ಮೀನು ಮತ್ತು ಸೀಗಡಿಗಳನ್ನು ಸಾಕಣೆ ಮಾಡುವುದು ಭಾರತದಲ್ಲಿ ಲಾಭದಾಯಕ ಬಿಸಿನೆಸ್ ಆಗಿದೆ. ಹೀಗಾಗಿ ನಮ್ಮ ಈ ಸಮಗ್ರ "ಮೀನು ಮತ್ತು ಪ್ರಾನ್ಸ್ ಫಾರ್ಮಿಂಗ್ - ಫೌಂಡೇಶನ್ ಕೋರ್ಸ್" ಅನ್ನು ಆರಂಭಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ನೀವು ಮೀನು ಆಹಾರ ಮತ್ತು ನೀರಿನ ಗುಣಮಟ್ಟ ನಿರ್ವಹಣೆಯ ಕಲೆ ಮತ್ತು ವಿಜ್ಞಾನದ ಬಗ್ಗೆ ತಿಳಿದುಕೊಳ್ಳುತ್ತೀರಿ. ಈ ಕೋರ್ಸ್ ಭಾರತದಲ್ಲಿ ಸೀಗಡಿ ಮತ್ತು ಮೀನು ಸಾಕಣೆಯ ಬಗ್ಗೆ, ಸೀಗಡಿ ಕೃಷಿ ಮತ್ತು ರೋಗ ನಿಯಂತ್ರಣದಂತಹ ವಿಷಯಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ನಮ್ಮ ಹ್ಯಾಂಡ್ಸ್-ಆನ್ ವಿಧಾನವು ನಿಮಗೆ ಪ್ರಾಯೋಗಿಕ ಮತ್ತು ವಿಶ್ವಾಸಾರ್ಹ ಪರಿಹಾರಗಳನ್ನು ಒದಗಿಸುತ್ತದೆ ಮತ್ತು ಅದನ್ನು ಯಾರಾದರೂ ಸಹ ಪುನರಾವರ್ತಿಸಬಹುದಾಗಿದೆ.
ನಮ್ಮ ಈ ಕೋರ್ಸ್ ತೆಗೆದುಕೊಳ್ಳುವ ಮೂಲಕ, ನೀವು ಮಾರುಕಟ್ಟೆ ಅವಕಾಶಗಳು, ಸರ್ಕಾರದ ಯೋಜನೆಗಳು ಮತ್ತು ಭಾರತದಲ್ಲಿ ಮೀನು ಸಾಕಣೆಗೆ ಲಭ್ಯವಿರುವ ಸಬ್ಸಿಡಿಗಳ ಬಗ್ಗೆ ಕಲಿಯುವಿರಿ. ಜೊತೆಗೆ ಬೇಸಾಯಕ್ಕಾಗಿ ವಿವಿಧ ಜಾತಿಯ ಮೀನುಗಳು ಮತ್ತು ಸೀಗಡಿಗಳನ್ನು ಸಹ ನಿಮಗೆ ಪರಿಚಯಿಸಲಾಗುತ್ತದೆ. ಉದ್ಯಮದಲ್ಲಿ ಮೌಲ್ಯವರ್ಧನೆ ಮತ್ತು ಸಂಸ್ಕರಣಾ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಲು ಈ ಕೋರ್ಸ್ ನಿಮಗೆ ಸಹಾಯ ಮಾಡುತ್ತದೆ, ಯಾಕೆಂದರೆ ಇದು ಸ್ಥಿರವಾದ ಮತ್ತು ಗಣನೀಯ ಆದಾಯವನ್ನು ಗಳಿಸಲು ಅವಶ್ಯಕವಾಗಿದೆ.
