“ಅಡೋಬ್ ಪ್ರೀಮಿಯರ್ ಪ್ರೋ - ಬಿಗಿನರ್ಸ್ ಗೆ ವಿಡಿಯೋ ಎಡಿಟಿಂಗ್” ಕೋರ್ಸ್, ಅತ್ಯುತ್ತಮ ವಿಡಿಯೋ ಎಡಿಟಿಂಗ್ ಸಾಫ್ಟ್ ವೇರ್ ಅಡೋಬ್ ಪ್ರೀಮಿಯರ್ ಪ್ರೋ ಬಳಸಿಕೊಂಡು ವಿಡಿಯೋ ಎಡಿಟಿಂಗ್ ಕಲಿತು ಪರಿಣಿತರಾಗಬೇಕು ಅನ್ನುವವರಿಗಾಗಿ ಡಿಸೈನ್ ಮಾಡಲಾಗಿದೆ. ಚಿತ್ರೀಕರಿಸಿದ ದೃಶ್ಯಗಳನ್ನು ವೀಕ್ಷಕರು ನೋಡುವಂತೆ ಒಂದು ಉತ್ತಮ ವಿಡೀಯೋ ಕಂಟೆಂಟ್ ಆಗಿ ಎಡಿಟ್ ಮಾಡಲು ಅಗತ್ಯವಾದ ಎಲ್ಲಾ ಪ್ರಾಕ್ಟಿಕಲ್ ಕಲಿಕೆಯನ್ನು ಇದು ಒಳಗೊಂಡಿದೆ.
ವೃತ್ತಿಪರ ಸಾಮರ್ಥ್ಯಗಳಿಗೆ ಹೆಸರುವಾಸಿಯಾದ ಪವರ್ ಫುಲ್ ವೀಡಿಯೊ ಎಡಿಟಿಂಗ್ ಸಾಫ್ಟ್ ವೇರ್ ಆದ ಅಡೋಬ್ ಪ್ರೀಮಿಯರ್ ಬಗ್ಗೆ ಇಲ್ಲಿ ಸಂಪೂರ್ಣ ಪರಿಚಯ ಮಾಡಲಾಗುತ್ತದೆ. ಎಡಿಟಿಂಗ್ ಮಾಡ್ಯೂಲ್ ನೊಂದಿಗೆ ಆರಂಭಿಸುವುದರಿಂದ ವಿಡಿಯೋ ಎಡಿಟಿಂಗ್ ನ ಬೇಸಿಕ್ಸ್ ಇಲ್ಲಿ ತುಂಬಾ ಸರಳವಾಗಿರುತ್ತದೆ. ಮತ್ತು ಇದು ಬಿಗಿನರ್ಸ್ ಗೆ ಆತ್ಮ ವಿಶ್ವಾಸದಿಂದ ಆರಂಭಿಸಲು ಅನುವು ಮಾಡಿಕೊಡುತ್ತದೆ. ಕೋರ್ಸ್ ಮುಂದುವರೆದಂತೆ, ವಿಡೀಯೋಗಳನ್ನು ನಿಮ್ಮ ಸ್ಟೈಲ್ ಗೆ ಅನುಗುಣವಾಗಿ ಎಡಿಟ್ ಮಾಡೋ ಟೆಕ್ನಿಕ್ ಗಳನ್ನು, ಮ್ಯೂಸಿಕ್, ಸೌಂಡ್ ಎಫೆಕ್ಟ್ , ಟೂಲ್ಸ್ ಮತ್ತು ಶಾರ್ಟ್ ಕಟ್ ಗಳನ್ನು ಬಳಸುವುದನ್ನು ಕಲಿಯುತ್ತೀರಿ.
ಅಲ್ಲದೆ ಈ ಕೋರ್ಸ್, ವಿಡಿಯೋ ಎಡಿಟಿಂಗ್ ಮಾಡುವಾಗ ವಿಡೀಯೋ ಗಳಿಗೆ ಟೆಕ್ಸ್ಟ್ ಗಳನ್ನು ಸೇರಿಸುವುದು, ಇನ್ಫೋಗ್ರಾಪಿಕ್ಸ್ ಹಾಕಿ ಮಾಹಿತಿಯುಕ್ತ ವಿಡಿಯೋಗಳನ್ನು ಸಿದ್ಧಪಡಿಸುವುದನ್ನು ಕಲಿಸುತ್ತದೆ. ಕೋರ್ಸ್ ಪೂರ್ಣಗೊಳಿಸುವ ವೇಳೆಗೆ ನೀವು ಆನ್ ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಹಾಕೋ ವಿಡೀಯೋಗಳನ್ನು ಸಿದ್ಧಪಡಿಸುವ ಟೆಕ್ನಿಕ್ ಗಳನ್ನು ಕರಗತ ಮಾಡಿಕೊಂಡಿರುತ್ತೀರಿ. ಇದಷ್ಟೇ ಅಲ್ಲದೆ ಕಂಟೆಂಟ್ ಕ್ರಿಯೇಟರ್ ಗಳಿಗೆ ಬೇಕಾದ ಯೂಟ್ಯೂಬ್ ಶಾರ್ಟ್ಸ್, ಇನ್ಸ್ಟಾಗ್ರಾಂ ರೀಲ್ಸ್ ಗೆ 9:16 ಮತ್ತು 1:1 ರೇಶಿಯೋದ ವೀಡಿಯೋಗಳನ್ನು ಕ್ರಿಯೇಟ್ ಮಾಡುವ ಬಗ್ಗೆ ಪ್ರಾಕ್ಟಿಕಲ್ ಕಲಿಕೆ ಇದೆ.
