ffreedom app ನ "ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್ ಬಿಸಿನೆಸ್: 30% ವರೆಗೆ ಲಾಭ ಗಳಿಸಿ" ಕೋರ್ಸ್ ಗೆ ಸುಸ್ವಾಗತ. ಈ ಕೋರ್ಸ್, ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಸಮಗ್ರ ಮಾರ್ಗದರ್ಶನ ನೀಡುತ್ತದೆ. ಅನುಭವಿ ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ಡೆವಲಪರ್ ಟಿ. ಜಿ ನರಸಿಂಹ ಮೂರ್ತಿ ಮತ್ತು ಆನಂದ್ ನೇತೃತ್ವದ ಈ ಕೋರ್ಸ್ ಈ ಉದ್ಯಮದ ಬಗ್ಗೆ ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸುತ್ತದೆ.
ಭಾರತದಲ್ಲಿ ರೆಸಿಡೆನ್ಶಿಯಲ್ ಡೆವೆಲಪ್‌ಮೆಂಟ್ ಕಳೆದ ಕೆಲವು ವರ್ಷಗಳಲ್ಲಿ ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ. ಪ್ರಸ್ತುತ ಮತ್ತು ಭವಿಷ್ಯವಿದಲ್ಲೂ ಈ ವ್ಯವಹಾರದಲ್ಲಿ ಲಾಭ ಗಳಿಸುವುದಕ್ಕೆ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಈ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಈ ಉದ್ಯಮದ ಸಂಪೂರ್ಣ ಟೆಕ್ನಿಕ್‌ಗಳನ್ನು ಕಲಿಸಿಕೊಡುವ ಉದ್ದೇಶದಿಂದ ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ.
ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್ ಉದ್ಯಮದಲ್ಲಿನ ಅವಕಾಶಗಳು ಮತ್ತು ಸವಾಲುಗಳನ್ನು ಈ ಕೋರ್ಸ್‌ನಲ್ಲಿ ಅರ್ಥ ಮಾಡಿಸಲಾಗುತ್ತದೆ. ಈ ಬಿಸಿನೆಸ್ ಹೇಗೆ ಪ್ರಾರಂಭಿಸಬೇಕು ಎಂಬ ಮೂಲಭೂತ ಅಂಶಗಳನ್ನು ನೀವು ಇಲ್ಲಿ ಕಲಿಯುವಿರಿ. ರಿಯಲ್ ಎಸ್ಟೇಟ್‌ನಲ್ಲಿನ ಯಶಸ್ಸಿಗೆ ಮಾರ್ಕೆಟ್ ರಿಸರ್ಚ್ ಮತ್ತು ವಿಶ್ಲೇಷಣೆ ನಿರ್ಣಾಯಕ ಅಂಶ. ಇದಕ್ಕಾಗಿ ನಿಖರ ಡೇಟಾ ಸಂಗ್ರಹಿಸುವ ವಿಧಾನಗಳು ಇಲ್ಲಿ ಗೊತ್ತಾಗುತ್ತದೆ. ಅಲ್ಲದೆ ಅಗತ್ಯ ಕಾನೂನು ಮತ್ತು ನಿಯಮಗಳು, ಪರಿಣಾಮಕಾರಿ ಹಣಕಾಸು ಯೋಜನೆ ಮತ್ತು ಬಜೆಟ್ ತಂತ್ರಗಳುನ್ನು ನೀವು ಇಲ್ಲಿ ಕಲಿಯುತ್ತೀರಿ.
