ಆರೋಗ್ಯಕ್ಕಾಗಿ ಯೋಗ ಈ ಕೋರ್ಸ್ ನಲ್ಲಿ ನೀವು ಆರೋಗ್ಯವಂತರಾಗಿರಲು ಹೇಗೆ ಯೋಗ ಸಹಕಾರಿ ಅನ್ನುವುದನ್ನು ಪ್ರಾಕ್ಟಿಕಲ್ ಆದಿ ಸಂಪೂರ್ಣವಾಗಿ ಕಲಿಯುವಿರಿ. ಈ ಕೋರ್ಸ್‌ನಲ್ಲಿ, ನೀವು ಯೋಗದ ಇತಿಹಾಸ, ಯೋಗದ ವಿವಿಧ ಶೈಲಿಗಳು ಮತ್ತು ಅವುಗಳ ಪ್ರಯೋಜನಗಳು, ಯೋಗ ಭಂಗಿಗಳು, ಸುಧಾರಿತ ಭಂಗಿಗಳ ಬಗ್ಗೆ ಹಂತದ ಮಾರ್ಗದರ್ಶನ ಪಡೆಯುತ್ತೀರಿ.
ಇನ್ನುಳಿದಂತೆ ಸೂರ್ಯ ನಮಸ್ಕಾರ ಮತ್ತು ಅದರ ಮಹತ್ವ, ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸುವ ಉಪಾಯ, ಬೆನ್ನು ನೋವು ಕಡಿಮೆ ಮಾಡಲು ಬೇಕಾದ ಯೋಗ ಹಾಗೇನೇ ಥೈರಾಯ್ಡ್ ರೋಗಿಗಳು ಮಾಡಬೇಕಾಗಿರೋ ಯೋಗ ಸೇರಿದಂತೆ ವಿವಿಧ ರೀತಿಯ ಯೋಗ ಅಭ್ಯಾಸವನ್ನು ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು.
ಯೋಗದ ದೈಹಿಕ ಅಭ್ಯಾಸವನ್ನು ಕಲಿಯುವುದರ ಜೊತೆಗೆ, ಯೋಗದ ಮಾನಸಿಕ ಮತ್ತು ಭಾವನಾತ್ಮಕ ಪ್ರಯೋಜನಗಳನ್ನು ಮತ್ತು ಒತ್ತಡವನ್ನು ಕಡಿಮೆ ಮಾಡಲು, ನಿದ್ರೆಯನ್ನು ಸುಧಾರಿಸಲು ಮತ್ತು ಆಂತರಿಕ ಶಾಂತಿಯನ್ನು ಬೆಳೆಸಲು ನಿಮ್ಮ ಯೋಗಾಭ್ಯಾಸವನ್ನು ಹೇಗೆ ಬಳಸುವುದು ಎಂಬುದನ್ನು ಸಹ ನೀವು ಕಲಿಯುತ್ತೀರಿ. ಮೈಂಡ್‌ಫುಲ್‌ನೆಸ್ ಮತ್ತು ಧ್ಯಾನ ಮತ್ತು ಈ ಅಭ್ಯಾಸಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಹೇಗೆ ಸೇರಿಸಿಕೊಳ್ಳುವುದು ಎಂಬುದರ ಬಗ್ಗೆ ನೀವು ಕಲಿಯುವಿರಿ.
ಯೋಗ ಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ಡಿಪ್ಲೊಮಾ ಕೂಡಾ ಮಾಡಿರೋ ಯೋಗ ಚಿಕಿತ್ಸಕಿ ಮತ್ತು ಬೋಧಕಿಯಾಗಿದ್ದು ಹಲವಾರು ವರ್ಷಗಳ ಅನುಭವ ಹೊಂದಿರೋ ಅಂಜು ಸುಂದ್ರೇಶ್ ಅವರೇ ನಿಮಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ.
ನೀವು ಯೋಗವನ್ನು ಕಲಿತು ಅಭ್ಯಾಸ ಮಾಡಿ ನಿಮ್ಮ ಆರೋಗ್ಯವನ್ನು ಕಾಪಾಡಲು ಮುಂದಾಗ್ತೀರಿ ಅಂದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ ಮತ್ತು ಯೋಗದ ಶಕ್ತಿಯ ಮೂಲಕ ನಿಮ್ಮ ಮನಸ್ಸು, ದೇಹ ಮತ್ತು ಆತ್ಮವನ್ನು ಪರಿವರ್ತಿಸುವ ಕೌಶಲ್ಯ, ಜ್ಞಾನವನ್ನು ಪಡೆಯಿರಿ
ನೀವು ಸೂರ್ಯ ನಮಸ್ಕಾರದ ಇತಿಹಾಸ, ಭಂಗಿಗಳು ಮತ್ತು ಅದರ ಮಹತ್ವದ ಬಗ್ಗೆ ಕಲಿಯುವಿರಿ, ಇದು ನಿಮ್ಮ ಯೋಗ ಅಭ್ಯಾಸ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.
