ಈ ಕೋರ್ಸ್ ಒಳಗೊಂಡಿದೆ
ಒಂದು ಉತ್ತಮ ಆರೋಗ್ಯಕರ ಮಗುವನ್ನು ಪಡೆಯುವ ಆಸೆ ಪ್ರತಿ ದಂಪತಿಗಳಿಗೆ ಇರುತ್ತದೆ. ಭವಿಷ್ಯದ ಮಗುವಿನ ಮೇಲೆ ಅಪಾರವಾದ ಕನಸನ್ನು ಸಹ ಕಂಡಿರುತ್ತಾರೆ. ಹಾಗಾಗಿ ಗರ್ಭಧಾರಣೆ ಯೋಜನೆಗೂ ಮುಂಚೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮನ್ನು ಮತ್ತು ನಿಮ್ಮ ಭವಿಷ್ಯದ ಮಗುವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬಹುದು. ನೀವು ಗರ್ಭಿಣಿ ಆಗುವ ಬಗ್ಗೆ ಯೋಚಿಸುತ್ತಿದ್ದರೆ, ಗರ್ಭಧಾರಣೆಯ ಪೂರ್ವ ಆರೈಕೆಗಾಗಿ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಅವರು ಗರ್ಭಧಾರಣೆಯ ಯೋಜನೆ ಕುರಿತಂತೆ ನಿಮಗೆ ತಜ್ಞ ಸಲಹೆಯನ್ನು ನಿಮಗೆ ನೀಡುತ್ತಾರೆ.
ಪ್ರೆಗ್ನೆನ್ಸಿ ಆಗುವ ಕೆಲವು ತಿಂಗಳುಗಳ ಮೊದಲು ನಿಮ್ಮ ಜೀವನಶೈಲಿಯಲ್ಲಿ ಕೆಲವು
ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇದರಿಂದ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಆಗುತ್ತದೆ. ಇದರ ಜೊತೆಗೆ ಗರ್ಭಾವಸ್ಥೆಯಲ್ಲಿ ಆಗಬಹುದಾದ ಕೆಲವು ಸಮಸ್ಯೆಗಳಿಂದ ಇದು ರಕ್ಷಿಸುತ್ತದೆ ಮತ್ತು ಮಗುವು ಹುಟ್ಟಿನಿಂದಲೇ ಉತ್ತಮ ಆರೋಗ್ಯವನ್ನು ಪಡೆಯಲು ಸಹಕಾರಿ ಆಗುತ್ತದೆ.
ಪ್ರೆಗ್ನನ್ಸಿ ಮತ್ತು ಮಗುವಿನ ಆರೈಕೆ ವಿಷಯದ ಕುರಿತಂತೆ ನಿಮಗೆ ಉಪಯುಕ್ತ ಮಾಹಿತಿಯನ್ನು ನೀಡಲು ffreedom ಅಪ್ಲಿಕೇಶನ್ ಪ್ರೆಗ್ನೆನ್ಸಿ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಜನಪ್ರಿಯ ಮತ್ತು ಅತ್ಯುತ್ತಮ ತಜ್ಞ ವೈದ್ಯರ ಸಹಾಯದಿಂದ ಈ ಕೋರ್ಸ್ ಅನ್ನು ರೂಪಿಸಲಾಗಿದೆ. ನೀವೂ ಸಹ ಇದರ ಪ್ರಯೋಜನವನ್ನು ಪಡೆಯಬಹುದು.