ಕೃಷಿ ಉದ್ಯಮಿಯಾಗಬೇಕೆಂಬ ಹಂಬಲವಿದೆಯೇ? ಸಾವಯವ ಕೃಷಿಯ ಸಾಧ್ಯತೆಗಳನ್ನು ಬಳಸಿಕೊಳ್ಳಲು ಬಯಸುವಿರಾ? ಹಾಗಾದರೆ, ನಿಮಗಾಗಿ ಒಂದು ಸುವರ್ಣಾವಕಾಶ! ನಮ್ಮ ಈ ಕೋರ್ಸ್, ನಿಮ್ಮ ಸ್ವಂತ ಸಾವಯವ ದಾಳಿಂಬೆ ಕೃಷಿ ವ್ಯವಹಾರವನ್ನು ಹೇಗೆ ಪ್ರಾರಂಭಿಸಬೇಕು ಮತ್ತು ಅದರಿಂದ ಹೇರಳ ಲಾಭ ಗಳಿಸಬೇಕು ಎಂಬುದರ ಕುರಿತು ಸಮಗ್ರ ಮಾರ್ಗದರ್ಶನ ನೀಡುತ್ತದೆ. ಈ ಕ್ಷೇತ್ರದಲ್ಲಿ ದಶಕಗಳ ಅನುಭವ ಮತ್ತು ಅವಿರತ ಶ್ರಮವನ್ನು ಹೊಂದಿರುವ ಅನುಭವಿ ಸಾವಯವ ಕೃಷಿ ತಜ್ಞರಾದ ಬಸವರಾಜ ಗುಡ್ಲನೂರ ಅವರ ಮಾರ್ಗದರ್ಶನದಲ್ಲಿ ಈ ಕೋರ್ಸ್, ಕೃಷಿಯ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ.
ನೈಸರ್ಗಿಕ, ರಾಸಾಯನಿಕ ಮುಕ್ತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಸಾವಯವ ದಾಳಿಂಬೆ ಕೃಷಿ ಲಾಭದಾಯಕ ಉದ್ಯಮವಾಗಿ ಹೊರಹೊಮ್ಮಿದೆ. ಈ ಕೋರ್ಸ್ ಸೂಕ್ತ ಭೂಮಿಯನ್ನು ಆಯ್ಕೆ ಮಾಡುವುದು, ಮಣ್ಣಿನ ಆರೋಗ್ಯವನ್ನು ಅರ್ಥಮಾಡಿಕೊಳ್ಳುವುದು, ಪರಿಸರ ಸ್ನೇಹಿ ಕೀಟ ನಿಯಂತ್ರಣ ವಿಧಾನಗಳನ್ನು ಬಳಸುವುದು ಮತ್ತು ಸುಸ್ಥಿರ ನೀರಿನ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದು ಮುಂತಾದ ಪ್ರಾಕ್ಟಿಕಲ್ ಮಾಹಿತಿಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸುತ್ತದೆ.
ಈ ಕೋರ್ಸ್ ನೋಡುವವರು ಸಾವಯವ ಕೃಷಿ ಪದ್ಧತಿಗಳ ಸಮಗ್ರ ತಿಳುವಳಿಕೆಯನ್ನು ಪಡೆಯುತ್ತಾರೆ. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ ಮತ್ತು ತಮ್ಮ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಅಮೂಲ್ಯವಾದ ಸಲಹೆಗಳನ್ನು ಪಡೆಯುತ್ತಾರೆ. ಸಾವಯವ ದಾಳಿಂಬೆ ರೈತರಾಗಿ ಯಶಸ್ಸು ಗಳಿಸಲು ಈಗಲೇ ಈ ಕೋರ್ಸ್ ವೀಕ್ಷಿಸಿ.
ಸಾವಯವ ದಾಳಿಂಬೆ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಲು ಅಗತ್ಯ ಅಂಶಗಳನ್ನು ಕಲಿಯಿರಿ.
ದಾಳಿಂಬೆ ಕೃಷಿಯಲ್ಲಿ ಯಶಸ್ಸಿನ ಕಡೆಗೆ ನಿಮಗೆ ಮಾರ್ಗದರ್ಶನ ಮಾಡುವ ನಮ್ಮ ಅನುಭವಿ ಮಾರ್ಗದರ್ಶಕರನ್ನು ಭೇಟಿ ಮಾಡಿ.
ಸಾವಯವ ದಾಳಿಂಬೆ ಕೃಷಿಯ ತಂತ್ರಗಳು ಮತ್ತು ಅದರ ವೈವಿಧ್ಯಮಯ ಪ್ರಭೇದಗಳ ಬಗ್ಗೆ ವಿವರವಾಗಿ ತಿಳಿಯಿರಿ.
