ಈ ಕೋರ್ಸ್ ಒಳಗೊಂಡಿದೆ
ಮಕ್ಕಳು ಚಿಕ್ಕವರಿದ್ದಾಗಲೇ ಅವರಿಗೆ ಹಣದ ಬಗ್ಗೆ ಕಲಿಸಿದರೆ, ದೊಡ್ಡವರಾದ ಮೇಲೆ ಅವರಿಗೆ ಜೀವನದಲ್ಲಿ ಜವಾಬ್ದಾರಿಯಿಂದ ಹಣ ನಿರ್ವಹಣೆ ಮಾಡಲು ನೆರವಾಗುತ್ತದೆ. ಯಾವ ಪೋಷಕರು ತಮ್ಮ ಮಕ್ಕಳಿಗೆ ಆರ್ಥಿಕ ಸಾಕ್ಷರತೆ ಸಿಗುವ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೋ ಅಂತವರ ಮಕ್ಕಳು ಸರಿಯಾಗಿ ಹಣವನ್ನು ನಿರ್ವಹಣೆ ಮಾಡುವ ಬಗ್ಗೆ ತಿಳಿದುಕೊಳ್ಳುತ್ತಾರೆ. ಹಣವನ್ನು ಗಳಿಸುವ ಬಗ್ಗೆ ಮತ್ತು ಉಳಿಸುವ ಬಗ್ಗೆ ಹೆಚ್ಚು ಪ್ರಬುದ್ಧತೆಯನ್ನು ಪಡೆಯುತ್ತಾರೆ. ಈ ಮಕ್ಕಳು ಹಣದ ಬಗ್ಗೆ ಆರೋಗ್ಯಕರ ದೃಷ್ಟಿಕೋನವನ್ನು ಹೊಂದುತ್ತಾರೆ. ಈ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ.
ನಿಮ್ಮ ಮಕ್ಕಳಿಗೆ ಹಣದ ಬಗ್ಗೆ ಕಲಿಸಲು ಅವರ ವಯಸ್ಸು ಅಡ್ಡಿಬರಬಾರದು. ಅವರ ವಯಸ್ಸಿಗೆ ತಕ್ಕಂತೆ ಅವರಿಗೆ ಹಿತ ಎನ್ನಿಸುವ ಮಾರ್ಗದಲ್ಲಿ ಹಣಕಾಸಿನ ಶಿಕ್ಷಣ ನೀಡುವುದು ಸೂಕ್ತ. ಕೆಲ ಪೋಷಕರು ತಮ್ಮ ಜೀವನದ ಸ್ವಂತ ಅನುಭವದಿಂದ ಕಲಿತ ಸಾಕಷ್ಟು ಹಣಕಾಸಿನ ವಿಷಯವನ್ನು ಮಕ್ಕಳಿಗೆ ತಿಳಿಸಬಹುದು. ಈ ರೀತಿ ಮಾಡುವುದರಿಂದ ಮಕ್ಕಳು ಬೇಗನೆ ಹಣಕಾಸಿನ ವಿಷಯವನ್ನು ಗ್ರಹಿಸಲು ಸಾಧ್ಯವಾಗುತ್ತದೆ.
ಒಂದಷ್ಟು ಚಟುವಟಿಕೆಗಳ ಮೂಲಕ ಅಥವಾ ಒಂದಷ್ಟು ಆಟಗಳ ಮೂಲಕ ಸಹ ಮಕ್ಕಳಿಗೆ ಹಣಕಾಸು ಮತ್ತು ಉಳಿತಾಯದ ಪಾಠವನ್ನು ಮಾಡುವುದು ಸೂಕ್ತ. ನೀವು ನಿಮ್ಮ ಮಕ್ಕಳಿಗೆ ಹಣಕಾಸಿನ ಪಾಠವನ್ನು ಹೇಗೆ ಮಾಡಬೇಕು ಎಂದು ಯೋಚಿಸುತ್ತಿದ್ದರೆ, ನಿಮಗೆ ಈ ಕೋರ್ಸ್ ಬಹಳಷ್ಟು ನೆರವಾಗಲಿದೆ. ಈ ಕೋರ್ಸ್ ಮೂಲಕ ನೀವು ನಿಮ್ಮ ಮಕ್ಕಳಿಗೆ ಹಣಕಾಸು ಪಾಠವನ್ನು ಸರಿಯಾಗಿ ಮಾಡುವಷ್ಟು ಶಕ್ತರಾಗುತ್ತೀರಿ.