ರಾಕ್ಟಿಕಲ್‌ ಮಾಹಿತಿಯನ್ನು ಪಡೆದುಕೊಳ್ಳುವುದರ ಮೂಲಕ ನೀವು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಪ್ರತಿ ಎಕರೆಯಿಂದ ವರ್ಷಕ್ಕೆ 14 ಲಕ್ಷ ಆದಾಯ ಗಳಿಸುವುದು ಹೇಗೆ ಎಂಬುವುದನ್ನು ತಿಳಿಯಬಹುದು.

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಹೆಚ್ಚು ಹಣ ಹೂಡದೆ ಲಾಭವನ್ನು ಹೆಚ್ಚಿಸಿಕೊಳ್ಳಲು ಬಯಸುವ ರೈತರು

  • ಸುಸ್ಥಿರ ಕೃಷಿ ವ್ಯವಹಾರವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಕೃಷಿ-ಉದ್ಯಮಿಗಳು

  • ಸಾವಯವ ಕೃಷಿ ತಂತ್ರಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರು 

  • ಕೃಷಿ ವಿದ್ಯಾರ್ಥಿಗಳು ಮತ್ತು ಸಂಶೋಧಕರು

  • ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒಗಳು ಮತ್ತು ಸಂಸ್ಥೆಗಳು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ತಂತ್ರಗಳನ್ನು ಕಲಿಯಿರಿ

  • ಮಣ್ಣಿನ ಆರೋಗ್ಯ ಮತ್ತು ಅದನ್ನು ನೈಸರ್ಗಿಕವಾಗಿ ಹೇಗೆ ನಿರ್ವಹಿಸುವುದು ಹೇಗೆ ಎಂಬುವುದನ್ನು ತಿಳಿಯಿರಿ

  • ಸುಸ್ಥಿರ ಬೆಳೆ ನಿರ್ವಹಣೆಯ ಬಗ್ಗೆ ಕಲಿಯಿರಿ

  • ಬೀಜ ಉಳಿಸುವ ತಂತ್ರಗಳನ್ನು ಕಲಿಯಿರಿ

  • ಕೃಷಿ ಅರ್ಥಶಾಸ್ತ್ರ ಮತ್ತು ಮಾರುಕಟ್ಟೆ ತಂತ್ರಗಳನ್ನು ಅರ್ಥಮಾಡಿಕೊಳ್ಳಿ

 

