ಈ ಕೋರ್ಸ್ ಒಳಗೊಂಡಿದೆ
ಪ್ರಾಣಾಯಾಮ ಎಂಬುದು ಉಸಿರಾಟವನ್ನು ನಿಯಂತ್ರಿಸುವ ಒಂದು ಪ್ರಾಚೀನ ಅಭ್ಯಾಸವಾಗಿದೆ ಮತ್ತು ಇದು ನಿಮ್ಮ ಜೀವನದಲ್ಲಿ ಸಮತೋಲನ ಮತ್ತು ಸಾಮರಸ್ಯವನ್ನು ಸಾಧಿಸಲು ಪ್ರಬಲ ಸಾಧನವಾಗಿದೆ. ಹಾಗಿದ್ದರೆ ಪ್ರಾಣಾಯಾಮ ಎಂದರೇನು ಮತ್ತು ಅದನ್ನು ನಿಮ್ಮ ದಿನಚರಿಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು? ಪ್ರಾಣಾಯಾಮ ಕುರಿತಾದ ನಮ್ಮ ಈ ಸಮಗ್ರ ಕೋರ್ಸ್ ಈ ಎಲ್ಲ ಪ್ರಶ್ನೆಗಳಿಗೆ ಮತ್ತು ಹೆಚ್ಚಿನವುಗಳಿಗೆ ಉತ್ತರಿಸುವ ಗುರಿಯನ್ನು ಹೊಂದಿದೆ.
ಈ ಕೋರ್ಸ್‌ನಲ್ಲಿ, ಪ್ರಾಣಾಯಾಮ ಎಂದರೇನು ಮತ್ತು ಅದು ನಿಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ನೀವು ಕಲಿಯುವಿರಿ. ಕಪಾಲಭಾತಿ, ಅನುಲೋಮ್ ವಿಲೋಮ್ ಮತ್ತು ಭ್ರಮರಿ ಸೇರಿದಂತೆ ವಿವಿಧ ಪ್ರಾಣಾಯಾಮ ತಂತ್ರಗಳನ್ನು ನಾವು ಈ ಕೋರ್ಸ್ ನಲ್ಲಿ ಕವರ್ ಮಾಡುತ್ತೇವೆ ಮತ್ತು ಅವುಗಳನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಅಭ್ಯಾಸ ಮಾಡುವುದು ಹೇಗೆ ಎಂದು ಸಹ ನೀವು ಕಂಡುಕೊಳ್ಳುವಿರಿ.
ಹಂತ-ಹಂತದ ಮಾರ್ಗದರ್ಶನದ ಮೂಲಕ, ನೀವು ಪ್ರಾಣಾಯಾಮವನ್ನು ಸರಿಯಾಗಿ ಹೇಗೆ ಮಾಡಬೇಕೆಂದು ಕಲಿಯುತ್ತೀರಿ ಜೊತೆಗೆ ಉಸಿರಾಟದ ನಿಯಂತ್ರಣದ ಕಲೆಯನ್ನು ಕರಗತ ಮಾಡಿಕೊಳ್ಳುತ್ತೀರಿ. ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುವುದರಿಂದ ಹಿಡಿದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವವರೆಗೆ ಪ್ರತಿಯೊಂದು ವಿಧದ ಪ್ರಾಣಾಯಾಮದ ಪ್ರಯೋಜನಗಳನ್ನು ಸಹ ನೀವು ಕಂಡುಕೊಳ್ಳುವಿರಿ.
