ffreedom app - Fish Summit Workshop - Kannada

ಕಾರ್ಯಾಗಾರಗಳ ಬಗ್ಗೆ

ನಿಮ್ಮ ವ್ಯಾಪಾರವನ್ನು ಮತ್ತು ನಿಮ್ಮ ಸಮಯವನ್ನು ಮೌಲ್ಯೀಕರಿಸಲು ಒಳನಾಡು ಮೀನು ಉತ್ಪಾದಕರ ಸಮಾವೇಶದ ಕಾರ್ಯಾಗಾರಕ್ಕೆ ಹಾಜರಾಗಿ.

ಒಳನಾಡು ಮೀನು ಉತ್ಪಾದಕರ ಸಮಾವೇಶವು, ರಫ್ತು ಅವಕಾಶಗಳು ಮತ್ತು ಅದರ ನಿಯಮಗಳು ಸೇರಿದಂತೆ ಜಾಗತಿಕ ಮೀನು ಮಾರುಕಟ್ಟೆಯಲ್ಲಿನ ಇತ್ತೀಚಿನ ಪ್ರವೃತ್ತಿಗಳ ಬಗ್ಗೆ ತಿಳಿದುಕೊಳ್ಳಲು ವಿನ್ಯಾಸಗೊಳಿಸಲಾದ ಒಂದು ವಿಭಿನ್ನವಾದ ಕಾರ್ಯಕ್ರಮವಾಗಿದೆ. ಇದರ ಜೊತೆಗೆ ನಿಮ್ಮ ಮೀನು ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳನ್ನು ಹೇಗೆ ರಚಿಸುವುದು ಮತ್ತು ಅವುಗಳನ್ನು ಹೊಸ ಮಾರುಕಟ್ಟೆಗಳಿಗೆ ಮಾರಾಟ ಮಾಡುವುದು ಹೇಗೆ ಎಂಬುದರ ಕುರಿತ ಅವಲೋಕನವನ್ನು ಸಹ ನೀವು ಪಡೆಯುತ್ತೀರಿ.

 

ಮೀನು ತಳಿಗಳ ಕಾರ್ಯಾಗಾರ

  • ವಾಣಿಜ್ಯ ಉತ್ಪಾದನೆಗೆ ಉತ್ತಮವಾದ ಮೀನು ತಳಿಗಳು ಯಾವುವು?
  • ಪ್ರೋಟೀನ್‌ನ ಅತ್ಯಂತ ಸುಸ್ಥಿರ, ಸಾವಯವ ಮೂಲಗಳು ಯಾವುವು?
  • ಯಾವುದೇ ಜಾತಿಯ ಮೀನು ಅಪಾಯದಲ್ಲಿದೆ ಅಥವಾ ಅಳಿವಿನಂಚಿನಲ್ಲಿದೆ ಎಂದು ನಿಮಗೆ ಹೇಗೆ ತಿಳಿಯುತ್ತದೆ?
  • ರುಚಿ, ವಿನ್ಯಾಸ ಮತ್ತು ಪೌಷ್ಟಿಕಾಂಶದ ವಿಷಯದಲ್ಲಿ ನೀವು ಏನನ್ನು ನೋಡಬೇಕು?
  • ಈ ಕಾರ್ಯಾಗಾರದಲ್ಲಿ ನೀವು ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುತ್ತೀರಿ.

ಮೀನು ಆಹಾರ ಕಾರ್ಯಾಗಾರ

    ನಿಮ್ಮ ಮೀನು ಎಲ್ಲಿಂದ ಬಂದಿದೆ ಮತ್ತು ಅವುಗಳು ಅಭಿವೃದ್ಧಿ ಹೊಂದಲು ಏನು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಕಾರ್ಯಾಗಾರವು ನಿಮಗೆ ಸಹಾಯ ಮಾಡುತ್ತದೆ. ಹೊಸ ಆಹಾರಕ್ರಮವನ್ನು ಹೇಗೆ ಪ್ರಾರಂಭಿಸುವುದು ಎಂಬುದರ ಕುರಿತು ಸಹ ಕೆಲವು ವಿಚಾರಗಳನ್ನು ಈ ಕಾರ್ಯಾಗಾರ ನಿಮಗೆ ನೀಡುತ್ತದೆ.

