ಕೃಷಿ ಉದ್ಯಮದ ಬಗ್ಗೆ ಗ್ರಾಸ್‌ರೂಟ್ಸ್ ಆರ್ಗಾನಿಕ್ ಫಾರ್ಮ್ ನ ಯಶಸ್ಸಿನ ಕಥೆಯಿಂದ ಕಲಿಯಲು ನಿಮಗೆ ಇದು ಉತ್ತಮ ಅವಕಾಶವಾಗಿದೆ. ಈ ಕೋರ್ಸ್ ನ ಮೂಲಕ ನೀವು ಉತ್ತಮ ಗುಣಮಟ್ಟದ ಆರ್ಗಾನಿಕ್ ಉತ್ಪನ್ನಗಳನ್ನು ಬೆಳೆಸುವುದರಿಂದ ಹಿಡಿದು ಪರಿಣಾಮಕಾರಿ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಸ್ಟ್ರಾಟೆಜಿಯನ್ನು ಅಭಿವೃದ್ಧಿಪಡಿಸುವವರೆಗೆ ಎಲ್ಲ ಅಗತ್ಯ ಜ್ಞಾನವನ್ನು ವಿವರವಾಗಿ ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ಬಿಸಿನೆಸ್ ಅನ್ನು ಬೆಳೆಸಲು ಮತ್ತು ಅದರ ಬೆಳವಣಿಗೆಯನ್ನು ಮಾಪನ ಮಾಡಲು ಅಗತ್ಯವಿರುವ ಎಲ್ಲಾ ಸ್ಟ್ರಾಟೆಜಿಗಳು ಮತ್ತು ಟೆಕ್ನಿಕ್ ಗಳನ್ನು ನೀವು ಕಲಿಯುತ್ತೀರಿ.
ಮಂಡ್ಯದ ನೆಲಮನೆಯಲ್ಲಿರುವ ಗ್ರಾಸ್‌ರೂಟ್ ಆರ್ಗಾನಿಕ್ ಫಾರ್ಮ್, ಸುಸ್ಥಿರ ಅಭ್ಯಾಸಗಳಿಗೆ ಆದ್ಯತೆ ನೀಡುವ ಮತ್ತು ಆರೋಗ್ಯಕರ, ತಾಜಾ ಆಹಾರವನ್ನು ಬೆಳೆಸುವ ಸಮಗ್ರ ಆರ್ಗಾನಿಕ್ ಕೃಷಿ ವ್ಯವಸ್ಥೆಯ ಉಜ್ವಲ ಉದಾಹರಣೆಯಾಗಿದೆ. ಫಾರ್ಮ್ ಬಗ್ಗೆ ಹೆಚ್ಚಿನ ಪ್ಯಾಷನ್ ಹೊಂದಿರುವ ಮತ್ತು ಸಾಂಪ್ರದಾಯಿಕ ಆಹಾರ ಉತ್ಪಾದನಾ ವಿಧಾನಗಳನ್ನು ಸಂರಕ್ಷಿಸುವ ಬದ್ಧತೆಯನ್ನು ಹೊಂದಿರುವ ಗ್ರಾಮೀಣ ಮಹಿಳೆಯರು ಈ ಫಾರ್ಮ್ ಅನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಗ್ರಾಸ್‌ರೂಟ್ ಆರ್ಗ್ಯಾನಿಕ್ ಫಾರ್ಮ್‌ನ ವಿಶೇಷತೆ ಎಂದರೆ ಅದು ಬುಲ್-ಚಾಲಿತ ಗಾಣದ ಮೂಲಕ ಎಣ್ಣೆಯನ್ನು ಉತ್ಪಾದನೆ ಮಾಡುತ್ತದೆ. ಈ ರೀತಿಯ ಗಾಣದ ಮೂಲಕ ಎಣ್ಣೆಯನ್ನು ತೆಗೆಯುವುದು ಶತಮಾನಗಳಿಂದ ಚಾಲ್ತಿಯಲ್ಲಿರುವ ಒಂದು ಸಾಂಪ್ರದಾಯಿಕ ವಿಧಾನವಾಗಿದೆ. ಈ ಎಣ್ಣೆಗಳನ್ನು ರಾಸಾಯನಿಕಗಳು ಅಥವಾ ಕೃತಕ ಪ್ರಕ್ರಿಯೆಗಳಿಲ್ಲದೆ ಉತ್ಪಾದಿಸಲಾಗುತ್ತದೆ, ಇದು ಆರೋಗ್ಯಕರ ಮತ್ತು ರುಚಿಕರವಾಗಿದೆ ಎಂಬುದನ್ನು ಖಚಿತಪಡಿಸುತ್ತದೆ.
