ffreedom app ನ ಬೆಲ್ಟ್ ಜೊತೆಗೆ ಫೋರ್ ಟಕ್ ಬ್ಲೌಸ್ ಹೊಲಿಯೋದು ಹೇಗೆ? ಕೋರ್ಸ್‌ಗೆ ಸುಸ್ವಾಗತ. ಈ ಕೋರ್ಸ್, ಟೈಲರಿಂಗ್ ಕಲಿತು ಇಂದಿನ ಆಧುನಿಕ ಫ್ಯಾಷನ್ ಇಂಡಸ್ಟ್ರಿಯಲ್ಲಿ ವಿವಿಧ ಕ್ರಿಯೇಟಿವ್ ಡಿಸೈನ್‌ಗಳನ್ನ ಸಿದ್ದಪಡಿಸಿ ಗೆಲ್ಲುವುದಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಫೋರ್ ಟಕ್ ಬ್ಲೌಸ್ ತಯಾರಿಸಿ ಉತ್ತಮ ಆದಾಯಗಳಿಸುವುದಕ್ಕೆ ಅಗತ್ಯವಾಗಿ ಬೇಕಾಗುವ ಸಂಪೂರ್ಣವಾದ ಕೌಶಲ್ಯ ಮತ್ತು ಜ್ಞಾನವನ್ನ ಒದಗಿಸುತ್ತದೆ
ಈ ಕೋರ್ಸ್‌ನಲ್ಲಿ ನಿಮಗೆ ಫ್ಯಾಷನ್ ಇಂಡಸ್ಟ್ರಿಯಲ್ಲಿ 12 ವರ್ಷ ಅನುಭವ ಇರುವ ಶೀ ಕೌಚರ್ ಬೊಟಿಕ್ ಮಾಲೀಕರು ಆದ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಯೋಗಿತಾ ಆರ್ ಬೆಲ್ಟ್ ಜೊತೆಗೆ ಫೋರ್ ಟಕ್ ಬ್ಲೌಸ್ ಹೊಲಿಯೋದು ಹೇಗೆ ಎಂದು ಪ್ರಾಕ್ಟಿಕಲ್ ಆಗಿ ಕಲಿಸಿಕೊಡುತ್ತಾರೆ. ಈ ಕೋರ್ಸ್ ರಚಿಸುವಲ್ಲಿ ಯೋಗಿತಾ ಆರ್, ಫ್ರೀಡಂ ಆ್ಯಪ್ ರಿಸರ್ಚ್ ಟೀಂ ಜೊತೆ ಸೇರಿ ಸಾಕಷ್ಟು ಶ್ರಮವಹಿಸಿ ಈ ಕೋರ್ಸ್ ಡಿಸೈನ್ ಮಾಡುವಂತೆ ಮಾಡಿದ್ದಾರೆ.
