ವೆಜ್ ರೆಸ್ಟೋರೆಂಟ್ ಬಿಸಿನೆಸ್. ಇತ್ತೀಚೆಗೆ ಲಾಭದಾಯಕ ಬಿಸಿನೆಸ್ ಗಳಲ್ಲಿ ಒಂದು. ಈ ಕೋರ್ಸ್ ನಲ್ಲಿ ನೀವು ವೆಜ್ ರೆಸ್ಟೋರೆಂಟ್ ಬಿಸಿನೆಸ್ ಮಾಡಿ ಸಕ್ಸಸ್ ಆಗುವುದು ಹೇಗೆ ಎಂದು ಸಂಪೂರ್ಣವಾಗಿ ಕಲಿಯಬಹುದು.
ಬೆಂಗಳೂರಿನಂತಹ ನಗರದ ಬಹಳಷ್ಟು ಕುಟುಂಬಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ಕೆಲಸಕ್ಕೆ ಹೋಗುತ್ತಿರುವುದರಿಂದ ಅನೇಕ ಮಂದಿಗೆ ಅಡಿಗೆ ಮಾಡಿಕೊಳ್ಳುವ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಇಂದು ರೆಸ್ಟೋರೆಂಟ್ ಗಳ ಸಂಖ್ಯೆಯೂ ಕೂಡ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಬಹಳಷ್ಟು ಮಂದಿ ತಮ್ಮ ಊರನ್ನು ಬಿಟ್ಟು ಬೇರೆ ಬೇರೆ ನಗರಗಳಿಗೆ ಬಂದು ಕೆಲಸ ಮಾಡುತ್ತಿರುತ್ತಾರೆ. ಅಂಥಹವರಿಗೂ ಸಹ ಆಹಾರ ನೀಡುವ ಕೆಲಸವನ್ನು ಈ ವೆಜ್ ರೆಸ್ಟೋರೆಂಟ್ ಗಳು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿವೆ. ಆಹಾರ ಉದ್ಯಮ ಒಂದು ರಿಸೆಶನ್ ಫ್ರೀ ಉದ್ಯಮ ಆಗಿರುವುದರಿಂದ ಇದರಲ್ಲಿ ಯಾವಾಗಲೂ ಬೇಡಿಕೆ ಮತ್ತು ಅವಕಾಶಗಳು ಇದ್ದೇ ಇರುತ್ತದೆ.
ಭಾರತದಲ್ಲಿ ಸಂಘಟಿತ ರೆಸ್ಟೋರೆಂಟ್ ಮತ್ತು ಫುಡ್ ಉದ್ಯಮದ ವ್ಯಾಪ್ತಿ ಸುಮಾರು 1.60 ಲಕ್ಷ ಕೋಟಿಯಷ್ಟು ದೊಡ್ಡದಿದೆ. ಮತ್ತು ಅಸಂಘಟಿತ ರೆಸ್ಟೋರೆಂಟ್ ಮತ್ತು ಫುಡ್ ಉದ್ಯಮದ ವ್ಯಾಪ್ತಿ ಸುಮಾರು 2.5 ಲಕ್ಷ ಕೋಟಿಯಷ್ಟು ದೊಡ್ಡದಿದೆ. ಇದಲ್ಲದೆ ಒಟ್ಟಾರೆ ಈ ರೆಸ್ಟೋರೆಂಟ್ ಮತ್ತು ಫುಡ್ ಉದ್ಯಮ ಸುಮಾರು 4 ಲಕ್ಷ ಕೋಟಿಯಷ್ಟು ಬೃಹತ್ ಗಾತ್ರದ ಉದ್ಯಮ ಎಂದು ಅಂದಾಜಿಸಲಾಗಿದೆ. ಹಾಗಾಗಿ ವೆಜ್ ರೆಸ್ಟೋರೆಂಟ್ ಗಳಿಗೆ ಅವಕಾಶವಂತೂ ಜಾಸ್ತಿಯಾಗ್ತಾನೇ ಇದೆ. ಈ ಅವಕಾಶವನ್ನು ಬಳಸಿಕೊಂಡು ಈ ಬಿಸಿನೆಸ್ ಮಾಡಿ ಸಕ್ಸಸ್ ಆಗಬಹುದು
