ನಿಮ್ಮ ಆರ್ಥಿಕ ಭವಿಷ್ಯವನ್ನು ಭದ್ರಗೊಳಿಸಲು ಹೂಡಿಕೆ ಮಾಡಲು ಆರಂಭಿಸುತ್ತೀರಾ? ಭವಿಷ್ಯದಲ್ಲಿ ಉತ್ತಮ ಮನೆ, ಕಾರು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಉಳಿಸಬೇಕೇ..? ಹಾಗಾದರೆ ಮ್ಯೂಚುವಲ್ ಫಂಡ್‌ಗಳು ನಿಮಗೆ ಉತ್ತಮ ಆಯ್ಕೆಯಾಗಿದೆ. ಹೌದು ನೀವು ಸಾಂಪ್ರದಾಯಿಕ ರೀತಿಯಲ್ಲಿ ನಿಮ್ಮ ಹಣವನ್ನು ಉಳಿಸುತ್ತಿದ್ದರೆ ನಿಮ್ಮ ಹಣವನ್ನು ಹೆಚ್ಚಿಸಲು ಅಸಾಧ್ಯವಾಗಬಹುದು. ಅದೇ ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣವನ್ನು ನಿಮಗಾಗಿ ದುಡಿಸುವಂತೆ ಮಾಡಿ ಹೆಚ್ಚು ಗಳಿಸಬಹುದು. ಆದರೆ, ಅದು ಸಾಧ್ಯವಾಗೋದು ಮ್ಯೂಚುವಲ್ ಫಂಡ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಾಗ ಮಾತ್ರ. ಅದಕ್ಕಾಗಿಯೇ ನಾವು ನಿಮಗೆ ಮ್ಯೂಚುಯಲ್ ಫಂಡ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಈ “ಮ್ಯೂಚುಯಲ್ ಫಂಡ್ ಕೋರ್ಸ್” ಡಿಸೈನ್ ಮಾಡಿದ್ದೇವೆ.
ಈ ಕೋರ್ಸ್‌ನಲ್ಲಿ, ಪತ್ರಕರ್ತ ಮತ್ತು ಪರ್ಸನಲ್ ಫಿನಾನ್ಸ್ ಎಕ್ಸ್ಪರ್ಟ್ ಅಭಿಷೇಕ್ ರಾಮಪ್ಪ ಅವರು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಪ್ರಾಕ್ಟಿಕಲ್ ವೀಡಿಯೊಗಳ ರೂಪದಲ್ಲಿ 20 ಮಾಡ್ಯೂಲ್‌ಗಳ ಮೂಲಕ ಮ್ಯೂಚುವಲ್ ಫಂಡ್‌ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡುತ್ತಾರೆ. ಅವರು ಹೇಳುವುದನ್ನು ನೀವು ಎಚ್ಚರಿಕೆಯಿಂದ ಆಲಿಸಿದರೆ, ಈ ಕೋರ್ಸ್ ನೋಡಿದ ನಂತರ ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ಉತ್ತಮ ಹೂಡಿಕೆದಾರರಾಗುತ್ತೀರಿ.
ಈ ಕೋರ್ಸ್ ಮೂಲಕ ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಏಕೆ ಹೂಡಿಕೆ ಮಾಡಬೇಕು? ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮವೇ? ಮ್ಯೂಚುವಲ್ ಫಂಡ್ ಹೌಸ್ ಹೇಗೆ ಕೆಲಸ ಮಾಡುತ್ತದೆ? ಮ್ಯೂಚುವಲ್ ಫಂಡ್ ಹೌಸ್ ಮೋಸ ಮಾಡಿದರೆ ಯಾರನ್ನು ಸಂಪರ್ಕಿಸಬೇಕು? ಯಾವ ರೀತಿಯ ಮ್ಯೂಚುಯಲ್ ಫಂಡ್ಸ್ ನೀವು ಹೂಡಿಕೆ ಮಾಡಿದರೆ ಉತ್ತಮ ಲಾಭವನ್ನು ಪಡೆಯಬಹುದು ಮತ್ತು ಈ ರೀತಿಯ ಅನೇಕ ವಿಷಯಗಳನ್ನು ನೀವು ತಿಳಿದುಕೊಳ್ಳುತ್ತೀರಿ.