ಕೋರ್ಸ್‌ನಲ್ಲಿ ನೀವು ಸರಿಯಾದ ಬಟ್ಟೆಗಳ ಆಯ್ಕೆ ಮಾಡುವುದರಿಂದ ಹಿಡಿದು ದರ ನಿಗದಿ ಮಾಡುವವರೆಗೆ ಸಂಪೂರ್ಣವಾಗಿ ಕಲಿಬಹುದು. ಈ ಬ್ಲೌಸ್‌ನ ಪ್ರಧಾನ ಅಂಶ ಬೆಲ್ಟ್ ಸಿದ್ದಮಾಡುವುದು ಸೇರಿದಂತೆ ಅಳತೆ ತೆಗೆದುಕೊಳ್ಳುವುದು ಹೇಗೆ? ಪ್ಯಾಟರ್ನ್ ಡಿಸೈನ್ ಮಾಡಿಕೊಳ್ಳುವುದು ಹೇಗೆ? ಡಿಸೈನ್ ಆದ ಪ್ಯಾಟರ್ನ್‌ಗೆ ತಕ್ಕಂತೆ ಪೇಪರ್ ಡ್ರಾಫ್ಟ್ ಮಾಡಿ ಕತ್ತರಿಸುವುದು ಹೇಗೆ? ಬಟ್ಟೆಯನ್ನ ಕತ್ತರಿಸಿಕೊಳ್ಳುವುದು ಹೇಗೆ? ಬ್ಲೌಸ್ ಹೊಲಿಯೋದು ಹೇಗೆ? ಬೆಲ್ಟ್ ತಯಾರಿ ಮಾಡೋದು ಹೇಗೆ? ಡೋರಿ, ಹುಕ್ ಮತ್ತು ಕಣ್ಣುಗಳನ್ನ ಜೋಡಿಸುವುದು ಹೇಗೆ ಎನ್ನುವವರೆಗೆ ನೀವು ಕಂಪ್ಲೀಟ್ ಆಗಿ ಕಲಿತುಕೊಳ್ಳಬಹುದು
ಮನೆಯಿಂದ ಅಥವಾ ನಿಮ್ಮದೇ ಒಂದು ಟೈಲರಿಂಗ್ ಬಿಸಿನೆಸ್ ಮಾಡಿ ಹಣ ಸಂಪಾದನೆ ಮಾಡಬೇಕು ಅನ್ನುವವರಿಗೆ ಈ ಕೋರ್ಸ್ ಅತ್ಯುತ್ತಮ ಆಯ್ಕೆ. ಹಾಗಾಗಿ ಈಗಲೆ ಸಂಪೂರ್ಣ ಕೋರ್ಸ್ ವೀಕ್ಷಿಸಿ ಬೆಲ್ಟ್ ಜೊತೆಗೆ ಫೋರ್ ಟಕ್ ಬ್ಲೌಸ್ ಹೊಲಿಯೋದು ಕಲಿತು ಒಂದೇ ಬ್ಲೌಸ್‌ನಲ್ಲಿ ಸಾವಿರಕ್ಕೂ ಹೆಚ್ಚು ಹಣ ಸಂಪಾದಿಸಿ ಯಶಸ್ವಿಯಾಗಿ.
ಬೆಲ್ಟ್ ಜೊತೆಗೆ ಫೋರ್ ಟಕ್ ಬ್ಲೌಸ್ ಎಂದರೇನು? ಹೀಗೆ ಕರೆಯಲು ಕಾರಣವೇನು? ಇದರ ವಿಶೇಷತೆ ಏನು ಅನ್ನೋದನ್ನು ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ
ಬೆಲ್ಟ್ ಜೊತೆಗೆ ಫೋರ್ ಟಕ್ ಬ್ಲೌಸ್ ಹೊಲಿಯಲು ಆರಂಭಿಸುವುದಕ್ಕು ಮುನ್ನ ಸರಿಯಾದ ಅಳತೆ ತೆಗೆದುಕೊಳ್ಳುವುದರ ಬಗ್ಗೆ ಕಂಪ್ಲೀಟ್ ಆಗಿ ಈ ಮಾಡ್ಯೂಲ್‌ನಲ್ಲಿ ಕಲಿಯಿರಿ
