ನಮ್ಮ ಈ ಸಮಗ್ರ ಅಕ್ವಾಪೋನಿಕ್ಸ್ ಫಾರ್ಮಿಂಗ್ ಕೋರ್ಸ್‌ನೊಂದಿಗೆ ನೀವು ಆಕ್ವಾಪೋನಿಕ್ಸ್ ಕೃಷಿ ಬಗ್ಗೆ ಕಲಿಯಿರಿ. ಈ ಕೋರ್ಸ್ ಮೂಲಕ ಮೀನುಗಳು ಮತ್ತು ಸಸ್ಯಗಳು ಒಟ್ಟಿಗೆ ಬೆಳೆಯುವ ಸಾಮರಸ್ಯದ ಪರಿಸರ ವ್ಯವಸ್ಥೆಯನ್ನು ಹೇಗೆ ನಿರ್ಮಿಸುವುದು ಎಂಬುದನ್ನು ಕಲಿಯಿರಿ. ಈ ಕೋರ್ಸ್‌ನಲ್ಲಿ, ನೀವು ಆಕ್ವಾಪೋನಿಕ್ಸ್‌ನ ಜಟಿಲತೆಗಳನ್ನು ತಿಳಿಯುತ್ತೀರಿ, ವಿವಿಧ ರೀತಿಯ ಆಕ್ವಾಪೋನಿಕ್ ವ್ಯವಸ್ಥೆಗಳು ಮತ್ತು ಅವುಗಳ ಅಪ್ಲಿಕೇಶನ್ ಗಳ ಬಗ್ಗೆ ಸಹ ತಿಳಿಯುತ್ತೀರಿ. ಆಕ್ವಾಪೋನಿಕ್ಸ್, ಮೀನು ಮತ್ತು ಸಸ್ಯಗಳ ನಡುವಿನ ಸಹಜೀವನದ ಸಂಬಂಧವನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಸಮತೋಲಿತ ಪರಿಸರವನ್ನು ನಿರ್ವಹಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವವರೆಗೆ, ನಿಮ್ಮದೇ ಸ್ವಂತ ಅಕ್ವಾಪೋನಿಕ್ಸ್ ಫಾರ್ಮ್ ಅನ್ನು ಸ್ಥಾಪಿಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ನೀವು ಪಡೆಯುತ್ತೀರಿ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೆರುವಾಜೆ ಎಂಬ ಗ್ರಾಮದ ಮಾರ್ಗದರ್ಶಕರಾದ ಶ್ವೇತಾ ಕಣವ್ ಅವರ ನೇತೃತ್ವದಲ್ಲಿ ಈ ಕೋರ್ಸ್ ಸಿದ್ಧಗೊಂಡಿದೆ. ಅವರು ಬೆಂಗಳೂರಿನ ಹೊರವಲಯದಲ್ಲಿರುವ ಹಾರೋಹಳ್ಳಿ ಬಳಿಯ ಎಡುಮಾಡುವಿನಲ್ಲಿ ಅಕ್ವಾಪೋನಿಕ್ಸ್ ಕೃಷಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ ಮತ್ತು ಅವರ ಈ ಪಯಣ ಮಹತ್ವಾಕಾಂಕ್ಷಿ ಆಕ್ವಾಪೋನಿಕ್ಸ್ ಉತ್ಸಾಹಿಗಳಿಗೆ ಸ್ಫೂರ್ತಿಯಾಗಿದೆ.
ಕೋರ್ಸ್‌ನುದ್ದಕ್ಕೂ, ನೀವು ಅಕ್ವಾಪೋನಿಕ್ಸ್ ಸಿಸ್ಟಮ್ ವಿನ್ಯಾಸ, ನೀರಿನ ಗುಣಮಟ್ಟ ನಿರ್ವಹಣೆ, ಆಕ್ವಾಪೋನಿಕ್ ಸಸ್ಯಗಳು ಮತ್ತು ಮೀನುಗಳಿಗೆ ಸೂಕ್ತವಾದ ಪೋಷಣೆ, ಸಾಮಾನ್ಯ ಸವಾಲುಗಳನ್ನು ನಿವಾರಿಸುವುದು ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಂತಹ ಪ್ರಮುಖ ವಿಷಯಗಳನ್ನು ಪರಿಶೀಲಿಸುತ್ತೀರಿ. ಜೊತೆಗೆ ಇಂಟರ್ಆಕ್ಟಿವ್ ಪಾಠಗಳು, ಎಂಗೇಜಿಂಗ್ ವೀಡಿಯೊಗಳು ಮತ್ತು ಪ್ರಾಯೋಗಿಕ ಡೆಮಾನ್ಸ್ಟ್ರೇಷನ್ ಗಳ ಮೂಲಕ ನೀವು ಆಕ್ವಾಪೋನಿಕ್ಸ್ ಪ್ರಿನ್ಸಿಪಲ್ ಮತ್ತು ಟೆಕ್ನಿಕ್ ಗಳ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಪಡೆಯುತ್ತೀರಿ.
