ಸುರಕ್ಷಿತ ಮತ್ತು ಚಿಂತೆ-ಮುಕ್ತ ಜೀವನಕ್ಕಾಗಿ ಫೈನಾನ್ಷಿಯಲ್ ಫ್ರೀಡಂ ಅನ್ನು ಸಾಧಿಸುವುದು ಅತ್ಯಗತ್ಯ. ಆದಾಗ್ಯೂ, ಅನೇಕ ವ್ಯಕ್ತಿಗಳು ತಮ್ಮ ಕಠಿಣ ಪರಿಶ್ರಮ ಮತ್ತು ಯೋಗ್ಯ ಆದಾಯದ ಹೊರತಾಗಿಯೂ ತಮ್ಮ ಹಣಕಾಸನ್ನು ನಿರ್ವಹಣೆ ಮಾಡಲು ಹೆಣಗಾಡುತ್ತಾರೆ. ಅದಕ್ಕಾಗಿ ಫೈನಾನ್ಷಿಯಲ್ ಫ್ರೀಡಂ ಅನ್ನು ಸಾಧಿಸಲು ಪ್ರಾಯೋಗಿಕ ಮತ್ತು ವಿಶ್ವಾಸಾರ್ಹ ಕಾರ್ಯತಂತ್ರಗಳನ್ನು ಒದಗಿಸುವ ನಮ್ಮ ಈ ಫೈನಾನ್ಷಿಯಲ್ ಫ್ರೀಡಂ ಕೋರ್ಸ್ ನಿಮಗೆ ಉಪಯುಕ್ತವಾಗಿದೆ.
ಸಮಗ್ರ ಮತ್ತು ಸುಲಭವಾಗಿ ಅನುಸರಿಸಬಹುದಾದ ಪ್ರೋಗ್ರಾಂ ಅನ್ನು ಸಿದ್ಧಪಡಿಸಲು ಕ್ಲೈಂಟ್ ಗಳು ಬೇಡಿಕೆ ಇಟ್ಟ ಆಧಾರದ ಮೇಲೆ, ನಮ್ಮ ತಜ್ಞರ ತಂಡವು ವೈಯಕ್ತಿಕ ಹಣಕಾಸಿನ ಎಲ್ಲಾ ಅಗತ್ಯ ಅಂಶಗಳನ್ನು ಒಳಗೊಂಡಿರುವ ಈ ಕೋರ್ಸ್ ಅನ್ನು ಅಭಿವೃದ್ಧಿಪಡಿಸಿದೆ. ಕ್ರಿಯಾಶೀಲ ಮಾಹಿತಿ ಹೊಂದಿರುವ 32 ಮಾಡ್ಯೂಲ್‌ಗಳೊಂದಿಗೆ, ಈ ಕೋರ್ಸ್ ಬಜೆಟ್ ಮತ್ತು ಉಳಿತಾಯದಿಂದ ಹಿಡಿದು ಹೂಡಿಕೆ ಮತ್ತು ಸಾಲ ಮರುಪಾವತಿಯವರೆಗೆ ಎಲ್ಲ ಅಗತ್ಯ ಮಾರ್ಗದರ್ಶನ ನೀಡುತ್ತದೆ. ಮಾಡ್ಯೂಲ್ ಗಳನ್ನು ಆಕರ್ಷಕವಾಗಿ ಮತ್ತು ಸಂವಾದಾತ್ಮಕ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದ್ದು ಇದು ಎಲ್ಲರಿಗೂ ಸಹ ಕಲಿಯಲು ಸುಲಭವಾಗಿ ಅನುವು ಮಾಡಿಕೊಡುತ್ತದೆ.