ಈ ಫಾರ್ಮ್ ಸಾವಯವ ಬೆಲ್ಲವನ್ನು ಸಹ ಉತ್ಪಾದಿಸುತ್ತದೆ, ಕಬ್ಬಿನ ರಸದಿಂದ ತಯಾರಿಸಿದ ಈ ಬೆಲ್ಲಗಳು ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿರುತ್ತದೆ. ಗ್ರಾಸ್‌ರೂಟ್ ಆರ್ಗಾನಿಕ್ ಫಾರ್ಮ್ ಸಮಗ್ರ ಕೃಷಿ ವ್ಯವಸ್ಥೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ಯಾಕೆಂದರೆ ಅಲ್ಲಿ ಬೆಳೆಗಳು ಮತ್ತು ಜಾನುವಾರುಗಳ ಜೊತೆಗೆ ಸುಸ್ಥಿರ ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಸಹ ನಿರ್ಮಿಸಲಾಗಿದೆ.
ನಮ್ಮ ಮಾರ್ಗದರ್ಶಕರಾಗಿರುವ ಮತ್ತು ಗ್ರಾಸ್‌ರೂಟ್ ಆರ್ಗ್ಯಾನಿಕ್ ಫಾರ್ಮ್‌ನ ಮಾಲೀಕರಾಗಿರುವ ಕಮಲೇಶ್ ಅವರು ಉತ್ತಮ ಗುಣಮಟ್ಟದ ಆರ್ಗಾನಿಕ್ ಉತ್ಪನ್ನಗಳನ್ನು ಉತ್ಪಾದಿಸಲು ಮತ್ತು ಉದ್ಯೋಗವನ್ನು ಒದಗಿಸಲು ಸುಸ್ಥಿರವಾದ ಬಿಸಿನೆಸ್ ಮಾಡೆಲ್ ಅನ್ನು ರಚಿಸಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ಡೆಡಿಕೇಶನ್ ನಿಂದಾಗಿ ಅದು ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಕೊನೆಯಲ್ಲಿ, ಗ್ರಾಸ್‌ರೂಟ್ ಆರ್ಗಾನಿಕ್ ಫಾರ್ಮ್ ಒಂದು ಸಮಗ್ರ ಸಾವಯವ ಕೃಷಿ ವ್ಯವಸ್ಥೆಯಾಗಿದೆ ಮತ್ತು ಸಾಂಪ್ರದಾಯಿಕ ಪದ್ಧತಿಗಳ ಮೂಲಕ ರುಚಿಕರವಾದ ಮತ್ತು ಆರೋಗ್ಯಕರ ಆಹಾರವನ್ನು ಉತ್ಪಾದಿಸುತ್ತಿದೆ. ಬುಲ್-ಚಾಲಿತ ತೈಲ, ಕೋಲ್ಡ್ ಪ್ರೆಸ್ಡ್ ಆಯಿಲ್ ಮತ್ತು ಸಾವಯವ ಬೆಲ್ಲದ ಉತ್ಪಾದನೆಯು ಈ ಫಾರ್ಮ್ ಸುಸ್ಥಿರ ಕೃಷಿಯಲ್ಲಿ ಹೇಗೆ ಮುನ್ನಡೆಸುತ್ತಿದೆ ಎಂಬುದಕ್ಕೆ ಕೆಲವು ಉದಾಹರಣೆಗಳಾಗಿವೆ. ಹೀಗಾಗಿ ಈ ಕೋರ್ಸ್ ಮೂಲಕ ನೀವು ಕೃಷಿ ಉದ್ಯಮದ ಬಗ್ಗೆ ಅಗತ್ಯ ಜ್ಞಾನವನ್ನು ಹೊಂದಿರುತ್ತೀರಿ ಎಂಬುದನ್ನು ಖಚಿತಪಡಿಸಿ ಕೊಳ್ಳಬಹುದಾಗಿದೆ.