ನೀವು ಅನುಭವಿ ರೈತರಾಗಿರಲಿ, ತೋಟಗಾರಿಕೆ ಉತ್ಸಾಹಿಯಾಗಿರಲಿ ಅಥವಾ ಸುಸ್ಥಿರ ಕೃಷಿ ವಿಧಾನಗಳ ಬಗ್ಗೆ ಸರಳವಾಗಿ ಕುತೂಹಲ ಹೊಂದಿರುವವರಾಗಿರಲಿ, ಈ ಅಕ್ವಾಪೋನಿಕ್ಸ್ ಫಾರ್ಮಿಂಗ್ ಕೋರ್ಸ್ ಎಲ್ಲಾ ಹಂತದ ಪರಿಣತಿಯನ್ನು ನಿಮಗೆ ಒದಗಿಸುತ್ತದೆ. ಇಂದೇ ಕೋರ್ಸ್ ವೀಕ್ಷಿಸಿ ಮತ್ತು ಅಕ್ವಾಪೋನಿಕ್ಸ್ ಕೃಷಿಯಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಅಕ್ವಾಪೋನಿಕ್ಸ್: ವಿಧಗಳು ಮತ್ತು ವಿವರಣೆ
ಅಕ್ವಾಪೋನಿಕ್ಸ್ ಸೆಟ್‌ಅಪ್, ಯೋಜನೆ ಮತ್ತು ವಿನ್ಯಾಸ
ಬಂಡವಾಳ, ಅನುಮತಿ, ಪರವಾನಗಿ ಮತ್ತು ಸರ್ಕಾರಿ ಸೌಲಭ್ಯ
ಅಕ್ವಾಪೋನಿಕ್ಸ್‌ನಲ್ಲಿ ಮೀನುಗಳ ನಿರ್ವಹಣೆ
ಅಕ್ವಾಪೋನಿಕ್ಸ್‌ನಲ್ಲಿ ತರಕಾರಿಗಳ ನಿರ್ವಹಣೆ
ಅಕ್ವಾಪೋನಿಕ್ಸ್‌ನಲ್ಲಿ ನೀರು ನಿರ್ವಹಣೆ
ಅಕ್ವಾಪೋನಿಕ್ಸ್‌ನಲ್ಲಿ ಮೀನು ಮತ್ತು ತರಕಾರಿ ಕಟಾವು
ಅಕ್ವಾಪೋನಿಕ್ಸ್ ಯೂನಿಟ್ ಸೆಟ್ ಅಪ್ ಮತ್ತು ಮೀನು ಗೊಬ್ಬರ ವ್ಯಾಪಾರ
ಬೇಡಿಕೆ, ಮಾರಾಟ ಮತ್ತು ಮಾರ್ಕೆಟಿಂಗ್
ಯುನಿಟ್ ಎಕನಾಮಿಕ್ಸ್
ಸವಾಲುಗಳು ಮತ್ತು ಕಿವಿಮಾತು
- ಸುಸ್ಥಿರ ಬೇಸಾಯ ಪದ್ಧತಿ ಬಯಸುವ ರೈತರು
- ನವೀನ ಕೃಷಿ ವಿಧಾನಗಳನ್ನು ಅನ್ವೇಷಿಸಲು ಆಸಕ್ತಿ ಇರುವವರು
- ಪರಿಸರ ಸ್ನೇಹಿ ಕೃಷಿ ತಂತ್ರಗಳ ಬಗ್ಗೆ ಉತ್ಸುಕರಾಗಿರುವ ವ್ಯಕ್ತಿಗಳು
- ಅಕ್ವಾಪೋನಿಕ್ಸ್ ಫಾರ್ಮ್ ಸ್ಥಾಪಿಸಲು ಬಯಸುವವರು
- ಅಕ್ವಾಪೋನಿಕ್ಸ್ ಬಗ್ಗೆ ಕುತೂಹಲ ಹೊಂದಿರುವವರು


- ಸೆಟಪ್‌ನಿಂದ ನಿರ್ವಹಣೆಯವರೆಗೆ ಅಕ್ವಾಪೋನಿಕ್ಸ್ ಕೃಷಿಯ ಬೇಸಿಕ್ ಅಂಶಗಳು
- ಲಭ್ಯವಿರುವ ಸರ್ಕಾರಿ ಸೌಲಭ್ಯಗಳ ಮಾಹಿತಿ
- ಸಣ್ಣ ಅಕ್ವಾಪೋನಿಕ್ಸ್ ಕೃಷಿಗಾಗಿ ಬಂಡವಾಳದ ಅವಶ್ಯಕತೆಗಳು
- ಮೀನು ಮತ್ತು ತರಕಾರಿಗಳನ್ನು ಫಾರ್ಮಿಂಗ್ ಮಾಡಲು ಅಗತ್ಯ ತಂತ್ರಗಳು
- ನೀರಿನ ನಿರ್ವಹಣೆ, ಮೀನು ಆಹಾರ, ಮತ್ತು ಕಾರ್ಮಿಕ ನಿರ್ವಹಣೆ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...