ಈ ಕೋರ್ಸ್ ತೆಗೆದುಕೊಳ್ಳುವ ಮೂಲಕ, ನೀವು ಆರ್ಥಿಕ ಅಂಶದ ಬಗ್ಗೆ ದೃಢವಾದ ಅಡಿಪಾಯವನ್ನು ಹಾಕಿಕೊಳ್ಳುತ್ತೀರಿ, ಈ ಮೂಲಕ ಸಾಲವನ್ನು ತೊಡೆದುಹಾಕಬಹುದಾಗಿದೆ ಮತ್ತು ಶಿಫಾರಸು ಮಾಡಿದ ತಂತ್ರಗಳನ್ನು ಬಳಸಿಕೊಂಡು ನೀವು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಬಹುದಾಗಿದೆ. ಇದರ ಜೊತೆಗೆ ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಲು ಮತ್ತು ಸುರಕ್ಷಿತ ಮತ್ತು ಆರಾಮದಾಯಕ ಭವಿಷ್ಯಕ್ಕಾಗಿ ನಿಮ್ಮ ಸಂಪತ್ತನ್ನು ಹೇಗೆ ಹೆಚ್ಚಿಸಬೇಕು ಎಂಬುದನ್ನು ಸಹ ಈ ಕೋರ್ಸ್ ನಿಮಗೆ ಕಲಿಸುತ್ತದೆ.
ಫೈನಾನ್ಷಿಯಲ್ ಫ್ರೀಡಂ ಕೋರ್ಸ್‌ಗೆ ಇಂದೇ ನೋಂದಾಯಿಸಿ ಮತ್ತು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ. ನಮ್ಮ ಪ್ರಾಯೋಗಿಕ ಮತ್ತು ವಿಶ್ವಾಸಾರ್ಹ ಸಲಹೆಯೊಂದಿಗೆ, ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ನೀವು ಶೀಘ್ರದಲ್ಲೇ ಸಿದ್ಧರಿರುತ್ತೀರಿ. ಇನ್ನಷ್ಟು ತಿಳಿದುಕೊಳ್ಳಲು ಮತ್ತು ಆರ್ಥಿಕ ಸ್ವಾತಂತ್ರ್ಯದತ್ತ ಮೊದಲ ಹೆಜ್ಜೆ ಇಡಲು ನಮ್ಮ ಕೋರ್ಸ್ ವೀಡಿಯೊವನ್ನು ಈಗಲೇ ವೀಕ್ಷಿಸಿ.
ಕೋರ್ಸ್‌ನ ಅವಲೋಕನ ಮಾಡುವ ಮೂಲಕ ಈ ಕೆಳಗಿನ ಮಾಡ್ಯೂಲ್‌ಗಳಲ್ಲಿ ಒಳಗೊಂಡಿರುವ ಆರ್ಥಿಕ ಸ್ವಾತಂತ್ರ್ಯದ ಪರಿಕಲ್ಪನೆಗಳ ಬಗ್ಗೆ ತಿಳಿಯಿರಿ.
ಪ್ಯಾಸಿವ್ ಇನ್ ಕಮ್ ನ ಪ್ರಾಮುಖ್ಯತೆ ಮತ್ತು ಸಾಲವನ್ನು ಕಡಿಮೆ ಮಾಡುವುದು ಸೇರಿದಂತೆ ಹಣಕಾಸಿನ ಸ್ವಾತಂತ್ರ್ಯ ಮತ್ತು ಅದರ ಕಾಂಪೊನೆಂಟ್ಸ್ ಬಗ್ಗೆ ತಿಳಿಯಿರಿ.
ಈ ಮಾಡ್ಯೂಲ್‌ನಲ್ಲಿ, ಸಿ ಎಸ್ ಸುಧೀರ್ ಅವರ ವೈಯಕ್ತಿಕ ಪ್ರಯಾಣ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವಲ್ಲಿನ ಅವರ ಅನುಭವಗಳ ಬಗ್ಗೆ ತಿಳಿಯಿರಿ.
7R ಥಿಯರಿಯು, ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವುದಕ್ಕೆ 7 ನಿರ್ಣಾಯಕ ತತ್ವಗಳನ್ನು ಒಳಗೊಂಡಿದೆ.
ನಿಮ್ಮ ಸಮಯದ ಮೌಲ್ಯ ಮತ್ತು ಸಮಯದ ಪ್ರಾಮುಖ್ಯತೆ, ನಿಮ್ಮ ಆರ್ಥಿಕ ಸ್ವಾತಂತ್ರ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ತಿಳಿಯಿರಿ.