ಅಲ್ಲದೆ, ರೆಗ್ಯುಲರ್ ಮತ್ತು ಡೈರೆಕ್ಟ್ ಮ್ಯೂಚುವಲ್ ಫಂಡ್‌ಗಳು ಯಾವುವು? SIP ಎಂದರೇನು? ಸ್ಟೆಪ್ ಅಪ್ SIP ಎಂದರೇನು? ಲಂಪ್ಸಮ್ ಹೂಡಿಕೆ ಎಂದರೇನು? ಯಾವ ರೀತಿಯ ಹೂಡಿಕೆಯನ್ನು ಆಯ್ಕೆ ಮಾಡಬಹುದು? ಯಾವಾಗ ಮತ್ತು ಎಷ್ಟು ಹಣವನ್ನು ಹೂಡಿಕೆ ಮಾಡುವ ಮೂಲಕ ಎಷ್ಟು ಹಣ ಗಳಿಸಬಹುದು ಎಂಬ ತಿಳುವಳಿಕೆಯನ್ನು ಕೂಡ ನೀವು ಪಡೆಯುತ್ತೀರಿ.ಅಲ್ಲದೆ ಪ್ರಾಕ್ಟಿಕಲ್ ಆಗಿ ಮ್ಯೂಚುವಲ್ ಫಂಡ್ ಅಕೌಂಟ್ ಹೇಗೆ ರಚಿಸುವುದು? ಹೇಗೆ ಹೂಡಿಕೆ ಮಾಡುವುದು? ಕಾಸ್ಟ್ ರೇಶಿಯೋ ಏನು? ಯಾವಾಗ ಎಕ್ಸಿಟ್ ಆಗಬೇಕು? ಯಾವಾಗ ಹಣವನ್ನು ಹಿಂಪಡೆಯಬೇಕು? ಎಕ್ಸಿಟ್ ಲೋಡ್ ಎಷ್ಟು? ಮೊದಲಾದವುಗಳನ್ನು ನೀವು ನಮ್ಮ ಮಾರ್ಗದರ್ಶಕರಿಂದ ಕಲಿಯುವಿರಿ.
ಪ್ರಾಕ್ಟಿಕಲ್ ವೀಡಿಯೊಗಳ ರೂಪದಲ್ಲಿ ನಮ್ಮ ತಜ್ಞರಿಂದ ಅನೇಕ ವಿಷಯಗಳನ್ನು ಕಲಿಯಲು ಈ ಉತ್ತಮ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ಕಂಪ್ಲೀಟ್ ಕೋರ್ಸ್ ವೀಕ್ಷಿಸಿ. ಮ್ಯೂಚುವಲ್ ಫಂಡ್‌ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಮತ್ತು ನಿಮ್ಮ ಹೂಡಿಕೆಯ ಪ್ರಯಾಣ ಆರಂಭಿಸಿ.
ಮ್ಯೂಚುಯಲ್ ಫಂಡ್ ಗಳು ಎಂದರೇನು ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ಸಮಗ್ರವಾದ ಪರಿಚಯ ಈ ಮಾಡ್ಯೂಲ್ ನಲ್ಲಿ ಸಿಗುತ್ತದೆ
ಮ್ಯೂಚುಯಲ್ ಫಂಡ್ ಗಳು ಮತ್ತು ಸ್ಟಾಕ್ ಗಳ ನಡುವಿನ ವ್ಯತ್ಯಾಸ, ಅನುಕೂಲಗಳು ಮತ್ತು ಅನಾನುಕೂಲಗಳ ವಿವರವಾದ ಹೋಲಿಕೆಯನ್ನು ಈ ಮಾಡ್ಯೂಲ್ ನಲ್ಲಿ ತಿಳಿಯುತ್ತೀರಿ
ಮ್ಯೂಚುವಲ್ ಫಂಡ್ ಗಳು ಹಣವನ್ನು ಹೇಗೆ ಬೆಳೆಸುತ್ತವೆ, ವಿವಿಧ ಹೂಡಿಕೆಗಳ ಮೂಲಕ ಹಣವನ್ನು ಹೇಗೆ ಗಳಿಸುತ್ತವೆ ಎಂಬುದರ ವಿವರಣೆ
ಮ್ಯೂಚುವಲ್ ಫಂಡ್‌ಗಳನ್ನು ನಿಯಂತ್ರಿಸುವ ಸಂಸ್ಥೆಗಳು ಮತ್ತು ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ
ವಿವಿಧ ರೀತಿಯ ಮ್ಯೂಚುಯಲ್ ಫಂಡ್ ಗಳು ಉದಾಹರಣೆಗೆ, ಇಕ್ವಿಟಿ ಫಂಡ್ ಗಳು, ಡೆಟ್ ಫಂಡ್ ಗಳು, ಹೈಬ್ರಿಡ್ ಫಂಡ್ ಗಳು ಮತ್ತು ಅವುಗಳ ಗುಣಲಕ್ಷಣಗಳ ಬಗ್ಗೆ ವಿವರವಾದ ವಿವರಣೆ.