ಕೃಷಿ ಉದ್ಯಮ ಕೋರ್ಸ್‌ನ ಅವಲೋಕನವನ್ನು ಪಡೆಯಿರಿ ಮತ್ತು ಸುಸ್ಥಿರ ಕೃಷಿಯಲ್ಲಿನ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ತಿಳಿದುಕೊಳ್ಳಿ.
ನಮ್ಮ ಅನುಭವಿ ಮಾರ್ಗದರ್ಶಕರ ಬಗ್ಗೆ ತಿಳಿಯಿರಿ. ಅವರು ನಿಮಗೆ ಈ ಕೋರ್ಸ್ ಮೂಲಕ ಅಗತ್ಯ ಜ್ಞಾನ ಮತ್ತು ಮಾರ್ಗದರ್ಶನವನ್ನು ಒದಗಿಸುತ್ತಾರೆ.
ಕ್ಯಾಸ್ಟರ್ ಆಯಿಲ್ ಉತ್ಪಾದನೆಯ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ತಿಳಿಯಿರಿ ಮತ್ತು ಈ ಬಿಸಿನೆಸ್ ನ ಗಳಿಕೆಯ ಸಾಮರ್ಥ್ಯವನ್ನು ಅನ್ವೇಷಿಸಿ.
ಸಾವಯವ ಬೆಲ್ಲವನ್ನು ತಯಾರಿಸುವ ಸಾಂಪ್ರದಾಯಿಕ ವಿಧಾನಗಳ ಬಗ್ಗೆ ಮತ್ತು ಅದರ ಪ್ರಯೋಜನಗಳ ಬಗ್ಗೆ ವಿವರವಾದ ತಿಳುವಳಿಕೆಯನ್ನು ಪಡೆಯಿರಿ.
ಹೈನುಗಾರಿಕೆಯಲ್ಲಿ ಆದಾಯವನ್ನು ಹೆಚ್ಚಿಸುವ ತಂತ್ರಗಳು ಮತ್ತು ಉತ್ತಮ ಅಭ್ಯಾಸಗಳನ್ನು ಅನ್ವೇಷಿಸಿ ಮತ್ತು ಅವುಗಳನ್ನು ಹೇಗೆ ಕಾರ್ಯಗತಗೊಳಿಸಬೇಕೆಂದು ತಿಳಿಯಿರಿ.
ಬೆಳೆ ನಿರ್ವಹಣೆ ಮತ್ತು ಕೊಯ್ಲು ಸೇರಿದಂತೆ ಭತ್ತದ ಕೃಷಿಯಲ್ಲಿ ಲಾಭವನ್ನು ಹೆಚ್ಚಿಸುವ ಇತ್ತೀಚಿನ ತಂತ್ರಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ತಿಳಿಯಿರಿ.
ಕೃಷಿ ಉದ್ಯಮಕ್ಕಾಗಿ ಯೂನಿಟ್ ಎಕನಾಮಿಕ್ಸ್ ನ ಬೇಸಿಕ್ ಪ್ರಿನ್ಸಿಪಲ್ ಗಳನ್ನು ಅರ್ಥಮಾಡಿಕೊಳ್ಳಿ ಮತ್ತು ವೆಚ್ಚ ನಿರ್ವಹಣೆ, ಆದಾಯದ ಸ್ಟ್ರೀಮ್‌ಗಳು ಮತ್ತು ಲಾಭದ ಮಾರ್ಜಿನ್ ಗಳ ಬಗ್ಗೆ ತಿಳಿಯಿರಿ.