ಪ್ರಸಿದ್ಧ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಉದಾಹರಣೆಯನ್ನು ಬಳಸಿಕೊಂಡು ನಿಮ್ಮ ಸಮಯದ ಮನಿ ವ್ಯಾಲ್ಯೂ ಹೇಗೆ ಲೆಕ್ಕ ಹಾಕಬೇಕೆಂದು ತಿಳಿಯಿರಿ.
ಆದಾಯವನ್ನು ಹೆಚ್ಚಿಸುವ ಮಾರ್ಗಗಳನ್ನು ಕಂಡುಹಿಡಿಯುವುದು, ಪ್ಯಾಸಿವ್ ಇನ್ ಕಮ್ ಸ್ಟ್ರೀಮ್‌ಗಳನ್ನು ರಚಿಸುವುದು ಮತ್ತು ಬೆಳವಣಿಗೆಗೆ ಹೂಡಿಕೆ ಮಾಡುವಂತಹ ವಿಷಯಗಳನ್ನು ಈ ಮಾಡ್ಯೂಲ್ ಒಳಗೊಂಡಿದೆ.
ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ವೃತ್ತಿ ಮಾರ್ಗದ ಆಧಾರದ ಮೇಲೆ ಭವಿಷ್ಯದಲ್ಲಿ ಆದಾಯ ಹೇಗಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಮಾಡ್ಯೂಲ್ ನಿಮಗೆ ಸಹಾಯ ಮಾಡುತ್ತದೆ.
ಈ ಮಾಡ್ಯೂಲ್ ನಿಮಗೆ ಉಳಿತಾಯ ಮತ್ತು ಹೂಡಿಕೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಖರ್ಚುಗಳನ್ನು ನಿಯಂತ್ರಿಸಲು ತಂತ್ರಗಳನ್ನು ಒದಗಿಸುತ್ತದೆ.
ಈ ಮಾಡ್ಯೂಲ್ ಬಜೆಟ್ ರಚಿಸುವುದು, ಅನಗತ್ಯ ಖರ್ಚುಗಳಿಗೆ ಕಡಿವಾಣ ಮತ್ತು ದೈನಂದಿನ ಖರ್ಚುಗಳಲ್ಲಿ ಹಣವನ್ನು ಉಳಿಸುವ ಮಾರ್ಗಗಳನ್ನು ಒಳಗೊಂಡಿರುತ್ತದೆ.
ಉಳಿತಾಯವನ್ನು ಆಟೋಮೇಟ್ ಮಾಡುವುದು, ಉಳಿತಾಯ ಯೋಜನೆಯನ್ನು ರೂಪಿಸುವುದು ಮತ್ತು ಉಳಿತಾಯವನ್ನು ಹೆಚ್ಚಿಸುವ ಸಲುವಾಗಿ ವೆಚ್ಚಗಳನ್ನು ಕಡಿಮೆ ಮಾಡುವ ಮಾರ್ಗಗಳನ್ನು ತಿಳಿಯಿರಿ.
ಇಂದಿನಿಂದ ಹೆಚ್ಚಿನ ಹಣವನ್ನು ಉಳಿಸುವ ಫ್ರೇಮ್ ವರ್ಕ್ ಕಲಿಯಿರಿ.
ಈ ಮಾಡ್ಯೂಲ್ ಹಣಕಾಸಿನ ಗುರಿಗಳನ್ನು ಸೆಟ್ ಮಾಡುವುದು, ಆ ಗುರಿಗಳನ್ನು ತಲುಪಲು ಯೋಜನೆಯನ್ನು ರೂಪಿಸುವುದು ಮತ್ತು ಭವಿಷ್ಯಕ್ಕಾಗಿ ಉಳಿತಾಯದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.
ಈ ಮಾಡ್ಯೂಲ್ ನಲ್ಲಿ ವಿವಿಧ ರೀತಿಯ ಹೊಣೆಗಾರಿಕೆಗಳು ಮತ್ತು ಆರ್ಥಿಕ ಸ್ವಾತಂತ್ರ್ಯದ ಮೇಲೆ ಹೊಣೆಗಾರಿಕೆಗಳ ವಿಷಯಗಳನ್ನು ಒಳಗೊಂಡಿದೆ.
