ಎರೆಹುಳ ಗೊಬ್ಬರ ಸಾವಯವ ತ್ಯಾಜ್ಯವನ್ನು ಉತ್ತಮ ಗುಣಮಟ್ಟದ ಗೊಬ್ಬರವಾಗಿ ಪರಿವರ್ತಿಸಲು ಪರಿಸರ ಸ್ನೇಹಿ ಮತ್ತು ಸಮರ್ಥನೀಯ ಆಯ್ಕೆಯಾಗಿದೆ.ಎರೆಹುಳ ಗೊಬ್ಬರವನ್ನು ತಯಾರುಸುವುದು ಹೇಗೆ? ಮಾರಾಟ ಮಾಡುವುದು ಹೇಗೆ ಎಂಬುವುದು ಸೇರಿದಂತೆ ಎರೆಹುಳ ಗೊಬ್ಬರ ಬಿಸಿನೆಸ್ ಆರಂಭಿಸುವ ಬಗ್ಗೆ ಈ ಕೋರ್ಸ್‌ನಲ್ಲಿ ತಿಳಿಸಲಾಗುವುದು.
ಈ ಕೋರ್ಸ್ ತಮ್ಮದೇ ಆದ ಬಿಸಿನೆಸ್ ಆರಂಭಿಸಲು ಬಯಸುವವರಿಗೆ ಅಥವಾ ಈಗಾಗಲೇ ತ್ಯಾಜ್ಯ ನಿರ್ವಹಣೆ ಅಥವಾ ಕೃಷಿ ಉದ್ಯಮದಲ್ಲಿ ಮತ್ತು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ವಿಸ್ತರಿಸಲು ಬಯಸುವವರಿಗೆ ಸೂಕ್ತವಾಗಿದೆ. ವಿವಿಧ ರೀತಿಯ ಹುಳುಗಳು, ಕಾಂಪೋಸ್ಟಿಂಗ್ ಪದಾರ್ಥಗಳು ಮತ್ತು ಎರೆಹುಳ ಗೊಬ್ಬರವನ್ನು ಕೊಯ್ಲು ಮತ್ತು ಪ್ರಕ್ರಿಯೆಗೊಳಿಸಲು ಬಳಸುವ ವಿಧಾನಗಳನ್ನು ಒಳಗೊಂಡಂತೆ ವರ್ಮಿಕಾಂಪೋಸ್ಟಿಂಗ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೋರ್ಸ್‌ನಲ್ಲಿ ಪಡೆಯುವಿರಿ.
ಎರೆಹುಳ ಗೊಬ್ಬರ ಪ್ರಯೋಜನಕಾರಿಯೇ? ಹೌದು ಇಂದು ಕೃಷಿ ಮತ್ತು ತೋಟಗಾರಿಕೆ ಉದ್ಯಮಗಳಲ್ಲಿ ಎರೆಹುಳ ಗೊಬ್ಬರಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಎರೆಹುಳ ಗೊಬ್ಬರ ಹೆಚ್ಚು ಲಾಭದಾಯಕ ವ್ಯವಹಾರವಾಗಿದೆ. ಈ ಗೊಬ್ಬರ ಅಗತ್ಯವಾದ ಸಸ್ಯ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ ಮತ್ತು ಮಣ್ಣಿನ ರಚನೆ ಮತ್ತು ನೀರಿನ ಧಾರಣವನ್ನು ಸುಧಾರಿಸಲು ಹೆಸರುವಾಸಿಯಾಗಿದೆ. ಇದು ಅನೇಕ ಬೆಳೆಗಳಿಗೆ ಉತ್ತಮ ಗೊಬ್ಬರವಾಗಿದೆ.
