Our Story

ನಮ್ಮ ವಿಷನ್

"ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನೋಪಾಯವನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಅವರನ್ನು ಸಬಲೀಕರಣಗೊಳಿಸುವುದು."

ನಮ್ಮ ಮಿಷನ್

1. T ಪ್ರತಿಯೊಬ್ಬರಿಗೂ ಜ್ಞಾನ ಮತ್ತು ಅವಕಾಶಗಳಿಗೆ ಪ್ರವೇಶವನ್ನು ಒದಗಿಸುವುದು.

2. ಕಮ್ಯೂನಿಟಿ ಲೆಡ್ ಕಾಮರ್ಸ್ ಮೂಲಕ ಜೀವನೋಪಾಯದ ಅವಕಾಶಗಳಿಗೆ ಪ್ರವೇಶವನ್ನು ಒದಗಿಸುವುದು.

ffreedom.com ಹಿಂದಿನ ಕಥೆ

ffreedom.comನ ಸಂಸ್ಥಾಪಕ ಮತ್ತು CEO ಆಗಿರುವ Mr.Sudheer C.S ಅವರು ಈ ಹಿಂದೆ ಪ್ರಮುಖ MNC ಬ್ರೋಕಿಂಗ್ ಹೌಸ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಅವರು ಒಬ್ಬ ಆಟೋ ಚಾಲಕನನ್ನು 2008ರ ಆರಂಭದಲ್ಲಿ ಭೇಟಿಯಾದರು. ‘ಒಮ್ಮೆ 25,000 ಪಾವತಿಸಿದರೆ 3 ವರ್ಷದ ನಂತರ 1 ಲಕ್ಷ ವಾಪಸ್‌ ಸಿಗುತ್ತದೆ’ ಎಂಬ ಭರವಸೆಯನ್ನು ನೀಡಿ ತಮ್ಮ ಸಂಸ್ಥೆಯ ಸೇಲ್ಸ್ ವ್ಯಕ್ತಿಯೊಬ್ಬರು ವಿಮಾ ಪಾಲಿಸಿಯನ್ನು ಆಟೋ ಚಾಲಕನಿಗೆ ಮಾರಾಟ ಮಾಡಿರುವ ವಿಷಯವನ್ನು ಸುಧೀರ್ ಅವರು ಆಟೋ ಚಾಲಕನ ಮೂಲಕವೇ ತಿಳಿದುಕೊಂಡರು.

ಆದರೆ ಅಂತಹ ಯಾವುದೇ ಪಾಲಿಸಿಗಳು ಲಭ್ಯವಿಲ್ಲ ಎಂಬುದನ್ನು ಸುಧೀರ್ ಅವರು ತಿಳಿದಿದ್ದರು. ಆದರೂ ಪಾಲಿಸಿಯ ಡಾಕ್ಯುಮೆಂಟ್ ಅನ್ನು ಓದಿದಾಗ ಅದು ರೆಗ್ಯುಲರ್ ಪ್ರೀಮಿಯಂ ULIP ಪಾಲಿಸಿ ಎಂಬುದು ಅವರಿಗೆ ತಿಳಿಯಿತು, ಈ ಪಾಲಿಸಿಯ ಪ್ರಕಾರ ಗ್ರಾಹಕರು ತಲಾ 25,000 ರೂಪಾಯಿಯನ್ನು 3 ವರ್ಷಗಳವರೆಗೆ ಪಾವತಿಸಬೇಕಾಗುತ್ತದೆ ಮತ್ತು ಮಾರುಕಟ್ಟೆಯ ಪರ್ಫಾರ್ಮೆನ್ಸ್ ಆಧಾರದ ಮೇಲೆ, ಗ್ರಾಹಕರು 3 ವರ್ಷಗಳ ನಂತರ 50,000 ಅಥವಾ 75,000 ಅಥವಾ 1 ಲಕ್ಷ ರೂ.ಗಳನ್ನು ಮರಳಿ ಪಡೆಯಬಹುದಾಗಿದೆ.

ಆದರೆ ಬಡಪಾಯಿ ಆಟೋ ಡ್ರೈವರ್‌ಗೆ ಈ ಎಲ್ಲ ನಿಯಮಗಳು ಮತ್ತು ಷರತ್ತುಗಳು ಮತ್ತು ಪಾಲಿಸಿಯ ಬಗ್ಗೆ ಸಂಪೂರ್ಣ ವಿವರಗಳು ತಿಳಿದಿಲ್ಲ ಎಂಬುದು ಸ್ಪಷ್ಟವಾಗಿತ್ತು. ಇದರ ಜೊತೆಗೆ, ಬೆಂಗಳೂರಿನ ಒಬ್ಬ ಆಟೋ ಡ್ರೈವರ್‌ಗೆ ತನ್ನ ಉಳಿದ ಕಂತುಗಳಿಗೆ ಪ್ರತಿ ವರ್ಷ 25,000 ರೂಪಾಯಿಗಳನ್ನು ಉಳಿಸುವುದು ಅಕ್ಷರಶಃ ಅಸಾಧ್ಯವಾದ ಮಾತಾಗಿತ್ತು. ಈ ಘಟನೆಯು ಸುಧೀರ್ ಅವರನ್ನು ಬೆಚ್ಚಿಬೀಳಿಸಿತು, ಮತ್ತು ಅವರು ಇದೇ ಸಂದರ್ಭದಲ್ಲಿ ಜನರಿಗೆ ಪ್ರಾಮಾಣಿಕವಾದ ಮತ್ತು ನಿಷ್ಪಕ್ಷಪಾತವಾದ ಆರ್ಥಿಕ ಸಲಹೆಗಳ ಅಗತ್ಯವಿರುವುದನ್ನು ಮನಗಂಡರು ಮತ್ತು ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪರಿಹಾರವನ್ನು ಕಂಡುಹಿಡಿಯಲು ಅವರು ತಕ್ಷಣವೇ ಯೋಚಿಸಲು ಪ್ರಾರಂಭಿಸಿದರು. ಅಂತಿಮವಾಗಿ ಫೈನಾನ್ಷಿಯಲ್ ಸರ್ವಿಸ್ ಇಂಡಸ್ಟ್ರಿಯಲ್ಲಿ ಹೆಚ್ಚಾಗಿರುವ ಅನ್-ಎಥಿಕಲ್ ಸೇಲ್ಸ್ ಪ್ರಾಕ್ಟೀಸ್ ಗಳನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ffreedom.com ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.

ಇದರ ಜೊತೆಗೆ ಪಾಲಿಸಿಯನ್ನು ಖರೀದಿಸಲು ಆಟೋ ಡ್ರೈವರ್‌ ಹಾಕಿದ್ದ ಹಣವನ್ನಾದರೂ ಹಿಂಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಸುಧೀರ್ ಅವರು ಸ್ವತಃ ತಮ್ಮ 25,000 ರೂ. ಗಳನ್ನು ಅವರಿಗೆ ನೀಡಿದರು ಮತ್ತು ತಮ್ಮ ರಾಜೀನಾಮೆ ಪತ್ರವನ್ನು ಅವರ ಕಂಪನಿಯ ಸಿಇಒಗೆ ಸಲ್ಲಿಸಿದರು.