ಬಾತುಕೋಳಿ ಸಾಕಣೆಯು ಸಾಂಪ್ರದಾಯಿಕ ವ್ಯಾಪಾರಗಳಲ್ಲಿ ಒಂದಾಗಿದ್ದು ಇದು ಬಹಳ ಹಿಂದಿನಿಂದಲೂ ಈ ಸಾಕಣೆಯನ್ನು ಮಾಡಲಾಗುತ್ತಿದೆ. ಬಾತುಕೋಳಿಯನ್ನು ಅವುಗಳ ಮಾಂಸ ಮತ್ತು ಮೊಟ್ಟೆಗಳಿಗಾಗಿ ಸಾಕಣೆ ಮಾಡಲಾಗುತ್ತದೆ. ಬಾತುಕೋಳಿಗಳನ್ನು ಸಾಕಣೆ ಮಾಡಲು ಕೊಳದ ಅವಶ್ಯಕತೆ ಇದೆ ಎಂದು ಬಹಳಷ್ಟು ಮಂದಿ ತಪ್ಪು ಗ್ರಹಿಸಿದ್ದಾರೆ. ಆದರೆ ಇವುಗಳನ್ನು ಕೊಳಗಳಿಲ್ಲದೆ ಸಹ ಉತ್ತಮವಾಗಿ ಸಾಕಣೆ ಮಾಡಬಹುದು.
ಬಾತುಕೋಳಿಯಲ್ಲಿ ಹಲವು ವಿಭಿನ್ನ ತಳಿಗಳು ಇದೆ. ಈ ಕಾರಣಕ್ಕೆ ಇವುಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ ಮತ್ತು ಇದರ ವ್ಯಾಪಾರವೂ ಸಹ ಲಾಭದಾಯಕವಾಗಿದೆ. ನೀರಿನ ಲಭ್ಯತೆ ಇಲ್ಲದೆ ಬಾತುಕೋಳಿ ಸಾಕಣೆ ಮಾಡಿದರೆ ಅವುಗಳು ಇಡುವ ಮೊಟ್ಟೆಗಳು ಫಲವತ್ತಾಗಿರುವುದಿಲ್ಲ. ಇದರಿಂದ ಮೊಟ್ಟೆಗಳನ್ನು ಮರಿ ಮಾಡಲು ಸಾಧ್ಯವಾಗುವುದಿಲ್ಲ. ಬಾತುಕೋಳಿಗಳು ಸಂತಾನೋತ್ಪತ್ತಿ ಮಾಡಲು ನೀರಿನ ಅಗತ್ಯವಿರುತ್ತದೆ.
ಇತರ ಕೋಳಿ ಸಾಕಣೆ ವ್ಯವಹಾರಗಳಿಗೆ ಹೋಲಿಸಿದರೆ, ಈ ಸಾಕಣೆಯಲ್ಲಿ ಬಾತುಕೋಳಿಗಳನ್ನು ಸರಳವಾಗಿ ಮತ್ತು ಸುಲಭವಾಗಿ ನಿರ್ವಹಣೆ ಮಾಡಬಹುದು. ಇವುಗಳನ್ನು ಕಡಿಮೆ ಸ್ಥಳಾವಕಾಶದಲ್ಲಿ ಸಹ ಉತ್ತಮವಾಗಿ ಸಾಕಣೆ ಮಾಡಬಹುದು ಮತ್ತು ಇವುಗಳು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನು ಸಹ ಹೊಂದಿರುತ್ತವೆ. ಬಾತುಕೋಳಿಗಳು ರಾತ್ರಿ ಮತ್ತು ಬೆಳಿಗ್ಗೆ ಸಮಯದಲ್ಲಿ ಮೊಟ್ಟೆಗಳನ್ನು ಇಡುತ್ತವೆ ಮತ್ತು ಇವುಗಳಿಂದ ಕೃಷಿಕರು ಪ್ರತಿನಿತ್ಯವೂ ಸಹ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ.
ಈ ಸಾಕಣೆಯಲ್ಲಿರುವ ಮಾರುಕಟ್ಟೆ ಅವಕಾಶವನ್ನು ಗಮನಿಸಿ ffreedom ಅಪ್ಲಿಕೇಶನ್ ಬಾತುಕೋಳಿ ಸಾಕಣೆ ಕುರಿತಂತೆ ಸಮಗ್ರ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಈ ಕೋರ್ಸ್ ಮೂಲಕ ನೀವೂ ಸಹ ಇದರ ಸಂಪೂರ್ಣ ಲಾಭವನ್ನು ಪಡೆಯಬಹುದು.