ಈ ಕೋರ್ಸ್ ವೀಡಿಯೊಗಳು ನಿಮಗೆ ನಿಮ್ಮದೇ ಸ್ವಂತ ಮೀನು ಮತ್ತು ಸೀಗಡಿ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಹಂತ-ಹಂತದ ಮಾರ್ಗದರ್ಶಿಯನ್ನು ಒದಗಿಸುತ್ತದೆ. ಸ್ಥಳೀಯ ರೆಸ್ಟೊರೆಂಟ್‌ಗಳೊಂದಿಗೆ ಪಾಲುದಾರರಾಗುವ ಅಥವಾ ಹೋಮ್ ಡೆಲಿವರಿ ಸೇವೆಯನ್ನು ಒದಗಿಸುವ ಸಾಮರ್ಥ್ಯ ಸೇರಿದಂತೆ ಈ ಕ್ಷೇತ್ರದಲ್ಲಿ ಅವಕಾಶಗಳು ಹೇರಳವಾಗಿವೆ.
ಭಾರತದಲ್ಲಿ ಯಶಸ್ವಿ ಮೀನು ಮತ್ತು ಸೀಗಡಿ ಸಾಕಾಣಿಕೆ ಬಿಸಿನೆಸ್ ಅನ್ನು ನಿರ್ಮಿಸುವ ನಿಟ್ಟಿನಲ್ಲಿ ನೀವು ನಿಮ್ಮ ಮೊದಲ ಹೆಜ್ಜೆ ಇರಿಸಿ. ನಮ್ಮ ಕೋರ್ಸ್ ವೀಡಿಯೊವನ್ನು ವೀಕ್ಷಿಸಿ ಮತ್ತು ನಿಮ್ಮದೇ ಸ್ವಂತ ಬಿಸಿನೆಸ್ ಗೆ ತಕ್ಷಣವೇ ಅನ್ವಯಿಸಬಹುದಾದ ಪ್ರಾಯೋಗಿಕ ಜ್ಞಾನವನ್ನು ಪಡೆಯಿರಿ.
ಮೀನು ಮತ್ತು ಸಿಗಡಿ ಕೃಷಿ ಪರಿಚಯ
ಮೀನು ಮತ್ತು ಸಿಗಡಿ ತಳಿಗಳ ಪರಿಚಯ
ಫಿಶ್ ಫುಡ್‌ನ ಆರ್ಟ್ & ಸೈನ್ಸ್
ಮೀನು ಸಾಕಣೆ ಮತ್ತು ಸಂಸ್ಕರಣ ತಂತ್ರಜ್ಞಾನ
ಮಾರುಕಟ್ಟೆ ಅವಕಾಶ ಮತ್ತು ಮೌಲ್ಯವರ್ಧನೆ
ಪ್ರಶ್ನೋತ್ತರ
ಸರ್ಕಾರದ ಯೋಜನೆ ಮತ್ತು ಸಬ್ಸಿಡಿಗಳು

- ಅಕ್ವಾಕಲ್ಚರ್ ಇಂಡಸ್ಟ್ರಿಯಲ್ಲಿ ಲಾಭದಾಯಕ ಬಿಸಿನೆಸ್ ಮಾಡಲು ಬಯಸುವ ಉದ್ಯಮಿಗಳು
- ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
- ತಮ್ಮ ಉತ್ಪನ್ನಗಳು ಮತ್ತು ಆದಾಯದ ಸ್ಟ್ರೀಮ್‌ಗಳನ್ನು ವೈವಿಧ್ಯಗೊಳಿಸಲು ಬಯಸುವ ಫಾರ್ಮ್ ಮಾಲೀಕರು
- ಮೊದಲಿನಿಂದಲೂ ಮೀನು ಅಥವಾ ಸಿಗಡಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ಯಾರಾದರೂ
- ತಮ್ಮ ಜ್ಞಾನವನ್ನು ವಿಸ್ತರಿಸಲು ಬಯಸುವ ಅಕ್ವಾಕಲ್ಚರ್ ಉದ್ಯಮದಲ್ಲಿನ ವೃತ್ತಿಪರರು



