ಈ ಕೋರ್ಸ್ ಒಳಗೊಂಡಿದೆ
ಮಧುಮೇಹವನ್ನು ಸಕ್ಕರೆ ಕಾಯಿಲೆ ಎಂದೂ ಸಹ ಕರೆಯಲಾಗುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಿರುವ ಕಾರಣ ಈ ಕಾಯಿಲೆ ಬರುತ್ತದೆ. ವಿಷಾದದ ಸಂಗತಿ ಎಂದರೆ ವಿಶ್ವದಲ್ಲೇ ಭಾರತವನ್ನು ಕ್ಯಾಪಿಟಲ್ ಆಫ್ ಡೈಯಾಬಿಟೀಸ್ ಎಂದು ಸಂಬೋಧಿಸಲಾಗುತ್ತದೆ.
ಸಕ್ಕರೆ ಕಾಯಿಲೆಯಲ್ಲಿ ಟೈಪ್- 1 ಮತ್ತು ಟೈಪ್- 2 ಎಂಬ ಎರಡು ವಿಧಗಳಿವೆ. ಬಹಳಷ್ಟು ಮಂದಿಯಲ್ಲಿ ಟೈಪ್ - 2 ಸಕ್ಕರೆ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ. ಇದು ಆರೋಗ್ಯಕರವಲ್ಲದ ಜೀವನ ಶೈಲಿಯ ಕಾರಣಕ್ಕಾಗಿ ಕಂಡುಬರುವ ಸಕ್ಕರೆ ಕಾಯಿಲೆಯ ಲಕ್ಷಣಗಳು.
ಒಂದು ವರದಿಯ ಪ್ರಕಾರ ಕಳೆದ 25 ವರ್ಷದಲ್ಲಿ ಸುಮಾರು 64 ಪರ್ಸೆಂಟ್ ನಷ್ಟು ಡೈಯಾಬಿಟಿಕ್ ಉಳ್ಳವರ ಸಂಖ್ಯೆ ಅಧಿಕವಾಗಿದೆ. ಸಕ್ಕರೆ ಕಾಯಿಲೆ ಹಣ ಉಳ್ಳವರಿಗೆ ಮಾತ್ರ ಬರುವ ಕಾಯಿಲೆ ಎಂದು ಮುಂಚೆ ಹೇಳಲಾಗುತ್ತಿತ್ತು. ಆದರೆ ಇಂದು ಇದು ಯಾವುದೇ ಭೇದಭಾವವಿಲ್ಲದಂತೆ ಬಹುಮಂದಿ ಯನ್ನು ಆಕ್ರಮಿಸುತ್ತಿದೆ. ಆದರೆ, ಸರಿಯಾದ ಆಹಾರ ಕ್ರಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿದೆ.
ಉತ್ತಮ ಆರೋಗ್ಯಯುತ ಸಮಾಜವನ್ನು ನಿರ್ಮಿಸುವ ಕಾಳಜಿಯೊಂದಿಗೆ ffreedom ಅಪ್ಲಿಕೇಶನ್ ಮಧುಮೇಹಿಗಳಿಗೆ ಆಹಾರ ಕ್ರಮ ಎಂಬ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಖ್ಯಾತ ವೈದ್ಯರು ಈ ಕೋರ್ಸ್ ಮೂಲಕ ಮಾರ್ಗದರ್ಶನವನ್ನು ಮಾಡಲಿದ್ದಾರೆ. ನೀವೂ ಸಹ ಅದರ ಸಂಪೂರ್ಣ ಲಾಭವನ್ನು ಪಡೆದು ಆರೋಗ್ಯಯುತ ಜೀವನವನ್ನು ನಡೆಸಬಹುದು.