ಈ ಕೋರ್ಸ್ ಮೂಲಕ ನೀವು ಎರೆಹುಳ ಗೊಬ್ಬರ ವ್ಯವಸ್ಥೆಯನ್ನು ಹೇಗೆ ಹೊಂದಿಸುವುದು, ಎರೆಹುಳ ಗೊಬ್ಬರವನ್ನು ಹೇಗೆ ಮಾರಾಟ ಮಾಡುವುದು, ಈ ಬಿಸಿನೆಸ್ ಹೇಗೆ ಲಾಭದಾಯಕವಾಗಿದೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ಕಲಿಯುವಿರಿ. ನೀವು ವಾಣಿಜ್ಯೋದ್ಯಮಿ, ರೈತರು ಅಥವಾ ತೋಟಗಾರಿಕಾ ತಜ್ಞರಾಗಿರಲಿ, ಈ ಕೋರ್ಸ್ ನಿಮಗೆ ನಿಮ್ಮ ಸ್ವಂತ ವರ್ಮಿಕಾಂಪೋಸ್ಟಿಂಗ್ ಬಿಸಿನೆಸ್ ಆರಂಭಿಸಲು ಮತ್ತು ಅದರಿಂದ ಹಣವನ್ನು ಗಳಿಸುವ ಕೌಶಲ್ಯವನ್ನು ನೀಡುತ್ತದೆ.
ಈ ಉದ್ಯಮದಲ್ಲಿ 30 ವರ್ಷಗಳ ಅನುಭವ ಹೊಂದಿರುವ ಯಶಸ್ವಿ ಎರೆಹುಳು ಕೃಷಿಕ, ಶಿವರಾಮ್ ಈ ಕೋರ್ಸ್‌ನ ಮಾರ್ಗದರ್ಶಕರಾಗಿದ್ದಾರೆ. ಈ ಕೋರ್ಸ್ ಮೂಲಕ ನೀವು ಎರೆಹುಳ ಗೊಬ್ಬರ ತಯಾರಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವಿರಿ.
ಈ ಮಾಡ್ಯೂಲ್ ಕೋರ್ಸ್ ಉದ್ದೇಶಗಳು ಮತ್ತು ಒಳಗೊಂಡಿರುವ ವಿಷಯಗಳ ಚರ್ಚೆಯನ್ನು ಒದಗಿಸುತ್ತದೆ.
ಈ ಮಾಡ್ಯೂಲ್ ಕೋರ್ಸ್ ಮಾರ್ಗದರ್ಶಕರು, ಅವರ ಅರ್ಹತೆಗಳು ಮತ್ತು ವರ್ಮಿಕಾಂಪೋಸ್ಟಿಂಗ್‌ನಲ್ಲಿ ಅವರ ಅನುಭವವನ್ನು ಪಡೆಯಬಹುದು.
ಎರೆಗೊಬ್ಬರವನ್ನು ಉಪಯೋಗಿಸುವುದರಿಂದ ಹಿಡಿದು ಅದರಿಂದಾಗುವ ಲಾಭದವರೆಗೆ ಪೂರ್ಣ ಮಾಹಿತಿಯನ್ನು ವಿವರವಾಗಿ ಪಡೆಯಿರಿ.
ಎರೆಗೊಬ್ಬರಕ್ಕಾಗಿ ಎರೆಹುಳುಗಳನ್ನು ಬಳಕೆ ಮಾಡುವ ಮುಂಚೆ ಅವುಗಳ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ಪಡೆಯಿರಿ.
ಎರೆಹುಳು ಗೊಬ್ಬರದ ಓಪನ್ ಫೀಲ್ಡ್ ವಿಧಾನ, ಇದು ತೆರೆದ ಮೈದಾನದಲ್ಲಿ ವರ್ಮಿಕಾಂಪೋಸ್ಟ್ ಸ್ಥಾಪನೆ, ನಿರ್ವಹಣೆ ಮತ್ತು ಕೊಯ್ಲು ಒಳಗೊಂಡಿರುತ್ತದೆ.
ವರ್ಮಿಕಾಂಪೋಸ್ಟ್ ಪಿಟ್ ವಿಧಾನ ಇದು ಪಿಟ್ ವ್ಯವಸ್ಥೆಯಲ್ಲಿ ವರ್ಮಿಕಾಂಪೋಸ್ಟ್ ಸ್ಥಾಪನೆ, ನಿರ್ವಹಣೆ ಮತ್ತು ಕೊಯ್ಲು ಒಳಗೊಂಡಿರುತ್ತದೆ.