- ಭಾರತದಲ್ಲಿ ಮೀನು ಮತ್ತು ಸೀಗಡಿ ಕೃಷಿಯ ಪ್ರಿನ್ಸಿಪಲ್ ಗಳು ಮತ್ತು ಅಭ್ಯಾಸಗಳು ಸೇರಿದಂತೆ ಜಲಚರಗಳ ಮೂಲಭೂತ ಅಂಶಗಳು
- ಸ್ಥಳ, ಹವಾಮಾನ ಮತ್ತು ಮಾರುಕಟ್ಟೆ ಬೇಡಿಕೆಯ ಆಧಾರದ ಮೇಲೆ ಮೀನು ಮತ್ತು ಸೀಗಡಿಗಳ ಅತ್ಯಂತ ಸೂಕ್ತವಾದ ತಳಿಗಳನ್ನು ಗುರುತಿಸುವುದು
- ಸೈಟ್ ಆಯ್ಕೆ, ಕೊಳದ ನಿರ್ಮಾಣ ಮತ್ತು ನೀರಿನ ನಿರ್ವಹಣೆ ಸೇರಿದಂತೆ ಸುಸ್ಥಿರ ಜಲಚರ ಸಾಕಣೆ ವ್ಯವಸ್ಥೆಯನ್ನು ಸ್ಥಾಪಿಸುವುದು
- ಆರೋಗ್ಯಕರ ಸ್ಟಾಕ್ ಅನ್ನು ಖಚಿತಪಡಿಸಿಕೊಳ್ಳಲು ಆಹಾರ ಮತ್ತು ಪೋಷಣೆ ನಿರ್ವಹಣೆ, ರೋಗ ನಿಯಂತ್ರಣ ಮತ್ತು ಜೈವಿಕ ಸುರಕ್ಷತಾ ಕ್ರಮಗಳು
- ಸ್ಥಳೀಯ ಮತ್ತು ರಫ್ತು ಮಾರುಕಟ್ಟೆಗಳು ಸೇರಿದಂತೆ ನಿಮ್ಮ ಉತ್ಪನ್ನಗಳ ಕೊಯ್ಲು, ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ತಂತ್ರಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ನಾಗರಾಜ್ ಬಿಜೆ. ಹಾಸನದ ರೈತ. ಮೀನು ಮತ್ತು ಕೋಳಿ ಸಾಕಣೆಯಲ್ಲಿ ವರ್ಷಕ್ಕೆ 20 ಲಕ್ಷ ದುಡಿಯುತ್ತಿರುವ ಸಾಧಕ. ಒಂದೇ ಜಾಗದಲ್ಲಿ ಮೀನು ಮತ್ತು ನಾಟಿ ಕೋಳಿ ಸಾಕಣೆ ಮಾಡಿ, ಬಹುರೂಪದ ಆದಾಯ ಪಡೆಯುತ್ತಿರುವ ಎಕ್ಸಪರ್ಟ್. ಕಾಟ್ಲಾ, ರೋಹು, ಅಮುರ್, ಮುರ್ರೆಲ್, ಸಿಲ್ವರ್ ಮೀನುಗಳ ಜತೆ ನಾಟಿ ಕೋಳಿ ಸಾಕಣೆಯಲ್ಲೂ ಪರಿಣಿತರಾಗಿರೋ ಸಾಧಕ.
ಹೇಮರಾಜ್ ರತ್ನಾಕರ್ ಸಾಲಿಯಾನ್, ಯಶಸ್ವಿ ಪಂಜರ ಮೀನು ಕೃಷಿಕ. ಮೀನು ಕೃಷಿ ತಂತ್ರಜ್ಞಾನದ ಬಗ್ಗೆ ರಿಸರ್ಚ್ ಮಾಡಿದ ಇವರು ಕೇಜ್ ಕಲ್ಚರ್‌ನಲ್ಲಿ ಉಪ್ಪು ನೀರಿನ ಮೀನುಗಳನ್ನು ಸಾಕಣೆ ಮಾಡ್ತಿದ್ದಾರೆ. 30ಕ್ಕೂ ಹೆಚ್ಚು ಪಂಜರದಲ್ಲಿ ಮೀನು ಕರಷಿ ಮಾಡುತ್ತಿರುವ ಇವರು, ಒಂದು ಪಂಜರದಿಂದ ವರ್ಷಕ್ಕೆ ಏನಿಲ್ಲ ಅಂದ್ರೂ ಮೂರುವರೆ ಲಕ್ಷ ಆದಾಯ ಪಡಿತಿದ್ದಾರೆ.
