ಸೂಪರ್ ಮಾರ್ಕೆಟ್ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸಬೇಕು ಎಂದು ನೀವು ಯೋಚಿಸುತ್ತಿದ್ದರೆ ಮತ್ತು ಅದರ ಸಿದ್ದತೆಯನ್ನು ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿದುಕೊಳ್ಳಲು ಬಯಸಿದ್ದರೆ, ಈ ಕೋರ್ಸ್ ನಿಮಗೆ ಪರಿಪೂರ್ಣ ಆರಂಭಿಕ ಹಂತದಿಂದ ಮಾಹಿತಿ ಒದಗಿಸಲಿದೆ. "ಸೂಪರ್ ಮಾರ್ಕೆಟ್ ಕೋರ್ಸ್- ಪ್ರತಿ ತಿಂಗಳು 10 ಲಕ್ಷದವರೆಗೆ ಗಳಿಸಿ" ಎಂಬ ಕೋರ್ಸ್ ನಿಮಗೆ ಯಶಸ್ವಿ ಉದ್ಯಮವನ್ನು ಕಟ್ಟಲು ಮತ್ತು ಮುನ್ನಡೆಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ. ಭಾರತದಲ್ಲಿ ಯಶಸ್ವಿ ಸೂಪರ್ ಮಾರ್ಕೆಟ್ ಬಿಸಿನೆಸ್ ನಿರ್ಮಿಸುವ ನಿಟ್ಟಿನಲ್ಲಿ ಜ್ಞಾನವನ್ನು ನೀಡಲು ಅನುಭವಿ ಉದ್ಯಮ ತಜ್ಞರು ಈ ಕೋರ್ಸ್ ಅನ್ನು ಮುನ್ನಡೆಸುತ್ತಾರೆ.
ಈ ಕೋರ್ಸ್ ಮಾರ್ಕೆಟ್ ರಿಸರ್ಚ್, ಬಿಸಿನೆಸ್ ಪ್ಲಾನ್ , ಹಣಕಾಸು ನಿರ್ವಹಣೆ, ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್, ಆಪರೇಷನ್ಸ್ ಮ್ಯಾನೇಜ್ಮೆಂಟ್ ಮತ್ತು ಕಸ್ಟಮರ್ ಸರ್ವಿಸ್ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಿದೆ. ಸೂಕ್ತವಾದ ಗ್ರಾಹಕರ ನೆಲೆಯನ್ನು ಗುರುತಿಸಲು ಮತ್ತು ಗುರಿಯಾಗಿಸಲು ಮಾರ್ಕೆಟ್ ರಿಸರ್ಚ್ ಅನ್ನು ಹೇಗೆ ನಡೆಸುವುದು, ಜೊತೆಗೆ ಸೂಪರ್ ಮಾರ್ಕೆಟ್ ಬಿಸಿನೆಸ್ ನ ಯಶಸ್ವೀ ತಂತ್ರಗಳನ್ನು ಮತ್ತು ಗುರಿಗಳನ್ನು ವಿವರಿಸುವ ನಿಟ್ಟಿನಲ್ಲಿ ಸೂಪರ್ ಮಾರ್ಕೆಟ್ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ಅಭಿವೃದ್ಧಿಪಡಿಸುವುದು ಜೊತೆಗೆ ಬಜೆಟಿಂಗ್ ಮತ್ತು ಫೋರ್ ಕ್ಯಾಸ್ಟಿಂಗ್ ಮಾಡುವುದನ್ನು ಇದು ಒಳಗೊಂಡಿರುತ್ತದೆ. ಇದರೊಟ್ಟಿಗೆ ಹಣಕಾಸಿನ ಯೋಜನೆಯನ್ನು ಸಹ ಹೇಗೆ ರೂಪಿಸಬೇಕು ಎಂಬುದನ್ನು ನೀವು ಇಲ್ಲಿ ಕಲಿಯುವಿರಿ.
