"ಅಡೋಬ್ ಫೋಟೋಶಾಪ್: ಬಿಗಿನರ್ಸ್ ಗೈಡ್" ಕೋರ್ಸ್ ಫೋಟೋಶಾಪ್‌ನೊಂದಿಗೆ ವೃತ್ತಿ ಜೀವನ ಕಟ್ಟಿಕೊಳ್ಳುವವರಿಗೆ ಡಿಸೈನ್ ಆಗಿದೆ. ಈ ಕೋರ್ಸ್ ಗ್ರಾಫಿಕ್ ವಿನ್ಯಾಸ ಮತ್ತು ಫೋಟೋ ಎಡಿಟಿಂಗ್‌ನಲ್ಲಿ ನಿಮ್ಮ ಪ್ರಯಾಣವನ್ನು ಆರಂಭಿಸಲು ಅಗತ್ಯವಾದ ಪರಿಕರಗಳು ಮತ್ತು ತಂತ್ರಗಳನ್ನು ಪ್ರಾಕ್ಟಿಕಲ್ ಆಗಿ ಕಲಿಸುತ್ತದೆ. ನೀವು ಫೋಟೋಗಳನ್ನು ಎಡಿಟ್ ಮಾಡಲು, ಲೋಗೋಗಳನ್ನು ರಚಿಸಲು ಅಥವಾ ಪೋಸ್ಟರ್ ವಿನ್ಯಾಸಗೊಳಿಸಲು ಈ ಕೋರ್ಸ್ ನಿಮಗೆ ಸಹಾಯಕವಾಗಲಿದೆ.
ನೀವು ಅಡೋಬ್ ಫೋಟೋಶಾಪ್‌ನ ಪರಿಚಯದೊಂದಿಗೆ ಅದರ ಇಂಟರ್ಫೇಸ್ ಮತ್ತು ಮೂಲ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವ ಮೂಲಕ ಪ್ರಾರಂಭಿಸುತ್ತೀರಿ. ಹೊಸ ಪ್ರಾಜೆಕ್ಟ್‌ಗಳ ರಚನೆ, ಚಿತ್ರಗಳನ್ನು ಕ್ರಾಪ್ ಮಾಡುವುದನ್ನು ನೀವು ಕಲಿಯುವಿರಿ. ನಿಖರವಾದ ಎಡಿಟಿಂಗ್ ಗಾಗಿ ಸೆಲೆಕ್ಷನ್ ಟೂಲ್ಸ್‌ಗಳನ್ನು ಹೇಗೆ ಬಳಸುವುದು ಮತ್ತು ಸೊಗಸಾದ ಫಾಂಟ್ ಗಳು ಮತ್ತು ಎಫೆಕ್ಟ್ ಗಳನ್ನುನ್ನು ಸೇರಿಸುವುದು ಸೇರಿದಂತೆ ಟೆಕ್ಸ್ಟ್ ಬಳಕೆ ಮೊದಲಾದವುಗಳನ್ನು ಕೂಡ ಈ ಕೋರ್ಸ್ ನಿಮಗೆ ಕಲಿಸುತ್ತದೆ.
ವೃತ್ತಿಪರ-ಗುಣಮಟ್ಟದ ಫಲಿತಾಂಶಗಳಿಗಾಗಿ ಪೆನ್ ಟೂಲ್ ಮತ್ತು ಗ್ರೇಡಿಯಂಟ್ ಟೂಲ್ ನಂತಹ ವಿನ್ಯಾಸ, ಮಾಸ್ಟರ್ ಟೂಲ್, ಫಿಲ್ಟರ್‌ಗಳನ್ನು ಹೇಗೆ ಬಳಸುವುದು ಎಂಬುದನ್ನು ನೀವು ಕಂಡುಕೊಳ್ಳುವಿರಿ. ಪೋಸ್ಟರ್ ಗಳನ್ನು ವಿನ್ಯಾಸಗೊಳಿಸಲು, ಆಕರ್ಷಕ ಥಂಬ್‌ನೇಲ್ ಗಳನ್ನು ರಚಿಸಲು ಮತ್ತು ಬ್ರ್ಯಾಂಡಿಂಗ್‌ಗಾಗಿ ಲೋಗೋಗಳನ್ನು ರಚಿಸಲು ಕೂಡ ಕಲಿಯುವಿರಿ.
ಈ ಕೋರ್ಸ್ ನುರಿತ ಮೀಡಿಯಾ ಪ್ರೊಫೇಷನಲ್ ಮತ್ತು ಬಾಹುಬಲಿ ಮತ್ತು ಹುಲಿರಾಯನಂತಹ ಪ್ರಸಿದ್ಧ ಚಲನಚಿತ್ರಗಳ ಎಡಿಟರ್ ಆಗಿರುವ ಉದಯ್ ಗುರುಚರಣ್ ಅವರು ಕಲಿಸುತ್ತಾರೆ. ಉದಯಶ್ರೀ ಕ್ರಿಯೇಷನ್ಸ್ ಗಮನ ಸೆಳೆದಿರುವ ಉದಯ್ ಗುರುಚರಣ್ ಅವರಿಂದ ನೀವು ಪ್ರಾಕ್ಟಿಕಲ್ ಮತ್ತು ಅನುಸರಿಸಲು ಸುಲಭವಾದ ಮಾರ್ಗದರ್ಶನವನ್ನು ಪಡೆಯುತ್ತೀರಿ.
