ffreedom app ನ "ನಿಮ್ಮ ಮೊದಲ ಮನೆಯನ್ನು ಸುಲಭವಾಗಿ ಖರೀದಿಸುವುದು ಹೇಗೆ?" ಕೋರ್ಸ್‌ಗೆ ಸುಸ್ವಾಗತ. ನೀವು ತುಂಬಾ ಸುಲಭದಲ್ಲಿ ಸ್ವಂತ ಮನೆ ಖರೀದಿ ಮಾಡಬೇಕೆ? ಹಾಗಾದರೆ ffreedom app ರಿಸರ್ಚ್ ಟೀಮ್ ವಿನ್ಯಾಸಗೊಳಿಸಿದ ಈ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆ! ಪ್ರಸಿದ್ಧ ಪತ್ರಕರ್ತ ಮತ್ತು ನಮ್ಮ ಸಂಸ್ಥೆಯ ಕ್ರಿಯೇಟಿವ್ ಡೈರೆಕ್ಟರ್ ಅಭಿಷೇಕ್ ರಾಮಪ್ಪ ಈ ಕೋರ್ಸ್‌ನಲ್ಲಿ ನಿಮ್ಮ ಮಾರ್ಗದರ್ಶಕರಾಗಿರುತ್ತಾರೆ ಮತ್ತು ಪ್ರತಿ ವಿಷಯವನ್ನು ಕೂಲಂಕಷವಾಗಿ ವಿವರಿಸುತ್ತಾರೆ.
ಒಂದು ಸ್ವಂತ ಮನೆ ಖರೀದಿಸಬೇಕು ಎನ್ನುವುದು ಪ್ರತಿಯೊಬ್ಬರ ಕನಸು. “ಸ್ವಂತಕ್ಕೊಂದು ಮನೆ ಇಲ್ಲಾ ಅಂದ್ರೆ ಏನ್ ಜೀವನ ಗುರೂ ಅದು” ಎಂದು ಭಾವಿಸುವ ಮಂದಿ ನಾವು. ನಮಗೆ ಅಂತ ಒಂದು ಸೂರು ಕೊಳ್ಳೋದು ಖಂಡಿತಾ ತಪ್ಪಲ್ಲ. ಆದರೆ ಯಾವ ಹಂತದಲ್ಲಿ ನಾವು ಮನೆ ಖರೀದಿಗೆ ಮುಂದಾಗಬೇಕು? ಮನೆ ಕೊಳ್ಳುವುದರಿಂದ ಆಗುವ ಪ್ಲಸ್ ಮೈನಸ್ ಏನು? ಖರೀದಿಗೂ ಮೊದಲು ಮಾಡಲೇಬೇಕಾದ ಸಿದ್ಧತೆ-ತಯಾರಿಗಳು ಏನೇನು ಎಂದು ತಿಳಿಯುವುದು ಬಹಳ ಮುಖ್ಯ. ಅದನ್ನೆಲ್ಲ ನಿಮಗೆ ಕಲಿಸುವುದಕ್ಕಾಗಿಯೇ ಈ ಕೋರ್ಸ್ ಡಿಸೈನ್ ಮಾಡಲಾಗಿದೆ.
ಈ ಕೋರ್ಸ್ ನಲ್ಲಿ ನೀವು, ನಿಮಗೆ ಬಾಡಿಗೆ ಮನೆ ಮತ್ತು ಸ್ವಂತಮನೆಯಲ್ಲಿ ಯಾವುದು ಸೂಕ್ತ, ಸ್ವಂತ ಮನೆಯ ಪ್ರಯೋಜನಗಳು, ಮನೆ ಖರೀದಿ ಬಗ್ಗೆ ಇರುವ ತಪ್ಪು ಕಲ್ಪನೆಗಳು, ತೆರಿಗೆ ಪ್ರಯೋಜನಗಳು, ಮನೆ ಖರೀದಿಸಲು ಸೂಕ್ತ ಸಮಯ, ಸ್ವಂತ ಮನೆ ಖರೀದಿಸುವಾಗ ಅನುಸರಿಸಬೇಕಾದ 03/20/30/40 ಥಂಬ್ ರೂಲ್ಸ್, ಸ್ವಂತ ಮನೆ ಖರೀದಿಯಲ್ಲಿ ಎದುರಾಗುವ ಅಪಾಯಗಳು ಮತ್ತು ಅವುಗಳಿಗೆ ಪರಿಹಾರಗಳನ್ನುವಿವರವಾಗಿ ಕಲಿಯುತ್ತೀರಿ
