ನೀವು ಆರ್ಥಿಕ ನೆರವಿನ ಹುಡುಕಾಟದಲ್ಲಿರುವ ಮಹತ್ವಾಕಾಂಕ್ಷಿ ವಾಣಿಜ್ಯೋದ್ಯಮಿ ಅಥವಾ ಸಣ್ಣ ಬಿಸಿನೆಸ್ ಮಾಲೀಕರಾಗಿದ್ದರೆ, ಈ ಕೋರ್ಸ್ ನಿಮಗೆ ಸೂಕ್ತ ಆಯ್ಕೆಯಾಗಿದೆ! CGTMSE ಯೋಜನೆಯ ಎಲ್ಲ ಅಂಶಗಳನ್ನು ನಿಮಗೆ ವಿವರವಾಗಿ ತಿಳಿಸಲು ಈ ಸಮಗ್ರ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ನಿಮ್ಮ ಬಿಸಿನೆಸ್ ವೆಂಚರ್ ಗಳಿಗೆ ಅಡಮಾನ-ರಹಿತ ಸಾಲಗಳನ್ನು ಪಡೆಯಲು ಇದು ನಿಮಗೆ ನೆರವಾಗುತ್ತದೆ.
CGTMSE (ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ ಫಾರ್ ಮೈಕ್ರೋ ಆಂಡ್ ಸ್ಮಾಲ್ ಎಂಟರ್‌ಪ್ರೈಸಸ್) ಯೋಜನೆಯು ಭಾರತದಲ್ಲಿನ ಸಣ್ಣ ಮತ್ತು ಅತಿ ಸಣ್ಣ ಬಿಸಿನೆಸ್ ಗಳಿಗೆ ಅಡಮಾನ-ರಹಿತ ಸಾಲಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ಹಣಕಾಸು ಸಂಸ್ಥೆಗಳಿಗೆ ಕ್ರೆಡಿಟ್ ಗ್ಯಾರಂಟಿಯನ್ನು ಒದಗಿಸುತ್ತದೆ ಮತ್ತು ಈ ಮೂಲಕ ಅಡಮಾನದ ಅಗತ್ಯವಿಲ್ಲದೇ ಬಿಸಿನೆಸ್ ಗಳಿಗೆ ಸಾಲವನ್ನು ನೀಡಲು ಪ್ರೋತ್ಸಾಹಿಸುತ್ತದೆ. ಈ ಯೋಜನೆಯು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಮತ್ತು ಸಾಲಗಳನ್ನು ಪಡೆಯಲು ಸ್ವತ್ತುಗಳ ಕೊರತೆಯನ್ನು ಎದುರಿಸುತ್ತಿರುವ ಸಣ್ಣ ಬಿಸಿನೆಸ್ ಮಾಲೀಕರಿಗೆ ವರದಾನವಾಗಿದೆ.
CGTMSE ಯೊಂದಿಗೆ, ಅರ್ಹ ಬಿಸಿನೆಸ್ ಗಳು ನಿರ್ದಿಷ್ಟಪಡಿಸಿದ ಮಿತಿಯವರೆಗೆ ಸಾಲಗಳನ್ನು ಪಡೆಯಬಹುದಾಗಿದೆ ಮತ್ತು ಇದು ಸಾಮಾನ್ಯವಾಗಿ ಲಕ್ಷಗಳಿಂದ ಕೋಟಿಗಳವರೆಗೆ ಇರುತ್ತದೆ. ಈ ಯೋಜನೆಯ ಲಾಭವು ವಿವಿಧ ಕ್ಷೇತ್ರಗಳ ಬಿಸಿನೆಸ್ ಗಳಿಗೆ ಲಭ್ಯವಿದ್ದು, ವಿವಿಧ ಉದ್ಯಮಗಳ ಉದ್ಯಮಿಗಳು ಫಂಡಿಂಗ್ ಅನ್ನು ಪಡೆಯಲು ಮತ್ತು ಅದರ ಮೂಲಕ ಅಭಿವೃದ್ಧಿಯನ್ನು ಹೊಂದಲು ನೆರವಾಗುತ್ತದೆ. ಹಣಕಾಸು ಸಂಸ್ಥೆಗಳಿಗೆ ಅಪಾಯವನ್ನು ತಗ್ಗಿಸುವ ಮೂಲಕ, CGTMSE ಯೋಜನೆಯು ಅಸಂಖ್ಯಾತ ವ್ಯಕ್ತಿಗಳಿಗೆ ತಮ್ಮ ಬಿಸಿನೆಸ್ ನ ಕನಸುಗಳನ್ನು ನನಸಾಗಿಸಿಕೊಳ್ಳಲು ಮತ್ತು ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಕೊಡುಗೆಯನ್ನು ನೀಡಲು ಸಹಾಯ ಮಾಡುತ್ತದೆ.
