ಮನೆಯಿಂದಲೇ ಮಾಡೋ ಬಿಸಿನೆಸ್ ಬಗ್ಗೆ ಗೃಹಿಣಿಯರು ಸಾಕಷ್ಟು ಆಸಕ್ತಿ ಹೊಂದಿರುತ್ತಾರೆ. ಅಂತಹವರಿಗೆಂದೇ ಈ ಟೆರಾಕೋಟ ಆಭರಣ ತಯಾರಿಕೆ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ. ಈ ಕೋರ್ಸ್ ನಲ್ಲಿ ಟೆರಾಕೋಟಾ ಜೇಡಿಮಣ್ಣಿನಿಂದ ಅದ್ಭುತವಾದ ಆಭರಣಗಳನ್ನು ರೂಪಿಸುವುದು ಹೇಗೆ ಎಂಬುದರ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ.
ಇನ್ನುಳಿದಂತೆ ಈ ಕೋರ್ಸ್ ನಲ್ಲಿ ವಿವಿಧ ರೀತಿಯ ಟೆರಾಕೋಟಾ ಆಭರಣಗಳಾದ ನೆಕ್ಲೇಸ್‌ಗಳು, ಕಿವಿಯೋಲೆಗಳು ಮತ್ತು ಬಳೆಗಳನ್ನು ತಯಾರಿಸುವುದು, ತಯಾರಿಕೆಯ ವಿವಿಧ ಹಂತಗಳು, ಮಣ್ಣಿನ ಆಯ್ಕೆ ಮತ್ತು ಆಭರಣ ತಯಾರಿಕೆಗೆ ಮಣ್ಣಿನ ಸಿದ್ಧತೆ, ವಿವಿಧ ರೀತಿಯ ಮೋಲ್ಜ್ ಗಳ ಆಯ್ಕೆ, ಗ್ರಾಹಕರಿಗೆ ಇಷ್ಟವಾಗೋ ರೀತಿಯ ಆಭರಣಗಳ ಸೆಲೆಕ್ಷನ್, ಗ್ರಾಹಕರ ಆಕರ್ಷಣೆ, ಆಭರಣ ತಯಾರಿಸಲು ತಗಲುವ ಸಮಯ ಹಾಗೂ ವೆಚ್ಚ, ಬೆಲೆ ನಿಗದಿ, ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು, ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಇತರ ಆನ್‌ಲೈನ್ ಮಾರುಕಟ್ಟೆ ಸ್ಥಳಗಳನ್ನು ಬಳಸಿಕೊಂಡು ನಿಮ್ಮ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡುವುದು ಹೀಗೆ ಎಲ್ಲವನ್ನೂ ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು.
ಟೆರಾಕೋಟಾ ಆಭರಣ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಅಶ್ವಿನಿ ದೇವಾಡಿಗ ಅವರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡುತ್ತಾರೆ.
ನೀವು ಮನೆಯಿಂದಲೇ ಟೆರಾಕೋಟಾ ಜ್ಯುವಲರಿ ಬಿಸಿನೆಸ್ ಆರಂಭಿಸುವ ಯೋಚನೆ ನಿಮಗಿದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ, ಯಶಸ್ವಿ ಟೆರಾಕೋಟಾ ಆಭರಣ ಉದ್ಯಮಿಯಾಗಿ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ!
ಈ ಕೋರ್ಸ್‌ನ ಉದ್ದೇಶಗಳ ಬಗ್ಗೆ ನೀವು ಕಲಿಯುವಿರಿ. ಅಲ್ಲದೆ ಈ ಕೋರ್ಸ್ ಕೊನೆಯಲ್ಲಿ ನೀವು ಏನು ಕಲಿಯುವಿರಿ ಎಂಬುದರ ಬಗ್ಗೆ ತಿಳುವಳಿಕೆಯನ್ನು ನೀಡುತ್ತದೆ.
ನೀವು ತಯಾರಿಸಬಹುದಾದ ಮತ್ತು ಮಾರಾಟ ಮಾಡಬಹುದಾದ ವಿವಿಧ ರೀತಿಯ ಟೆರಾಕೋಟಾ ಆಭರಣಗಳ ಬಗ್ಗೆ, ಅವುಗಳ ವ್ಯಾಪಾರದ ಅಂಶಗಳೊಂದಿಗೆ ನೀವು ಸ್ಪಷ್ಟತೆಯನ್ನು ಪಡೆಯುತ್ತೀರಿ.
ನೀವು ಮನೆಯಿಂದಲೇ ಟೆರಾಕೋಟಾ ಜ್ಯುವೆಲರಿ ಬಿಸಿನೆಸ್ ಆರಂಭಿಸುವ ಪ್ರಯೋಜನಗಳ ಬಗ್ಗೆ ಕಲಿಯುವಿರಿ. ಹೆಚ್ಚಿನ ಲಾಭವನ್ನು ಒದಗಿಸುವ ವ್ಯವಹಾರಗಳಲ್ಲಿ ಇದೂ ಒಂದು ಎಂಬುದು ಸ್ಪಷ್ಟವಾಗುತ್ತದೆ.
ಟೆರಾಕೋಟಾ ಜ್ಯುವಲರಿ ಬಿಸಿನೆಸ್‌ನಿಂದ ಉತ್ಪತ್ತಿಯಾಗುವ ಆದಾಯ ಮತ್ತು ಲಾಭಾಂಶಗಳ ಸಂಪೂರ್ಣ ತಿಳುವಳಿಕೆ
ಈ ಮಾಡ್ಯೂಲ್ ಟೆರಾಕೋಟಾ ಜ್ಯುವಲರಿ ಬಿಸಿನೆಸ್ ಆರಂಭಿಸಲು ಅಗತ್ಯವಿರುವ ಬಂಡವಾಳ ಮತ್ತು ಕಚ್ಚಾ ವಸ್ತುಗಳ ಬಗ್ಗೆ ತಿಳಿಯಿರಿ.
