ಈ ಕೋರ್ಸ್ ಒಳಗೊಂಡಿದೆ
ಭಾರತದ ಶೇ 10 ಪರ್ಸೆಂಟ್ ಶ್ರೀಮಂತರ ಕೈಯಲ್ಲಿ ರಾಷ್ಟದ ಒಟ್ಟಾರೆ ಸಂಪತ್ತಿನ ಶೇ 77.4 ಪರ್ಸೆಂಟ್ ನಷ್ಟು ಇದೆ. ಶೇ 4 ಪರ್ಸೆಂಟ್ ಸಂಪತ್ತು ಮಾತ್ರ ಶೇಕಡ 60 ರಷ್ಟು ಬಡವರ ಬಳಿ ಇದೆ. ಭಾರೀ ಶ್ರೀಮಂತರ ಸಂಪತ್ತು ಕಳೆದ ವರ್ಷ ಪ್ರತಿದಿನ 2,200 ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿದೆ. ದೇಶದ ಜನಸಂಖ್ಯೆಯ ಶೇ 10ರಷ್ಟು ಮಂದಿ ಅಥವಾ 13.6 ಕೋಟಿ ಕಡು ಬಡ ಭಾರತೀಯರು 2004ರಿಂದಲೂ ಸಾಲದ ಸುಳಿಯಲ್ಲಿದ್ದು, ಅದೇ ಸ್ಥಿತಿಯಲ್ಲಿ ಮುಂದುವರಿದಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣ ನಮ್ಮ ಜನರಲ್ಲಿ ಹಣಕಾಸು ನಿರ್ವಹಣೆ ಬಗ್ಗೆ ಇರುವ ಅಜ್ಞಾನ.
ಪ್ರತಿಯೊಬ್ಬರಿಗೂ ಅಂಗನವಾಡಿಯಿಂದ ಡಿಗ್ರಿವರೆಗೆ ಸುಮಾರು 17 ವರ್ಷ ವಿದ್ಯಾಭ್ಯಾಸ ಸಿಗುತ್ತದೆ. ಆದರೆ ನಮ್ಮ ಶಿಕ್ಷಣದ ಯಾವ ಹಂತದಲ್ಲೂ ಸಹ ಹಣಕಾಸು ನಿರ್ವಹಣೆ ಮತ್ತು ಹೂಡಿಕೆ ಬಗ್ಗೆ ಜ್ಞಾನಾರ್ಜನೆ ಆಗುವುದಿಲ್ಲ. ನಮ್ಮಲ್ಲಿ ಬಹುತೇಕರು ದುಡ್ಡನ್ನ ಉಳಿತಾಯ ಮಾಡುವುದಿಲ್ಲ, ಒಳ್ಳೆಯ ದಿನಗಳು ಬರುತ್ತವೇ ಎನ್ನುತ್ತಲೇ ಕಾಲಹರಣ ಮಾಡುತ್ತಾರೆ. ಇಷ್ಟು ಸಾಲದು ಎಂಬಂತೆ ದಿಢೀರ್ ದುಡ್ಡು ಮಾಡುವ ಆಸೆಗೆ ಬಿದ್ದು ಸಿಕ್ಕ ಸಿಕ್ಕ ಕಡೆ ಹಣ ಹಾಕಿ ಕೈಸುಟ್ಟುಕೊಳ್ಳುತ್ತಾರೆ.
ಇಷ್ಟೆಲ್ಲಾ ಸಮಸ್ಯೆಗಳನ್ನು ಮನಗಂಡು ಇಂಡಿಯನ್ ಮನಿ ಡಾಟ್ ಕಾಂ ಮತ್ತು ffreedom App ನ ಸಿಇಒ ಆಗಿರುವ ಸಿ ಎಸ್ ಸುಧೀರ್ ಅವರು ಫೈನಾನ್ಸಿಯಲ್ ಫ್ರೀಡಂ ಕೋರ್ಸ್ ಅನ್ನು ರೂಪಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ನಿವೃತ್ತಿ ಹೊಂದಿರುವ ನಾಗರಿಕರ ವರೆಗೆ ಎಲ್ಲರಿಗೂ ಅನುಕೂಲವಾಗುವ ಅಂಶಗಳು ಫೈನಾನ್ಸಿಯಲ್ ಫ್ರೀಡಂ ಕೋರ್ಸ್ ನಲ್ಲಿವೆ. ಫೈನಾನ್ಸಿಯಲ್ ಫ್ರೀಡಂ ಕೋರ್ಸ್ ಹಣಕಾಸು ನಿರ್ವಹಣೆಗೆ ಭದ್ರ ಬುನಾದಿ ಹಾಕುವ ಜತೆಗೆ ಭವಿಷ್ಯದ ನಿಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ದಾರಿ ಮಾಡಿಕೊಡುತ್ತದೆ. ಈ ಮೂಲಕ ನೀವು ಹಣಕಾಸನ್ನು ನಿಯಂತ್ರಿಸುವ ಕೌಶಲ ಸಿದ್ಧಿಸಿಕೊಂಡು ಶ್ರೀಮಂತರಾಗಬಹುದು.