ನೀವು ಇನ್ನೋವೇಟಿವ್ ಮತ್ತು ಲಾಭದಾಯಕ ಕೃಷಿ ಬಿಸಿನೆಸ್ ಆರಂಭಿಸಲು ಬಯಸುತ್ತಿದ್ದರೆ, ನಮ್ಮ ಈ ಬಿದಿರಿನ ಕೃಷಿ ಕೋರ್ಸ್ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಈ ಕೋರ್ಸ್ ಮೂಲಕ ನೀವು ಬಿದಿರಿನ ಕೃಷಿಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳುತ್ತೀರಿ.
ಬಿದಿರು ಕೃಷಿಯ ಪ್ರಮುಖ ತಜ್ಞರಾದ ಡಾ. ಎಲ್ ಸಿ ಸೋನ್ಸ್ ಅವರ ನೇತೃತ್ವದಲ್ಲಿ ಸಿದ್ಧಪಡಿಸಲಾಗಿರುವ ಈ ಕೋರ್ಸ್ ನಾಟಿ ಮತ್ತು ನಿರ್ವಹಣೆಯಿಂದ ಹಿಡಿದು ಕೊಯ್ಲು ಮತ್ತು ಮಾರಾಟದವರೆಗೆ ಬಿದಿರನ್ನು ಬೆಳೆಸುವ ಬಗೆಗಿನ ಎಲ್ಲಾ ಅಗತ್ಯ ಅಂಶಗಳನ್ನು ಒಳಗೊಂಡಿದೆ. ಬಿದಿರಿನ ಸಸ್ಯಗಳ ವಿವಿಧ ಪ್ರಭೇದಗಳ ಬಗ್ಗೆ ಮತ್ತು ನಿಮ್ಮ ಪ್ರದೇಶಕ್ಕೆ ಸೂಕ್ತವಾದವುಗಳ ಬಗ್ಗೆ ನೀವು ಕಲಿಯುವಿರಿ. ಮಣ್ಣಿನ ತಯಾರಿಕೆ, ನೀರಾವರಿ ಮತ್ತು ಕೀಟ ನಿಯಂತ್ರಣ ಸೇರಿದಂತೆ ನಿಮ್ಮ ಬಿದಿರಿನ ಫಾರ್ಮ್ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ಸಹ ನೀವು ಈ ಕೋರ್ಸ್ ಮೂಲಕ ಕಲಿಯುತ್ತೀರಿ
ಬಿದಿರು ಕೃಷಿಯು ಅದರ ಲಾಭದಾಯಕತೆಗೆ ಹೆಚ್ಚು ಹೆಸರುವಾಸಿಯಾಗಿದೆ. ನಿರ್ಮಾಣ, ಪೀಠೋಪಕರಣಗಳು ಮತ್ತು ಕಾಗದ ಉತ್ಪಾದನೆ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಬಿದಿರಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಉತ್ತಮವಾಗಿ ನಿರ್ವಹಿಸಲಾದ ಬಿದಿರಿನ ಫಾರ್ಮ್ ಗಮನಾರ್ಹ ಲಾಭವನ್ನು ತಂದುಕೊಡುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಬಾನಡ್ಕ ಗ್ರಾಮದವರಾದ ಡಾ.ಎಲ್.ಸಿ.ಸೋನ್ಸ್ ಅವರು ನಿಮ್ಮದೇ ಸ್ವಂತ ಬಿದಿರು ಕೃಷಿಯನ್ನು ಆರಂಭಿಸುವ ಪ್ರಕ್ರಿಯೆಯ ಬಗ್ಗೆ ನಿಮಗೆ ಮಾರ್ಗದರ್ಶನವನ್ನು ಮಾಡಲಿದ್ದಾರೆ. ಕೋರ್ಸ್‌ನ ಅಂತ್ಯದ ವೇಳೆಗೆ, ಯಶಸ್ವಿ ಮತ್ತು ಸುಸ್ಥಿರ ಬಿದಿರು ಕೃಷಿಯನ್ನು ಮಾಡುವ ನಿಟ್ಟಿನಲ್ಲಿ ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ನೀವು ಹೊಂದಿರುತ್ತೀರಿ. ಆದ್ದರಿಂದ, ಈಗಲೇ ಈ ಕೋರ್ಸ್ ವೀಕ್ಚಿಸಿ ಮತ್ತು ಬಿದಿರಿನ ಕೃಷಿಯಲ್ಲಿ ಲಾಭದಾಯಕ ವೃತ್ತಿಜೀವನವನ್ನು ನಿರ್ಮಿಸುವತ್ತ ನಿಮ್ಮ ಮೊದಲ ಹೆಜ್ಜೆ ಇರಿಸಿ!