ಹಣವನ್ನು ಸಾಲ ಪಡೆಯಲು ಮತ್ತು ಸಾಲದ ಬಲೆಯಿಂದ ತಪ್ಪಿಸಿಕೊಳ್ಳಲು ಉಪಯುಕ್ತ ಫ್ರೇಮ್ ವರ್ಕ್ ಕಲಿಯಿರಿ.
ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ಮತ್ತು ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುವ ಮತ್ತು ನಿರ್ವಹಿಸುವ ಬಗ್ಗೆ ತಿಳಿಯಿರಿ.
ಹ್ಯೂಮನ್ ಲವ್ ವ್ಯಾಲ್ಯೂ ಮತ್ತು ಆರ್ಥಿಕ ಭವಿಷ್ಯದ ಮೇಲೆ ಅದರ ಪ್ರಭಾವವನ್ನು ಹೇಗೆ ಲೆಕ್ಕ ಹಾಕಬೇಕೆಂದು ತಿಳಿಯಿರಿ.
ಈ ಮಾಡ್ಯೂಲ್ ವಿವಿಧ ರೀತಿಯ ಟರ್ಮ್ ಇನ್ಶೂರೆನ್ಸ್, ಟರ್ಮ್ ಇನ್ಶೂರೆನ್ಸ್‌ನ ಪ್ರಯೋಜನಗಳು ಮತ್ತು ಸರಿಯಾದ ಟರ್ಮ್ ಇನ್ಶೂರೆನ್ಸ್ ಪಾಲಿಸಿಯನ್ನು ಹೇಗೆ ಆಯ್ಕೆ ಮಾಡುವುದು ಎಂದು ತಿಳಿಸುತ್ತದೆ.
ವಿವಿಧ ರೀತಿಯ ಆರೋಗ್ಯ ವಿಮೆ, ಆರೋಗ್ಯ ವಿಮೆಯ ಪ್ರಯೋಜನಗಳು ಮತ್ತು ಸರಿಯಾದ ಆರೋಗ್ಯ ವಿಮಾ ಪಾಲಿಸಿಯನ್ನು ಹೇಗೆ ಆರಿಸುವುದು ಮುಂತಾದ ವಿಷಯಗಳನ್ನು ತಿಳಿಯಿರಿ.
ಹೂಡಿಕೆಯ ಪ್ರಾಮುಖ್ಯತೆಯ ಬಗ್ಗೆ ಮತ್ತು ಕಡಿಮೆ ವಯಸ್ಸಿನಲ್ಲೇ ಯಾಕೆ ಹೂಡಿಕೆ ಆರಂಭಿಸಬೇಕು ಎಂಬುದರ ಬಗ್ಗೆ ತಿಳಿಯಿರಿ.
ಈ ಮಾಡ್ಯೂಲ್ ಸ್ಟಾಕ್‌ಗಳು, ಬಾಂಡ್‌ಗಳು, ರಿಯಲ್ ಎಸ್ಟೇಟ್ ಮತ್ತು ಪರ್ಯಾಯ ಹೂಡಿಕೆಗಳಂತಹ ವಿಷಯಗಳನ್ನು ಒಳಗೊಂಡಿದೆ.
ಹೂಡಿಕೆ ಯೋಜನೆಗಳ ಪ್ರಕಾರಗಳು, ಹೂಡಿಕೆ ಯೋಜನೆಯ ಪ್ರಯೋಜನಗಳು ಮತ್ತು ಉತ್ತಮ-ವೈವಿಧ್ಯಮಯ ಹೂಡಿಕೆಯ ಪ್ರಾಮುಖ್ಯತೆಯನ್ನು ತಿಳಿಯಿರಿ.
ಈ ಮಾಡ್ಯೂಲ್, ಆದಾಯವನ್ನು ಹೆಚ್ಚಿಸುವುದು, ವೆಚ್ಚಗಳನ್ನು ಕಡಿಮೆ ಮಾಡುವುದು ಮತ್ತು ಬೆಳವಣಿಗೆಗೆ ಹೂಡಿಕೆ ಮಾಡುವಂತಹ ವಿಷಯಗಳನ್ನು ಒಳಗೊಂಡಿರುತ್ತದೆ.
