ರೈತರು ಕೃಷಿ ಮಾಡ್ತಾ ಕೇವಲ ರೈತರಾಗೇ ಉಳಿಯದೆ ಉದ್ಯಮಿಗಳಾಬೇಕು ಅನ್ನೋ ಕಾರಣಕ್ಕೆ ಈ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಮೊರಿಂಗಾ ಅಥವಾ ನುಗ್ಗೆಯನ್ನು ಬೆಳೆದು ಅದರ ಸೊಪ್ಪಿನ ಪೌಡರ್ ತಯಾರಿಸಿ ಮಾರಾಟ ಮಾಡಿ ಹೇಗೆ ಬಿಸಿನೆಸ್ ಮಾಡಬಹುದು ಅನ್ನುವುದನ್ನು ನೀವು ಕಲಿಯಬಹುದು.
ಮೊರಿಂಗಾ ಒಂದು ಸೂಪರ್ ಫುಡ್ ಆಗಿದ್ದು ಅದು ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಅದರ ಹಲವಾರು ಆರೋಗ್ಯ ಪ್ರಯೋಜನಗಳು ಮತ್ತು ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಮೊರಿಂಗಾ-ಆಧಾರಿತ ಬಿಸಿನೆಸ್ ಅನ್ನು ಪ್ರಾರಂಭಿಸುವುದು ರೈತೋದ್ಯಮಿಗಳಾಗಬಯಸುವವರಿಗೆ ಲಾಭದಾಯಕ ಅವಕಾಶವಾಗಿದೆ.
ಹಲವಾರು ವರ್ಷಗಳಿಂದ ಮೊರಿಂಗಾ ಪೌಡರ್ ಬಿಸಿನೆಸ್ ಮಾಡಿ ಸಕ್ಸಸ್ ಆಗಿರೋ ಅನುಭವಿ ಕೃಷಿಕ ಬಸಯ್ಯ ಹಿರೇಮಠ್ ಅವ್ರೇ ನಿಮಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ. ಜೊತೆಗೆ ಅವರು ಈ ಯಶಸ್ವಿ ಮೊರಿಂಗಾ ಆಧಾರಿತ ವ್ಯವಹಾರವನ್ನು ತಳಮಟ್ಟದಿಂದ ಹೇಗೆ ನಿರ್ಮಿಸಿದ್ರು, ಮೊರಿಂಗಾ ಪುಡಿ ಉತ್ಪನ್ನಗಳ ಮಾರುಕಟ್ಟೆ ಮತ್ತು ಬೇಡಿಕೆಯನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಮೊರಿಂಗಾವನ್ನು ಹೇಗೆ ಬೆಳೆಯುವುದು ಮತ್ತು ಕೊಯ್ಲು ಮಾಡುವುದು ಎಂಬುದನ್ನೂ ಸಹ ಹೇಳಿಕೊಡ್ತಾರೆ. ಇದರ ಜೊತೆಗೆ ನಿಮ್ಮದೇ ಆದ ವಿಶಿಷ್ಟವಾದ ಮೊರಿಂಗಾ ಆಧಾರಿತ ಉತ್ಪನ್ನಗಳನ್ನು ಹೇಗೆ ತಯಾರಿಸುವುದು ಮತ್ತು ಮಾರುಕಟ್ಟೆ ಮಾಡುವುದು ಎಂಬುದನ್ನೂ ವಿವರವಾಗಿ ತಿಳಿಸುತ್ತಾರೆ.
ನೀವೂ ಕೂಡಾ ನುಗ್ಗೆ ಅಥವಾ ಮೊರಿಂಗಾ ಬೆಳೆದು ಸೊಪ್ಪಿನಿಂದ ಪೌಡರ್ ತಯಾರಿಸಿ ಮಾರಾಟ ಮಾಡೋದರ ಮೂಲಕ ಕೃಷಿ ಉದ್ಯಮಿಗಳಾಗಬೇಕು ಅನ್ನೋ ಯೋಚನೆಯಲ್ಲಿದ್ದರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ ಮತ್ತು ಯಶಸ್ಸನ್ನು ಪಡೆಯುವ ನಿಟ್ಟಿನಲ್ಲಿ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.
ಅಗ್ರಿಪ್ರೆನ್ಯೂರ್ಶಿಪ್ ಮತ್ತು ಮೊರಿಂಗಾ ಕೃಷಿಯ ಅವಲೋಕನವನ್ನು ಪಡೆಯಿರಿ
ಈ ಕ್ಷೇತ್ರದಲ್ಲಿನ ಪರಿಣಿತರಿಂದ ಮೊರಿಂಗಾ ಕೃಷಿಯ ಬಗ್ಗೆ ಕಲಿಯಿರಿ
ಮೊರಿಂಗಾ ಕೃಷಿಗೆ ಏಕೆ ಹೆಚ್ಚಿನ ಬೇಡಿಕೆಯಿದೆ ಎಂಬುದನ್ನು ವಿವರವಾಗಿ ಕಂಡುಕೊಳ್ಳಿ
ಮಣ್ಣನ್ನು ಸಿದ್ದಪಡಿಸುವುದು, ಸಸ್ಯ ಆಯ್ಕೆ, ಮತ್ತು ಇಳುವರಿಯನ್ನು ಉತ್ತಮಗೊಳಿಸಲು ಪರಿಣಾಮಕಾರಿ ತಂತ್ರಗಳನ್ನು ಒಳಗೊಂಡಂತೆ ಮೊರಿಂಗಾ ಕೃಷಿಯ ಬಗೆಗಿನ ಎಲ್ಲ ಮಾಹಿತಿ ತಿಳಿಯಿರಿ
ಆರೋಗ್ಯಕರ ಮತ್ತು ಅಭಿವೃದ್ಧಿ ಹೊಂದುತ್ತಿರುವ ಮೊರಿಂಗಾ ಬೆಳೆಗಳ ರಹಸ್ಯವನ್ನು ಅನ್ಲಾಕ್ ಮಾಡಿ ಜೊತೆಗೆ ಸಾವಯವ ಗೊಬ್ಬರಗಳನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯಿರಿ
ಪ್ರಮುಖ ಉತ್ಪನ್ನದ ಜೊತೆಗೆ ಇತರೆ ಸಾಧ್ಯತೆಗಳನ್ನು ಅನ್ವೇಷಿಸಿ! ಮೊರಿಂಗಾ ಕೃಷಿಯಲ್ಲಿನ ವಿವಿಧ ಉಪಉತ್ಪನ್ನಗಳು ಮತ್ತು ಆಕರ್ಷಕ ಪ್ಯಾಕೇಜಿಂಗ್ ತಂತ್ರಗಳ ಬಗ್ಗೆ ತಿಳಿಯಿರಿ.