ಈ ಕೋರ್ಸ್ ನಲ್ಲಿ, ವೆಜ್ ರೆಸ್ಟೋರೆಂಟ್ ನಡೆಸಲು ಬೇಕಾದ ಜಾಗ, ಸೂಕ್ತ ಸ್ಥಳದ ಆಯ್ಕೆ, ಬಂಡವಾಳ, ಪರ್ಮಿಶನ್, ಲೈಸೆನ್ಸ್, ಗ್ರಾಹಕರ ಆಕರ್ಷಣೆ, ಮಾರ್ಕೆಟಿಂಗ್, ಬ್ರಾಂಡಿಂಗ್ ಹಾಗೂ ಉತ್ತಮ ಲಾಭ ಗಳಿಸು ತಂತ್ರಗಳ ಬಗ್ಗೆ ಸಂಪೂರ್ಣವಾಗಿ ಕಲಿಯುವಿರಿ. ವೆಜ್ ರೆಸ್ಟೋರೆಂಟ್ ಬಿಸಿನೆಸ್ ಮಾಡ್ತಾ ಯಶಸ್ವಿಯಯಾಗಿರೋ ಮಾರ್ಗದರ್ಶಕರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡ್ತಾರೆ.
ನೀವು ಫುಡ್ ಬಿಸಿನೆಸ್ ಅಥವಾ ವೆಜ್ ರೆಸ್ಟೋರೆಂಟ್ ಆರಂಭಿಸಿ ಸಕ್ಸಸ್ ಆಗಬೇಕು ಅಂದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ ಮತ್ತು ಉತ್ತಮ ಆದಾಯ ಗಳಿಸುತ್ತಾ ಯಶಸ್ವಿಯಾಗಿ.
ವೆಜ್ ರೆಸ್ಟೋರೆಂಟ್ ಬಿಸಿನೆಸ್ನ ಪ್ರಾಮುಖ್ಯತೆ ಏನು? ಜಾಗತಿಕ ಮಟ್ಟದಲ್ಲಿ ಈ ಬಿಸಿನೆಸ್ ಟ್ರೆಂಡ್ ಹೇಗಿದೆ? ಈ ಕೋರ್ಸ್ನಲ್ಲಿ ಏನೇನೆಲ್ಲ ಕಲಿಬಹುದು ಅನ್ನೋದನ್ನು ತಿಳಿಯಿರಿ
ವೆಜ್ ರೆಸ್ಟೋರೆಂಟ್ ಬಿಸಿನೆಸ್ ಮಾಡಿ ಸಕ್ಸಸ್ ಆಗಿರುವ ಸಾಧಕರ ಪರಿಚಯ ಮಾಡಿಕೊಳ್ಳಿ
ವೆಜ್ ರೆಸ್ಟೋರೆಂಟ್ ಬಿಸಿನೆಸ್ ಮಾಡುವುದಕ್ಕು ಮುನ್ನ ಗ್ರೌಂಡ್ ವರ್ಕ್ ಹೇಗೆ ಮಾಡಬೇಕು? ಬಿಸಿನೆಸ್ ಪ್ಲಾನ್ ಹೇಗಿರಬೇಕು ಅನ್ನೋದನ್ನು ತಿಳಿಯಿರಿ
ವೆಜ್ ರೆಸ್ಟೋರೆಂಟ್ ಬಿಸಿನೆಸ್ಗೆ ಎಷ್ಟು ಬಂಡವಾಳ ಬೇಕಾಗುತ್ತದೆ? ರಿಜಿಸ್ಟ್ರೇಷನ್ ಮಾಡಿಸುವುದು ಹೇಗೆ ಮತ್ತು ಯಾವೆಲ್ಲ ಲೈಸೆನ್ಸ್ ಬೇಕಾಗುತ್ತದೆ ಅನ್ನೋದನ್ನು ತಿಳಿಯಿರಿ
