ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಎಂ.ಪುರಂದರ ರೈ, ಹಿರಿಯ ಕೃಷಿಕ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ನಿವಾಸಿ. ಕೃಷಿ ಕುಟುಂಬದಲ್ಲೇ ಹುಟ್ಟಿದ್ದರು ಕೃಷಿ ಜೊತೆಗೆ ಉದ್ಯಮ ಇವರನ್ನ ಹೆಚ್ಚು ಆಕರ್ಷಿಸಿತ್ತು. ಒಂದಷ್ಟು ಬೇರೆ ಬೇರೆ ಉದ್ಯಮ ಮಾಡಿದ ನಂತರ ಕೃಷಿ ಬಲವಾಗಿ ಆಕರ್ಷಿಸಿದೆ. ಹೆತ್ತವರ ಜಮೀನಷ್ಟೇ ಅಲ್ಲದೆ ತಾನೆ ಪ್ರಯತ್ನ ಮಾಡಿ ಒಂದಷ್ಟು ಕೃಷಿಭೂಮಿಯನ್ನ ಸಂಪಾದಿಸಿಕೊಂಡು ಕೃಷಿ ಮಾಡುತ್ತಾ ಬಂದರು. ಹತ್ತು ಹದಿನೈದು ವರ್ಷದಿಂದ ಕೃಷಿ ಮಾಡುವಾಗ ನೀರಿನ...
ಎಂ.ಪುರಂದರ ರೈ, ಹಿರಿಯ ಕೃಷಿಕ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ನಿವಾಸಿ. ಕೃಷಿ ಕುಟುಂಬದಲ್ಲೇ ಹುಟ್ಟಿದ್ದರು ಕೃಷಿ ಜೊತೆಗೆ ಉದ್ಯಮ ಇವರನ್ನ ಹೆಚ್ಚು ಆಕರ್ಷಿಸಿತ್ತು. ಒಂದಷ್ಟು ಬೇರೆ ಬೇರೆ ಉದ್ಯಮ ಮಾಡಿದ ನಂತರ ಕೃಷಿ ಬಲವಾಗಿ ಆಕರ್ಷಿಸಿದೆ. ಹೆತ್ತವರ ಜಮೀನಷ್ಟೇ ಅಲ್ಲದೆ ತಾನೆ ಪ್ರಯತ್ನ ಮಾಡಿ ಒಂದಷ್ಟು ಕೃಷಿಭೂಮಿಯನ್ನ ಸಂಪಾದಿಸಿಕೊಂಡು ಕೃಷಿ ಮಾಡುತ್ತಾ ಬಂದರು. ಹತ್ತು ಹದಿನೈದು ವರ್ಷದಿಂದ ಕೃಷಿ ಮಾಡುವಾಗ ನೀರಿನ ಸಮಸ್ಯೆ ಎದುರಾಗಿದೆ. ಹೇಳಿ ಕೇಳಿ ಅದು ಗುಡ್ಡದ ಜಾಗ. ಬೋರ್ವೆಲ್ ಕೂಡ ಅಡಿಗಡಿಗೆ ಕೈಕೊಡ್ತಿತ್ತು. ಹೀಗಾಗಿ ಇದಕ್ಕೇನು ಪರಿಹಾರ ಮಾಡೋಣ ಅಂತ ಆಲೋಚಿಸ್ತಿದ್ದಾಗ ಕೃಷಿ ಹೊಂಡದ ಬಗ್ಗೆ ತಿಳಿದಿದೆ. ಕೂಡಲೆ ಒಂದು ಕ್ಷಣವೂ ತಡಮಾಡದೆ ಬೃಹತ್ ಗಾತ್ರದ ಕೃಷಿ ಹೊಂಡ ನಿರ್ಮಿಸಿದರು. ಒಂದೂವರೆ ಕೋಟಿ ಲೀಟರ್ ನೀರು ನಿಲ್ಲುವಂತಾದ ಮೇಲೆ ಅವರ 20 ಎಕರೆಗೆ ನೀರಿನ ಕೊರತೆ ನೀಗಿದೆ. ಅಷ್ಟೇ ಅಲ್ಲ ಆ ಕೃಷಿಹೊಂಡದಲ್ಲಿ ಮೀನು ಸಾಕಣೆ ಮಾಡುವ ಮೂಲಕ ಪರ್ಯಾಯ ಆದಾಯದ ಮಾರ್ಗ ಕೂಡ ಕಂಡುಕೊಂಡಿದ್ದಾರೆ.
... ಸಮಸ್ಯೆ ಎದುರಾಗಿದೆ. ಹೇಳಿ ಕೇಳಿ ಅದು ಗುಡ್ಡದ ಜಾಗ. ಬೋರ್ವೆಲ್ ಕೂಡ ಅಡಿಗಡಿಗೆ ಕೈಕೊಡ್ತಿತ್ತು. ಹೀಗಾಗಿ ಇದಕ್ಕೇನು ಪರಿಹಾರ ಮಾಡೋಣ ಅಂತ ಆಲೋಚಿಸ್ತಿದ್ದಾಗ ಕೃಷಿ ಹೊಂಡದ ಬಗ್ಗೆ ತಿಳಿದಿದೆ. ಕೂಡಲೆ ಒಂದು ಕ್ಷಣವೂ ತಡಮಾಡದೆ ಬೃಹತ್ ಗಾತ್ರದ ಕೃಷಿ ಹೊಂಡ ನಿರ್ಮಿಸಿದರು. ಒಂದೂವರೆ ಕೋಟಿ ಲೀಟರ್ ನೀರು ನಿಲ್ಲುವಂತಾದ ಮೇಲೆ ಅವರ 20 ಎಕರೆಗೆ ನೀರಿನ ಕೊರತೆ ನೀಗಿದೆ. ಅಷ್ಟೇ ಅಲ್ಲ ಆ ಕೃಷಿಹೊಂಡದಲ್ಲಿ ಮೀನು ಸಾಕಣೆ ಮಾಡುವ ಮೂಲಕ ಪರ್ಯಾಯ ಆದಾಯದ ಮಾರ್ಗ ಕೂಡ ಕಂಡುಕೊಂಡಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