ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಮನಮೋಹನ್ ಎ, ಯಶಸ್ವಿ ಜೇನು ಕೃಷಿಕ. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಅನ್ನೋ ಪುಟ್ಟ ಗ್ರಾಮದಲ್ಲಿ. ಮನಮೋಹನ್ ಬದುಕು ಈ ಮಟ್ಟಿಗೆ ಯಶಸ್ಸು ಕಾಣುತ್ತೆ ಅನ್ನೋದನ್ನ ಸ್ವತಃ ಅವರ ಮನೆಯವರು ಕೂಡ ಊಹಿಸಿರಲಿಲ್ಲ. ಇವತ್ತು ವರ್ಷಕ್ಕೆ ಏನಿಲ್ಲ ಅಂದ್ರು ಜೇನು ಕೃಷಿಯಲ್ಲಿ 20 ಲಕ್ಷ ದುಡಿಯುತ್ತಿದ್ದಾರೆ. ಅಂದಹಾಗೆ ಮನಮೋಹನ್ ಈ ಮಟ್ಟಿಗೆ ಸಾಧನೆ ಮಾಡಲು ಕಾರಣವಾಗಿದ್ದು ಮತ್ತೇನು ಅಲ್ಲ, ಜೇನಿನ ಮೇಲಿರುವ ಅವರ ಆಸಕ್ತಿ. ಜೇನು ತುಪ್ಪ ಅಂದ್ರೆ ತುಂಬಾನೆ ಇಷ್ಟಪಡ್ತಿದ್ದ ಮನಮೋಹನ್ 8 ನೇ ತರಗತಿಯಲ್ಲಿದ್ದಾಗಲೇ ಪ್ರಪ್ರಥಮ ಬಾರಿಗೆ ಜೇನು ಕೃಷಿ ಆರಂಭ ಮಾಡಿದ್ರು. ಅಜ್ಜನ ಮನೆಗೆ ಹೋಗಿದ್ದಾಗ...
ಮನಮೋಹನ್ ಎ, ಯಶಸ್ವಿ ಜೇನು ಕೃಷಿಕ. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಅನ್ನೋ ಪುಟ್ಟ ಗ್ರಾಮದಲ್ಲಿ. ಮನಮೋಹನ್ ಬದುಕು ಈ ಮಟ್ಟಿಗೆ ಯಶಸ್ಸು ಕಾಣುತ್ತೆ ಅನ್ನೋದನ್ನ ಸ್ವತಃ ಅವರ ಮನೆಯವರು ಕೂಡ ಊಹಿಸಿರಲಿಲ್ಲ. ಇವತ್ತು ವರ್ಷಕ್ಕೆ ಏನಿಲ್ಲ ಅಂದ್ರು ಜೇನು ಕೃಷಿಯಲ್ಲಿ 20 ಲಕ್ಷ ದುಡಿಯುತ್ತಿದ್ದಾರೆ. ಅಂದಹಾಗೆ ಮನಮೋಹನ್ ಈ ಮಟ್ಟಿಗೆ ಸಾಧನೆ ಮಾಡಲು ಕಾರಣವಾಗಿದ್ದು ಮತ್ತೇನು ಅಲ್ಲ, ಜೇನಿನ ಮೇಲಿರುವ ಅವರ ಆಸಕ್ತಿ. ಜೇನು ತುಪ್ಪ ಅಂದ್ರೆ ತುಂಬಾನೆ ಇಷ್ಟಪಡ್ತಿದ್ದ ಮನಮೋಹನ್ 8 ನೇ ತರಗತಿಯಲ್ಲಿದ್ದಾಗಲೇ ಪ್ರಪ್ರಥಮ ಬಾರಿಗೆ ಜೇನು ಕೃಷಿ ಆರಂಭ ಮಾಡಿದ್ರು. ಅಜ್ಜನ ಮನೆಗೆ ಹೋಗಿದ್ದಾಗ ಕಲಿತ ಈ ಕಲೆ ಜೇನು ಕೃಷಿಕನಾಗುವಂತೆ ಮಾಡಿದೆ. ಅಂದು ಶುರುಮಾಡಿದ ಕೃಷಿ ಇಂದು ಬೆಳೆದು ಬರೋಬ್ಬರಿ 2 ಸಾವಿರ ಜೇನು ಪೆಟ್ಟಿಗೆ ಸಾಕುವಂತೆ ಮಾಡಿದೆ. 