ಈ ಮಾಡ್ಯೂಲ್ ಮ್ಯೂಚುಯಲ್ ಫಂಡ್‌ಗಳ ಪ್ರಯೋಜನಗಳು, ವಿವಿಧ ರೀತಿಯ ಮ್ಯೂಚುಯಲ್ ಫಂಡ್‌ಗಳು ಮತ್ತು ಸರಿಯಾದ ಮ್ಯೂಚುಯಲ್ ಫಂಡ್‌ಗಳನ್ನು ಆಯ್ಕೆ ಮಾಡುವುದು ಮುಂತಾದ ವಿಷಯಗಳನ್ನು ಒಳಗೊಂಡಿದೆ.
ಸ್ಟಾಕ್‌ಗಳ ಪ್ರಯೋಜನಗಳು, ವಿವಿಧ ರೀತಿಯ ಸ್ಟಾಕ್‌ಗಳು ಮತ್ತು ನಿಮ್ಮ ಪೋರ್ಟ್‌ಫೋಲಿಯೋಗೆ ಸರಿಯಾದ ಸ್ಟಾಕ್‌ಗಳನ್ನು ಹೇಗೆ ಆಯ್ಕೆ ಮಾಡುವುದು ಎಂಬುದನ್ನು ತಿಳಿಯಿರಿ
ಈ ಮಾಡ್ಯೂಲ್ ನಲ್ಲಿ ರಿಯಲ್ ಎಸ್ಟೇಟ್ ಪೋರ್ಟ್ ಫೊಲಿಯೋವನ್ನು ಹೇಗೆ ರೂಪಿಸುವುದು ಎಂದು ತಿಳಿಯಿರಿ.
ಈ ಮಾಡ್ಯೂಲ್ ವಿವಿಧ ರೀತಿಯ ತೆರಿಗೆಗಳು, ಹಣಕಾಸಿನ ಭವಿಷ್ಯದ ಮೇಲೆ ತೆರಿಗೆಗಳ ಪ್ರಭಾವ ಮತ್ತು ತೆರಿಗೆ ಹೊಣೆಗಾರಿಕೆಯನ್ನು ಹೇಗೆ ಕಡಿಮೆ ಮಾಡುವುದು ಮುಂತಾದ ವಿಷಯಗಳನ್ನು ಒಳಗೊಂಡಿದೆ.
ಈ ಮಾಡ್ಯೂಲ್ ಸಾಂಪ್ರದಾಯಿಕ ಹಣಕಾಸು ಅಭ್ಯಾಸಗಳು ಮತ್ತು ಆಧುನಿಕ ಹಣಕಾಸು ತಂತ್ರಗಳ ನಡುವಿನ ಹೋಲಿಕೆಯನ್ನು ಒಳಗೊಂಡಿದೆ.
ಒಬ್ಬರ ಸ್ವತ್ತುಗಳನ್ನು ನಿರ್ವಹಿಸಲು ಸಮಗ್ರ ಯೋಜನೆಯ ಪ್ರಯೋಜನಗಳನ್ನು ಒಳಗೊಂಡಂತೆ ಎಸ್ಟೇಟ್ ಯೋಜನೆಯ ಪರಿಕಲ್ಪನೆಯನ್ನು ತಿಳಿದುಕೊಳ್ಳಿ.
ಕಾನೂನು ಅವಶ್ಯಕತೆಗಳು, ನಿರ್ಣಾಯಕ ಅಂಶಗಳು ಮತ್ತು ಪರಿಗಣನೆಗಳನ್ನು ಒಳಗೊಂಡಂತೆ ವಿಲ್ ಬರೆಯಲು ಬೇಕಾದ ಮಾರ್ಗದರ್ಶನವನ್ನು ಈ ಮಾಡ್ಯೂಲ್ ನೀಡುತ್ತದೆ.