ವೆಜ್ ರೆಸ್ಟೋರೆಂಟ್ ಬಿಸಿನೆಸ್ನ ಥೀಮ್ ಹೇಗಿರಬೇಕು? ಹೆಸರು ಹೇಗಿರಬೇಕು? ಥೀಮ್ ಬಗ್ಗೆ ಪ್ಲಾನ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ
ವೆಜ್ ರೆಸ್ಟೋರೆಂಟ್ನ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸ ಹೇಗಿರಬೇಕು? ಡೈನಿಂಗ್ ಸೆಗ್ಮೆಂಟ್ ಯಾವ ರೀತಿ ಇರಬೇಕು ಅನ್ನೋದನ್ನು ತಿಳಿಯಿರಿ
ವೆಜ್ ರೆಸ್ಟೋರೆಂಟ್ ಬಿಸಿನೆಸ್ಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳೋದು ಹೇಗೆ? ಯಾವೆಲ್ಲ ಸಿಬ್ಬಂದಿಗಳು ಮತ್ತು ಕಾರ್ಮಿಕರು ಬೇಕಾಗುತ್ತಾರೆ ಅನ್ನೋದನ್ನು ತಿಳಿಯಿರಿ
ಸಿಬ್ಬಂದಿಗಳ ಆಯ್ಕೆ ಆದ ನಂತರ ಅವರಿಗೆ ಟ್ರೈನಿಂಗ್ ನೀಡುವುದು ಹೇಗೆ? ಸಿಬ್ಬಂದಿಗಳಿಗೆ ವೇತನ ಯಾವ ರೀತಿ ಇರುತ್ತದೆ ಅನ್ನೋದನ್ನು ಈ ಮಾಡ್ಯೂಲ್ನಲ್ಲಿ ತಿಳಿಯಿರಿ
ವೆಜ್ ರೆಸ್ಟೋರೆಂಟ್ ಬಿಸಿನೆಸ್ನಲ್ಲಿ ಯಾವೆಲ್ಲ ಟೆಕ್ನಾಲಜಿಗಳನ್ನ ಬಳಸಿಕೊಳ್ಳಬಹುದು ಮತ್ತು ನೀರಿನ ನಿರ್ವಹಣೆ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ
ವೆಜ್ ರೆಸ್ಟೋರೆಂಟ್ನಲ್ಲಿ ಬಹುಮುಖ್ಯವಾಗಿರುವ ಮೆನು ಡಿಸೈನ್ ಮತ್ತು ಪ್ರೈಸಿಂಗ್ ಬಗ್ಗೆ ಕಂಪ್ಲೀಟ್ ಆಗಿ ಕಲಿತುಕೊಳ್ಳಿ
ರಾ ಮೆಟಿರಿಯಲ್ಗಳ ಸಂಗ್ರಹಣೆ ಯಾವ ರೀತಿ ಇರಬೇಕು ಮತ್ತು ತ್ಯಾಜ್ಯ ನಿರ್ವಹಣೆ ಮಾಡುವುದು ಹೇಗೆ ಎಂಬುದನ್ನು ಸಂಪೂರ್ಣವಾಗಿ ತಿಳಿಯಿರಿ
ವೆಜ್ ರೆಸ್ಟೋರೆಂಟ್ನಲ್ಲಿ ಗ್ರಾಹಕರ ಆಕರ್ಷಣೆ ಮಾಡುವುದು ಹೇಗೆ ಮತ್ತು ಯಾವೆಲ್ಲ ಸ್ಟ್ರಾಟಜಿಗಳನ್ನ ಪ್ರಯೋಗಿಸಬೇಕಾಗುತ್ತದೆ ಅನ್ನೋದನ್ನು ತಿಳಿಯಿರಿ
ವೆಜ್ ರೆಸ್ಟೋರೆಂಟ್ ಬಿಸಿನೆಸ್ನಲ್ಲಿ ಕ್ವಾಲಿಟಿ ಕಂಟ್ರೋಲ್ ಎಷ್ಟು ಮುಖ್ಯ ಮತ್ತು ಪ್ರಾಫಿಟ್ ಮಾರ್ಜಿನ್ ಲೆಕ್ಕಾಚಾರ ಮಾಡಿಕೊಳ್ಳೋದು ಹೇಗೆ ಎಂಬುದನ್ನು ತಿಳಿಯಿರಿ