ಅಂಜು ಸುಂದ್ರೇಶ್ ಅವರು ಯೋಗ ಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಕೌನ್ಸೆಲಿಂಗ್‌ನಲ್ಲಿ ಡಿಪ್ಲೊಮಾ ಹೊಂದಿರುವ ಅರ್ಹ ಯೋಗ ಚಿಕಿತ್ಸಕರು ಮತ್ತು ಬೋಧಕರಾಗಿದ್ದಾರೆ. ಹಲವಾರು ವರ್ಷಗಳ ಅನುಭವದೊಂದಿಗೆ, ಅವರು ಪರ್ಸನಲೈಸ್ಡ್ ಯೋಗ ಮತ್ತು ಕೌನ್ಸೆಲಿಂಗ್‌ನ ಸೇವೆಗಳನ್ನು ನೀಡುತ್ತಾರೆ ಮತ್ತು ಕಲ್ಟ್ ಫಿಟ್‌ನಂತಹ ಸಂಸ್ಥೆಗಳಿಂದ ಗುರುತಿಸಲ್ಪಟ್ಟಿದ್ದಾರೆ. ಅವರು ತಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಸುಧಾರಿಸಲು ಬಯಸುವ ಯಾರಿಗಾದರೂ ಪರಿಪೂರ್ಣ ಮಾರ್ಗದರ್ಶಕರಾಗಿದ್ದಾರೆ.
ಈ ಕೋರ್ಸ್ ಆರಂಭಿಕರಿಂದ ಅನುಭವ ಹೊಂದಿರುವವರೆಗೆ ಎಲ್ಲರಿಗೂ ಸೂಕ್ತವಾಗಿದೆ. ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸಲು, ಒತ್ತಡವನ್ನು ಕಡಿಮೆ ಮಾಡಲು ಅಥವಾ ನಿಮ್ಮ ಆಧ್ಯಾತ್ಮಿಕ ಅಭ್ಯಾಸವನ್ನು ಗಾಢವಾಗಿಸಲು ನೀವು ಬಯಸುತ್ತೀರಾ, ಹಾಗಿದ್ದರೆ ಈ ಕೋರ್ಸ್ ನಿಮಗೆ ನಿಮ್ಮ ಗುರಿಗಳನ್ನು ಸಾಧಿಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಸಾಧನಗಳನ್ನು ಒದಗಿಸುತ್ತದೆ. ಇಂದೇ ನೋಂದಾಯಿಸಿ ಮತ್ತು ಪ್ರಾಣಾಯಾಮದ ಶಕ್ತಿಯನ್ನು ಅನ್ವೇಷಿಸಿ.
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ತಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಆಸಕ್ತಿ ಹೊಂದಿರುವ ಯಾರಾದರೂ
ತಮ್ಮ ಅಭ್ಯಾಸವನ್ನು ಗಾಢವಾಗಿಸಲು ಬಯಸುವ ಯೋಗ ಸಾಧಕರು
ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಬಯಸುವ ವ್ಯಕ್ತಿಗಳು
ತಮ್ಮ ಶ್ವಾಸಕೋಶದ ಸಾಮರ್ಥ್ಯ ಮತ್ತು ಒಟ್ಟಾರೆ ಚೈತನ್ಯವನ್ನು ಹೆಚ್ಚಿಸಲು ಬಯಸುವವರು
ತಮ್ಮ ಉಸಿರಾಟದ ಶಕ್ತಿಯನ್ನು ಉಪಯೋಗಿಸಲು ಬಯಸುವ ಯಾರಾದರೂ
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ವಿವಿಧ ರೀತಿಯ ಪ್ರಾಣಾಯಾಮ ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ತಿಳಿಯಿರಿ
ಉಸಿರಾಟ ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸಲು ತಂತ್ರಗಳು
ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವ ವಿಧಾನಗಳು
ಜೀರ್ಣಕ್ರಿಯೆಯನ್ನು ಸುಧಾರಿಸುವ ಬಗ್ಗೆ ಉಪಯುಕ್ತ ಮಾಹಿತಿ ತಿಳಿಯಿರಿ
ನಿಮ್ಮ ದೈನಂದಿನ ದಿನಚರಿಯಲ್ಲಿ ಪ್ರಾಣಾಯಾಮವನ್ನು ಅಳವಡಿಸಲು ತಿಳಿಯಿರಿ
ಅಧ್ಯಾಯಗಳು