ನೀವು ಈ ಯೋಜನೆಗೆ ಅರ್ಹರಾಗಿದ್ದೀರಾ ಎಂಬುದನ್ನು ತಿಳಿಯಲು ಬಯಸುವಿರಾ? ಹಾಗಿದ್ದರೆ ನಾವು ನಿಮಗೆ ಸಹಾಯ ಮಾಡುತ್ತೇವೆ! CGTMSE ಯೋಜನೆಯ ಅರ್ಹತಾ ಮಾನದಂಡಗಳ ಬಗ್ಗೆ ನಾವು ನಿಮಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತೇವೆ. ಇದರ ಜೊತೆಗೆ CGTMSE ಯೋಜನೆಯ ಉದ್ದೇಶಗಳು, ಪ್ರಯೋಜನಗಳು ಮತ್ತು ನಿಮ್ಮ ಬಿಸಿನೆಸ್ ನ ಭವಿಷ್ಯವನ್ನು ಅದು ಹೇಗೆ ಪರಿವರ್ತಿಸುತ್ತದೆ ಎಂಬುದರ ಕುರಿತು ಆಳವಾದ ಮಾಹಿತಿಯನ್ನು ಪಡೆದುಕೊಳ್ಳಿ.
ಈ ಯೋಜನೆಯಿಂದ ಪ್ರಯೋಜನ ಪಡೆಯಬಹುದಾದ ಕೈಗಾರಿಕೆಗಳು ಮತ್ತು ವಲಯಗಳ ವ್ಯಾಪ್ತಿಯ ಬಗ್ಗೆ ಸಹ ನೀವು ವಿವರವಾಗಿ ತಿಳಿಯುತ್ತೀರಿ. CGTMSE ನೀಡುವ ಸಾಲದ ಮಿತಿಗಳನ್ನು ಅನ್ವೇಷಿಸಿ ಮತ್ತು ನಿಮ್ಮ ಹೊಸ ಬಿಸಿನೆಸ್ ಗಳಿಗಾಗಿ ಈ ಹಣಕಾಸಿನ ಬೆಂಬಲವನ್ನು ಹೇಗೆ ಬಳಸಿಕೊಳ್ಳಬೇಕೆಂದು ತಿಳಿಯಿರಿ. ಈ ಯೋಜನೆಯ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿರುವ ಅನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ನೀವು CGTMSE ಯೋಜನೆಯ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆಯುತ್ತೀರಿ.
