ಈ ಕೋರ್ಸ್ ಒಳಗೊಂಡಿದೆ
RBI ರಿಟೇಲ್ ಡೈರೆಕ್ಟ್ ಸ್ಕೀಮ್ ಎಂದರೇನು ಎಂದು ನಿಮಗೆ ಗೊತ್ತಾ? “RBI's Retail Direct Program: A Complete Guide to Compliance” ಎಂಬುದು RBIನ ರಿಟೇಲ್ ಡೈರೆಕ್ಟ್ ಸ್ಕೀಮ್ ಮತ್ತು ಭಾರತದಲ್ಲಿನ ಸರ್ಕಾರಿ ಬಾಂಡ್‌ಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಈ ಕೋರ್ಸ್ ಮಾಹಿತಿ ಒದಗಿಸುತ್ತದೆ. ಈ ಕೋರ್ಸ್ ಅನ್ನು ವೈಯಕ್ತಿಕ ಹೂಡಿಕೆದಾರರು, ಹಣಕಾಸು ಸಲಹೆಗಾರರು ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು ಉದ್ಯಮದಲ್ಲಿನ ವೃತ್ತಿಪರರಿಗಾಗಿ ವಿನ್ಯಾಸಗೊಳಿಸಲಾಗಿದೆ.
ಯೋಜನೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಪರಿಣಾಮಕಾರಿಯಾಗಿ ಭಾಗವಹಿಸುವುದು ಹೇಗೆ ಎಂದು ಸವಿವವರವಾಗಿ ಹೇಳಲಾಗಿದೆ. ರೀಟೈಕ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಅನ್ನು ಓಪನ್ ಮಾಡುವ ವಿಧಾನ, ಲಭ್ಯವಿರುವ ವಿವಿಧ ಸರ್ಕಾರಿ ಬಾಂಡ್‌ಗಳು ಮತ್ತು RDGA ಮೂಲಕ ಬಾಂಡ್‌ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಕಾರ್ಯವಿಧಾನಗಳನ್ನು ಕೋರ್ಸ್ ಒಳಗೊಂಡಿದೆ.
ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆಗೆ ಸಂಬಂಧಿಸಿದ ಅಪಾಯಗಳು ಮತ್ತು ಆದಾಯದ ಬಗ್ಗೆ ಸಮಗ್ರ ಮಾಹಿತಿ ಈ ಕೋರ್ಸ್‌ನಲ್ಲಿ ದೊರಕುತ್ತದೆ. ಬಾಂಡ್ ಬೆಲೆಗಳ ಮೇಲಿನ ಬಡ್ಡಿದರಗಳು ಮತ್ತು ಹಣದುಬ್ಬರದ ಪ್ರಭಾವದ ಬಗ್ಗೆ ಕಲಿಯಬಹುದು. ರೀಟೈಲ್ ಡೈರೆಕ್ಟ್‌ನ ಕೋರ್ಸ್‌ನಲ್ಲಿ ಭಾಗವಹಿಸುವಿಕೆಗಾಗಿ ಆರ್‌ಬಿಐ ನಿಗದಿಪಡಿಸಿದ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಒಳಗೊಂಡಂತೆ ಮುಂತಾದ ಮಾಹಿತಿಗಳು ಲಭ್ಯವಿದೆ. ಯೋಜನೆಯ ನಿಯಂತ್ರಣ ಮತ್ತು ಅನುಸರಣಾತ್ಮಕ ಅಂಶಗಳ ಬಗ್ಗೆ ಅರಿವನ್ನು ಮೂಡಿಸುತ್ತದೆ.
