ಎಲೆಕ್ಟ್ರಿಕಲ್ ಶಾಪ್ ಅನ್ನು ಪ್ರಾರಂಭಿಸಲು ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಅನ್ನು ಅಪ್ ಗ್ರೇಡ್ ಮಾಡಲು ಬಯಸುವವರಿಗೆ ಈ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಕೋರ್ಸ್ ಸೂಕ್ತ. ಈ ಕೋರ್ಸ್ ನಿಮಗೆ ಪರಿಣಾಮಕಾರಿಯಾದ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಪ್ಲಾನ್ ಮಾಡೋದ್ರಿಂದ ಹಿಡಿದು ಲಾಭದಾಯಕವಾಗಿ ಬಿಸಿನೆಸ್ ಮಾಡೋದು ಹೇಗೆ ಅನ್ನುವವರೆಗೆ ಬೇಕಾದ ಎಲ್ಲ ಮಾಹಿತಿಯನ್ನು ಒದಗಿಸುತ್ತದೆ.
ಬಿಸಿನೆಸ್ ಪ್ಲಾನ್ ಮಾಡೋದು,ಎಂಬುದರ ಜೊತೆಗೆ ಎಲೆಕ್ಟ್ರಿಕಲ್ ಶಾಪ್ ಗೆ ಸೂಕ್ತ ಸ್ಥಳದ ಆಯ್ಕೆ, ಬೇಕಾಗಿರೋ ಬಂಡವಾಳ, ಬೇಕಾದ ಪರ್ಮಿಶನ್, ಲೈಸೆನ್ಸ್, ಮಾರಾಟ ಮಾಡಲು ಬೇಕಾಗಿರೋ ಎಲೆಕ್ಟ್ರಿಕಲ್ ವಸ್ತುಗಳು ,ಸಂಭಾವ್ಯ ಪೂರೈಕೆದಾರರನ್ನು ಹುಡುಕುವುದು ಮತ್ತು ಹೆಚ್ಚು ಮಾರಾಟವಾಗೋ ಎಲೆಕ್ಟ್ರಿಕ್ ವಸ್ತುಗಳನ್ನು ಗುರುತಿಸುವುದರಿಂದ ಹಿಡಿದು ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸುವವರೆಗಿನ ಎಲ್ಲ ಮಾಹಿತಿ ಈ ಕೋರ್ಸ್ ನಲ್ಲಿದೆ.
ಈ ಕೋರ್ಸ್ ನಲ್ಲಿ ನಿಮಗೆ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಮಾಡಿ ಸಕ್ಸಸ್ ಆಗಿರೋ ಎಂಬಿಎ ಪದವೀಧರರಾದ ರಾಜೇಶ್ಕರ್ ಗೌಡ ಹಾಗೂ ರಾಜಸ್ಥಾನ ಮೂಲದ ಧರ್ಮರಾಮ್ ಈ ಇಬ್ಬರು ಮಾರ್ಗದರ್ಶಕರೇ ಸಂಪೂರ್ಣವಾಗಿ ಮಾರ್ಗದರ್ಶನ ಮಾಡ್ತಾರೆ.
ನೀವು ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಆರಂಭಿಸಬೇಕು ಅಂತಿದ್ರೆ ಈಗಲೇ ಈ ಕೋರ್ಸ್ ನ್ನು ಕಂಪ್ಲೀಟ್ ಆಗಿ ನೋಡಿ ಹಾಗೂ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಆರಂಭಿಸಿ ಯಶಸ್ವಿಯಾಗಿ
ಈ ಕೋರ್ಸ್‌ನಾದ್ಯಂತ ನೀವು ಏನನ್ನು ನಿರೀಕ್ಷಿಸಬಹುದು ಮತ್ತು ಕಲಿಯಬಹುದು ಎಂಬುದರ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ನೀಡುತ್ತದೆ
ಈ ಮಾಡ್ಯೂಲ್ ಕೋರ್ಸ್ ನ ಮಾರ್ಗದರ್ಶಕರನ್ನು ಪರಿಚಯಿಸುತ್ತದೆ, ಅವರ ಹಿನ್ನಲೆ, ಅನುಭವ ಮತ್ತು ಪರಿಣತಿಯ ಕ್ಷೇತ್ರಗಳ ಮಾಹಿತಿಯನ್ನು ಒದಗಿಸುತ್ತದೆ
ಈ ಮಾಡ್ಯೂಲ್ ಎಲೆಕ್ಟ್ರಿಕಲ್ ಶಾಪ್ ವ್ಯವಹಾರವನ್ನು ಪ್ರಾರಂಭಿಸಲು ಸಂಬಂಧಿಸಿದ ಮೂಲಭೂತ ಪ್ರಶ್ನೆಗಳು ಮತ್ತು ಪರಿಕಲ್ಪನೆಗಳನ್ನು ಒಳಗೊಂಡಿರುತ್ತದೆ
ಈ ಮಾಡ್ಯೂಲ್ ಬಂಡವಾಳ, ಕ್ರೆಡಿಟ್ ಸೌಲಭ್ಯಗಳು ಮತ್ತು ವಿಮೆಯನ್ನು ಸೇರಿದಂತೆ ಎಲೆಕ್ಟ್ರಿಕಲ್ ಶಾಪ್ ವ್ಯವಹಾರವನ್ನು ಪ್ರಾರಂಭಿಸುವ ನಿಟ್ಟಿನಲ್ಲಿನ ಹಣಕಾಸಿನ ಅಂಶಗಳನ್ನು ಅನ್ವೇಷಿಸುತ್ತದೆ.