ಹೆಚ್ಚುವರಿಯಾಗಿ, ಪ್ರಬಲ ಬ್ರಾಂಡ್ ಅನ್ನು ಹೇಗೆ ನಿರ್ಮಿಸುವುದು ಮತ್ತು ಪೊಟೆನ್ಷಿಯಲ್ ಗ್ರಾಹಕರನ್ನು ತಲುಪಲು ಪರಿಣಾಮಕಾರಿಯಾಗಿ ಹೇಗೆ ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಸೂಪರ್ ಮಾರ್ಕೆಟ್ ಬಿಸಿನೆಸ್ ಗೆ ಅಗತ್ಯವಿರುವ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್‌ನ ಪ್ರಾಮುಖ್ಯತೆಯ ಬಗ್ಗೆ ಕೂಡ ನೀವು ಕಲಿಯುವಿರಿ. ದಾಸ್ತಾನು ನಿರ್ವಹಣೆ, ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ನಿರ್ವಹಣೆ ಸೇರಿದಂತೆ ವಿವಿಧ ಕಾರ್ಯಾಚರಣೆಗಳ ನಿರ್ವಹಣೆಯ ಬಗ್ಗೆ ವಿವರವಾಗಿ ಕಲಿಯುವಿರಿ.
ಈ ಕೋರ್ಸ್ ಗ್ರಾಹಕ ಸೇವೆಯ ಪ್ರಾಮುಖ್ಯತೆ ಬಗ್ಗೆ ಮತ್ತು ಗ್ರಾಹಕರಿಗೆ ಸಕಾರಾತ್ಮಕ ಅನುಭವವನ್ನು ಹೇಗೆ ನೀಡುವುದು ಎಂಬುದರ ಬಗ್ಗೆ ಅಗತ್ಯ ಮಾಹಿತಿಯನ್ನು ಇದು ನೀಡುತ್ತದೆ. ಇದರ ಜೊತೆಗೆ ನಿಷ್ಠಾವಂತ ಗ್ರಾಹಕರ ನೆಲೆಯನ್ನು ಹೇಗೆ ನಿರ್ಮಿಸುವುದು, ಗ್ರಾಹಕರ ರಿಟೆಂಷನ್ ಅನ್ನು ಹೇಗೆ ಹೆಚ್ಚಿಸುವುದು ಮತ್ತು ನಿಮ್ಮ ಸೂಪರ್ ಮಾರ್ಕೆಟ್ ಬಿಸಿನೆಸ್ ನ ಖ್ಯಾತಿಯನ್ನು ಧನಾತ್ಮಕವಾಗಿ ಹೇಗೆ ನಿರ್ಮಿಸುವುದು ಎಂಬುದನ್ನು ನೀವು ಕಲಿಯುವಿರಿ.
ಯಶಸ್ವಿ ಸೂಪರ್ ಮಾರ್ಕೆಟ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ಮುನ್ನಡೆಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ನೀಡುತ್ತದೆ. ತಮ್ಮ ಸೂಪರ್ ಮಾರ್ಕೆಟ್ ಬಿಸಿನೆಸ್ ಅನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಬಯಸುವ ಬಿಸಿನೆಸ್ ಮಾಲೀಕರಿಗೆ ಕೂಡ ಇದು ಹೆಚ್ಚು ಸೂಕ್ತವಾಗಿದೆ.