ಈ ಪರಿಚಯ ಮಾಡ್ಯೂಲ್‌ನೊಂದಿಗೆ ಬಿದಿರು ಕೃಷಿಯಲ್ಲಿ ಯಶಸ್ಸನ್ನು ಪಡೆಯುವತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.
ನಿಮ್ಮ ಪರಿಣಿತ ಮಾರ್ಗದರ್ಶಕರಾದ ಡಾ. ಎಲ್ ಸಿ ಸೋನ್ಸ್ ಅವರನ್ನು ಭೇಟಿ ಮಾಡಿ ಮತ್ತು ಅವರ ಬಗ್ಗೆ 2 ನಿಮಿಷಗಳಲ್ಲಿ ತಿಳಿದುಕೊಳ್ಳಿ!
ಬಿದಿರಿನ ಕೃಷಿಯ ಮೂಲಭೂತ ಅಂಶಗಳನ್ನು ತಿಳಿಯಿರಿ ಮತ್ತು ಯಶಸ್ಸಿಗೆ ಅಡಿಪಾಯವನ್ನು ಸಿದ್ದಪಡಿಸಿ.
ನಿಮ್ಮ ಬಿದಿರು ಕೃಷಿ ಬಿಸಿನೆಸ್ ಗೆ ಅಗತ್ಯವಿರುವ ಬಂಡವಾಳ ಮತ್ತು ಭೂಮಿಯ ಬಗ್ಗೆ ವಿವರವಾಗಿ ತಿಳಿಯಿರಿ.
ಈ ಕೃಷಿಗಾಗಿ ಅನುಮತಿ, ಒಪ್ಪಂದಗಳು ಮತ್ತು ಸರ್ಕಾರದ ಬೆಂಬಲವನ್ನು ಸುಲಭವಾಗಿ ನ್ಯಾವಿಗೇಟ್ ಮಾಡಲು ಕಲಿಯಿರಿ.
ನಿಮ್ಮ ಜಮೀನಿಗೆ ಸೂಕ್ತವಾದ ಬಿದಿರಿನ ವಿಧಗಳು, ಸೂಕ್ತವಾದ ಮಣ್ಣು ಮತ್ತು ಹವಾಮಾನವನ್ನು ಗುರುತಿಸುವ ಬಗ್ಗೆ ತಿಳಿಯಿರಿ.
ಈ ಕೃಷಿಯಲ್ಲಿ ಬಿದಿರನ್ನು ನೆಡುವ ಬಗ್ಗೆ ಹಂತ-ಹಂತದ ಮಾರ್ಗದರ್ಶನವನ್ನು ಪಡೆಯಿರಿ.
ಆರೋಗ್ಯಕರ ಬಿದಿರಿನ ಕೃಷಿಗಾಗಿ ನೀರು ಮತ್ತು ರಸಗೊಬ್ಬರ ನಿರ್ವಹಣೆಯ ಅಗತ್ಯತೆಗಳನ್ನು ತಿಳಿಯಿರಿ.
ನಿಮ್ಮ ಬಿದಿರಿನ ಫಾರ್ಮ್‌ಗಾಗಿ ಅಗತ್ಯ ಕಾರ್ಮಿಕರ ಬಗ್ಗೆ ಮತ್ತು ಅವರನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವ ತಂತ್ರಗಳ ಬಗ್ಗೆ ತಿಳಿಯಿರಿ.