ಈ ಮಾಡ್ಯೂಲ್‌ನಲ್ಲಿ, ಸಂಪೂರ್ಣ ಕೋರ್ಸ್‌ನ ಅವಲೋಕನ ಪಡೆಯಿರಿ ಮತ್ತು ಭಾರತದಲ್ಲಿ ಬಾತುಕೋಳಿ ಸಾಕಣೆಯನ್ನು ಪ್ರಾರಂಭಿಸಲು ಕಾರಣಗಳನ್ನು ಕಂಡುಕೊಳ್ಳಿ.
ಈ ಮಾಡ್ಯೂಲ್‌ನಲ್ಲಿ ಮಾರ್ಗದರ್ಶಕರ ವೃತ್ತಿ ಮತ್ತು ಅವರ ಸಾಧನೆಯ ಬಗ್ಗೆ ತಿಳಿಯಿರಿ ಜೊತೆಗೆ ಈ ಕ್ಷೇತ್ರದಲ್ಲಿ ಅವರ ಪರಿಣತಿ ಮತ್ತು ಅನುಭವದ ಬಗ್ಗೆ ತಿಳಿದುಕೊಳ್ಳಿ.
ಈ ಮಾಡ್ಯೂಲ್‌ನಲ್ಲಿ, ಬಾತುಕೋಳಿ ಸಾಕಣೆಯ ಬಗ್ಗೆ ಸಮಗ್ರ ವಿವರಣೆಯನ್ನು ನೀವು ಪಡೆಯುವಿರಿ.
ಈ ಮಾಡ್ಯೂಲ್‌ನಲ್ಲಿ, ಕೃಷಿಗೆ ಸೂಕ್ತವಾದ ಅನೇಕ ರೀತಿಯ ಬಾತುಕೋಳಿಗಳ ಬಗ್ಗೆ ನೀವು ಕಲಿಯುವಿರಿ.
ಬಾತುಕೋಳಿ ಸಾಕಣೆಯನ್ನು ಪ್ರಾರಂಭಿಸಲು ಬಂಡವಾಳದ ಅವಶ್ಯಕತೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಿರಿ.
ನೀವು ಬಾತುಕೋಳಿ ಫಾರ್ಮ್ ಅನ್ನು ಆರಂಭಿಸುವ ನಿಟ್ಟಿನಲ್ಲಿ ಅಗತ್ಯ ಅನುಮತಿ ಮತ್ತು ನೋಂದಣಿಯ ಬಗ್ಗೆ ತಿಳಿಯಿರಿ.
ಬಾತುಕೋಳಿಯ ಬೆಳವಣಿಗೆಯ ವಿವಿಧ ಹಂತಗಳ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳಿ.
ಬಾತುಕೋಳಿ ಸಾಕಣೆಗೆ ಅಗತ್ಯ ಕಾರ್ಮಿಕರ ಬಗ್ಗೆ ಉಪಯುಕ್ತ ಮಾಹಿತಿಯನ್ನು ಅನ್ವೇಷಿಸಿ.
ಬಾತುಕೋಳಿಗಳಿಗೆ ನೀಡಲಾಗುವ ಆಹಾರದ ಬಗ್ಗೆ ಮಾಹಿತಿಯನ್ನು ತಿಳಿಯಿರಿ.
ಬಾತುಕೋಳಿಗಳ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕಾಯಿಲೆಗಳು ಮತ್ತು ಅವುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ತಿಳಿಯಿರಿ.
ಬಾತುಕೋಳಿಯನ್ನು ಸಾಗಿಸುವ ಬಗ್ಗೆ ಮತ್ತು ಅದರಲ್ಲಿನ ಸವಾಲುಗಳನ್ನು ಅರ್ಥಮಾಡಿಕೊಳ್ಳಿ.
ಬಾತುಕೋಳಿಯಿಂದ ಮಾಂಸ ಮತ್ತು ಮೊಟ್ಟೆಯನ್ನು ಪಡೆಯುವ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಯಿರಿ.
ಈ ಸಾಕಣೆಯ ಮಾರುಕಟ್ಟೆ ಸಾಮರ್ಥ್ಯ ಮತ್ತು ರಫ್ತಿನ ಅವಕಾಶಗಳ ಬಗ್ಗೆ ತಿಳಿಯಿರಿ.
ಗಳಿಸುವ ಸಾಮರ್ಥ್ಯದ ಬಗ್ಗೆ ಮತ್ತು ಲಾಭವನ್ನು ಹೇಗೆ ಹೆಚ್ಚಿಸುವುದು ಎಂಬುದರ ಬಗ್ಗೆ ಅರ್ಥಮಾಡಿಕೊಳ್ಳಿ.
ಬಾತುಕೋಳಿಗಳ ಬೇಡಿಕೆ ಮತ್ತು ಪೂರೈಕೆಯ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಯಿರಿ.
ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಬಾತುಕೋಳಿಗಳನ್ನು ಮಾರಾಟ ಮಾಡುವ ತಂತ್ರಗಳನ್ನು ಅರ್ಥಮಾಡಿಕೊಳ್ಳಿ.
ಕೋರ್ಸ್ ನ ಸಾರಾಂಶ ಮತ್ತು ಬಾತುಕೋಳಿ ಸಾಕಾಣೆಯ ಪ್ರಮುಖ ಟೇಕ್‌ಅವೇಗಳನ್ನು ತಿಳಿಯಿರಿ.

- ಬಾತುಕೋಳಿ ಸಾಕಣೆ ಮಾಡುವ ಬಗ್ಗೆ ಆಲೋಚನೆಯನ್ನು ಹೊಂದಿದ್ದರೆ, ನೀವು ಈ ಕೋರ್ಸನ್ನು ಪರಿಗಣಿಸಬಹುದು.
- ನೀವು ಯಾವುದಾದರು ಪ್ರಾಣಿ ಸಾಕಣೆ ಮಾಡುವ ಮೂಲಕ ಸ್ವಾವಲಂಬಿಯಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದರೆ, ನೀವು ಸಹ ಈ ಕೋರ್ಸನ್ನು ಪಡೆಯಬಹುದು.
- ಬಾತುಕೋಳಿ ಸಾಕಣೆ ಕುರಿತಂತೆ ಹಲವಾರು ಉಪಯುಕ್ತ ವಿಷಯಗಳನ್ನು ತಿಳಿದುಕೊಳ್ಳುವ ಬಗ್ಗೆ ಆಸಕ್ತಿಯನ್ನು ಹೊಂದಿದ್ದರೆ, ಈ ಕೋರ್ಸ್ ನಿಮಗೆ ಹೆಚ್ಚು ಸೂಕ್ತ.
- ನೀವು ಕೃಷಿಯ ಜೊತೆಗೆ ಉತ್ತಮ ಆದಾಯವನ್ನು ಗಳಿಸುವ ಉಪ ಕಸುಬಿನ ಹುಡುಕಾಟದಲ್ಲಿದ್ದರೆ, ಈ ಕೋರ್ಸ್ ನಿಮಗೆ ಸೂಕ್ತವಾಗಿದೆ.



- ಬಾತುಕೋಳಿ ಸಾಕಣೆ ಎಂದರೆ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ.
- ಸಾಕಣೆಗೆ ಸೂಕ್ತವಾದ ಬಾತುಕೋಳಿ ತಳಿಯ ಆಯ್ಕೆಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ವಿವರವಾದ ಮಾಹಿತಿ ತಿಳಿಯುತ್ತೀರಿ.
- ಈ ಸಾಕಣೆಯನ್ನು ಮಾಡಲು ಪಡೆಯಬೇಕಾದ ಅನುಮತಿ, ನೋಂದಣಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ.
- ಈ ಸಾಕಣೆಯ ಒಟ್ಟು ಖರ್ಚು ಮತ್ತು ರಫ್ತು ಅವಕಾಶದ ಬಗ್ಗೆ ಮತ್ತು ಲಾಭ ಲೆಕ್ಕಾಚಾರದ ಬಗ್ಗೆ ತಿಳಿಯುತ್ತೀರಿ.

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಜಿ. ರಾಮಚಂದ್ರ, ಹಿರಿಯ ಕೃಷಿಕ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ಅರವಿಂದ ನಗರದವರು. ಡಿಪ್ಲೋಮಾ ಓದಿನ ನಂತರ ಉದ್ಯೋಗದ ಕಡೆಗೆ ಹೋಗದೆ ತನ್ನ ತಂದೆ ಪಾಲಿನ ಭೂಮಿಯಲ್ಲಿ ಕೃಷಿ ಆರಂಭಿಸಿದರು. ಸಾಂಪ್ರದಾಯಿಕ ಕೃಷಿಯನ್ನ ಬದಿಗಿರಿಸಿ ಪಶುಸಂಗೋಪನೆಗೆ ಮುಂದಾದ್ರು. ಪರಿಣಾಮ ಇಂದು ಗೀರ್ ಸೇರಿದಂತೆ ಹಲವು ತರಹದ ಹಸು,ಕೋಳಿಗಳನ್ನು ಸಾಕ್ತಿದ್ದು ಪಶುಸಂಗೋಪನೆಯಿಂದಲೇ ಲಕ್ಷ ಲಕ್ಷ ಸಂಪಾದಿಸ್ತಿದ್ದಾರೆ.
