ನೀವು ಹೋಮ್ ಲೋನ್ ಮಾಡಿ ಮನೆ ಕೊಂಡುಕೊಳ್ಳುವ ಯೋಚನೆಯಲ್ಲಿದ್ದೀರಾ? ಹಾಗಾದರೆ ಲಭ್ಯವಿರುವ ವಿವಿಧ ರೀತಿಯ ಗೃಹ ಸಾಲಗಳನ್ನು ಮತ್ತು ಗೃಹ ಸಾಲವನ್ನು ಪಡೆಯುವ ಪ್ರಕ್ರಿಯೆಯನ್ನು ಮೊದಲು ಅರ್ಥಮಾಡಿಕೊಳ್ಳುವುದು ಮುಖ್ಯ. ಅದನ್ನು ನಾವು ಈ ಕೋರ್ಸ್ ಮೂಲಕ ಹೇಳಿಕೊಡುತ್ತೇವೆ. ಅಲ್ಲದೆ ಗೃಹ ಸಾಲದ ಅರ್ಹತೆ ಮತ್ತು ಅರ್ಜಿಯ ಸಂಕೀರ್ಣ ವಿಚಾರಗಳನ್ನು ಕೂಡ ನಿಮಗೆ ಇಲ್ಲಿ ಹೇಳಿ ಕೊಡಲಾಗುತ್ತದೆ.
ಹೋಮ್‌ಲೋನ್ ಗೆ ಅಪ್ಲೈ ಮಾಡಲು ಅಗತ್ಯವಿರುವ ಎಲ್ಲ ಸಮಗ್ರ ಮಾಹಿತಿ ಮತ್ತು ಜ್ಞಾನವನ್ನು ನಿಮಗೆ ನಾವು ಈ ಕೋರ್ಸ್ ಮೂಲಕ ಕೊಡುತ್ತಿದ್ದೇವೆ. ಸಿ.ಎಸ್.ಸುಧೀರ್ ಅವರು ನಿಮಗೆ ಇಲ್ಲಿ ಮಾರ್ಗದರ್ಶನ ನೀಡುತ್ತಾರೆ. ಮನೆ ಖರೀದಿಗೆ ಸರಿಯಾದ ಬಜಟ್ ಮಾಡುವುದು ಹೇಗೆ, ಉತ್ತಮ ಕ್ರೆಡಿಟ್ ಸ್ಕೋರ್‌ನ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಲಭ್ಯವಿರುವ ವಿವಿಧ ರೀತಿಯ ಗೃಹ ಸಾಲಗಳ ಬಗ್ಗೆ ನೀವು ತಿಳಿಯುವಿರಿ. ಬಡ್ಡಿ ದರ ಮತ್ತು ನಿಯಮಗಳನ್ನು ಹೇಗೆ ಹೋಲಿಸುವುದು ಮತ್ತು ನಿಮ್ಮ ನಿರ್ದಿಷ್ಟ ಅಗತ್ಯಗಳಿಗಾಗಿ ಉತ್ತಮ ಸಾಲವನ್ನು ಹೇಗೆ ಆಯ್ಕೆ ಮಾಡುವುದು ಎಂಬುವುದನ್ನು ಕೂಡ ನೀವು ಕಲಿಯುವಿರಿ.
ಈ ಕೋರ್ಸ್ ಅಂತ್ಯದ ವೇಳೆಗೆ ನಿಮ್ಮ ಹೋಮ್‌ಲೋನ್ ಬಗ್ಗೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ನಿಮ್ಮ ಕನಸಿನ ಮನೆಯನ್ನು ಹೊಂದಲು ಅಗತ್ಯವಿರುವ ಎಲ್ಲಾ ಕ್ರಮಗಳ ಬಗ್ಗೆ ಅರಿಯುವಿರಿ. ನೀವು ಮೊದಲ ಬಾರಿಗೆ ಮನೆ ಖರೀದಿ ಮಾಡುವವರಾಗಿರಲಿ ಅಥವಾ ಈಗಾಗಲೇ ಮನೆ ಕೊಂಡುಕೊಂಡವರಾಗಿರಲಿ, ಈ ಕೋರ್ಸ್ ನಿಮಗೆ ಸರಳವಾದ ಭಾಷೆಯಲ್ಲಿ ಹೋಮ್‌ಲೋನ್ ಬಗ್ಗೆ ತಿಳಿಸಿಕೊಡುತ್ತದೆ. ಅದರಲ್ಲಿ ಇರುವ ಎಲ್ಲ ಹಂತಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಇನ್ಯಾಕೆ ಯೋಚನೆ ಈಗಲೇ ಹೋಮ್‌ಲೋನ್ ಕೋರ್ಸ್ ವೀಕ್ಷಿಸಿ.