ಬ್ಲೌಸ್‌ನ ಹಿಂಭಾಗದ ಪ್ಯಾಟರ್ನ್ ಡಿಸೈನ್ ಮಾಡಿಕೊಳ್ಳುವುದು ಹೇಗೆ ಎಂದು ಈ ಮಾಡ್ಯೂಲ್‌ನಲ್ಲಿ ಕಂಪ್ಲೀಟ್ ಆಗಿ ಕಲಿಯಿರಿ
ಬ್ಲೌಸ್‌ನ ಮುಂಭಾಗದ ಪ್ಯಾಟರ್ನ್‌ನ ಹೇಗೆ ರಚನೆ ಮಾಡುವುದು ಅನ್ನೋದನ್ನು ಸಂಪೂರ್ಣವಾಗಿ ಇಲ್ಲಿ ಕಲಿಯುವಿರಿ
ಬ್ಲೌಸ್‌ನ ತೋಳುಗಳನ್ನ ಹೊಲಿಯಲು ಪ್ಯಾಟರ್ನ್ ಹೇಗೆ ರಚನೆ ಮಾಡಿಕೊಳ್ಳಬೇಕು ಅನ್ನೋದನ್ನು ಇಲ್ಲಿ ಕಲಿಯಿರಿ
ಪ್ಯಾಟರ್ನ್ ರಚನೆ ಆದ ನಂತರ ಬಟ್ಟೆ ಕಟಾವಿಗು ಮುನ್ನ ಪೇಪರ್ ಡ್ರಾಫ್ಟಿಂಗ್ ಮತ್ತು ಕತ್ತರಿಸಿಟ್ಟುಕೊಳ್ಳುವುದು ಹೇಗೆ ಎಂದು ತಿಳಿಯಿರಿ
ಬ್ಲೌಸ್ ಹೊಲಿಯಲು ಆಯ್ಕೆ ಮಾಡಿಕೊಂಡ ಬಟ್ಟೆ ಮತ್ತು ಲೈನಿಂಗ್‌ನ ಹೇಗೆ ಕತ್ತರಿಸಿಕೊಳ್ಳುವುದು ಅನ್ನೋದನ್ನು ಕಂಪ್ಲೀಟ್ ಆಗಿ ಕಲಿಯಿರಿ
ಬಾರ್ಡರ್ ಅಳವಡಿಸಿಕೊಂಡು ಬ್ಲೌಸ್‌ನ ಹಿಂಭಾಗ ಹೊಲಿಯೋದು ಹೇಗೆ ಎಂದು ಡಿಟೇಲ್ಡ್ ಆಗಿ ಕಲಿಯಿರಿ
ಬಾರ್ಡರ್ ಅಳವಡಿಸಿಕೊಂಡು ಬ್ಲೌಸ್‌ನ ಮುಂಭಾಗ ಹೊಲಿಯೋದು ಹೇಗೆ ಎಂದು ಸಂಪೂರ್ಣವಾಗಿ ಕಲಿಯಿರಿ
ಬ್ಲೌಸ್‌ಗಳ ಆಕರ್ಷಣೆ ದೃಷ್ಟಿಯಿಂದ ಮಾಡಲೇಬೇಕಾಗಿರುವ ಡಾರ್ಟ್ಸ್ ಮತ್ತು ನಾಚ್ ಪಾಯಿಂಟ್‌ಗಳ ರಚನೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ
ಫೋರ್ ಟಕ್ ಬ್ಲೌಸ್‌ಗೆ ಅತೀ ಮುಖ್ಯವಾಗಿರುವ ಬೆಲ್ಟ್ ಹೇಗೆ ತಯಾರಿಸಿಕೊಳ್ಳಬೇಕು ಮತ್ತು ತಯಾರಾದ ಬೆಲ್ಟ್‌ನ ಜೋಡಿಸುವುದು ಹೇಗೆ ಎಂದು ತಿಳಿಯಿರಿ
ಬ್ಲೌಸ್‌ಗೆ ಅತೀ ಅವಶ್ಯಕವಾಗಿರುವ ಬಟನ್ ಸ್ಟ್ಯಾಂಡ್ ಹೇಗೆ ಸಿದ್ದಪಡಿಸಿಕೊಳ್ಳಬೇಕು ಅನ್ನೋದನ್ನು ಕಂಪ್ಲೀಟ್ ಆಗಿ ಈ ಮಾಡ್ಯೂಲ್‌ನಲ್ಲಿ ಕಲಿಯಿರಿ
ಬಾರ್ಡರ್ ಡಿಸೈನ್ ಜೊತೆಗೆ ತೋಳುಗಳ ಹೊಲಿಗೆ ಮಾಡುವುದು ಹೇಗೆ ಎಂದು ಪ್ರಾಕ್ಟಿಕಲ್ ಆಗಿ ಕಲಿಯಿರಿ