ಅಧ್ಯಾಯಗಳು 

  • ಕೋರ್ಸ್ ಪರಿಚಯ: ಶೂನ್ಯ ಬಜೆಟ್ ನೈಸರ್ಗಿಕ ಕೃಷಿ ಮತ್ತು ಯಾವುದೇ ಹೂಡಿಕೆಯಿಲ್ಲದೆ ಪ್ರತಿ ಎಕರೆಗೆ 14 ಲಕ್ಷಗಳನ್ನು ಗಳಿಸಲು ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ. 
  • ಮಾರ್ಗದರ್ಶಕರ ಪರಿಚಯ: ಪ್ರತಿ ಮಾಡ್ಯೂಲ್ ಮೂಲಕ ನಿಮಗೆ ಮಾರ್ಗದರ್ಶನ ನೀಡುವ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಮೌಲ್ಯಯುತ ಮಾಹಿತಿಯನ್ನು ನೀಡುವ ಮಾರ್ಗದರ್ಶಕರನ್ನು ಭೇಟಿ ಮಾಡಿ.
  • ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಅಂದರೇನು?: ಇಳುವರಿ ಮತ್ತು ಲಾಭವನ್ನು ಹೆಚ್ಚಿಸಲು ನೈಸರ್ಗಿಕ ಸಂಪನ್ಮೂಲಗಳು ಮತ್ತು ನವೀನ ತಂತ್ರಗಳನ್ನು ಬಳಸಿಕೊಂಡು ಯಾವುದೇ ಹೂಡಿಕೆಯಿಲ್ಲದೆ ಕೃಷಿಯನ್ನು ಹೇಗೆ ಮಾಡುವುದು ಎಂಬುವುದನ್ನು ತಿಳಿದುಕೊಳ್ಳಿ. 
  • ಶೂನ್ಯ ಬಂಡವಾಳದಲ್ಲಿ ಅಡಿಕೆ ಮತ್ತು ತೆಂಗು ಕೃಷಿ: ಶೂನ್ಯ-ಬಜೆಟ್ ತಂತ್ರಗಳನ್ನು ಬಳಸಿಕೊಂಡು ಅಡಿಕೆ ಮತ್ತು ತೆಂಗಿನಕಾಯಿಗಳನ್ನು ಹೇಗೆ ಬೆಳೆಸುವುದು ಮತ್ತು ಕೊಯ್ಲು ಮಾಡುವುದು ಮತ್ತು ಈ ಬೆಳೆಗಳಿಂದ ಗಮನಾರ್ಹ ಆದಾಯವನ್ನು ಗಳಿಸುವುದು ಹೇಗೆ ಎಂದು ತಿಳಿಯಿರಿ.
  • ಶೂನ್ಯ ಬಂಡವಾಳದಲ್ಲಿ ಬಾಳೆ ಕೃಷಿ: ನೈಸರ್ಗಿಕ ಕೃಷಿ ವಿಧಾನಗಳು ಮತ್ತು ನವೀನ ಮಾರುಕಟ್ಟೆ ತಂತ್ರಗಳನ್ನು ಬಳಸಿಕೊಂಡು ಶೂನ್ಯ ಹೂಡಿಕೆಯೊಂದಿಗೆ ಬಾಳೆಹಣ್ಣುಗಳನ್ನು ಬೆಳೆಯುವುದು ಮತ್ತು ಮಾರುಕಟ್ಟೆ ಮಾಡುವುದು ಹೇಗೆ ಎಂದು ತಿಳಿಯಿರಿ.
  • ಶೂನ್ಯ ಬಂಡವಾಳದಲ್ಲಿ ಕಾಳು ಮೆಣಸು ಕೃಷಿ: ಶೂನ್ಯ ಹೂಡಿಕೆ ತಂತ್ರಗಳನ್ನು ಬಳಸಿಕೊಂಡು ಕರಿಮೆಣಸನ್ನು ಹೇಗೆ ಬೆಳೆಸುವುದು ಮತ್ತು ಮಾರುಕಟ್ಟೆ ಮಾಡುವುದು ಮತ್ತು ಲಾಭದಾಯಕ ಆದಾಯವನ್ನು ಗಳಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. 
  • ಶೂನ್ಯ ಬಂಡವಾಳದಲ್ಲಿ ಏಲಕ್ಕಿ ಕೃಷಿ: ನೈಸರ್ಗಿಕ ಕೃಷಿ ವಿಧಾನಗಳನ್ನು ಬಳಸಿಕೊಂಡು ಏಲಕ್ಕಿಯನ್ನು ಹೇಗೆ ಬೆಳೆಸುವುದು ಮತ್ತು ಕೊಯ್ಲು ಮಾಡುವುದು ಮತ್ತು ಈ ಹೆಚ್ಚಿನ ಮೌಲ್ಯದ ಬೆಳೆಯಿಂದ ಗಮನಾರ್ಹ ಆದಾಯವನ್ನು ಗಳಿಸುವುದು ಹೇಗೆ ಎಂಬುವುದನ್ನು ತಿಳಿಯಿರಿ. 
  • ಶೂನ್ಯ ಬಂಡವಾಳದಲ್ಲಿ ವೀಳ್ಯದೆಲೆ ಕೃಷಿ: ಶೂನ್ಯ ಹೂಡಿಕೆ ತಂತ್ರಗಳನ್ನು ಬಳಸಿಕೊಂಡು ವೀಳ್ಯದೆಲೆಯನ್ನು ಹೇಗೆ ಬೆಳೆಸುವುದು, ಅವುಗಳ ಮಾರುಕಟ್ಟೆ ಹೇಗೆ,  ಮತ್ತು ಈ ಸಾಂಪ್ರದಾಯಿಕ ಬೆಳೆಯಿಂದ ಲಾಭದಾಯಕ ಆದಾಯವನ್ನು ಗಳಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. 
  • ಶೂನ್ಯ ಬಂಡವವಾಳದಲ್ಲಿ ಕಾಫಿ ಕೃಷಿ: ಯಾವುದೇ ಹೂಡಿಕೆಯಿಲ್ಲದೆ ಕಾಫಿ ಬೀಜಗಳನ್ನು ಹೇಗೆ ಬೆಳೆಸುವುದು ಮತ್ತು ಸಂಸ್ಕರಿಸುವುದು ಮತ್ತು ಈ ಹೆಚ್ಚಿನ ಬೇಡಿಕೆಯ ಬೆಳೆಯಿಂದ ಗಮನಾರ್ಹ ಆದಾಯವನ್ನು ಗಳಿಸುವುದು ಹೇಗೆ ಎಂದು ತಿಳಿಯಿರಿ.
  • ಶೂನ್ಯ ಬಂಡವಾಳದಲ್ಲಿ ಗೊಬ್ಬರ ತಯಾರಿ: ಶೂನ್ಯ ಹೂಡಿಕೆ ತಂತ್ರವನ್ನು ಬಳಸಿಕೊಂಡು ಸಾವಯವ ಗೊಬ್ಬರವನ್ನು ಹೇಗೆ ತಯಾರಿಸುವುದು ಮತ್ತು ನಿಮ್ಮ ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ.
  • ನರ್ಸರಿ ಮತ್ತು ಮೈಕ್ರೋ ಇಂಡಸ್ಟ್ರಿ: ಶೂನ್ಯ ಹೂಡಿಕೆ ತಂತ್ರಗಳನ್ನು ಬಳಸಿಕೊಂಡು ಲಾಭದಾಯಕ ನರ್ಸರಿ ಮತ್ತು ಸೂಕ್ಷ್ಮ ಉದ್ಯಮವನ್ನು ಹೇಗೆ ಸ್ಥಾಪಿಸುವುದು ಮತ್ತು ಇಲ್ಲಿ ಹೇಗೆ ಆದಾಯ ಗಳಿಸುವುದು ಎಂಬುವುದನ್ನು ತಿಳಿದುಕೊಳ್ಳಿ. 
  • ಯುನಿಟ್ ಎಕನಾಮಿಕ್ಸ್: ಶೂನ್ಯ-ಬಜೆಟ್ ನೈಸರ್ಗಿಕ ಕೃಷಿಯ ಯುನಿಟ್ ಎಕನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಿ ಮತ್ತು ತಿಳುವಳಿಕೆಯುಳ್ಳ ವ್ಯಾಪಾರ ನಿರ್ಧಾರಗಳನ್ನು ಮಾಡಲು ಲಾಭಗಳು, ವೆಚ್ಚಗಳನ್ನು ಲೆಕ್ಕ ಹಾಕುವುದು ಹೇಗೆ ಎಂಬುವುದನ್ನು ತಿಳಿಯಿರಿ. 

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.