ವೆಜ್ ರೆಸ್ಟೋರೆಂಟ್ ಬಿಸಿನೆಸ್ನಲ್ಲಿ ಹೋಮ್ ಡೆಲಿವರಿ ಮಾಡುವುದು ಉತ್ತಮನಾ? ಇದರಿಂದ ಬಿಸಿನೆಸ್ ಇಂಪ್ರೂವ್ ಆಗತ್ತಾ ಅನ್ನೋದನ್ನು ತಿಳಿದುಕೊಳ್ಳಿ
ವೆಜ್ ರೆಸ್ಟೋರೆಂಟ್ ಬಿಸಿನೆಸ್ನಲ್ಲಿ ಆಪರೇಷನಲ್ ಕಾಸ್ಟ್ ಅನಾಲಿಸಿಸ್ ಮಾಡುವುದು ಹೇಗೆ ಎಂಬುದನ್ನು ಎಕ್ಸ್ಪರ್ಟ್ಗಳಿಂದ ಕಲಿಯಿರಿ
ವೆಜ್ ರೆಸ್ಟೋರೆಂಟ್ ಬಿಸಿನೆಸ್ನಲ್ಲಿ ಹಣಕಾಸಿನ ನಿರ್ವಹಣೆ ಮಾಡುವುದು ಹೇಗೆ ಮತ್ತು ಅಕೌಂಟ್ ಮ್ಯಾನೇಜ್ಮೆಂಟ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ
ವೆಜ್ ರೆಸ್ಟೋರೆಂಟ್ ಬಿಸಿನೆಸ್ನಲ್ಲಿ ಎದುರಾಗುವ ಸಾಮಾನ್ಯ ಸವಾಲುಗಳೇನು ಮತ್ತು ಅದನ್ನ ಪರಿಹರಿಸಿಕೊಳ್ಳೋದು ಹೇಗೆ ಎಂಬುದನ್ನು ತಿಳಿಯಿರಿ
ವೆಜ್ ರೆಸ್ಟೋರೆಂಟ್ ಬಿಸಿನೆಸ್ಗೆ ಸರ್ಕಾರದಿಂದ ಯಾವ ರೀತಿಯ ಬೆಂಬಲವಿದೆ ಮತ್ತು ಈ ಬಿಸಿನೆಸ್ ಬಗ್ಗೆ ಮಾರ್ಗದರ್ಶಕರು ನೀಡುವ ಅಮೂಲ್ಯ ಸಲಹೆ ಏನು ಎಂದು ತಿಳಿದುಕೊಳ್ಳಿ
- ನೀವು ವೆಜ್ ರೆಸ್ಟೋರೆಂಟ್ ವ್ಯಾಪಾರವನ್ನು ಪ್ರಾರಂಭಿಸಲು ಬಯಸಿದ್ದರೆ ನೀವು ಈ ಕೋರ್ಸ್ ಪಡೆಯುವ ಮೂಲಕ ಈ ವ್ಯಾಪಾರದ ಬಗ್ಗೆ ಸಮಗ್ರ ಮಾಹಿತಿಯನ್ನು ತಿಳಿಯಬಹುದು.
- ನೀವು ವೆಜ್ ರೆಸ್ಟೋರೆಂಟ್ ಸಂಬಂಧ ಪಟ್ಟಂತೆ ಉತ್ತಮ ಲಾಭದಾಯಕ ಹೂಡಿಕೆಯನ್ನು ಮಾಡಲು ಯೋಚಿಸುತ್ತಿದ್ದರೆ ನೀವೂ ಸಹ ಈ ಕೋರ್ಸ್ ನಿಂದ ಪ್ರಯೋಜನ ಪಡೆಯಬಹುದು.
- ನೀವು ವೆಜ್ ರೆಸ್ಟೋರೆಂಟ್ ವ್ಯಾಪಾರವನ್ನು ಮಾಡಿ ಸ್ವಾವಲಂಬಿಯಾದ ಬದುಕು ಕಟ್ಟಿಕೊಳ್ಳಬೇಕು ಅಂದುಕೊಂಡಿದ್ದರೆ ನೀವೂ ಸಹ ಈ ಕೋರ್ಸ್ ನಿಂದ ಪ್ರಯೋಜನ ಪಡೆಯಬಹುದು.