ವಿಶೇಷ ಯೋಗಾಭ್ಯಾಸಗಳ ಮೂಲಕ ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉಸಿರಾಟದ ತಂತ್ರಗಳು ಮತ್ತು ಭಂಗಿಗಳನ್ನು ತಿಳಿಯಿರಿ.
ಈ ಮಾಡ್ಯುಲ್ ನಲ್ಲಿ ಜೀರ್ಣಕ್ರಿಯೆಯ ಆರೋಗ್ಯಕ್ಕೆ ಅನುಗುಣವಾಗಿ ಪರಿಣಾಮಕಾರಿ ಯೋಗ ತಂತ್ರಗಳನ್ನು ಕಲಿಯಿರಿ.
ನಿಮ್ಮ ದೇಹದ ರಕ್ಷಣೆಯನ್ನು ಬಲಪಡಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಯೋಗಾಭ್ಯಾಸದ ಬಗ್ಗೆ ತಿಳಿಯಿರಿ.
ಬೆನ್ನು ನೋವನ್ನು ನಿವಾರಿಸಲು ಮತ್ತು ಬೆನ್ನುಮೂಳೆಯ ಆರೋಗ್ಯವನ್ನು ಹೆಚ್ಚಿಸಲು ಉತ್ತಮ ಯೋಗಾಭ್ಯಾಸದ ಬಗ್ಗೆ ತಿಳಿಯಿರಿ.
ಥೈರಾಯ್ಡ್ ರೋಗಿಗಳ ಆರೋಗ್ಯವನ್ನು ಉತ್ತಮಗೊಳಿಸಲು ಸೂಕ್ತ ಯೋಗದ ಭಂಗಿಗಳು, ಉಸಿರಾಟದ ವ್ಯಾಯಾಮಗಳ ಬಗ್ಗೆ ವಿವರವಾಗಿ ತಿಳಿಯಿರಿ.
ಈ ಮಾಡ್ಯೂಲ್‌ನಲ್ಲಿ ನೈಸರ್ಗಿಕವಾಗಿ PCOS ಅನ್ನು ಪರಿಹರಿಸಲು ಅಗತ್ಯ ಯೋಗಾಭ್ಯಾಸಗಳ ಬಗ್ಗೆ ವಿವರವಾಗಿ ತಿಳಿಯಿರಿ.
ಮೊಣಕಾಲಿನ ಅರೋಗ್ಯ ಮತ್ತು ಶಕ್ತಿಯನ್ನು ಹೆಚ್ಚಿಸಲು ವಿಶೇಷ ಯೋಗ ಭಂಗಿಗಳು ಮತ್ತು ವ್ಯಾಯಾಮಗಳನ್ನು ಈ ಮಾಡ್ಯುಲ್ ನಲ್ಲಿ ತಿಳಿಯಿರಿ.
- ಉತ್ತಮ ಆರೋಗ್ಯವನ್ನು ಕಾಪಾಡಬೇಕು ಅಂದುಕೊಳ್ಳುವವರು
- ಬೆನ್ನು ನೋವಿನ ಸಮಸ್ಯೆ ಇರುವವರು, ಶ್ವಾಸಕೋಶದ ಸಮಸ್ಯೆ ಇರುವವರು, ಥೈರಾಯ್ಡ್ ರೋಗಿಗಳು
- ನಿದ್ರಾಹೀನತೆ ಸಮಸ್ಯೆ ಎದುರಿಸುತ್ತಿರುವವರು
- ಮಾನಸಿಕವಾಗಿ ಸದೃಢರಾಗಲು ಬಯಸುವವರು
- ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಲು ಬಯಸುವವರು


- ಯೋಗದ ಇತಿಹಾಸ ಹಾಗೂ ನಡೆದು ಬಂದ ಹಾದಿ
- ಆರೋಗ್ಯ ವೃದ್ಧಿಗೆ ಹೇಗೆ ಯೋಗ ಸಹಕಾರಿ
- ಸೂರ್ಯ ನಮಸ್ಕಾರ ಮತ್ತು ಅದರ ಮಹತ್ವ
- ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸಲು ಯೋಗ
- ಬೆನ್ನು ನೋವು ಕಡಿಮೆ ಮಾಡಲು ಯೋಗ
- ಥೈರಾಯ್ಡ್ ರೋಗಿಗಳಿಗಾಗಿ ಯೋಗ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...