ನಿಮ್ಮ ದಾಳಿಂಬೆ ಕೃಷಿ ಬಿಸಿನೆಸ್ ಗಾಗಿ ಅಗತ್ಯವಿರುವ ಹಣಕಾಸಿನ ಅಂಶಗಳು ಮತ್ತು ಸರ್ಕಾರದ ಬೆಂಬಲದ ಬಗ್ಗೆ ತಿಳಿಯಿರಿ.
ಯಶಸ್ವಿ ದಾಳಿಂಬೆ ಕೃಷಿಗಾಗಿ ಭೂಮಿ, ಮಣ್ಣು ಮತ್ತು ಹವಾಮಾನದಂತಹ ನಿರ್ಣಾಯಕ ಅಂಶಗಳನ್ನು ಅರ್ಥಮಾಡಿಕೊಳ್ಳಿ.
ಭೂಮಿ ಸಿದ್ದತೆಯ ಬಗ್ಗೆ, ಸರಿಯಾಗಿ ನಾಟಿ ಮಾಡುವ ಬಗ್ಗೆ ಮತ್ತು ಕಾರ್ಮಿಕರ ಅವಶ್ಯಕತೆಯ ಬಗ್ಗೆ ವಿವರವಾಗಿ ತಿಳಿಯಿರಿ.
ನೀರಿನ ನಿರ್ವಹಣೆ, ಫಲೀಕರಣ ಮತ್ತು ರೋಗಗಳನ್ನು ತಡೆಗಟ್ಟುವಿಕೆಗಾಗಿ ಉತ್ತಮ ಅಭ್ಯಾಸಗಳ ಬಗ್ಗೆ ತಿಳಿಯಿರಿ.
ನಿಮ್ಮ ದಾಳಿಂಬೆಗಳ ಕೊಯ್ಲು, ಕೊಯ್ಲು ನಂತರದ ಸಂಸ್ಕರಣೆ ಮತ್ತು ಇಳುವರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಪರಿಣತಿಯನ್ನು ಪಡೆದುಕೊಳ್ಳಿ.
ಮಾರುಕಟ್ಟೆ ಡೈನಾಮಿಕ್ಸ್, ಬೆಲೆ ನಿಗದಿ ತಂತ್ರಗಳು, ರಫ್ತು ಅವಕಾಶಗಳು ಮತ್ತು ಲಾಭದ ಬಗ್ಗೆ ವಿವರವಾಗಿ ತಿಳಿಯಿರಿ.
ಈ ಕೃಷಿಯಲ್ಲಿನ ಸಾಮಾನ್ಯ ಸವಾಲುಗಳನ್ನು ಸಮರ್ಥವಾಗಿ ಜಯಿಸಲು ಮತ್ತು ದಾಳಿಂಬೆ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಲು ಮಾರ್ಗದರ್ಶಕರಿಂದ ಅಗತ್ಯ ಸಲಹೆಯನ್ನು ಪಡೆಯಿರಿ.
- ಹೊಸದಾಗಿ ಕೃಷಿ ಕ್ಷೇತ್ರಕ್ಕೆ ಕಾಲಿಡುವವರು
- ಈಗಾಗಲೇ ದಾಳಿಂಬೆ ಕೃಷಿ ಮಾಡುತ್ತಿರುವವರು
- ದಾಳಿಂಬೆ ಕೃಷಿ ಮಾಹಿತಿ ತಿಳಿದುಕೊಳ್ಳಲು ಬಯಸುವವರು
- ಸಾವಯವ ಕೃಷಿಯನ್ನು ಪ್ರೋತ್ಸಾಹಿಸುತ್ತಿರುವವರು
- ಕೃಷಿ ಬಗ್ಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು


- ಸಾವಯವ ದಾಳಿಂಬೆ ಕೃಷಿ ಮತ್ತು ತಳಿಗಳು
- ಬಂಡವಾಳ ಮತ್ತು ಸರಕಾರದ ಸವಲತ್ತುಗಳು
- ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ
- ಭೂಮಿ ಸಿದ್ಧತೆ ಹೇಗೆ, ನಾಟಿ ಮತ್ತು ಕಾರ್ಮಿಕರ ಬಳಕೆ ಹೇಗೆ?
- ನೀರು, ಗೊಬ್ಬರ ಮತ್ತು ರೋಗ ನಿಯಂತ್ರಣ
- ಬೆಲೆ, ಮಾರುಕಟ್ಟೆ, ರಪ್ತು, ಖರ್ಚು ಮತ್ತು ಲಾಭ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...