ಸೂಪರ್ ಮಾರ್ಕೆಟ್ ಬಿಸಿನೆಸ್ ಎಂದರೇನು?ಈ ಕೋರ್ಸ್‌ನಲ್ಲಿ ಏನೇನೆಲ್ಲ ಕಲಿಬಹುದು? ಈ ಕೋರ್ಸ್ ಮಾಡಲು ಕಾರಣವೇನು? ಅನ್ನೋ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ
ಸೂಪರ್ ಮಾರ್ಕೆಟ್ ಬಿಸಿನೆಸ್ ಮಾಡಿ ಸಕ್ಸಸ್ ಆಗಿರುವ ಮಾರ್ಗದರ್ಶಕರ ಪರಿಚಯ ಮತ್ತು ಅವರ ಸಾಧನೆ ಏನು ಅನ್ನೋದನ್ನು ತಿಳಿದುಕೊಳ್ಳಿ
ಸೂಪರ್ ಮಾರ್ಕೆಟ್ ಬಿಸಿನೆಸ್ ಮಾಡಲು ಬೇಕಾಗುವ ಆರಂಭಿಕ ಮತ್ತು ನಿರಂತರ ಬಂಡವಾಳ ಎಷ್ಟು ಎಂಬುದನ್ನು ತಿಳಿಯಿರಿ
ಸೂಪರ್ ಮಾರ್ಕೆಟ್ ಬಿಸಿನೆಸ್ ಮಾಡಲು ಯಾವ ಸ್ಥಳ ಆಯ್ಕೆ ಮಾಡಬೇಕು? ಸ್ಥಳ ಆಯ್ಕೆ ಸಮಯದಲ್ಲಿ ಗಮನಿಸಬೇಕಾದ ಅಂಶಗಳೇನು ಅನ್ನೋದನ್ನು ತಿಳಿಯಿರಿ
ಸೂಪರ್ ಮಾರ್ಕೆಟ್ ಬಿಸಿನೆಸ್ ಮಾಡಲು ರಿಜಿಸ್ಟ್ರೇಷನ್ ಮಾಡಿಸೋದು ಹೇಗೆ? ಯಾವ ರೀತಿಯ ಮಾಲಿಕತ್ವ ಉತ್ತಮ ಅನ್ನೋದನ್ನು ಅರ್ಥಮಾಡಿಕೊಳ್ಳಿ
ಸೂಪರ್ ಮಾರ್ಕೆಟ್ ಬಿಸಿನೆಸ್‌ಗೆ ಸಿಬ್ಬಂದಿಗಳು ಎಷ್ಟು ಜನ ಬೇಕಾಗುತ್ತದೆ? ಸಿಬ್ಬಂದಿಗಳಿಗೆ ತರಬೇತಿ ನೀಡುವುದು ಹೇಗೆ ಎಂಬುದನ್ನು ತಿಳಿಯಿರಿ
ಸೂಪರ್ ಮಾರ್ಕೆಟ್ ಬಿಸಿನೆಸ್‌ನ ಫ್ರಾಂಚೈಸ್ ನೀಡಬಹುದಾ? ಬ್ರ್ಯಾಂಡಿಂಗ್ ಮಾಡುವುದು ಹೇಗೆ? ಮಾರ್ಕೆಟಿಂಗ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ
ಸೂಪರ್ ಮಾರ್ಕೆಟ್ ಬಿಸಿನೆಸ್‌ನಲ್ಲಿ ಇಂಟೀರಿಯರ್ ಮಹತ್ವವೇನು? ಬಿಸಿನೆಸ್ ಸ್ಟ್ರಕ್ಚರ್ ಯಾವ ರೀತಿ ಇರಬೇಕು ಅನ್ನೋದನ್ನು ತಿಳಿಯಿರಿ
ಸೂಪರ್ ಮಾರ್ಕೆಟ್ ಬಿಸಿನೆಸ್‌ನಲ್ಲಿ ಯಾವೆಲ್ಲ ಪ್ರಾಡಕ್ಟ್‌ಗಳಿರಬೇಕು? ಪ್ರಾಡಕ್ಟ್‌ಗಳ ಪ್ಲೇಸ್‌ಮೆಂಟ್ ಮಾಡುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಿ
ಈ ಮಾಡ್ಯೂಲ್‌ನಲ್ಲಿ ಪ್ರೊಕ್ಯೂರ್‌ಮೆಂಟ್ ಮತ್ತು ಸಪ್ಲೈಯರ್ ರಿಲೇಷನ್‌ಶಿಪ್ ಬಗ್ಗೆ ಕಂಪ್ಲೀಟ್ ಆಗಿ ಕಲಿತುಕೊಳ್ಳಿ
ಸೂಪರ್ ಮಾರ್ಕೆಟ್ ಬಿಸಿನೆಸ್‌ನಲ್ಲಿ ಪ್ರೈಸಿಂಗ್ ಮಾಡುವುದು ಹೇಗೆ? ಆಫರ್ ನೀಡಬೇಕಾ? ರಿಯಾಯಿತಿ ಕೊಡಬೇಕಾ? ಹಾಗೆನೆ ಕ್ರೆಡಿಟ್ ನಿರ್ವಹಣೆ ಮಾಡುವುದು ಹೇಗೆ ಎಂದು ತಿಳಿಯಿರಿ
ಸೂಪರ್ ಮಾರ್ಕೆಟ್ ಬಿಸಿನೆಸ್‌ನಲ್ಲಿ ಇನ್ವೆಂಟರಿ ಮ್ಯಾನೇಜ್ಮೆಂಟ್ ಮಾಡುವುದು ಹೇಗೆ? ಆಡಿಟ್ ಮಾಡಿಸಬೇಕಾ? ಹೇಗೆ ಎಂಬುದನ್ನು ತಿಳಿದುಕೊಳ್ಳಿ
ಸೂಪರ್ ಮಾರ್ಕೆಟ್ ಬಿಸಿನೆಸ್‌ನಲ್ಲಿ ಹೋಮ್ ಡೆಲಿವರಿ ಪಾತ್ರವೇನು? ಅದರಿಂದ ಯಾವೆಲ್ಲ ಉಪಯೋಗಗಳಾಗುತ್ತದೆ ಅನ್ನೋದನ್ನು ತಿಳಿಯಿರಿ
ಸೂಪರ್ ಮಾರ್ಕೆಟ್ ಬಿಸಿನೆಸ್‌ನಲ್ಲಿ ಪ್ರಾಫಿಟ್ ಯಾವ ರೀತಿ ಇರುತ್ತದೆ ಮತ್ತು ಹಣಕಾಸಿನ ನಿರ್ವಹಣೆ ಮಾಡುವುದು ಹೇಗೆ ಎಂದು ಕಂಪ್ಲೀಟ್ ಆಗಿ ಕಲಿಯಿರಿ
ಸೂಪರ್ ಮಾರ್ಕೆಟ್ ಬಿಸಿನೆಸ್‌ನಲ್ಲಿ ಕಸ್ಟಮರ್ ರಿಲೇಷನ್‌ಶಿಪ್ ಎಷ್ಟು ಮುಖ್ಯ? ಮಾಲೀಕರಿಂದ ಹಿಡಿದು ಸಿಬ್ಬಂದಿವರೆಗೆ ಗ್ರಾಹಕರ ಜೊತೆ ಹೇಗೆ ವರ್ತಿಸಬೇಕು ಅನ್ನೋದನ್ನು ತಿಳಿಯಿರಿ
ನಿಮ್ಮ ಸೂಪರ್ ಮಾರ್ಕೆಟ್ ಬಿಸಿನೆಸ್‌ನ ವಿಸ್ತರಿಸುವುದು ಹೇಗೆ? ಬೇರೆ ಬೇರೆ ಬ್ರ್ಯಾಂಚ್‌ಗಳನ್ನು ತೆರೆಯೋದು ಹೇಗೆ ಎಂಬುದನ್ನು ತಿಳಿಯಿರಿ
ಸೂಪರ್ ಮಾರ್ಕೆಟ್ ಬಿಸಿನೆಸ್‌ನಲ್ಲಿ ಯಾವೆಲ್ಲ ರಿಸ್ಕ್‌ಗಳು ಎದುರಾಗುತ್ತವೆ? ಅವುಗಳನ್ನ ಸಮರ್ಥವಾಗಿ ಎದುರಿಸೋದು ಹೇಗೆ ಎಂಬುದನ್ನು ತಿಳಿಯಿರಿ
ಸೂಪರ್ ಮಾರ್ಕೆಟ್ ಬಿಸಿನೆಸ್‌ನಲ್ಲಿ ಸಿಬ್ಬಂದಿಗಳ ದಿನಚರಿ ಹೇಗಿರುತ್ತದೆ? ಯಾವೆಲ್ಲ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಅನ್ನೋದನ್ನು ತಿಳಿಯಿರಿ
ಸೂಪರ್ ಮಾರ್ಕೆಟ್ ಬಿಸಿನೆಸ್‌ನಲ್ಲಿ ಸಕ್ಸಸ್ ಆಗಲು ಸೀಕ್ರೆಟ್ ಏನು ಮತ್ತು ಮಾರ್ಗದರ್ಶಕರು ನೀಡುವ ಅಮೂಲ್ಯ ಸಲಹೆಗಳೇನು ಅನ್ನೊದನ್ನು ತಿಳಿಯಿರಿ