ಎಲೆಕ್ಟ್ರಿಕಲ್ ಶಾಪ್ ವ್ಯವಹಾರವನ್ನು ಪ್ರಾರಂಭಿಸಲು ಸರಿಯಾದ ಸ್ಥಳವನ್ನು ಹೇಗೆ ಆಯ್ಕೆ ಮಾಡುವುದು ಎಂಬುದರ ಕುರಿತ ಉಪಯುಕ್ತ ಸಲಹೆಗಳನ್ನು ನೀಡುತ್ತದೆ
ಪರವಾನಗಿಗಳನ್ನು ಪಡೆಯುವುದು ಮತ್ತು ನಿಯಮಗಳ ಅನುಸರಣೆ ಸೇರಿದಂತೆ ಈ ಬಿಸಿನೆಸ್ ಪ್ರಾರಂಭಿಸುವ ನಿಟ್ಟಿನಲ್ಲಿನ ಕಾನೂನು ಅವಶ್ಯಕತೆಗಳನ್ನು ಒಳಗೊಂಡಿರುತ್ತದೆ
ಈ ಮಾಡ್ಯೂಲ್ ಸೂಕ್ತ ಕಾರ್ಮಿಕರನ್ನು ನೇಮಕ ಮಾಡುವುದರ ಪ್ರಾಮುಖ್ಯತೆ ಮತ್ತು ಅವರಿಗೆ ಅವಶ್ಯ ತರಬೇತಿ ನೀಡುವುದು ಹೇಗೆ ಎಂಬುದರ ಕುರಿತು ಸಲಹೆಗಳನ್ನು ನೀಡುತ್ತದೆ
ಖರೀದಿಯ ನಿಯಮಗಳು ಮತ್ತು ಪಾವತಿ ಆಯ್ಕೆಗಳನ್ನು ಒಳಗೊಂಡಂತೆ ಎಲೆಕ್ಟ್ರಿಕಲ್ ಶಾಪ್ ವ್ಯವಹಾರಕ್ಕಾಗಿ ಉಪಕರಣಗಳ ಖರೀದಿ ಮತ್ತು ಸರಬರಾಜಿನ ಕುರಿತ ಮಾಹಿತಿ ಒಳಗೊಂಡಿರುತ್ತದೆ
ಎಲೆಕ್ಟ್ರಿಕಲ್ ಶಾಪ್ ವ್ಯಾಪಾರವು ನೀಡಬಹುದಾದ ಸೇವೆಗಳ ಅವಲೋಕನವನ್ನು ಮತ್ತು ಪ್ರತಿಸ್ಪರ್ಧಿಗಳಿಂದ ಹೇಗೆ ನಿಮ್ಮ ಸೇವೆಯನ್ನು ಪ್ರತ್ಯೇಕಿಸುವುದು ಎಂಬುದರ ಬಗ್ಗೆ ತಿಳಿಯಿರಿ
ಎಲೆಕ್ಟ್ರಿಕಲ್ ಶಾಪ್ ವ್ಯವಹಾರದಲ್ಲಿ ಬೆಲೆಗಳನ್ನು ಹೇಗೆ ನಿಗದಿಸುವುದು ಮತ್ತು ಲಾಭದಾಯಕತೆಯನ್ನು ಹೆಚ್ಚಿಸುವುದು ಎಂಬುದರ ಕುರಿತು ಸಲಹೆಗಳನ್ನು ಪಡೆಯಿರಿ
ಆನ್‌ಲೈನ್ ಉಪಸ್ಥಿತಿಯ ಪ್ರಾಮುಖ್ಯತೆಯ ಜೊತೆಗೆ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಉಪಸ್ಥಿತಿಯನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಕುರಿತ ಸಲಹೆಗಳನ್ನು ನೀಡುತ್ತದೆ
ಈ ಮಾಡ್ಯೂಲ್ ಜಾಹೀರಾತು, ಪಬ್ಲಿಕ್ ರಿಲೇಶನ್ ಶಿಪ್ ಸೇರಿದಂತೆ ಪ್ರಮೊಟಿಂಗ್ ಮಾಡಲು ಬಳಸಬಹುದಾದ ಮಾರ್ಕೆಟಿಂಗ್ ತಂತ್ರಗಳು ಮತ್ತು ತಂತ್ರಗಳ ಅವಲೋಕನವನ್ನು ಒದಗಿಸುತ್ತದೆ.