ರೀಟೈಲ್ ಡೈರೆಕ್ಟ್ ಸ್ಕೀಮ್ ಮತ್ ುಭಾರತೀಯ ಬಾಂಡ್ ಮಾರುಕಟ್ಟೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುವ ಅನುಭವಿ ವೃತ್ತಿಪರರು ಈ ಕ್ಷೇತ್ರದಲ್ಲಿ ಕೋರ್ಸ್‌ಅನ್ನು ಮುನ್ನಡೆಸುತ್ತಾರೆ. ಯೋಜನೆಯನ್ನು ನ್ಯಾವಿಗೇಟ್ ಮಾಡಲು ಮತ್ತು ತಿಳುವಳಿಕೆಯುಳ್ಳ ಹೂಡಿಕೆ ನಿರ್ಧಾರಗಳನ್ನು ಮಾಡಲು ಅವರು ಮೌಲ್ಯಯುತವಾದ ಒಳನೋಟ ಮತ್ತು ಪ್ರಾಯೋಗಿಕ ಸಲಹೆಗಳನ್ನು ನೀಡುತ್ತಾರೆ.
ಈ ಕೋರ್ಸ್ ಮೂಲಕ, RBIನ ರೀಟೈಲ್ ಡೈರೆಕ್ಟ್ ಸ್ಕೀಮ್ ನಲ್ಲಿ ಪರಿಣಾಮಕಾರಿಯಾಗಿ ಭಾಗವಾಗುವುದು ಹೇಗೆ ಎಂದು ತಿಳಿಯಬಹುದು. ಈ ಜ್ಞಾನವು ಉತ್ತಮ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಅವರ ಹೂಡಿಕೆಯ ಮೇಲೆ ಹೆಚ್ಚಿನ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ.
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ವೈಯಕ್ತಿಕ ಹೂಡಿಕೆದಾರರು ರೀಟೈಲ್ ಡೈರೆಕ್ಟ್ ಸ್ಕೀಮ್ ಬಗ್ಗೆ ಅರ್ಥಮಾಡಿಕೊಳ್ಳಲು ಬಯಸುವವರು
ಬ್ಯಾಂಕಿಂಗ್ ಮತ್ತು ಹಣಕಾಸು ಉದ್ಯಮದಲ್ಲಿ ಹಣಕಾಸು ಸಲಹೆಗಾರರು ಮತ್ತು ವೃತ್ತಿಪರರು
ಸರ್ಕಾರಿ ಬಾಂಡ್‌ಗಳು ಮತ್ತು ಭಾರತೀಯ ಬಾಂಡ್ ಮಾರುಕಟ್ಟೆಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
ಹೂಡಿಕೆಯ ಮೇಲಿನ ಆದಾಯವನ್ನು ಗರಿಷ್ಠಗೊಳಿಸಲು ಬಯಸುವ ವ್ಯಕ್ತಿಗಳು
ರಿಟೇಲ್ ಡೈರೆಕ್ಟ್ ಗಿಲ್ಟ್ ಖಾತೆಯಲ್ಲಿ ತಮ್ಮ ಜ್ಞಾನವನ್ನು ಸುಧಾರಿಸಲು ಬಯಸುವ ಜನರು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ರೀಟೈಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಹೇಗೆ ತೆಗೆಯಬೇಕು ಎನ್ನುವ ಮಾಹಿತಿ
RDGA ಮೂಲಕ ಬಾಂಡ್‌ಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಕಾರ್ಯವಿಧಾನಗಳು
ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆಗೆ ಸಂಬಂಧಿಸಿದ ಅಪಾಯಗಳು ಮತ್ತು ಆದಾಯಗಳು
ಬಾಂಡ್ ಬೆಲೆಗಳ ಮೇಲೆ ಬಡ್ಡಿದರಗಳು ಮತ್ತು ಹಣದುಬ್ಬರದ ಪ್ರಭಾವ
ಯೋಜನೆಯ ನಿಯಂತ್ರಕ ಮತ್ತು ಅನುಸರಣೆ ಅಂಶಗಳು ಮತ್ತು ಭಾಗವಹಿಸುವಿಕೆಗಾಗಿ RBI ನಿಗದಿಪಡಿಸಿದ ನಿಯಮಗಳು ಮತ್ತು ಮಾರ್ಗಸೂಚಿಗಳು
ಅಧ್ಯಾಯಗಳು