ಹೀಗಾಗಿ ಈಗಲೇ ಈ ಕೋರ್ಸ್ ನೋಡಿ ಮತ್ತು ಸಣ್ಣ ಮತ್ತು ಅತಿ ಸಣ್ಣ ಬಿಸಿನೆಸ್ ಗಳಿಗಾಗಿ ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ ಪ್ರಸ್ತುತಪಡಿಸುವ ಈ ಅವಕಾಶವನ್ನು ಬಳಸಿಕೊಳ್ಳಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಿರಿ. ನೀವು ನಿಮ್ಮ ಬಿಸಿನೆಸ್ ಪ್ರಯಾಣವನ್ನು ಪ್ರಾರಂಭಿಸಲು ಅಗತ್ಯವಿರುವ ಹಣವನ್ನು ಈ ಯೋಜನೆಯ ಮೂಲಕ ಪಡೆದುಕೊಂಡು ಬಿಸಿನೆಸ್ ನಲ್ಲಿ ಯಶಸ್ಸು ಸಾಧಿಸಬಹುದು.
ಈ ಮಾಡ್ಯೂಲ್ 2025-26 ಬಜೆಟ್ ನಂತರ CGTMSE ಯೋಜನೆಯಲ್ಲಿನ ಬದಲಾವಣೆಗಳನ್ನು ಒಳಗೊಂಡಿದೆ, ಇದರಲ್ಲಿ ಕ್ರೆಡಿಟ್ ಮಿತಿ ಹೆಚ್ಚಳದ ಕುರಿತು ವಿವರವಾದ ಮಾಹಿತಿಯೂ ಇದೆ
ಕೋರ್ಸ್ ಪರಿಚಯ
CGTMSE ಬಗ್ಗೆ ತಿಳಿದುಕೊಳ್ಳುವುದು
ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳು ಅಂದ್ರೆ ಏನು?
ಅರ್ಹತಾ ಮಾನದಂಡ ಮತ್ತು ದಾಖಲೆಗಳು
ಉದ್ಯಮ ಪೋರ್ಟಲ್‌ನಲ್ಲಿ ರಿಜಿಸ್ಟ್ರೇಷನ್
ಯಶಸ್ವಿ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸುವುದು ಹೇಗೆ?
ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
CGTMSE ಗೆ ಸಂಬಂಧಿಸಿದ ಯೋಜನೆಗಳು
ಸಾಲಗಾರ ಡೀಫಾಲ್ಟರ್ ಆದಾಗ ಏನಾಗುತ್ತದೆ?
CGTMSE ಯೋಜನೆಯ ಅನುಕೂಲ ಮತ್ತು ಅನಾನುಕೂಲ
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
- ಅಡಮಾನ-ರಹಿತ ಸಾಲ ಪಡೆಯಲು ಬಯಸುವ ಉದ್ಯಮಿಗಳು
- ಹಣಕಾಸಿನ ಬೆಂಬಲದ ಅಗತ್ಯವಿರುವ ಸಣ್ಣ ಬಿಸಿನೆಸ್ ಮಾಲೀಕರು
- CGTMSE ಅರ್ಹತಾ ಮಾನದಂಡಗಳನ್ನು ತಿಳಿಯಲು ಬಯಸುವವರು
- ಹೊಸ ಬಿಸಿನೆಸ್ ಆರಂಭಿಸಲು ಬಯಸುವ ಉದ್ಯಮಿಗಳು
- ಕ್ರೆಡಿಟ್ ಗ್ಯಾರಂಟಿ ಯೋಜನೆಗಳ ಬಗ್ಗೆ ಆಸಕ್ತಿ ಹೊಂದಿರುವ ವ್ಯಕ್ತಿಗಳು


- CGTMSE ಯೋಜನೆಯ ಅರ್ಹತಾ ಮಾನದಂಡಗಳು
- CGTMSE ಉದ್ದೇಶಗಳು ಮತ್ತು ಅದರ ಪ್ರಯೋಜನಗಳು
- CGTMSE ಲಭ್ಯವಿರುವ ವಿವಿಧ ವಲಯಗಳು
- CGTMSE ಯೋಜನೆಯ ಸಾಲದ ಮಿತಿಗಳು
- ಯೋಜನೆಯ ಲಾಭ ಪಡೆಯಲು ಅಗತ್ಯ ಸಲಹೆಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...