ಈ ಕೋರ್ಸ್ ಫೋಟೋಶಾಪ್ ಕಲಿಯಲು, ಫೋಟೋ ಎಡಿಟಿಂಗ್ ಕೌಶಲ್ಯಗಳನ್ನು ಸುಧಾರಿಸಲು ಅಥವಾ ಗ್ರಾಫಿಕ್ ವಿನ್ಯಾಸದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವವರಿಗೆ ಸೂಕ್ತವಾಗಿದೆ. ಈಗಲೇ ಕೋರ್ಸ್ ನೋಡಿ ಮತ್ತು ಫೋಟೋಶಾಪ್ ನಲ್ಲಿ ಎಕ್ಸ್ ಪರ್ಟ್ ಆಗುವತ್ತ ಮೊದಲ ಹೆಜ್ಜೆ ಇರಿಸಿ!
ಈ ಮಾಡ್ಯೂಲ್ ನಲ್ಲಿ ಫೋಟೋಶಾಪ್ ಅಂದರೇನು, ಅದರ ಮಹತ್ವ ಏನು ಮತ್ತು ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುತ್ತೀರಿ
ಈ ಮಾಡ್ಯೂಲ್ ನಲ್ಲಿ ಈ ಕೋರ್ಸ್‌ನಲ್ಲಿ ನಿಮ್ಮನ್ನು ಮಾರ್ಗದರ್ಶನ ಮಾಡುವ ತರಬೇತುದಾರರ ಬಗ್ಗೆ ಮಾಹಿತಿ ಮತ್ತು ಅವರ ಅನುಭವ ಮತ್ತು ಕೋರ್ಸ್ ಗೆ ಅವರು ಏಕೆ ಸೂಕ್ತ ಅನ್ನುವುದನ್ನು ತಿಳಿದುಕೊಳ್ಳುತ್ತೀರಿ
ಈ ಮಾಡ್ಯೂಲ್ ನಲ್ಲಿ ಅಡೋಬ್ ಫೋಟೋಶಾಪ್ ಸಾಫ್ಟ್‌ವೇರ್ ಡೌನ್ ಲೋಡ್, ಮತ್ತು ಇನ್ಸ್ಟಾಲ್ ಮಾಡುವ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಅಡೋಬ್ ಫೋಟೋಶಾಪ್ ಸಾಫ್ಟ್‌ವೇರ್ ನ ಕಂಪ್ಲೀಟ್ ಲೇಔಟ್ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಪ್ರಾಜೆಕ್ಟ್ ಕ್ರಿಯೇಟ್ ಮಾಡುವುದು, ರೆಸಲ್ಯೂಶನ್ ಪ್ರಾಮುಖ್ಯತೆ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಟೂಲ್ಸ್ ಗಳ ಆಯ್ಕೆ, ಇಮೇಜ್ ಇಂಪೋರ್ಟ್, ಎಕ್ಸ್ಫೋಟ್, ಲೇಯರ್ ಕ್ರಿಯೇಟ್ ಮಾಡುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಸ್ಮಾರ್ಟ್ ಅಬ್ಜೆಕ್ಟ್, ಬ್ರೌಸ್ ಇನ್ ಬ್ರಿಡ್ಜ್ ಮೊದಲಾದವುಗಳ ಬಳಕೆಯ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಎರಡು ವಿಧಾನದಲ್ಲಿ ಕ್ರಾಫ್ ಮಾಡುವುದು, ರೆಗ್ಯುಲರ್ ಮಾರ್ಕೀ ಟೂಲ್ ಬಳಕೆ ಮಾಡುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಫೋಟೋಶಾಪ್ ಮೂಲಕ ಪ್ಯಾಚ್ ಟೂಲ್ಸ್ ಮತ್ತು ಸಲೆಕ್ಷನ್ ಟೂಲ್ಸ್ ಬಳಿಸಿ ಫೋಟೋ ರೀಟಚ್ ಮಾಡುವುದನ್ನು ಪ್ರಾಕ್ಟಿಕಲ್ ಆಗಿ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಫೋಟೋ ಗಳ ಕಲರ್ ಕರೆಕ್ಷನ್, ಫೋಟೋಗಳನ್ನ ಬ್ಲ್ಯಾಕ್ & ವೈಟ್ ಮಾಡುವುದು ಅಥವಾ ಬ್ಲ್ಯಾಕ್ & ವೈಟ್ ಫೋಟೋಗಳನ್ನ ಕಲರ್ ಮಾಡುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಫೋಟೋ ಬ್ಯಾಗ್ರೌಂಡ್ ಚೇಂಜ್ ಮಾಡೊ ಕಲರ್ ಹಾಕುವುದು ಮತ್ತು ಟೆಕ್ಸ್ಟ್ ಗಳಿಗೆ ಕಲರ್ ಫಿಲ್ ಮಾಡುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಫೋಟೋಗಳನ್ನು ಡಿಸ್ಯಾಚುರೇಟ್ ಮತ್ತು ಸ್ಯಾಚುರೇಟ್ ಮಾಡುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಆಟೋ ಕಲರ್ ಟೋನ್ ಗಳನ್ನು ಬಳಸುವುದನ್ನು, ಇಮೇಜ್ ಸೈಜ್ ಗಳನ್ನು ಚೇಂಜ್ ಮಾಡುವುದನ್ನು ಪ್ರಾಕ್ಟಿಕಲ್ ಆಗಿ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಡಿಸೈನ್ ಗಳಿಗೆ ಟೆಕ್ಸ್ಟ್ ಗಳ ಬಳಕೆ, ಟೆಕ್ಸ್ಟ್ ಗಳ ಫಾಂಟ್ ಮತ್ತು ಕಲರ್ ಬದಲಾಯಿಸುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಲೋಗೋ ಎಂದರೇನು? ಲೋಗೋ ಮಹತ್ವ, ವಾರ್ಮರ್ ಟೋನ್ ಮತ್ತು ಕೂಲರ್ ಟೋನ್ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಲೋಗೋ ಡಿಸೈನ್ ಮಾಡುವುದನ್ನು, ಬೇಕಾಗುವ ಟೂಲ್ಸ್, ಕಲರ್ ಸೆಲೆಕ್ಷನ್ ಮೊದಲಾದವುಗಳನ್ನು ಪ್ರಾಕ್ಟಿಕಲ್ ಆಗಿ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಆಕರ್ಷಕ ಥಂಬ್ ನೇಲ್ ಗಳನ್ನು ಡಿಸೈನ್, ಕಲರ್ ಕಾಂಬಿನೇಷನ್ ಮೊದಲಾದವುಗಳನ್ನು ಪ್ರಾಕ್ಟಿಕಲ್ ಆಗಿ ಕಜಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಪೋಸ್ಟರ್ ಡಿಸೈನ್ ಮಾಡುವುವ ತಂತ್ರಗಳನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಿಗೆ ಪೋಸ್ಟರ್ ಗಳನ್ನು ಡಿಸೈನ್ ಮಾಡುವುದನ್ನು ಪ್ರಾಕ್ಟಿಕಲ್ ಆಗಿ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಫೋಟೋಶಾಪ್ ಕ್ರೇತ್ರದಲ್ಲಿರುವ ಅವಕಾಶಗಳ ಬಗ್ಗೆ ತಿಳಿದುಕೊಳ್ಳುತ್ತೀರಿ
- ಗ್ರಾಫಿಕ್ ಡಿಸೈನ್ ಕಲಿಯಲು ಬಯಸುವ ಆರಂಭಿಕರು
- ಕಂಟೆಂಟ್ ಕ್ರಿಯೇಟರ್‌ಗಳು
- ಫ್ರೀಲ್ಯಾನ್ಸರ್
- ಲೋಗೋಗಳು, ಪೋಸ್ಟರ್‌ಗಳು ಮತ್ತು ಇತರ ವಿಡಿಯೋ ಕಂಟೆಂಟ್ ರಚಿಸಲು ಬಯಸುವವರು
- ತಮ್ಮ ಫೋಟೋ ಎಡಿಟಿಂಗ್ ಕೌಶಲ್ಯಗಳನ್ನು ಸುಧಾರಿಸಲು ಬಯಸುವ ವಿದ್ಯಾರ್ಥಿಗಳು ಮತ್ತು ಹವ್ಯಾಸಿಗಳು


- ಅಡೋಬ್ ಫೋಟೋಶಾಪ್ ಮತ್ತು ಅದರ ಅಗತ್ಯ ಟೂಲ್ಸ್‌ಗಳ ಪರಿಚಯ
- ನಿಖರವಾದ ಫೋಟೋ ಎಡಿಟಿಂಗ್‌ಗಾಗಿ ಬೇಸಿಕ್ ಮತ್ತು ಅಡ್ವಾನ್ಸ್ಡ್‌ಸೆಲೆಕ್ಷನ್ ಟೂಲ್ಸ್
- ಟೆಕ್ಟ್ಸ್‌ಗಳನ್ನು ಬಳಸಲು, ನಿಮ್ಮ ವಿನ್ಯಾಸಗಳಿಗೆ ಬೇಕಾಗುವ ಕ್ರಿಯೇಟಿವ್ ಫಾಂಟ್
- ವೃತ್ತಿಪರ-ಗುಣಮಟ್ಟದ ವಿನ್ಯಾಸಗಳನ್ನು ರಚಿಸಲು ಪೆನ್ ಟೂಲ್, ಗ್ರೇಡಿಯಂಟ್ ಟೂಲ್ ಮತ್ತು ಫಿಲ್ಟರ್
- ಪ್ರಾಜೆಕ್ಟ್ ಎಕ್ಸ್ಪೋರ್ಟ್ ಮತ್ತು ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆಎಕ್ಸ್ಪೋರ್ಟ್

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.