ಪ್ರಸ್ತುತಪಡಿಸಿದ ಕಾನ್ಸೆಪ್ಟ್ ಬಗ್ಗೆ ತಮ್ಮ ತಿಳುವಳಿಕೆಯನ್ನು ಪರಿಶೀಲಿಸಲು ಮತ್ತು ಅದನ್ನು ಬಲಪಡಿಸಲು ಕೋರ್ಸ್ ನ ರೀಕ್ಯಾಪ್ ಒದಗಿಸಲಾಗಿದೆ.
ಈ ಮಾಡ್ಯೂಲ್ ನೆಮ್ಮದಿ ಮತ್ತು ಆರ್ಥಿಕ ಸಮೃದ್ಧಿಯ ನಡುವಿನ ಸಂಪರ್ಕವನ್ನು ಕಲ್ಪಿಸುತ್ತದೆ ಮತ್ತು ಧನಾತ್ಮಕ ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ತಮ್ಮ ಹಣಕಾಸನ್ನು ನಿರ್ವಹಣೆ ಮಾಡಲು ಬಯಸುವ ಯುವ ವಯಸ್ಕರಿಂದ ಹಿಡಿದು ನಿವೃತ್ತರಾಗಿರುವವರೆಗಿನ ಎಲ್ಲಾ ವ್ಯಕ್ತಿಗಳು
- ತಮ್ಮ ಹಣವನ್ನು ನಿರ್ವಹಿಸಲು ಸರಿಯಾದ ಜ್ಞಾನ ಅಥವಾ ಸಂಪನ್ಮೂಲಗಳ ಕೊರತೆಯನ್ನು ಅನುಭವಿಸುವವರು
- ವೈಯಕ್ತಿಕ ಹಣಕಾಸಿನ ಬಗ್ಗೆ ತಿಳಿಯಲು ಬಯಸುವ ಎಲ್ಲಾ ಆದಾಯ ಮಟ್ಟದ ಮತ್ತು ಹಿನ್ನೆಲೆಯ ವ್ಯಕ್ತಿಗಳು
- ಸಾಲವನ್ನು ತೊಡೆದುಹಾಕಲು ಮತ್ತು ಬಲವಾದ ಆರ್ಥಿಕ ಅಡಿಪಾಯವನ್ನು ರಚಿಸಲು ಬಯಸುವವರು
- ತಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ ಮತ್ತು ದೀರ್ಘಾವಧಿಯಲ್ಲಿ ಸಂಪತ್ತನ್ನು ನಿರ್ಮಿಸಲು ಬಯಸುವವರು
- ವೈಯಕ್ತಿಕ ಹಣಕಾಸು ಪರಿಕಲ್ಪನೆಗಳ ತಿಳುವಳಿಕೆ, ಉದಾಹರಣೆಗೆ ಬಜೆಟ್, ಉಳಿತಾಯ, ಹೂಡಿಕೆ ಮತ್ತು ಸಾಲವನ್ನು ನಿರ್ವಹಿಸುವುದು
- ಸ್ಟಾಕ್‌ಗಳು, ಬಾಂಡ್‌ಗಳು, ಮ್ಯೂಚುಯಲ್ ಫಂಡ್‌ಗಳು ಮತ್ತು ರಿಯಲ್ ಎಸ್ಟೇಟ್‌ನಂತಹ ವಿವಿಧ ಹೂಡಿಕೆ ಆಯ್ಕೆಗಳ ಜ್ಞಾನ
- ಸಮತೋಲಿತ ಮತ್ತು ವೈವಿಧ್ಯಮಯ ಹೂಡಿಕೆ ಬಂಡವಾಳವನ್ನು ರಚಿಸುವ ತಂತ್ರಗಳು
- ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಆದಾಯವನ್ನು ಹೆಚ್ಚಿಸಲು ತಂತ್ರಗಳು
- ವೈಯಕ್ತಿಕ ಹಣಕಾಸಿನ ಮೇಲೆ ತೆರಿಗೆ ಪ್ರಭಾವವನ್ನು ತಿಳಿದು ಮತ್ತು ತೆರಿಗೆ ತಂತ್ರಗಳ ಮೂಲಕ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ಬಯಸುವವರು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...