- ನೀವು ಈಗಾಗಲೇ ವೆಜ್ ರೆಸ್ಟೋರೆಂಟ್ ವ್ಯಾಪಾರದಲ್ಲಿದ್ದು ನಿಮ್ಮ ವ್ಯಾಪಾರದ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಒಂದು ಮಾರ್ಗವನ್ನು ಹುಡುಕುತ್ತಿದ್ದರೆ ನೀವೂ ಕೂಡ ಈ ಕೋರ್ಸ್ ಮೂಲಕ ಉತ್ತಮ ಲಾಭವನ್ನು ಪಡೆಯಬಹುದು.
- ಬಿಸಿನೆಸ್ ಪ್ಲಾನ್, ಬಂಡವಾಳ, ಸಂಪನ್ಮೂಲಗಳು, ಮಾಲೀಕತ್ವ , ನೋಂದಣಿ ಪ್ರಕ್ರಿಯೆಗಳ ಬಗ್ಗೆ
- ರೆಸ್ಟೋರೆಂಟ್ ವಿನ್ಯಾಸ, ಪರ್ಮಿಶನ್, ಲೈಸೆನ್ಸ್
- ರೆಸ್ಟೋರೆಂಟ್ ಬಿಸಿನೆಸ್ ಗೆ ಸಂಬಂಧಪಟ್ಟಂತೆ ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ಅದರ ನಿರ್ವಹಣೆ ಬಗ್ಗೆ ಸಹ ಮಾಹಿತಿಯನ್ನು ಪಡೆಯುತ್ತೀರಿ.
- ರೆಸ್ಟೋರೆಂಟ್ ಬಿಸಿನೆಸ್ ಅಲ್ಲಿ ತಂತ್ರಜ್ಞಾನ ವನ್ನು ಹೇಗೆ ಬಳಸಿಕೊಳ್ಳಬೇಕು ಜೊತೆಗೆ ಮೆನುವನ್ನು ಹೇಗೆ ತಯಾರಿಸಬೇಕು ಎಂಬುದರ ಬಗ್ಗೆಯೂ ಸಹ ಅಗತ್ಯ ಮಾಹಿತಿಯನ್ನು ಪಡೆಯುತ್ತೀರಿ. ಇದರ ಜೊತೆಗೆ ಖರೀದಿ, ದಾಸ್ತಾನು ಮತ್ತು ತ್ಯಾಜ್ಯ ನಿರ್ವಹಣೆಯನ್ನು ಹೇಗೆ ಮಾಡಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳುತ್ತೀರಿ.
- ಗ್ರಾಹಕ ಸೇವೆಯನ್ನು ಹೇಗೆ ಒದಗಿಸಬೇಕು ಜೊತೆಗೆ ಆನ್ಲೈನ್ ಮತ್ತು ಹೋಂ ಡೆಲಿವರಿಯ ಸೇವೆಯ ಮೂಲಕ ವ್ಯವಹಾರವನ್ನು ವೃದ್ಧಿಸಬಹುದು ಎಂಬುದರ ಬಗ್ಗೆ ಸಹ ಮಾಹಿತಿಯನ್ನು ಪಡೆಯುತ್ತೀರಿ.
- ರೆಸ್ಟೋರೆಂಟ್ ಬಿಸಿನೆಸ್ ನಲ್ಲಿ ಇರುವ ಸವಾಲುಗಳು ಯಾವುವು ಮತ್ತು ಅವುಗಳನ್ನು ಸಮರ್ಥವಾಗಿ ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತೀರಿ. ಜೊತೆಗೆ ಈ ಬಿಸಿನೆಸ್ ಶುರು ಮಾಡಲು ನಿಮಗೆ ಸಿಗಬಹುದಾದ ಸರ್ಕಾರದ ಬೆಂಬಲಗಳ ಬಗ್ಗೆ ಸಹ ವಿವರವಾಗಿ ತಿಳಿಯುತ್ತೀರಿ.
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...