2000 ಪೆಟ್ಟಿಗೆಯಿಂದ 20 ಟನ್ ತುಪ್ಪ ತೆಗೆದು ಅತ್ಯುತ್ತಮ ಜೇನು ಕೃಷಿಕ ಅಂತ ಗುರುತಿಸಿಕೊಂಡರು. ಪರಿಣಾಮ ಇಂದು ಸಾಕಷ್ಟು ಪತ್ರಿಕೆಗಳು, ವಾಹಿನಿಗಳು, ಸಂಘ ಸಂಸ್ಥೆಗಳು ಇವರನ್ನ ಗುರುತಿಸಿದೆ. ಜೇನು ಕೃಷಿ, ಜೇನು ಕುಟುಂಬ ವಿಭಜನೆ, ಜೇನು ಪೆಟ್ಟಿಗೆ ಎಲ್ಲದರಲ್ಲೂ ಮನಹೋಹನ್ ಎಕ್ಸ್ಪರ್ಟ್ ಆಗಿದ್ದಾರೆ. ಅನೇಕ ಕೃಷಿಕರಿಗೆ ಜೇನು ಕೃಷಿ ಬಗ್ಗೆ ತರಬೇತಿ ನೀಡಿದ್ದಾರೆ. ಅಲ್ಲದೆ ಕೃಷಿಕರ ಭೂಮಿಯಲ್ಲಿ ಜೇನು ಪೆಟ್ಟಿಗೆ ಇರಿಸಿ ಅವರ ಕೃಷಿ ಬೆಳೆಯ ಇಳುವರಿ ಹೆಚ್ಚಾಗುವಂತೆ ಮಾಡಿದ್ದಾರೆ.
... ಕಲಿತ ಈ ಕಲೆ ಜೇನು ಕೃಷಿಕನಾಗುವಂತೆ ಮಾಡಿದೆ. ಅಂದು ಶುರುಮಾಡಿದ ಕೃಷಿ ಇಂದು ಬೆಳೆದು ಬರೋಬ್ಬರಿ 2 ಸಾವಿರ ಜೇನು ಪೆಟ್ಟಿಗೆ ಸಾಕುವಂತೆ ಮಾಡಿದೆ. 2000 ಪೆಟ್ಟಿಗೆಯಿಂದ 20 ಟನ್ ತುಪ್ಪ ತೆಗೆದು ಅತ್ಯುತ್ತಮ ಜೇನು ಕೃಷಿಕ ಅಂತ ಗುರುತಿಸಿಕೊಂಡರು. ಪರಿಣಾಮ ಇಂದು ಸಾಕಷ್ಟು ಪತ್ರಿಕೆಗಳು, ವಾಹಿನಿಗಳು, ಸಂಘ ಸಂಸ್ಥೆಗಳು ಇವರನ್ನ ಗುರುತಿಸಿದೆ. ಜೇನು ಕೃಷಿ, ಜೇನು ಕುಟುಂಬ ವಿಭಜನೆ, ಜೇನು ಪೆಟ್ಟಿಗೆ ಎಲ್ಲದರಲ್ಲೂ ಮನಹೋಹನ್ ಎಕ್ಸ್ಪರ್ಟ್ ಆಗಿದ್ದಾರೆ. ಅನೇಕ ಕೃಷಿಕರಿಗೆ ಜೇನು ಕೃಷಿ ಬಗ್ಗೆ ತರಬೇತಿ ನೀಡಿದ್ದಾರೆ. ಅಲ್ಲದೆ ಕೃಷಿಕರ ಭೂಮಿಯಲ್ಲಿ ಜೇನು ಪೆಟ್ಟಿಗೆ ಇರಿಸಿ ಅವರ ಕೃಷಿ ಬೆಳೆಯ ಇಳುವರಿ ಹೆಚ್ಚಾಗುವಂತೆ ಮಾಡಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