ಸಚಿನ್ ಕೆ.ಎಸ್, ಯುವ ಕುಕುಟೋದ್ಯಮಿ. ಕುಕ್ಕುಟೋದ್ಯಮದಲ್ಲಿ 50 ಲಕ್ಷ ದುಡಿದ ಸಾಧಕ. 25 ಮರಿಗಳಿಂದ ನಾಟಿಕೋಳಿ ಸಾಕಣೆ ಶುರುಮಾಡಿ ಇದೀಗ ಪ್ರತೀ ವರ್ಷ 2500 ಕೋಳಿ ಮರಿಗಳನ್ನ ಮಾರಾಟ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಸ್ವರ್ಣಧಾರ, ಗಿರಿರಾಜ, ಡಿಪಿಕ್ರಾಸ್, ಅಸೀಲ್ ಹೀಗೆ ಹಲವು ಜಾತಿಯ ಕೋಳಿಗಳನ್ನು ಸಾಕುತ್ತಿದ್ದಾರೆ. ಅಲ್ಲದೆ ಸಮಗ್ರ ಕೃಷಿಯಲ್ಲೂ ಇವ್ರು ಪರಿಣಿತರಾಗಿದ್ದಾರೆ.
ನಾಗರಾಜ ಶೆಟ್ಟಿ, ಯಶಸ್ವಿ ಕುಕ್ಕುಟೋದ್ಯಮಿ. 7 ವರ್ಷಗಳಿಂದ ಕೋಳಿ ಸಾಕಣೆ ಮಾಡಿ ಅತ್ಯುತ್ತಮ ಆದಾಯ ಗಳಿಸ್ತಿದ್ದಾರೆ. ಸಣ್ಣದಾಗಿ ಶುರುಮಾಡಿದ ಉದ್ಯಮ ಇಂದು 20 ಸಾವಿರ ಕೋಳಿ ಸಾಕಣೆವರೆಗೆ ಬೆಳೆದು ನಿಂತಿದೆ. ಉದ್ಯೋಗ ಬಿಟ್ಟು ಹುಟ್ಟೂರಿಗೆ ವಾಪಸ್ಸಾದ ನಾಗರಾಜ್ ಅಡಿಕೆ ಕೃಷಿ ಜತೆಗೆ ಕೋಳಿ ಸಾಕಣೆಗೆ ಮುಂದಾದರು. ಕೋಳಿ ಸಾಕಣೆಯಲ್ಲಿ ಗೆದ್ದ ನಂತರ ಹೈನುಗಾರಿಕೆ ಕೂಡ ಶುರುಮಾಡಿದ್ದಾರೆ.
ನಾಗರಾಜ್ ಬಿಜೆ. ಹಾಸನದ ರೈತ. ಮೀನು ಮತ್ತು ಕೋಳಿ ಸಾಕಣೆಯಲ್ಲಿ ವರ್ಷಕ್ಕೆ 20 ಲಕ್ಷ ದುಡಿಯುತ್ತಿರುವ ಸಾಧಕ. ಒಂದೇ ಜಾಗದಲ್ಲಿ ಮೀನು ಮತ್ತು ನಾಟಿ ಕೋಳಿ ಸಾಕಣೆ ಮಾಡಿ, ಬಹುರೂಪದ ಆದಾಯ ಪಡೆಯುತ್ತಿರುವ ಎಕ್ಸಪರ್ಟ್. ಕಾಟ್ಲಾ, ರೋಹು, ಅಮುರ್, ಮುರ್ರೆಲ್, ಸಿಲ್ವರ್ ಮೀನುಗಳ ಜತೆ ನಾಟಿ ಕೋಳಿ ಸಾಕಣೆಯಲ್ಲೂ ಪರಿಣಿತರಾಗಿರೋ ಸಾಧಕ.
ಎಸ್.ಅಶೋಕ್ ಕುಮಾರ್, ಪಶುಸಂಗೋಪನೆ ಎಕ್ಸ್‌ಪರ್ಟ್. ಹತ್ತು ವರ್ಷದಿಂದ ಕುರಿ, 50 ಮೇಕೆ, 300 ಮೊಲ, 20 ಸಾವಿರ ಕೋಳಿಗಳನ್ನ ಸಾಕ್ತಿದ್ದಾರೆ. ತಮ್ಮ ಏಳು ಎಕರೆ ಜಮೀನಿನಲ್ಲಿ ತೆಂಗು, ಮಾವು ಮತ್ತು ಅಗರ್‌ವುಡ್ ಕೃಷಿ ಜತೆಗೆ ಜಾನುವಾರು ಸಾಕಣೆ ಮಾಡ್ತಿದ್ದಾರೆ. ಕೃಷಿ ಸಾಧನೆಗಾಗಿ ಸಕ್ಸಸ್‌ಫುಲ್ ಫಾರ್ಮರ್ ಪ್ರಶಸ್ತಿ ಇವರಿಗೆ ಬಂದಿದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
Duck Farming Course - Earn Rs 4 Lakh/1000 Birds in 6 Month
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...