- ತಮ್ಮ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಸೂಪರ್ ಮಾರ್ಕೆಟ್ ಮಾಲೀಕರು
- ತಮ್ಮ ಕಾರ್ಯಾಚರಣೆಗಳನ್ನು ಸುಧಾರಿಸಲು ಮತ್ತು ತಮ್ಮ ಆದಾಯವನ್ನು ಹೆಚ್ಚಿಸಲು ಬಯಸುವ ಸೂಪರ್ ಮಾರ್ಕೆಟ್ ಬಿಸಿನೆಸ್ ಮಾಲೀಕರು
- ಸೂಪರ್ ಮಾರ್ಕೆಟ್ ಬಿಸಿನೆಸ್ ನಲ್ಲಿ ಆಸಕ್ತಿ ಹೊಂದಿರುವ ಉದ್ಯಮಿಗಳು
- ಹೊಸ ಕೌಶಲ್ಯ ಮತ್ತು ಜ್ಞಾನವನ್ನು ಪಡೆಯಲು ಬಯಸುವ ಸೂಪರ್ ಮಾರ್ಕೆಟ್ ಉದ್ಯಮದ ಮ್ಯಾನೇಜರ್ ಗಳು ಮತ್ತು ಸೂಪರ್ವೈಸರ್ಗಳು
- ಸೂಪರ್ ಮಾರ್ಕೆಟ್ ಮ್ಯಾನೇಜ್ಮೆಂಟ್ ಅಥವಾ ಆಪರೇಷನ್ಸ್ ನಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ವ್ಯಕ್ತಿಗಳು
- ಯಶಸ್ವಿ ಸೂಪರ್ ಮಾರ್ಕೆಟ್ ಬಿಸಿನೆಸ್ ನಿರ್ಮಿಸುವ ಮತ್ತು ನಿರ್ವಹಿಸುವ ಬಗೆಗಿನ ಮೂಲಭೂತ ಅಂಶಗಳು
- ಸ್ಟೋರ್ ಒಳಾಂಗಣ ವಿನ್ಯಾಸ, ಉತ್ಪನ್ನ ವರ್ಗೀಕರಣ, ಪೂರೈಕೆದಾರರ ಸಂಬಂಧ ಮತ್ತು ಸಾಲ ನಿರ್ವಹಣೆ ಮುಂತಾದ ತಂತ್ರಗಳ ಬಗ್ಗೆ ತಿಳಿಯಿರಿ
- ಸೂಪರ್ ಮಾರ್ಕೆಟ್ ಬಿಸಿನೆಸ್ ಗಾಗಿ ಬಿಸಿನೆಸ್ ಪ್ಲಾನ್ ಮತ್ತು ಹಣಕಾಸು ನಿರ್ವಹಣೆಯ ನಿರ್ಣಾಯಕ ಅಂಶಗಳ ಬಗ್ಗೆ ತಿಳಿಯಿರಿ
- ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ನ ಪ್ರಾಮುಖ್ಯತೆ ಬಗ್ಗೆ ಮತ್ತು ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ತಿಳಿಯಿರಿ
- ದಾಸ್ತಾನು ನಿರ್ವಹಣೆ, ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಮುಂತಾದ ನಿರ್ಣಾಯಕ ಅಂಶಗಳ ಬಗ್ಗೆ ತಿಳಿಯುತ್ತೀರಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...