ಡೈರೆಕ್ಟ್ ಮತ್ತು ರೆಗ್ಯುಲರ್ ಮ್ಯೂಚುಯಲ್ ಫಂಡ್ ಗಳ ನಡುವಿನ ವ್ಯತ್ಯಾಸ ಮತ್ತು ಯಾವುದು ನಿಮಗೆ ಸೂಕ್ತ ಎಂಬುದನ್ನು ನಿರ್ಧರಿಸುವ ಮಾರ್ಗಗಳು
SIP, ಲಂಪ್ಸಮ್ ಮತ್ತು ಸ್ಟೆಪ್ ಅಪ್ SIP ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ಮತ್ತು ಯಾವ ಯೋಜನೆ ನಿಮಗೆ ಸೂಕ್ತ ಎಂಬುದನ್ನು ಆಯ್ಕೆ ಮಾಡುವ ಮಾರ್ಗಗಳು.
ಮ್ಯೂಚುಯಲ್ ಫಂಡ್ ಕ್ಯಾಲ್ಕುಲೇಟರ್ ಬಳಸುವುದು ಹೇಗೆ ಮತ್ತು ನಿಮ್ಮ ಹೂಡಿಕೆಯ ಗುರಿಗಳನ್ನು ಸಾಧಿಸಲು ಇದು ಹೇಗೆ ಸಹಾಯ ಮಾಡುತ್ತದೆ ಎಂಬುದರ ಪ್ರಾಕ್ಟಿಕಲ್ ಪ್ರದರ್ಶನ
NAV ಅಥವಾ ನೆಟ್ ಅಸೆಟ್ ವ್ಯಾಲ್ಯೂ ಎಂದರೇನು ಮತ್ತು ಅದನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ ಎಂಬುದರ ವಿವರಣೆ
ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವಾಗ ಅರ್ಥಮಾಡಿಕೊಳ್ಳಬೇಕಾದ ಪ್ರಮುಖ ಅಂಶಗಳ ವಿವರಣೆ
ಡಿಮ್ಯಾಟ್ ಅಕೌಂಟ್ ಓಪನ್ ಮಾಡುವುದು ಹೇಗೆ ಮತ್ತು ಮ್ಯೂಚುಯಲ್ ಫಂಡ್‌ಗ ಳಲ್ಲಿ ಹೂಡಿಕೆ ಮಾಡಲು ಅದು ಹೇಗೆ ಅಗತ್ಯ ಎಂಬುದರ ಪ್ರಾಕ್ಟಿಕಲ್ ಪ್ರದರ್ಶನ
ಮ್ಯೂಚುಯಲ್ ಫಂಡ್‌ಗ ಳಲ್ಲಿ ಹೂಡಿಕೆ ಮಾಡುವ ಪ್ರಕ್ರಿಯೆಯನ್ನು ನೇರವಾಗಿ ತೋರಿಸುವ ಪ್ರಾಕ್ಟಿಕಲ್ ಪ್ರದರ್ಶನ.