ಈಗಾಗಲೆ ಸಿದ್ದವಾಗಿರುವ ಬ್ಯಾಕ್, ಫ್ರಂಟ್ ಮತ್ತು ಸ್ಲೀವ್ಸ್‌ನ ಜೋಡಿಸಿ ಫಿನಿಶಿಂಗ್ ಹೊಲಿಗೆ ಮಾಡುವುದು ಹೇಗೆ ಎಂದು ತಿಳಿಯಿರಿ
ಬ್ಲೌಸ್‌ನ ಆಕರ್ಷಣೆ ದೃಷ್ಟಿಯಿಂದ ಡೋರಿ ತಯಾರಿಸುವುದು ಹೇಗೆ ಮತ್ತು ತಯಾರಾದ ಡೋರಿಯನ್ನ ಜೋಡಿಸುವುದು ಹೇಗೆ ಎಂದು ಕಲಿಯಿರಿ
ಸಂಪೂರ್ಣ ಬ್ಲೌಸ್ ಹೊಲಿಗೆ ಕಾರ್ಯ ಮುಗಿದ ನಂತರ ಹುಕ್ಸ್‌ಗಳು ಮತ್ತು ಹುಕ್ಸ್ ಕೂರಲು ಕಣ್ಣುಗಳನ್ನು ಮಾಡಿಕೊಳ್ಳೋದು ಹೇಗೆ ಎಂದು ಕಲಿಯಿರಿ
ನೀವು ತಯಾರಿಸಿದ ಬ್ಲೌಸ್‌ಗೆ ದರ ಹೇಗೆ ನಿಗದಿ ಮಾಡುವುದು ಮತ್ತು ಮಾರ್ಗದರ್ಶಕರ ಕಿವಿಮಾತೇನು ಅನ್ನೋದನ್ನ ಈ ಕೊನೆ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ
- ಮನೆಯಲ್ಲೇ ಇರುವ ಗೃಹಿಣಿಯರು ಮತ್ತು ಯುವತಿಯರು
- ಹೋಮ್ ಬೇಸ್ಡ್ ಉದ್ಯಮ ಮಾಡಬಯಸುವವರು
- ಫ್ಯಾಷನ್ ಫಿಲ್ಡ್‌ನಲ್ಲಿ ಸಕ್ಸಸ್ ಆಗಲು ಬಯಸುವವರು
- ಕಡಿಮೆ ಬಂಡವಾಳದಲ್ಲಿ ಉದ್ಯಮ ಆರಂಭಿಸಬೇಕೆನ್ನುವವರು
- ಪಾರ್ಟ್ ಟೈಂ ಬಿಸಿನೆಸ್ ಮಾಡಲು ಬಯಸುತ್ತಿರುವವರು
- ಫೋರ್ ಟಕ್ ಬ್ಲೌಸ್‌ನಲ್ಲಿ ಬೆಲ್ಟ್‌ನ ಪ್ರಾಮುಖ್ಯತೆ ಬಗ್ಗೆ
- ಹಂತ ಹಂತವಾಗಿ ಬ್ಲೌಸ್ ಹೊಲಿಯಲು ಪ್ರಾಕ್ಟಿಕಲ್ ಗೈಡ್‌ಲೈನ್ಸ್
- ಅಳತೆ, ಕಟ್ಟಿಂಗ್, ಹೊಲಿಗೆ ಮತ್ತು ಫಿನಿಶಿಂಗ್ ಬಗ್ಗೆ
- ನೀವು ರಚಿಸಿದ ಬ್ಲೌಸ್‌ಗೆ ದರ ನಿಗದಿ ಮಾಡುವ ಬಗ್ಗೆ
- ವಿವಿಧ ಡಿಸೈನ್ ಮೂಲಕ ಬೆಲ್ಟ್ ಜೊತೆಗೆ ಫೋರ್ ಟಕ್ ಬ್ಲೌಸ್ ರಚಿಸುವ ಬಗ್ಗೆ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.