ಹೋಮ್ ಲೋನ್‌ಗಳ ಮೂಲಭೂತ ಅಂಶಗಳನ್ನು ಮತ್ತು ಅರ್ಜಿ ಸಲ್ಲಿಸುವ ಮೊದಲು ಅದರ ಹಂತಗಳನ್ನು ತಿಳಿದುಕೊಳ್ಳಿ
ವಿವಿಧ ರೀತಿಯ ಹೋಮ್ ಲೋನ್‌ಗಳನ್ನು ಅನ್ವೇಷಿಸಿ ಮತ್ತು ಯಾವುದು ನಿಮಗೆ ಉತ್ತಮವಾಗಿದೆ ಎಂಬುದನ್ನು ಕಂಡುಕೊಳ್ಳಿ.
ನಿಮ್ಮ ಹೋಮ್ ಲೋನ್ ಬಡ್ಡಿದರದ ಮೇಲೆ ಪ್ರಭಾವ ಬೀರುವ ಅಂಶಗಳ ತಿಳುವಳಿಕೆಯನ್ನು ಪಡೆದುಕೊಂಡು ಅದನ್ನು ಸುಧಾರಣೆ ಮಾಡುವ ಅಂಶಗಳ ಬಗ್ಗೆ ಅರಿಯಿರಿ
ಭಾರತದಲ್ಲಿ ಅಗ್ಗದ ಹೋಮ್ ಲೋನ್ ದರವನ್ನು ಹೇಗೆ ಪಡೆಯುವುದು ಎಂದು ತಿಳಿಯಿರಿ.
ಹೋಮ್ ಲೋನ್‌ನೊಂದಿಗೆ ಬರುವ ವಿವಿಧ ರೀತಿಯ ಶುಲ್ಕಗಳನ್ನು ಅರ್ಥಮಾಡಿಕೊಳ್ಳಿ
ಹೋಮ್ ಲೋನ್ ಅನ್ನು ಸುರಕ್ಷಿತವಾಗಿರಿಸಲು ಮಾಡಬೇಕಾದ ಮತ್ತು ಮಾಡಬಾರದ ಸಂಗತಿ ಮತ್ತು ಸಾಮಾನ್ಯ ತಪ್ಪುಗಳ ಬಗ್ಗೆ ತಿಳಿದುಕೊಳ್ಳಿ
ನಿಮ್ಮ ಹೋಮ್ ಲೋನ್ ಅರ್ಜಿಯನ್ನು ನಿರಾಕರಿಸಿದರೆ ಏನು ಮಾಡಬೇಕು ಮತ್ತು ನೀವು ಯಶಸ್ಸು ಪಡೆಯುವ ಅವಕಾಶಗಳನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎಂದು ತಿಳಿಯಿರಿ
ಪದೇ ಪದೇ ಕೇಳಲಾಗುವ ಹೋಮ್ ಲೋನ್ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ.
ಹೋಮ್ ಲೋನ್ ಅನ್ನು ಸುರಕ್ಷಿತಗೊಳಿಸುವ ಮಾನದಂಡಗಳ ಬಗ್ಗೆ ಮತ್ತು ನಿಮ್ಮ ಅನುಮೋದನೆಯ ಸಾಧ್ಯತೆಗಳ ಕುರಿತು ತಿಳಿಯಿರಿ.
- ಮೊದಲ ಬಾರಿಗೆ ಮನೆ ಖರೀದಿಸುವವರು
- ಗೃಹ ಸಾಲದ ಬಗ್ಗೆ ತಿಳಿದುಕೊಳ್ಳಲು ಬಯಸುವವರು
- ತಮ್ಮ ಆರ್ಥಿಕ ಭವಿಷ್ಯದ ಬಗ್ಗೆ ಕಾಳಜಿ ಇರುವವರು
- ಸರಳವಾಗಿ ಮತ್ತು ಸುಲಭವಾಗಿ ಮಾಹಿತಿ ಬಯಸುವವರು
- ಹೋಮ್‌ಲೋನ್ ಬಗ್ಗೆ ತಿಳಿಯಲು ಬಯಸುವವರು


- ಗೃಹ ಸಾಲದ ಮೂಲಭೂತ ಅಂಶಗಳು
- ಗೃಹ ಸಾಲ ಪಡೆಯಲು ಅರ್ಹತೆ ನಿರ್ಧರಿಸುವ ಅಂಶಗಳು
- ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ಪಡೆಯುವುದು
- ವಿವಿಧ ರೀತಿಯ ಗೃಹ ಸಾಲಗಳು
- ಬಡ್ಡಿ ದರ ಮತ್ತು ನಿಯಮಗಳು
- ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು ಮತ್ತು ಅಗತ್ಯ ದಾಖಲೆಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...