ಮ್ಯೂಚುವಲ್ ಫಂಡ್ ಗಳು ಹೂಡಿಕೆದಾರರ ಹಣವನ್ನು ವಿವಿಧ ಆಸ್ತಿಗಳಲ್ಲಿ ಹೇಗೆ ಹೂಡುತ್ತವೆ ಎಂಬುದರ ವಿವರಣೆ
ಫಂಡ್ ಓವರ್ ಲ್ಯಾಪ್ ಎಂದರೇನು ಮತ್ತು ನಿಮ್ಮ ಪೋರ್ಟ್ ಫೋಲಿಯೋವನ್ನು ವೈವಿಧ್ಯಗೊಳಿಸುವುದು ಏಕೆ ಮುಖ್ಯ ಎಂಬುದರ ಪ್ರಾಕ್ಟಿಕಲ್ ಪ್ರದರ್ಶನ
ಮ್ಯೂಚುಯಲ್ ಫಂಡ್ ಗಳಿಂದ ಹಣವನ್ನು ಹಿಂಪಡೆಯುವ ಪ್ರಕ್ರಿಯೆಯ ಪ್ರಾಕ್ಟಿಕಲ್ ಪ್ರದರ್ಶನ
ಪ್ರಾಫಿಟ್ ಬುಕ್ ಮಾಡುವುದು ಮತ್ತು ಮ್ಯೂಚುಯಲ್ ಫಂಡ್ ಗಳಿಂದ ಎಕ್ಸಿಟ್ ಆಗುವ ವಿವಿಧ ತಂತ್ರಗಳ ಬಗ್ಗೆ ಮಾಹಿತಿ
ಎಕ್ಸ್‌ಪೆನ್ಸ್ ರೇಶಿಯೋ ಎಂದರೇನು ಮತ್ತು ಮ್ಯೂಚುಯಲ್ ಫಂಡ್ ಗಳ ಮೇಲಿನ ತೆರಿಗೆಯ ಬಗ್ಗೆ ಮಾಹಿತಿ
ಈ ಮಾಡ್ಯೂಲ್ ದೀರ್ಘಕಾಲದ ಹೂಡಿಕೆಯ ಗುರಿ ಹೊಂದಿರುವ ವ್ಯಕ್ತಿಗಳಿಗೆ ಬಹಳ ಮುಖ್ಯ. ಇಲ್ಲಿ, ₹5 ಕೋಟಿ ಕಾರ್ಪಸ್ ಸಂಗ್ರಹಿಸುವ ತಂತ್ರವನ್ನು ಕಲಿಯಬಹುದು
ಮನೆ ಖರೀದಿ, ಮಕ್ಕಳ ಶಿಕ್ಷಣ ನಿವೃತ್ತಿ ಮೊದಲಾದ ಗುರಿಗಳನ್ನು ಸಾಧಿಸಲು ಯಾವ ರೀತಿಯ ಮ್ಯೂಚುಯಲ್ ಫಂಡ್‌ಗಳು ಸೂಕ್ತ ಎಂಬುದರ ವಿವರಣೆ
ಈ ವಿಭಾಗದಲ್ಲಿ ಹೂಡಿಕೆಗೆ ಸಮಂಧಿಸಿ ಹೂಡಿಕೆದಾರರು ಮಾಡುವ ಸಾಮಾನ್ಯ ತಪ್ಪುಗಳನ್ನು ವಿವರಿಸಲಾಗಿದೆ
ಈ ವಿಭಾಗದಲ್ಲಿ ಮ್ಯೂಚುಯಲ್ ಫಂಡ್ ಗಳ ಬಗ್ಗೆ ಹೂಡಿಕೆದಾರರು ಹೆಚ್ಚಾಗಿ ಕೇಳುವ ಪ್ರಶ್ನೆಗಳನ್ನು ಮತ್ತು ಅವುಗಳಿಗೆ ಸರಳವಾದ ಉತ್ತರಗಳನ್ನು ನೀಡಲಾಗಿದೆ
- ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುವವರು ಮತ್ತು ಮಾಡುವವರು
- ವೈವಿಧ್ಯಮಯ ಪೋರ್ಟ್‌ಫೋಲಿಯೋ ಹುಡುಕುತ್ತಿರುವ ಹೂಡಿಕೆದಾರರು
- ಮ್ಯೂಚುವಲ್ ಫಂಡ್ ಹೌಸ್ ಕಾರ್ಯ ತಿಳಿಯಲು ಬಯಸುವವರು
- ಮ್ಯೂಚುವಲ್ ಫಂಡ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವರು
- ಭವಿಷ್ಯದ ಅಗತ್ಯಗಳಿಗಾಗಿ ಹಣವನ್ನು ಉಳಿಸಲು ಬಯಸುವವರು


- ಮ್ಯೂಚುವಲ್ ಫಂಡ್ ಅಥವಾ ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಯಾವುದು ಉತ್ತಮ?
- SIP, ಸ್ಟೆಪ್ ಅಪ್ SIP, ಲಂಪ್ಸಮ್ ಹೂಡಿಕೆ ನಡುವಿನ ವ್ಯತ್ಯಾಸ
- ದೊಡ್ಡ ಮೊತ್ತದ ಕಾರ್ಪಸ್ ಸೃಷ್ಟಿಸುವ ತಂತ್ರ
- ಅಕೌಂಟ್ ಕ್ರಿಯೇಷನ್, ಹೂಡಿಕೆ ಮತ್ತು ಹಿಂಪಡೆಯುವಿಕೆಯ ಪ್ರಾಕ್ಟಿಕಲ್ ಕಲಿಕೆ
- ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಮಾಡಬಾರದ ತಪ್ಪುಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.