ಈ ಮಾಡ್ಯೂಲ್ ಮೂಲಕ ನೀವು ಹೆಚ್ಚು ಗ್ರಾಹಕರನ್ನು ತಲುಪಲು ನಿಮ್ಮ ಟೆರಾಕೋಟಾ ಆಭರಣಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಮತ್ತು ಮಾರಾಟ ಮಾಡುವುದು ಹೇಗೆ ಎಂಬುವುದನ್ನು ತಿಳಿಯಿರಿ.
ಟೆರಾಕೋಟಾ ಜ್ಯುವಲರಿಗಳ ಉತ್ಪಾದನಾ ವೆಚ್ಚದ ಮೇಲೆ ಪ್ರಭಾವ ಬೀರುವ ಅಂಶಗಳು ಮತ್ತು ನಿಮ್ಮ ಬೆಲೆಗಳನ್ನು ನಿಗದಿಪಡಿಸುವಾಗ ಪರಿಗಣಿಸಬೇಕಾದ ವಿಷಯಗಳನ್ನು ತಿಳಿಯಿರಿ.
ಈ ಮಾಡ್ಯೂಲ್ ಮೂಲಕ ನೀವು ಟೆರಾಕೋಟಾ ಆಭರಣ ತಯಾರಿಕೆಯಲ್ಲಿ ಒಳಗೊಂಡಿರುವ ಸಂಪೂರ್ಣ ಹಂತಗಳ ಬಗ್ಗೆ ಕಲಿಯುವಿರಿ. ಇವೆಲ್ಲವೂ ವೀಡಿಯೋ ರೂಪದಲ್ಲಿ ಲಭ್ಯವಿದೆ.
ಟೆರಾಕೋಟಾ ಆಭರಣ ತಯಾರಿಕೆಯಲ್ಲಿ ಬಹಳ ಮುಖ್ಯವಾದ ಸುಡುವ ಪ್ರಕ್ರಿಯೆಯ ಬಗ್ಗೆ ತಿಳಿಯಿರಿ. ಈ ಹಂತದಲ್ಲಿ ಪ್ರಮುಖ ತಂತ್ರಗಳ ಅರಿವನ್ನು ಅಭಿವೃದ್ಧಿಪಡಿಸಲಾಗುವುದು
ಟೆರಾಕೋಟಾ ಆಭರಣಗಳನ್ನು ಹೇಗೆ ಚಿತ್ರಿಸಬೇಕೆಂದು ತಿಳಿಯಿರಿ. ಜೊತೆಗೆ ಇದಕ್ಕೆ ಸಂಬಂಧಿಸಿದ ಕಚ್ಚಾವಸ್ತುಗಳು ಮತ್ತು ತಂತ್ರಜ್ಞಾನದ ಬಗ್ಗೆ ತಿಳಿಯಿರಿ.
- ಗೃಹಾಧಾರಿತ ಬಿಸಿನೆಸ್ ಆರಂಭಿಸಲು ಆಸಕ್ತಿ ಹೊಂದಿರುವವರು
- ಆಭರಣ ತಯಾರಿಕೆಯಲ್ಲಿ ತಮ್ಮ ಕೌಶಲ್ಯವನ್ನು ಸುಧಾರಿಸಲು ಬಯಸುವವರು
- ಟೆರಾಕೋಟಾ ಆಭರಣಗಳನ್ನು ತಯಾರಿಸುವ ಕಲೆಯನ್ನು ಕಲಿಯಲು ಆಸಕ್ತಿ ಹೊಂದಿರುವವರು
- ಆನ್‌ಲೈನ್‌ನಲ್ಲಿ ಟೆರಾಕೋಟಾ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದು ಮತ್ತು ಮಾರಾಟ ಮಾಡುವುದು ಹೇಗೆ ಎಂದು ತಿಳಿಯಲು ಬಯಸುವವರು
- ಗುಡಿ ಕೈಗಾರಿಕೆ ಮೂಲಕ ಹೆಚ್ಚುವರಿ ಆದಾಯ ಗಳಿಸಲು ಬಯಸುವವರು


- ಸುಂದರವಾದ ಮತ್ತು ವಿಶಿಷ್ಟವಾದ ಟೆರಾಕೋಟಾ ಆಭರಣಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ತಿಳಿಯಿರಿ
- ಸಂಕೀರ್ಣ ವಿನ್ಯಾಸಗಳು ಮತ್ತು ಆಕಾರಗಳನ್ನು ರಚಿಸಲು ಅಗತ್ಯವಿರುವ ತಂತ್ರಗಳು ಮತ್ತು ಉಪಕರಣಗಳು
- ಆನ್‌ಲೈನ್‌ನಲ್ಲಿ ಟೆರಾಕೋಟಾ ಆಭರಣಗಳನ್ನು ಹೇಗೆ ಮಾರಾಟ ಮಾಡುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದು
- ಸಾಮಾಜಿಕ ಮಾಧ್ಯಮ, ಇ-ಕಾಮರ್ಸ್‌ನಲ್ಲಿ ಟೆರಾಕೋಟಾ ಆಭರಣಗಳನ್ನು ಮಾರಾಟ ಮಾಡಲು ಸಲಹೆಗಳು
- ಟೆರಾಕೋಟಾ ಆಭರಣಗಳಿಗೆ ಮಾರುಕಟ್ಟೆಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಬೆಲೆ ಏಕೆ ಬೇಕು ಎಂಬುದನ್ನು ಅರ್ಥಮಾಡಿಕೊಳ್ಳಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...