ಎರೆಜಲ ಎಂದರೇನು ಎಂಬುದರ ಬೇಸಿಕ್ ಅಂಶದ ಬಗ್ಗೆ ಮತ್ತು ಅದರ ಪ್ರಯೋಜನದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ.
ವರ್ಮಿಕಾಂಪೋಸ್ಟ್‌ನ ಗ್ರೇಡಿಂಗ್ ಮತ್ತು ಪ್ಯಾಕಿಂಗ್ ಪ್ರಕ್ರಿಯೆ, ವರ್ಮಿಕಾಂಪೋಸ್ಟ್‌ನ ಗುಣಮಟ್ಟ ಮತ್ತು ಮಾರಾಟಕ್ಕೆ ಪ್ಯಾಕಿಂಗ್ ಮಾಡುವ ಪ್ರಕ್ರಿಯೆಯನ್ನು ತಿಳಿಯಿರಿ
ಈ ಮಾಡ್ಯೂಲ್ ವರ್ಮಿಕಾಂಪೋಸ್ಟ್‌ನ ಬೇಡಿಕೆ, ವರ್ಮಿಕಾಂಪೋಸ್ಟಿಂಗ್ ಬಿಸಿನೆಗೆ ತಗುಲುವ ವೆಚ್ಚಗಳು ಮತ್ತು ಲಾಭದಾಯಕತೆಯನ್ನು ಹೇಗೆ ನಿರ್ಧರಿಸುವುದು ಎಂಬುವುದನ್ನು ಕಲಿಯುವಿರಿ.
ಈ ಮಾಡ್ಯೂಲ್ ನಲ್ಲಿ ಯಶಸ್ವಿ ವರ್ಮಿಕಾಂಪೋಸ್ಟಿಂಗ್ ಬಿಸಿನೆಸ್ ಹೇಗೆ ಆರಂಭಿಸುವುದು ಮತ್ತು ಮುನ್ನಡೆಸುವುದು ಹೇಗೆ ಎಂಬುದರ ಕುರಿತು ಮಾರ್ಗದರ್ಶಕರಿಂದ ಸಲಹೆಯನ್ನು ಪಡೆಯುತ್ತೀರಿ.
- ಹೊಸ ಬಿಸಿನೆಸ್ ಪ್ರಾರಂಭಿಸಲು ಬಯಸುವವರು
- ಕೃಷಿ ಇಳುವರಿ ಹೆಚ್ಚಿಸಲು ಬಯಸುವವರು
- ತ್ಯಾಜ್ಯ ನಿರ್ವಹಣೆ ಮಾಡುತ್ತಿರುವವರು
- ವರ್ಮಿಕಾಂಪೋಸ್ಟಿಂಗ್ ಮಾಡುತ್ತಿರುವವರು
- ವರ್ಮಿಕಾಂಪೋಸ್ಟಿಂಗ್ ಬಗ್ಗೆ ತಿಳಿಯಲು ಬಯಸುವವರು


- ವರ್ಮಿಕಾಂಪೋಸ್ಟಿಂಗ್ ವ್ಯವಸ್ಥೆ ಸ್ಥಾಪನೆ ಮತ್ತು ನಿರ್ವಹಣೆ
- ವರ್ಮಿಕಾಂಪೋಸ್ಟ್ ಗೊಬ್ಬರ ಸಂಸ್ಕರಿಸುವಲ್ಲಿ ಪರಿಣತಿ
- ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳು
- ವರ್ಮಿಕಾಂಪೋಸ್ಟ್ ಗೊಬ್ಬರದ ಪ್ರಯೋಜನ ಮತ್ತು ಪರಿಣಾಮಕಾರಿ ಬಳಕೆ
- ವರ್ಮಿಕಾಂಪೋಸ್ಟಿಂಗ್ ಬಿಸಿನೆಸ್ ಲಾಭದಾಯಕವಾಗಿಸಲು ಜ್ಞಾನ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...