ಬಾಹುಬಲಿ (ಕನ್ನಡ ಆವೃತ್ತಿ) ಮತ್ತು ಹುಲಿರಾಯಾಗಳಂತಹ ಕನ್ನಡ ಚಲನಚಿತ್ರಗಳನ್ನು ಅದ್ಭುತವಾಗಿ ಎಡಿಟಿಂಗ್ ಮಾಡಿ ಹೆಸರು ಸಂಪಾದಿಸಿರೋ ಅನುಭವಿ ಎಡಿಟರ್ ಉದಯ್ ಗುರುಚರಣ್ ಅವರ ಮಾರ್ಗದರ್ಶನದಲ್ಲಿ ಈ ಕೋರ್ಸ್ ಪ್ರೊಫೆಶನಲ್ ಜ್ಞಾನವನ್ನು ಒದಗಿಸುತ್ತದೆ. ವಿವಿಧ ರೀತಿಯ ಮಾಧ್ಯಮಗಳಲ್ಲಿ ಕೆಲಸ ಮತ್ತು ಸ್ಟೋರಿ ಟೆಲ್ಲಿಂಗ್ ನಲ್ಲಿ ಅನುಭವ ಇರೋ ಉದಯ್ ಇಲ್ಲಿ ಪ್ರಾಕ್ಟಿಕಲ್ ಜ್ಞಾನ ವನ್ನು ಹಂಚಿಕೊಂಡಿದ್ದಾರೆ. ವೀಡಿಯೊ ಎಡಿಟಿಂಗ್ ಕಲಿತು ಆತ್ಮವಿಶ್ವಾಸದಿಂದ ವೃತ್ತಿಜೀವನವನ್ನು ನಿರ್ವಹಿಸಲು ಬಯಸುವವರಿಗೆ ಇದು ಸಹಾಯ ಮಾಡುತ್ತದೆ.
ಈ ಕೋರ್ಸ್ ಹೊಸಬರನ್ನು ಕೂಡ ಅಡೋಬ್ ಪ್ರೀಮಿಯರ್ ಪ್ರೊ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುತ್ತದೆ ಹಾಗೂ ವೀಡಿಯೊ ಎಡಿಟಿಂಗ್ ಸಾಫ್ಟ್‌ವೇರ್‌ನಲ್ಲಿ ಪರಿಣಿತರಾಗಲು ಅವರಿಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಕ್ರಿಯೇಟಿವ್ ಇಂಡಸ್ಟ್ರಿಯಲ್ಲಿ ವೃತ್ತಿಜೀವನ ನಿರ್ವಹಿಸುವುದಕ್ಕೆ ಭದ್ರ ಬುನಾದಿ ಹಾಕುತ್ತದೆ.