ಅಷ್ಟೇ ಅಲ್ಲದೆ ಲೇಔಟ್ ಅಥವಾ ಸೈಟ್ ಮಾಡುವುದಕ್ಕೆ ಆಯಕಟ್ಟಿನ ಭೂಮಿಯ ಆಯ್ಕೆ ಮತ್ತು ಸ್ವಾಧೀನ ಪ್ರಕ್ರೀಯೆ, ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳು, ಅಪಾಯ ನಿರ್ವಹಣೆ ತಂತ್ರಗಳು ಸೇರಿದಂತೆ ಗ್ರಾಹಕರಿಗೆ ಸೈಟ್ ಹಸ್ತಾಂತರ ಮಾಡುವವರೆಗಿನ ಎಲ್ಲಾ ಪ್ರಕ್ರಿಯೆಗಳನ್ನೂ ಕಲಿಸಲಾಗುತ್ತದೆ. ಆಸ್ತಿ ಮೌಲ್ಯಮಾಪನ ಮತ್ತು ಬೆಲೆ ನಿಗದಿ ತಂತ್ರ ಲಾಭ ಗಳಿಸುವುದಕ್ಕೆ ಅಗತ್ಯ. ಈ ಕೋರ್ಸ್ ಈ ವಿಷಯಗಳ ಬಗ್ಗೆ ಆಳವಾದ ಜ್ಞಾನವನ್ನು ಒದಗಿಸುತ್ತದೆ. ಅಂತಿಮವಾಗಿ ಯುನಿಟ್ ಎಕನಾಮಿಕ್ಸ್ ಮೂಲಕ ಈ ವ್ಯವಹಾರದಲ್ಲಿರುವ ಆದಾಯ ಮತ್ತು ಲಾಭದ ಬಗ್ಗೆಯೂ ಸ್ಪಷ್ಟ ಚಿತ್ರಣ ಸಿಗುತ್ತದೆ.
ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ಡೆವಲಪರ್ ಟಿ. ಜಿ ನರಸಿಂಹಮೂರ್ತಿ ಮತ್ತು ಆನಂದ್ ಅವರ ಅಪಾರ ಅನುಭವದ ಪ್ರಯೋಜನ ಪಡೆದು ಯಶಸ್ವಿ ರಿಯಲ್ ಎಸ್ಟೇಟ್ ಡೆವಲಪರ್ ವೃತ್ತಿಬದುಕು ಕಟ್ಟಿಕೊಳ್ಳಲು ಈ ಕೋರ್ಸ್ ಅತ್ಯುತ್ತಮ ಆಯ್ಕೆ. ಹಾಗಾಗಿ ಈಗಲೇ ಸಂಪೂರ್ಣ ಕೋರ್ಸ್ ವೀಕ್ಷಿಸಿ ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್ ಕ್ಷೇತ್ರದಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಈ ಮಾಡ್ಯೂಲ್ ನಲ್ಲಿ ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್ ನ ಮೂಲಭೂತ ಅಂಶಗಳು ಮತ್ತು ಈ ಉದ್ಯಮಕ್ಕಿರುವ ಭವಿಷ್ಯದ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್‌ನಲ್ಲಿ ಈ ಕೋರ್ಸ್ ಮೂಲಕ ನಿಮಗೆ ಮಾರ್ಗದರ್ಶನ ಮಾಡಲಿರುವ ಇಬ್ಬರು ಅನುಭವಿ ಮಾರ್ಗದರ್ಶಕರ ಬಗ್ಗೆ ತಿಳಿದುಕೊಳ್ಳುತ್ತೀರಿ
ಈ ಮಾಡ್ಯೂಲ್ ನಲ್ಲಿ ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್ ಗೆ ಮಾರುಕಟ್ಟೆ ಸಂಶೋಧನೆ ಮತ್ತು ವಿಶ್ಲೇಷನೆ ಮಾಡುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್ ವೇಳೆ ಪಾಳಿಸಬೇಕಾದ ಕಾನೂನು ಮತ್ತು ನಿಯಮಗಳ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಒಂದು ಡೆವಲಪ್‌ಮೆಂಟ್ ಪ್ರಾಜೆಕ್ಟ್‌ಗೆ ಏನೇನು ಖರ್ಚುಗಳು ಬರುತ್ತೆ? ಬಂಡವಾಳ ಹೊಂದಿಸುವುದು ಹೇಗೆ? ಅನ್ನುವ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಲೇಔಟ್ ಅಥವಾ ಸೈಟ್ ಮಾಡುವುದಕ್ಕೆ ಜಮೀನು ಆಯ್ಕೆ ಮಾಡುವುದು ಮತ್ತು ಅದನ್ನು ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್‌ನಲ್ಲಿ ಡೆವಲಪ್ ಮಾಡಿದ ಸೈಟ್ ಅಥವಾ ಲೇಔಟ್ ಗಳನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವ ತಂತ್ರಗಳ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್‌ನಲ್ಲಿ ಜಮೀನು ಆಯ್ಕೆ, ದಾಖಲೆ ಪರಿಶೀಲನೆ ಮತ್ತು ಡೆವಲಪ್ ಮೆಂಟ್ ವೇಳೆ ಎದುರಾಗುವ ಅಪಾಯಗಳು ಯಾವುವು ಮತ್ತು ಅದನ್ನು ಎದುರಿಸುವ ತಂತ್ರಗಳನ್ನು ಕಲಿಯುತ್ತೀರಿ
ಈ ಮಾಡ್ಯೂಲ್‌ನಲ್ಲಿ ಡೆವಲಪ್ ಮಾಡಿದ ಸೈಟ್ ಗಳನ್ನು ಹಸ್ತಾಂತರ ಮಾಡುವಾಗಿರುವ ಪ್ರಕ್ರಿಯೆಗಳು ಮತ್ತು ಆ ಸೈಟ್‌ಗೆ ಬೆಲೆ ನಿರ್ಧರಿಸುವ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್‌ನಲ್ಲಿ ನಮ್ಮ ಮಾರ್ಗದರ್ಶಕರು ಡೆವಲಪ್ ಮಾಡಿರುವ ಲೇಔಟ್ ಒಂದನ್ನು ತೋರಿಸಿ ಸಂಪೂರ್ಣ ವಿವರಿಸಲಾಗುತ್ತದೆ
ಈ ಮಾಡ್ಯೂಲ್‌ನಲ್ಲಿ ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್ ವ್ಯವಹಾರದಲ್ಲಿ ಯಶಸ್ಸು ಪಡೆಯುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ.
ಈ ಮಾಡ್ಯೂಲ್‌ನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನೆಟ್ ವರ್ಕ್ ಪ್ರಾಮುಖ್ಯತೆ ಮತ್ತು ಈ ಬಿಸಿನೆಸ್‌ನಲ್ಲಿರುವ ಆದಾಯ - ಲಾಭದ ಬಗ್ಗೆ ತಿಳಿದುಕೊಳ್ಳುತ್ತೀರಿ
ಈ ಮಾಡ್ಯೂಲ್ ನಲ್ಲಿ ತುಂಬಾ ಮುಖ್ಯವಾದ ಸಲಹೆ ಮತ್ತು ಕಿವಿ ಮಾತುಗಳನ್ನು ಪಡೆದುಕೊಳ್ಳುತ್ತೀರಿ
- ರಿಯಲ್ ಎಸ್ಟೇಟ್ ಡೆವಲಪ್ ಮೆಂಟ್ ಉದ್ಯಮ ಪ್ರವೇಶಿಸುವ ಉದ್ಯಮಿಗಳು
- ಮಹತ್ವಾಕಾಂಕ್ಷಿ ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ಡೆವಲಪರ್‌ಗಳು
- ಅಸ್ತಿತ್ವದಲ್ಲಿರುವ ರಿಯಲ್ ಎಸ್ಟೇಟ್ ವೃತ್ತಿಪರರು
- ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಹೂಡಿಕೆ ಮಾಡುವವರು
- ರಿಯಲ್ ಎಸ್ಟೇಟ್ ಸಲಹೆಗಾರರು
- ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್ ಉದ್ಯಮದ ಆಳ - ವಿಸ್ತಾರ
- ಸಮಗ್ರ ಮಾರುಕಟ್ಟೆ ಸಂಶೋಧನೆ ಮತ್ತು ವಿಶ್ಲೇಷಣೆ ನಡೆಸುವುದು
- ಸಂಬಂಧಿತ ಕಾನೂನುಗಳು ಮತ್ತು ನಿಬಂಧನೆಗಳು
- ಆಯಕಟ್ಟಿನ ಭೂಮಿಯ ಆಯ್ಕೆ ಮತ್ತು ಸ್ವಾಧೀನ
- ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳು
- ಡೆವಲಪ್ ಮಾಡಿದ ಆಸ್ತಿಗಳ ಬೆಲೆ ನಿರ್ಧರಿಸುವುದು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...