ಎಲೆಕ್ಟ್ರಿಕಲ್ ಶಾಪ್ ವ್ಯವಹಾರದಲ್ಲಿ ಎದುರಾಗುವ ಸಾಮಾನ್ಯ ಸವಾಲುಗಳ ಬಗ್ಗೆ ಮತ್ತು ಆ ಸವಾಲುಗಳನ್ನು ಎದುರಿಸಿ ಜಯಿಸುವ ತಂತ್ರಗಳ ಬಗ್ಗೆ ತಿಳಿಯಿರಿ
ಎಲೆಕ್ಟ್ರಿಕಲ್ ಶಾಪ್ ವ್ಯವಹಾರದಲ್ಲಿ ಯಶಸ್ವಿಯಾಗುವ ನಿಟ್ಟಿನಲ್ಲಿ ಈ ಕೋರ್ಸ್ ಮಾರ್ಗದರ್ಶಕರಿಂದ ಅತ್ಯುತ್ತಮ ಸಲಹೆಗಳು
- ಈ ಇಂಡಸ್ಟ್ರಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಅಥವಾ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವವರು
- ಎಲೆಕ್ಟ್ರಿಕಲ್ ಉಪಕರಣದ ಸಂಬಂಧ ಹೆಚ್ಚು ಉತ್ಸಾಹವಿರುವವರು
- ಸರ್ವಿಸ್ ಶಾಪ್ ಅನ್ನು ಹೊಂದಿರುವ ಜನರು ಮತ್ತು ಈ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆಯಲು ಬಯಸುವವರು
- ಉತ್ತಮ ಲಾಭವನ್ನು ಗಳಿಸುವ ವಿಭಿನ್ನ ವ್ಯವಹಾರ ಕಲ್ಪನೆಗಳನ್ನು ಅನ್ವೇಷಿಸುವ ಯಾರಾದರೂ


- ಲಾಭದಾಯಕ ಎಲೆಕ್ಟ್ರಿಕಲ್ ಅಂಗಡಿ ವ್ಯಾಪಾರವನ್ನು ಪ್ರಾರಂಭಿಸಲು ಕಲಿಯಿರಿ
- ಕಂಪನಿಗೆ ಆರಂಭಿಕ ಬಂಡವಾಳ ಮತ್ತು ಫಂಡಿಂಗ್ ಅನ್ನು ಹೇಗೆ ವ್ಯವಸ್ಥೆ ಮಾಡುವುದು ಎಂದು ತಿಳಿಯಿರಿ
- ವ್ಯವಹಾರವನ್ನು ಪ್ರಾರಂಭಿಸಲು ಅಗತ್ಯವಿರುವ ಸಲಕರಣೆಗಳ ಪ್ರಕಾರಗಳ ಬಗ್ಗೆ ತಿಳಿಯಿರಿ
- ವ್ಯಾಪಾರದಿಂದ ನೀವು ಎಷ್ಟು ಗಳಿಸಬಹುದು ಮತ್ತು ಅದನ್ನು ನಡೆಸಲು ತಗಲುವ ವೆಚ್ಚಗಳೇನು ಎಂಬುದನ್ನು ತಿಳಿಯಿರಿ
- ವ್ಯಾಪಾರದಲ್ಲಿ ಎದುರಿಸುತ್ತಿರುವ ಕೆಲವು ಸಾಮಾನ್ಯ ಸವಾಲುಗಳ ಬಗ್ಗೆ ತಿಳಿಯಿರಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...