ಕೃಷಿ ಉದ್ಯಮದಲ್ಲಿ ಮಾರ್ಕೆಟಿಂಗ್‌ನ ಪ್ರಾಮುಖ್ಯತೆಯನ್ನು ತಿಳಿಯಿರಿ ಮತ್ತು ಬ್ರ್ಯಾಂಡಿಂಗ್, ಕಸ್ಟಮರ್ ಎಂಗೇಜ್ಮೆಂಟ್ ಗಾಗಿ ಪರಿಣಾಮಕಾರಿ ತಂತ್ರಗಳನ್ನು ಅನ್ವೇಷಿಸಿ.
ಕೃಷಿ ಉದ್ಯಮಗಳು ಎದುರಿಸುತ್ತಿರುವ ಸಾಮಾನ್ಯ ಸವಾಲುಗಳನ್ನು ಅನ್ವೇಷಿಸಿ ಮತ್ತು ಅವುಗಳನ್ನು ಹೇಗೆ ಜಯಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಕೃಷಿ ಉದ್ಯಮ ಕೋರ್ಸ್‌ನಲ್ಲಿ ಕಲಿತ ಪ್ರಮುಖ ಕಾನ್ಸೆಪ್ಟ್ ಗಳ ಬಗ್ಗೆ ಮತ್ತು ಸ್ಟ್ರಾಟೆಜಿಗಳ ಬಗ್ಗೆ ಸಾರಾಂಶವನ್ನು ಪಡೆಯಿರಿ.
- ಸುಸ್ಥಿರ ಕೃಷಿ ಪದ್ಧತಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ರೈತರು ಮತ್ತು ಕೃಷಿ ಬಿಸಿನೆಸ್ ಮಾಲೀಕರು
- ಕೃಷಿ ವಿದ್ಯಾರ್ಥಿಗಳು ಮತ್ತು ಕೃಷಿ ಉದ್ಯಮದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಉತ್ಸಾಹಿಗಳು
- ಕೃಷಿ ಬಿಸಿನೆಸ್ ಅನ್ನು ವಿಸ್ತರಿಸಲು ಅಥವಾ ಹೊಸದಾಗಿ ಪ್ರಾರಂಭಿಸಲು ಬಯಸುತ್ತಿರುವ ಉದ್ಯಮಿಗಳು
- ಫಾರ್ಮ್-ಟು-ಟೇಬಲ್ ಚಳುವಳಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಆಹಾರ ಉತ್ಸಾಹಿಗಳು
- ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಕೃಷಿ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಯಾರಾದರೂ
- ಕೃಷಿ ಉದ್ಯಮದ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಪರಿಚಯ
- ಸುಸ್ಥಿರ ಕೃಷಿ ತಂತ್ರಗಳು ಮತ್ತು ಉತ್ತಮ ಅಭ್ಯಾಸಗಳು
- ಹೈನುಗಾರಿಕೆ, ಭತ್ತದ ಕೃಷಿ, ಕ್ಯಾಸ್ಟರ್ ಆಯಿಲ್ ಮತ್ತು ಬೆಲ್ಲ ಉತ್ಪಾದನಾ ತಂತ್ರಗಳ ಮೂಲಕ ಆದಾಯವನ್ನು ಹೆಚ್ಚಿಸುವುದು
- ಕೃಷಿ ಬಿಸಿನೆಸ್ ಗಾಗಿ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ತಂತ್ರಗಳು
- ಪರಿಣಾಮಕಾರಿ ಯೋಜನೆಯ ಮೂಲಕ ಕೃಷಿ ಉದ್ಯಮಗಳು ಎದುರಿಸುತ್ತಿರುವ ಸಾಮಾನ್ಯ ಸವಾಲುಗಳನ್ನು ನಿವಾರಿಸುವುದು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...