ವಿದ್ಯಾಭ್ಯಾಸದ ಸಮಯದಲ್ಲೇ ಗಳಿಕೆ ಮಾಡಬಹುದು ಎನ್ನುವ ಈ ಕೋರ್ಸ್ ಬಡ ಪ್ರತಿಭೆಗಳಿಗೆ, ಆರ್ಥಿಕ ಸಂಕಷ್ಟ ಇರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಭಾರವಾಗದಂತೆ ಓದುವಾಗಲೇ ದುಡಿಮೆ ಮಾಡಿ ತಮ್ಮ ಖರ್ಚು ವೆಚ್ಚವನ್ನ ನಿಭಾಯಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ದಾರಿ ದೀಪವಾಗಿದೆ. ಓದುವಾಗಲೇ ಬಿಡುವಿನ ವೇಳೆಯಲ್ಲಿ ದುಡಿಮೆ ಮಾಡಲು ಸಾಕಷ್ಟು ರೀತಿಯ ಅವಕಾಶಗಳಿರುತ್ತದೆ. ಅದನ್ನ ಅರಿತು ಅವಕಾಶವನ್ನ ಸದುಪಯೋಗ ಮಾಡಿಕೊಂಡ ವಿದ್ಯಾರ್ಥಿ ಜೀವನದಲ್ಲಿ ಬೇಗ ಜವಾಬ್ಧಾರಿತನಾಗುತ್ತಾನೆ. ಹೀಗಾಗಿನೇ ಈ ಕೋರ್ಸ್ ಅನಾವರಣ ಮಾಡಲಾಗಿದೆ.
ತಮ್ಮ ಎಜುಕೇಷನ್ ಸಮಯದಲ್ಲೇ ಬೇರೆ ಬೇರೆ ರೀತಿಯ ವೃತ್ತಿ ಜೀವನ ಕಟ್ಟಿಕೊಂಡ ನಾಲ್ವರು ಸಾಧಕರಾಗಿರುವ ಚೇತನ್, ಕೃತಿಕಾ, ಕಿರಣ್ ಮತ್ತು ಮಹೇಶ್ ಇವರುಗಳೇ ಈ ಕೋರ್ಸ್‌ನಲ್ಲಿ ನಿಮ್ಮ ನಾಲ್ಕು ಯಶಸ್ಸಿನ ಹಾದಿ ಬಗ್ಗೆ ಕಂಪ್ಲೀಟ್ ಮಾರ್ಗದರ್ಶನ ನೀಡುತ್ತಾರೆ.
ಈ ಕೋರ್ಸ್, ಓದುವಾಗಲೇ ರೇಡಿಯೋ ಜಾಕಿ ವೃತ್ತಿ ಜೀವನ ಮಾಡಿದ್ದು ಹೇಗೆ?, ತಾನು ಕಲಿತ ಚಿತ್ರಕಲೆಯಲ್ಲೇ ಹಣ ಸಂಪಾದನೆ ಮಾಡಿದ್ದು ಹೇಗೆ? ವಿದ್ಯಾಭ್ಯಾಸದ ಜೊತೆಯಲ್ಲೇ ಪಾನಿಪುರಿ ಬಿಸಿನೆಸ್ ಮಾಡಿದ್ದು ಹೇಗೆ ಮತ್ತು ಲಾ ಪ್ರಾಕ್ಟೀಸ್ ಮಾಡಿದ್ದು ಹೇಗೆ ಎನ್ನುವ ನಾಲ್ಕು ಉದಾಹರಣೆಗಳ ಜೊತೆಗೆ ನೀವು ಹೇಗೆ ದುಡಿಮೆ ಮಾಡಬಹುದು ಅನ್ನೋದನ್ನು ಕಲಿಸಿಕೊಡುತ್ತದೆ. ಇನ್ಯಾಕೆ ತಡ, ಈಗಲೆ ಈ ಕೋರ್ಸ್ ಖರೀದಿಸಿ ಓದುವಾಗಲೇ ಹಣಗಳಿಸಿ ಆರ್ಥಿಕ ಸಮಸ್ಯೆ ಬಗ ಹರಿಸಿಕೊಳ್ಳಿ
ಈ ಮಾಡ್ಯೂಲ್ ಕೋರ್ಸ್ ಉದ್ದೇಶಗಳನ್ನು ಒಳಗೊಂಡಂತೆ ನೀವು ಕಲಿಯುವಾಗ ಗಳಿಸಿ ಕೋರ್ಸ್‌ನ ಅವಲೋಕನವನ್ನು ಒದಗಿಸುತ್ತದೆ.
ವ್ಯಾಸಂಗ ಮಾಡುವಾಗಲೇ ರೇಡಿಯೋ ಜಾಕಿ ಆಗಿ ಇಂದು ಯಶಸ್ವಿ ಎಂಟ್ರೆಪ್ರೆನ್ಯೂರ್ ಆಗಿ ಹೊರಹೊಮ್ಮಿರುವ ಸಾಧಕರ ಪ್ರಯಾಣವನ್ನು ತಿಳಿಯಿರಿ.