ಇನ್ನು ಹಣಕಾಸಿನ ವಿಚಾರಕ್ಕೆ ಬರುವುದಾದರೆ, ಮನೆ ಖರೀದಿಸುವಾಗ ಡೌನ್ ಪೇಮೆಂಟ್ ಎಷ್ಟು ಮಾಡಬೇಕು? ಡೌನ್ ಪೇಮೆಂಟ್ ಹಣವನ್ನು ಹೊಂದಿಸುವುದು ಹೇಗೆ? ಹೋಮ್ ಲೋನ್ ಎಷ್ಟು ತೆಗೆದುಕೊಳ್ಳಬೇಕು? ಲೋನ್ ಅವಧಿ ಎಷ್ಟಿರಬೇಕು? ಹೋಮ್ ಲೋನ್ ಬಡ್ಡಿ ಹೊರೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದು ಹೇಗೆ? ಅನ್ನುವುದನ್ನೂ ಕೂಡ ಕಲಿಯುತ್ತೀರಿ. ಹೀಗಾಗಿ ಸಂಪೂರ್ಣ ಕೋರ್ಸ್ ನೋಡಿ ಮುಗಿಸುವ ಹೊತ್ತಿಗೆ ಸ್ವಂತ ಮನೆ ಖರೀದಿ ವಿಚಾರದಲ್ಲಿ ನೀವು ಎಕ್ಸ್ ಪರ್ಟ್ ಆಗುತ್ತೀರಿ. ಇನ್ಯಾಕೆ ತಡ? ಈಗಲೇ ಸಂಪೂರ್ಣ ಕೋರ್ಸ್ ವೀಕ್ಷಿಸಿ, ನೀವೂ ಒಂದು ಸ್ವಂತ ಸೂರು ಮಾಡಿಕೊಳ್ಳಿ.
ಈ ಮಾಡ್ಯೂಲ್ ನಲ್ಲಿ ಸ್ವಂತ ಮನೆಯ ಪ್ರಯೋಜನಗಳು, ಮನೆ ಖರೀದಿ ಬಗ್ಗೆ ಇರುವ ತಪ್ಪು ಕಲ್ಪನೆಗಳು, ತೆರಿಗೆ ಪ್ರಯೋಜನಗಳು ಮೊದಲಾವುಗಳನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಸೈಟ್ ಮತ್ತು ಡೌನ್ ಪೇಮೆಂಟ್ ಇರುವವರು, ಕೇವಲ ಸೈಟ್ ಇರುವವರು, ಪಾಲುದಾರಿಕೆಯಲ್ಲಿ ಮತ್ತು ನಿವೃತ್ತಿಗೆ ಹತ್ತಿರದಲ್ಲಿರುವವರು ಸ್ವಂತ ಮನೆ ಹೊಂದುವ ಪ್ಲಾನ್ ಬಗ್ಗೆ ಕಲಿಯುತ್ತೀರಿ
ಈ ಮ್ಯಾಡ್ಯೂಲ್ ನಲ್ಲಿ ನಿಮ್ಮ ಆರ್ಥಿಕ ಸ್ಥಿತಿ, ವೃತ್ತಿ ಜೀವನ ಮತ್ತು ಜೀವನಶೈಲಿಯನ್ನು ಅವಲಂಬಿಸಿ ನೀವು ಮನೆ ಖರೀದಿಸಲು ಸೂಕ್ತ ಸಮಯ ಯಾವುದು ಎಂಬುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ದೀರ್ಘಾವಧಿ ಹೋಮ್ ಲೋನ್ ನಿಂದ ಆಗುವ ಅಪಾಯಗಳು, ಅಸಲಿಗಿಂತ ಹೆಚ್ಚಾಗುವ ಬಡ್ಡಿಯ ಲೆಕ್ಕಾಚಾರಗಳನ್ನು ಕಲಿಯುತ್ತೀರಿ
ಬಾಡಿಗೆ ಮತ್ತು ಸ್ವಂತ ಮನೆಯ ಎರಡೂ ಆಯ್ಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿಮಗೆ ಯಾವುದು ಸೂಕ್ತ ಎಂಬುದನ್ನು ನಿರ್ಧರಿಸಲು ಈ ಮಾಡ್ಯೂಲ್ ನಿಮಗೆ ಸಹಾಯ ಮಾಡುತ್ತದೆ.