     
  • ನಿಮ್ಮ ಮೀನುಗಳಿಗೆ ನೀವು ಸರಿಯಾದ ರೀತಿಯ ಆಹಾರವನ್ನು ನೀಡುತ್ತೀರಾ?
  • ಇಲ್ಲದಿದ್ದರೆ, ನೀವು ಅವುಗಳಿಗೆ ಯಾವ ರೀತಿಯ ಆಹಾರವನ್ನು ನೀಡಬೇಕು?
  • ಅವುಗಳ ಆಹಾರದಲ್ಲಿ ಏನಿರಬೇಕು?

ಮೀನು ಕೃಷಿ ತಂತ್ರಜ್ಞಾನಗಳ ಕಾರ್ಯಾಗಾರ

    ಮೀನುಗಳನ್ನು ಸಾಕಲು ಹಲವು ಮಾರ್ಗಗಳಿವೆ.ಕೆಲವು ವಿಧಾನಗಳು ಶತಮಾನಗಳಿಂದಲೂ ಚಾಲ್ತಿಯಲ್ಲಿವೆ ಮತ್ತು ಇನ್ನಿತರೆ ಕೆಲವು ತುಲನಾತ್ಮಕವಾಗಿ ಹೊಸ ತಂತ್ರಜ್ಞಾನಗಳಾಗಿವೆ, ಅದು ಇತ್ತೀಚೆಗೆ ಲಭ್ಯವಾಗಿದೆ. ಈ ಕಾರ್ಯಾಗಾರದಲ್ಲಿ, ಅಕ್ವಾಕಲ್ಚರ್ (ಟ್ಯಾಂಕ್‌ಗಳಲ್ಲಿ ಮೀನುಗಳನ್ನು ಸಾಕುವುದು), ಕೊಳದ ಕೃಷಿ (ಟ್ಯಾಂಕ್‌ಗಳ ಬದಲಿಗೆ ಕೊಳಗಳನ್ನು ಬಳಸುವುದು) ಸೇರಿದಂತೆ ಹಲವಾರು ವಿಭಿನ್ನ ವಿಧಾನಗಳನ್ನು ನಾವು ನೋಡುತ್ತೇವೆ.

ಮಾರುಕಟ್ಟೆ ಸಂಪರ್ಕದ ಕಾರ್ಯಾಗಾರ

    ಮೀನು ಉತ್ಪಾದಕರು ತಮ್ಮ ಉತ್ಪನ್ನಗಳ ಪರಿಮಾಣ ಮತ್ತು ಮೌಲ್ಯವನ್ನು ಹೆಚ್ಚಿಸುವ ಮೂಲಕ ತಮ್ಮ ವ್ಯಾಪಾರಕ್ಕೆ ಲಾಭವಾಗುವಂತೆ ಮಾರುಕಟ್ಟೆ ಸಂಪರ್ಕವನ್ನು ಹೇಗೆ ಬಳಸಬೇಕೆಂದು ಅರ್ಥಮಾಡಿಕೊಳ್ಳಲು ಈ ಕಾರ್ಯಾಗಾರವು ಸಹಾಯ ಮಾಡಲಿದೆ.

     
  • ಮಾರುಕಟ್ಟೆ ಸಂಪರ್ಕ ಎಂದರೇನು?
  • ನೀವು ಅದನ್ನು ಹೇಗೆ ಅಳೆಯಬಹುದು? (ಡೈನಾಮಿಕ್ ವರ್ಸಸ್ ಸ್ಟ್ಯಾಟಿಕ್)
  • ಮೀನು ಸಾಕಾಣಿಕೆ ವ್ಯವಹಾರಕ್ಕಾಗಿ ನೀವು ಗುರಿಗಳನ್ನು ಹೇಗೆ ಸಿದ್ಧಪಡಿಸುತ್ತೀರಿ?
  • ಮೀನು ಉತ್ಪಾದಕರಾಗಿ ನಿಮ್ಮ ಗುರಿಗಳೇನು?
  • ನಿಮ್ಮ ಪ್ರತಿಸ್ಪರ್ಧಿಗಳು ಏನು ಮಾಡುತ್ತಿದ್ದಾರೆ?
Ffreedom App

ನೋಂದಣಿಗಾಗಿ
ದಯವಿಟ್ಟುffreedom ಅಪ್ಲಿಕೇಶನ್
ಅನ್ನು ಡೌನ್‌ಲೋಡ್ ಮಾಡಿ!