ವ್ಯಾಸಂಗ ಮಾಡುವಾಗಲೇ ಚಿತ್ರಕಲೆಯ ಮೇಲಿನ ಪ್ಯಾಷನ್ ಅನ್ನು ಯಶಸ್ವಿ ವೃತ್ತಿಯನ್ನಾಗಿ ಪರಿವರ್ತಿಸಿದ ಹುಡುಗಿಯ ಸ್ಪೂರ್ತಿದಾಯಕ ಕಥೆಯನ್ನು ತಿಳಿಯಿರಿ.
ಓದುತ್ತಿರುವಾಗಲೇ ಯಶಸ್ವಿ ಪಾನಿಪುರಿ ಶಾಪ್ ಅನ್ನು ನಡೆಸುತ್ತಿರುವ ಮತ್ತು ದೊಡ್ಡ ಹೋಟೆಲ್ ಅನ್ನು ನಿರ್ಮಿಸುವ ಕನಸು ಹೊತ್ತಿರುವ ಹುಡುಗನ ಸ್ಪೂರ್ತಿದಾಯಕ ಕಥೆಯನ್ನು ಅನ್ವೇಷಿಸಿ.
ಓದುತ್ತಿರುವಾಗಲೇ ದೊಡ್ಡ ವಕೀಲರ ಬಳಿ ಸಹಾಯಕರಾಗಿ ಸೇರಿಕೊಂಡು ಇಂದು ಸ್ವತಃ ತಮ್ಮದೇ ಸ್ವಂತ ಕಾನೂನು ಸಂಸ್ಥೆಯನ್ನು ಹೊಂದಿರುವ ಯಶಸ್ವಿ ವಕೀಲರ ಬಗ್ಗೆ ತಿಳಿಯಿರಿ.
- ವ್ಯಾಸಂಗ ಮಾಡುವಾಗ ಹೆಚ್ಚುವರಿ ಆದಾಯವನ್ನು ಗಳಿಸಲು ಬಯಸುವ ವಿದ್ಯಾರ್ಥಿಗಳು
- ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ಪ್ರಾಯೋಗಿಕ ಕೌಶಲ್ಯಗಳನ್ನು ಪಡೆಯಲು ಬಯಸುವ ವ್ಯಕ್ತಿಗಳು
- ವ್ಯಾಸಂಗ ಮಾಡುವಾಗ ಗಳಿಸಲು ಪ್ರಾರಂಭಿಸಿದ ಜನರ ಯಶಸ್ಸಿನ ಕಥೆಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಯಾರಾದರೂ
- ವ್ಯಾಸಂಗ ಮಾಡುವಾಗ ಬಿಸಿನೆಸ್ ಹೇಗೆ ಪ್ರಾರಂಭಿಸುವುದು ಮತ್ತು ಬೆಳೆಸುವುದು ಎಂಬುದನ್ನು ಕಲಿಯಲು ಬಯಸುವ ಕಿರಿಯ ಎಂಟ್ರೆಪ್ರೆನ್ಯೂರ್ ಗಳು
- ಹಣವನ್ನು ಸಂಪಾದಿಸುವಾಗ ಕೆಲಸ ಮತ್ತು ವ್ಯಾಸಂಗದ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಬಯಸುವ ವಿದ್ಯಾರ್ಥಿಗಳು


- ಹಣ ಸಂಪಾದಿಸುವಾಗ ಕೆಲಸ ಮತ್ತು ವ್ಯಾಸಂಗವನ್ನು ಹೇಗೆ ಸಮತೋಲನಗೊಳಿಸುವುದು
- ವ್ಯಾಸಂಗ ಮಾಡುವಾಗ ಹಣವನ್ನು ಗಳಿಸಲು ಬಳಸಬಹುದಾದ ಪ್ರಾಯೋಗಿಕ ಕೌಶಲ್ಯಗಳು
- ನಿಮ್ಮ ಪ್ರತಿಭೆಯಿಂದಲೇ ವಿದ್ಯಾಭ್ಯಾಸದ ಜೊತೆ ಹಣ ಗಳಿಸುವುದು
- ಆರ್ಥಿಕ ಸಮಸ್ಯೆ ಬಗೆ ಹರಿಸಿಕೊಂಡು ಜೀವನದಲ್ಲಿ ಯಶಸ್ಸು ಕಾಣಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
- ವ್ಯಾಸಂಗ ಮಾಡುವಾಗ ಸುಸ್ಥಿರ ಆದಾಯದ ಮೂಲವನ್ನು ಹೇಗೆ ಅಭಿವೃದ್ಧಿಪಡಿಸುವುದು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...