ಈ ಮಾಡ್ಯೂಲ್ ನಲ್ಲಿ ಸ್ವಂತ ಮನೆ ಖರೀದಿಸುವಾಗ ನೀವು ಅನುಸರಿಸಬೇಕಾದ 03/20/30/40 ಥಂಬ್ ರೂಲ್ಸ್‌ಗಳನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಮನೆ ಖರೀದಿಸಲು ನಿಮಗೆ ಬೇಕಾದ ದೊಡ್ಡ ಮೊತ್ತದ ಡೌನ್ ಪೇಮೆಂಟ್ ಹಣವನ್ನು ಹೇಗೆ ಹೊಂದಿಸಬೇಕು ಎಂಬುದರ ಕುರಿತು ವಿವಿಧ ಮಾರ್ಗಗಳನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಸ್ವಂತ ಮನೆ ಖರೀದಿಸುವಾಗ ನೀವು ಪರಿಗಣಿಸಬೇಕಾದ ಕೆಲವು ಪ್ರಮುಖವಾದ ಅಂಶಗಳು ಯಾವುವು ಎಂಬುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಮನೆ ಖರೀದಿಸುವಾಗ ನೀವು ಮಾಡಬೇಕಾದ ಮತ್ತು ಮಾಡಬಾರದ ಕೆಲವು ವಿಷಯಗಳನ್ನು ಕಲಿಯುತ್ತೀರಿ
10)ಈ ಮಾಡ್ಯೂಲ್ ನಲ್ಲಿ ಸ್ವಂತ ಮನೆ ಖರೀದಿಯಲ್ಲಿ ಎದುರಾಗುವ ಅಪಾಯಗಳು ಯಾವುವು ಮತ್ತು ಅವುಗಳಿಗೆ ಪರಿಹಾರ ಏನು ಎಂಬುದನ್ನು ಕಲಿಯುತ್ತೀರಿ
ಎಷ್ಟೋ ಸಂದರ್ಭದಲ್ಲಿ ಗೃಹ ಸಾಲದ ಅಸಲಿನ ಮೊತ್ತಕ್ಕಿಂತ ಬಡ್ಡಿಯನ್ನೇ ಜಾಸ್ತಿ ಕಟ್ಟಿರ್ತೀವಿ. ಆದರೆ ಈ ಬಡ್ಡಿ ಹೊರೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸುವ ಮಾರ್ಗವೊಂದನ್ನು ಈ ಮಾಡ್ಯೂಲ್ ನಲ್ಲಿ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಮೊದಲು ಸಾಲ ತೀರಿಸುವುದು ಅಥವಾ ಹೂಡಿಕೆ ಮಾಡುವುದು ಉತ್ತಮ ಎಂಬುದರ ಕುರಿತು ಕಲಿಯುತ್ತೀರಿ.
ಈ ಮಾಡ್ಯೂಲ್ ನಲ್ಲಿ ಮನೆ ಖರೀದಿಯ ಕುರಿತು ಜನರು ಹೆಚ್ಚಾಗಿ ಕೇಳುವ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ
- ಮೊದಲ ಸ್ವಂತ ಮನೆ ಖರೀದಿಸಲು ಸಿದ್ಧರಾಗಿರುವವರು
- ಸ್ವಂತ ಮನೆ ಖರೀದಿಯ ಬಗ್ಗೆ ಗೊಂದಲದಲ್ಲಿರುವವರು
- ಸ್ವಂತ ಮನೆ ಖರೀದಿಯಲ್ಲಿನ ಪ್ಲಸ್-ಮೈನಸ್ ತಿಳಿಯಲು ಬಯಸುವವರು
- ಮನೆ ಖರೀದಿಯ ಪ್ರಕ್ರಿಯೆ ಸರಳಗೊಳಿಸಲು ಬಯಸುವವರು
- ಮನೆ ಖರೀದಿ ಬಗ್ಗೆ ಸಮಗ್ರ ಮಾಹಿತಿ ಪಡೆಯಲು ಬಯಸುವವರು
- ಹೂಡಿಕೆಯಾಗಿ ಮನೆ ಖರೀದಿಸಲು ಬಯಸುವವರು
- ಸ್ವಂತ ಮನೆ ಖರೀದಿಸಲು ಸೂಕ್ತ ಸಮಯ
- ಬಾಡಿಗೆ ಅಥವಾ ಸ್ವಂತ ಮನೆ ಯಾವುದು ಉತ್ತಮ ಎಂಬ ನಿರ್ಧಾರ
- ಡೌನ್ ಪೇಮೆಂಟ್ ಹಣವನ್ನು ಸಂಗ್ರಹಿಸುವ ತಂತ್ರ
- ಮನೆ ಖರೀದಿ ವೇಳೆ ಮಾಡಬೇಕಾದ ಮತ್ತು ಮಾಡಬಾರದಾದ ಕೆಲಸಗಳು
- ಮನೆ ಖರೀದಿಯಲ್ಲಿನ ಅಪಾಯಗಳು ಮತ್ತು ಪರಿಹಾರಗಳು
- 0% ಹೋಮ್ ಲೋನ್ ತಂತ್ರಗಾರಿಕೆ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.