ತಜ್ಞರ ಸಲಹೆಗಳು ಮತ್ತು ತಂತ್ರಗಳೊಂದಿಗೆ ಕೊಯ್ಲು ಮಾಡುವ ಬಗ್ಗೆ ವಿವರವಾಗಿ ತಿಳಿಯಿರಿ.
ದೀರ್ಘಾವಧಿಯ ಯಶಸ್ಸಿಗೆ ನಿಮ್ಮ ಬಿದಿರಿನ ಸುರಕ್ಷತೆ ಮತ್ತು ಸರಿಯಾದ ಸಂಗ್ರಹಣೆಯನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ತಿಳಿಯಿರಿ.
ನಿಮ್ಮ ಬಿದಿರಿನ ಉತ್ಪನ್ನಗಳನ್ನು ಮೌಲ್ಯವರ್ಧಿಸುವ ಬಗ್ಗೆ ಮತ್ತು ಬೆಲೆಯನ್ನು ನಿಗದಿಪಡಿಸುವ ಬಗ್ಗೆ ವಿವರವಾಗಿ ತಿಳಿಯಿರಿ.
ಬಿದಿರಿನ ಕೃಷಿಯನ್ನು ಬೆಂಬಲಿಸುವ ಮತ್ತು ಅದರಿಂದ ಪ್ರಯೋಜನವನ್ನು ಪಡೆಯುವ ಅವಲಂಬಿತ ಕೈಗಾರಿಕೆಗಳನ್ನು ಅನ್ವೇಷಿಸಿ.
ಜಾಗತಿಕವಾಗಿ ನಿಮ್ಮ ಬಿದಿರಿನ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದು ಮತ್ತು ರಫ್ತು ಮಾಡುವುದು ಹೇಗೆ ಎಂದು ವಿವರವಾಗಿ ತಿಳಿಯಿರಿ.
ನಿಮ್ಮ ಬಿದಿರು ಕೃಷಿ ಬಿಸಿನೆಸ್ ನ ವೆಚ್ಚಗಳ ಬಗ್ಗೆ ಮತ್ತು ಲಾಭಗಳ ಬಗ್ಗೆ ವಿವರವಾಗಿ ತಿಳಿಯಿರಿ.
ಬಿದಿರು ಕೃಷಿಯ ಕುರಿತಾಗಿ ನೀವು ವೈಯಕ್ತಿಕಗೊಳಿಸಿದ ಮಾರ್ಗದರ್ಶಕರ ಸಲಹೆಯನ್ನು ಮತ್ತು ಅಗತ್ಯ ಮಾರ್ಗದರ್ಶನವನ್ನು ಪಡೆಯಿರಿ.
- ಬಿದಿರಿನ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಯುವಕರು
- ಕೃಷಿ ವಿಜ್ಞಾನದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು
- ಪರಿಸರ ಸ್ನೇಹಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಬಯಸುವವರು
- ಗ್ರಾಮೀಣ ಅಭಿವೃದ್ಧಿ ಕಾರ್ಯಕರ್ತರು
- ಬಿದಿರು ಸಂಬಂಧಿ ಬಿಸಿನೆಸ್ ಆರಂಭಿಸಲು ಬಯಸುವವರು


- ಬಿದಿರಿನ ವಿವಿಧ ಪ್ರಭೇದಗಳು ಮತ್ತು ಅವುಗಳ ಗುಣಲಕ್ಷಣಗಳು
- ಯಾವ ಪ್ರದೇಶಕ್ಕೆ ಯಾವ ಪ್ರಭೇದ ಸೂಕ್ತ ಅನ್ನುವ ಮಾಹಿತಿ
- ಮಣ್ಣಿನ ಸಿದ್ಧತೆ ಮತ್ತು ನಾಟಿ ಮಾಡುವ ತಂತ್ರಗಳು
- ನೀರಾವರಿ ವಿಧಾನಗಳು, ಗೊಬ್ಬರ ಮತ್ತು ಪೋಷಕಾಂಶ
- ಕೀಟ ಮತ್ತು ರೋಗ ನಿಯಂತ್ರಣ
- ಮಾರ್ಕೆಟಿಂಗ್ ಮತ್ತು ಮಾರಾಟ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...