ಈ ಮಾಡ್ಯೂಲ್ ನಲ್ಲಿ ಎಡಿಟಿಂಗ್ ಪಾಮುಖ್ಯತೆ, ಅಡೋಬ್ ಪ್ರೀಮಿಯರ್ ಪ್ರೊ ಸಾಫ್ಟ್‌ವೇರ್ ನ ಪ್ರಾಮುಖ್ಯತೆ ಮತ್ತು ಕೋರ್ಸ್ ಉದ್ದೇಶಗಳು ಹಾಗು ಇತರ ಬೇಸಿಕ್ ವಿಚಾರಗಳನ್ನು ತಿಳಿದುಕೊಳ್ಳುತ್ತೀರಿ
ಈ ಮಾಡ್ಯೂಲ್ ನಲ್ಲಿ ಈ ಕೋರ್ಸ್‌ನಲ್ಲಿ ನಿಮ್ಮನ್ನು ಮಾರ್ಗದರ್ಶನ ಮಾಡುವ ತರಬೇತುದಾರರ ಬಗ್ಗೆ ಮಾಹಿತಿ ಮತ್ತು ಅವರ ಅನುಭವ, ಪರಿಣತಿ ಮತ್ತು ಕೋರ್ಸ್‌ಗೆ ಅವರು ಏಕೆ ಸೂಕ್ತ ಅನ್ನುವುದನ್ನು ತಿಳಿದುಕೊಳ್ಳಿ
ಈ ಮಾಡ್ಯೂಲ್ ನಲ್ಲಿ ಅಡೋಬ್ ಪ್ರೀಮಿಯರ್ ಪ್ರೊ ಸಾಫ್ಟ್ ವೇರ್ ನಲ್ಲಿರುವ ಟೂಲ್ಸ್, ಅದನ್ನು ಬಳಕೆ ಮಾಡುವ ವಿಧಾನ, ವಿಂಡೋ ಸಿಸ್ಟಮ್ ಲೇಔಟ್, ಎಕ್ಸ್ಪೋರ್ಟ್ ಮೊದಲಾದವುಗಳ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಸೀಕ್ವೆನ್ಸ್ ಕ್ರಿಯೇಷನ್, ಟೈಮ್ ಲೈನ್ ಕ್ರಿಯೇಷನ್ , ಕಂಟೆಂಟ್ ವಿಂಗಡನೆ , ಪ್ಯಾನಲ್ಸ್ ಕೆಲಸ ಮೊದಲಾವುದಗಳನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಇಂಪೋರ್ಟ್ ಮಾಡಿದ ಕಂಟೆಂಟ್ ಅನ್ನು ಎಡಿಟ್ ಮಾಡುವುದು ಮತ್ತು ಬೇಸಿಕ್ ಟೂಲ್ಸ್ ಹೇಗೆ ಮಾಡುತ್ತವೆ ಅನ್ನುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಬೇರೆ ಬೇರೆ ವಿಡಿಯೋಗಳನ್ನು ಪಕ್ಕ ಪಕ್ಕ ಜೋಡಿಸುವುದು, ಒಂದೇ ವಿಡಿಯೋ ಆಗಿ ಕರ್ನರ್ಟ್ ಮಾಡುವುದು ಮತ್ತು ಇತರ ಬೇಸಿಕ್ ಟೂಲ್ಸ್ ಗಳ ಬಳಕೆ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಇಂಪೋರ್ಟ್ ಮಾಡುವುದಕ್ಕಿರುವ ಇನ್ನೊಂದು ಮೆಥಡ್ ಮತ್ತು ಎಡಿಟಿಂಗ್ ಮಾಡುವುದಕ್ಕೆ ಬಳಕೆ ಮಾಡಬಹುದಾದ ಬೇರೆ ಟೂಲ್ಸ್ ಮತ್ತು ಅವುಗಳ ಶಾರ್ಟ್ ಕಟ್ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಎಡಿಟ್ ಮಾಡಿದ ವಿಡಿಯೋಗಳಿಗೆ ಮ್ಯೂಸಿಕ್ ಹಾಕುವುದು ಮತ್ತು ವಿಡಿಯೋ ಮಧ್ಯೆ ಟ್ರಾನ್ಸಿಷನ್ ಬಳಸುವ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಎಡಿಟ್ ಮಾಡಿದ ವಿಡಿಯೋಗಳಿ ಆಡಿಯೋ ಸೆಟ್ ಮಾಡುವುದು, ಲೋಗೋ ಮತ್ತು ಗ್ರಾಫಿಕ್ಸ್ ಗಳನ್ನು ಸೇರಿಸುವ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಎಡಿಟ್ ಮಾಡಿದ ವಿಡಿಯೋಗಳಿಗೆ ಎಫೆಕ್ಟ್ಸ್ ಬಳಸುವುದು, ಕೀಯಿಂಗ್ ಮತ್ತು ಕಲರ್ ಕರೆಕ್ಷನ್ ಮಾಡುವ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ವೀಡಿಯೋ ಗಳು ಮಾಹಿತಿಯುಕ್ತವಾಗಿ ಹಾಗೂ ನೋಡುಗರನ್ನು ಎಂಗೇಜ್ ಮಾಡುವಂತೆ ಮಾಡಲು ಬೇಕಾದ ಟೆಕ್ಸ್ಟ್ ಟೆಂಪ್ಲೇಟ್ಸ್ ಹಾಕುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಅಂತಿಮ ಹಂತವಾದ ವಿಡಿಯೋ ಎಕ್ಸ್ ಪೋರ್ಟ್ ಮೆಥಡ್, ಪ್ರಿವ್ಯೂ ಮತ್ತು ರೆಂಡರಿಂಗ್ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ದೊಡ್ಡ ದೊಡ್ಡ ವಿಡಿಯೋಗಳು, ಅಂದರೆ ಯೂಟ್ಯೂಬ್ ಅಥವಾ ಫೇಸ್ ಬುಕ್ ಗಳಿಗೆ ಹಾಕುವ ವಿಡಿಯೋಗಳನ್ನು ಎಡಿಟ್ ಮಾಡುವ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ದೊಡ್ಡ ದೊಡ್ಡ ವಿಡಿಯೋಗಳು, ಅಂದರೆ ಯೂಟ್ಯೂಬ್ ಅಥವಾ ಫೇಸ್ ಬುಕ್ ಗಳಿಗೆ ಹಾಕುವ ವಿಡಿಯೋಗಳನ್ನು ಎಕ್ಸ್‌ಪೋರ್ಟ್ ಮಾಡುವ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಮೊಬೈಲ್ ಫ್ರೆಂಡ್ಲಿ ಯೂಟ್ಯೂಬ್ ಶಾರ್ಟ್ಸ್ ಮತ್ತು ಇನ್‌ಸ್ಟಾಗ್ರಾಂ ರೀಲ್ ಗಳಿಗೆ 9:16 ರೇಶಿಯೋದಲ್ಲಿ ವೀಡಿಯೊಗಳನ್ನು ಎಡಿಟ್ ಮಾಡುವ ಟೆಕ್ನಿಕ್ ಗಳನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಮೊಬೈಲ್ ಫ್ರೆಂಡ್ಲಿ ಯೂಟ್ಯೂಬ್ ಶಾರ್ಟ್ಸ್ ಮತ್ತು ಇನ್‌ಸ್ಟಾಗ್ರಾಂ ರೀಲ್ ಗಳಿಗೆ 9:16 ರೇಶಿಯೋದಲ್ಲಿ ವೀಡಿಯೊಗಳನ್ನು ಎಡಿಟ್ ಮಾಡುವ ಟೆಕ್ನಿಕ್ ಗಳನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ವೀಡಿಯೊ ಎಡಿಟಿಂಗ್ ಕ್ಷೇತ್ರದಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳುವುದಕ್ಕಿರುವ ಅಪಾರ ಅವಕಾಶಗಳ ಬಗ್ಗೆ ತಿಳಿದುಕೊಳ್ಳಿ
ಈ ಮಾಡ್ಯೂಲ್ ನಲ್ಲಿ ಎಡಿಟಿಂಗ್ ವೇಳೆ ಮಾಡಲೇಬಾರದ ತಪ್ಪುಗಳನ್ನು ಮತ್ತು ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳನ್ನು ತಿಳಿದುಕೊಳ್ಳುತ್ತೀರಿ
- ಹೊಸದಾಗಿ ವಿಡಿಯೋ ಎಡಿಟಿಂಗ್ ಕಲಿಯುವವರು
- ಮಹತ್ವಾಕಾಂಕ್ಷೆಯ ಕಂಟೆಂಟ್ ಕ್ರಿಯೇಟರ್ಸ್
- ಮಾಧ್ಯಮದ ವಿದ್ಯಾರ್ಥಿಗಳು ಮತ್ತು ಫ್ರೀ ಲಾನ್ಸರ್ ಗಳು
- ವೀಡಿಯೊ ಕಂಟೆಂಟ್ ಮೂಲಕ ತಮ್ಮ ಬಿಸಿನೆಸ್ ಬೆಳೆಸಲು ಬಯಸುವ ಉದ್ಯಮಿಗಳು
- ವಿಡಿಯೋ ಎಡಿಟಿಂಗ್ ನಲ್ಲಿ ಕರಿಯರ್ ಆರಂಭಿಸಲು ಬಯಸುವವರು


- ವೀಡಿಯೋ ಎಡಿಟಿಂಗ್ ನ ಬೇಸಿಕ್ ಅಂಶಗಳು
- ಕ್ರಿಯೇಟಿವ್ ಸ್ಟೈಲ್ ಹಾಗೂ ಎಫೆಕ್ಟ್ಸ್ ಸೇರಿಸುವುದು
- ಗ್ರೌಂಡ್ ಮ್ಯೂಸಿಕ್, ಸೌಂಡ್ ಎಫೆಕ್ಟ್ಸ್, ವಾಯ್ಸ್ ಓವರ್ ಸೇರಿಸುವುದು
- ಯೂಟ್ಯೂಬ್ ಶಾರ್ಟ್ಸ್ ಹಾಗೂ ಇನ್ಸ್ಟಾಗ್ರಾಂ ಪೋಸ್ಟ್ ಗಳ ಎಡಿಟಿಂಗ್
- ಇಂಡಸ್ಟ್ರಿ ಬಗೆಗಿನ ಟಿಪ್ಸ್ ಹಾಗೂ ಕರಿಯರ್ ಮಾರ್ಗದರ್ಶನ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.