ಡಾ. ಮಾದೇಶ್ ಪಿ, ಮೀನು ಕೃಷಿಲಿ ಸಾಧನೆ ಮಾಡಿದ ವೈದ್ಯ. ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಮಾದೇಶ್, ಆಧುನಿಕ ತಂತ್ರಜ್ಞಾನದ ಮೀನು ಕೃಷಿಯಲ್ಲಿ ಮಾಸ್ಟರ್ ಆಗಿದ್ದಾರೆ. ಬಯೋಫ್ಲಾಕ್ ಮತ್ತು ಪಾಂಡ್ ಕಲ್ಚರ್ ಮೀನು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಮುರ್ರೇಲ್, ರೂಪ್‌ಚಂದ್, ತಿಲಾಪಿಯ, ಕಾಟ್ಲಾ, ರೋಹು, ಮೃಗಾಲ್ ಮೀನು ಕೃಷಿಯಲ್ಲಿ ಅಪಾರ ಅನುಭವ ಇವರಿಗಿದೆ.
ಪ್ರಭಾಕರ್ ಕೆ. ಹುಳಿಯಾರ್, 10 ಗುಂಟೆ ಜಾಗದಲ್ಲಿ 50 ಲಕ್ಷ ಸಂಪಾದನೆ ಮಾಡ್ತಿರುವ ಸಾಧಕ. ಹೈನು, ಜೇನು, ಮೀನು, ಕೋಳಿ, ಕುರಿ ಕಾನ್ಸೆಪ್ಟ್‌ನಲ್ಲಿಯೇ 50 ಲಕ್ಷ ದುಡಿದ ಕೃಷಿಕ. ತುಮಕೂರು ಜಿಲ್ಲೆ ಹುಳಿಯಾರ್‌ನ ತಮ್ಮ ಜಮೀನಿನಲ್ಲಿ ಮೊದಲು 4 ಗುಂಟೆ 15 ಲಕ್ಷ ಕಾನ್ಸೆಪ್ಟ್ ಮಾಡಿ ಗೆದ್ದಿದ್ರು. ಈ ವಿಶೇಷ ಸಾಧನೆಗೆ ಅನೇಕ ಪ್ರಶಸ್ತಿಗಳು ಸಿಕ್ಕಿವೆ
ಸುರೇಶ್ ಬಾಬು, ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಿರುವ ಕೃಷಿಕ. ಕೋಲಾರ ಜಿಲ್ಲೆಯ ಇವ್ರು ವೃತ್ತಿಯಲ್ಲಿ ಶಿಕ್ಷಕ. ವೃತ್ತಿ ಜತೆಯಲ್ಲಿ ಕೃಷಿಯಲ್ಲೂ ಗೆದ್ದಿರುವ ಸಾಧಕ. ನೀರಿನ ಸಮಸ್ಯೆ ಇರುವ ಪ್ರದೇಶದಲ್ಲೇ ತೋಟಗಾರಿಕೆ ಕೃಷಿ, ಹೈನು, ಜೇನು, ಮೀನು, ಕೋಳಿ ಸಾಕಣೆ ಮಾಡಿ ಯಶಸ್ವಿಯಾಗಿದ್ದಾರೆ. ತಂತ್ರಜ್ಞಾನ ಅಳವಡಿಸಿಕೊಂಡು ಗೆದ್ದ ಇವರು ಆಸಕ್ತರಿಗೆ ತರಬೇತಿ ಕೂಡ ನೀಡಿದ್ದಾರೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
Fish & Prawns Farming - Foundation Course
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...