ಈ ಮಾಡ್ಯೂಲ್‌ನಲ್ಲಿ ಮೊರಿಂಗಾವನ್ನು ಕೊಯ್ಲು ಮಾಡಲು ಮತ್ತು ಇಳುವರಿಯನ್ನು ಹೆಚ್ಚಿಸಲು ಸೂಕ್ತವಾದ ತಂತ್ರಗಳನ್ನು ಅನ್ವೇಷಿಸಿ
ಮೊರಿಂಗಾ ಕೊಯ್ಲಿನ ನಂತರದ ರಹಸ್ಯಗಳನ್ನು ಅನ್ಲಾಕ್ ಮಾಡಿ. ಇಳುವರಿಯನ್ನು ಹೆಚ್ಚಿಸಲು ಉತ್ತಮ ಅಭ್ಯಾಸಗಳು ಮತ್ತು ತಂತ್ರಗಳ ಬಗ್ಗೆ ತಿಳಿಯಿರಿ
ಮೊರಿಂಗಾ ಎಲೆಗಳು ಮತ್ತು ಬೀಜಗಳನ್ನು ಒಣಗಿಸುವ ವಿಧಾನಗಳ ಬಗ್ಗೆ ತಿಳಿಯಿರಿ ಮತ್ತು ಅತ್ಯುತ್ತಮ ಗುಣಮಟ್ಟ ಮತ್ತು ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದರ ಬಗ್ಗೆ ತಿಳಿಯಿರಿ
ಮೊರಿಂಗಾದ ಸಂಪೂರ್ಣ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಿ ಮತ್ತು ಮೊರಿಂಗಾದ ಲಾಭವನ್ನು ಹೆಚ್ಚಿಸಲು ಪರಿಣಾಮಕಾರಿ ತಂತ್ರಗಳನ್ನು ಕಲಿಯಿರಿ
ಪ್ರಮುಖ ಉತ್ಪನ್ನದ ಜೊತೆಗೆ ಇತರೆ ಸಾಧ್ಯತೆಗಳನ್ನು ಅನ್ವೇಷಿಸಿ! ಮೊರಿಂಗಾ ಕೃಷಿಯಲ್ಲಿನ ವಿವಿಧ ಉಪಉತ್ಪನ್ನಗಳು ಮತ್ತು ಆಕರ್ಷಕ ಪ್ಯಾಕೇಜಿಂಗ್ ತಂತ್ರಗಳ ಬಗ್ಗೆ ತಿಳಿಯಿರಿ.
ಮೊರಿಂಗಾ ಉದ್ಯಮದಲ್ಲಿ ಉತ್ತಮವಾಗಿ ಮಾರ್ಕೆಟಿಂಗ್ ಮತ್ತು ಡಿಸ್ಟ್ರಿಬ್ಯುಶನ್ ಮಾಡಿ ಮಾರಾಟವನ್ನು ಹೆಚ್ಚಿಸಲು ಪರಿಣಾಮಕಾರಿ ತಂತ್ರಗಳ ಬಗ್ಗೆ ತಿಳಿಯಿರಿ
ಅಗ್ರಿಪ್ರೆನ್ಯೂರ್ಶಿಪ್ ಕೋರ್ಸ್‌ನ ಸಂಕ್ಷಿಪ್ತ ಅವಲೋಕನವನ್ನು ಪಡೆಯಿರಿ ಮತ್ತು ಮೊರಿಂಗಾ ಕೃಷಿ ಬಗ್ಗೆ ಪಡೆದ ಜ್ಞಾನ ಮತ್ತು ಕೌಶಲ್ಯಗಳನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ತಿಳಿಯಿರಿ.
- ಮಹತ್ವಾಕಾಂಕ್ಷೆಯ ರೈತರು ಅಥವಾ ಕೃಷಿ ವ್ಯವಹಾರವನ್ನು ಪ್ರಾರಂಭಿಸಲು ಬಯಸುವ ವ್ಯಕ್ತಿಗಳು
- ಕೃಷಿ-ವ್ಯಾಪಾರ ವಲಯದಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು
- ಕೃಷಿ ಕಾರ್ಯಾಚರಣೆಯನ್ನು ವಿಸ್ತರಿಸಲು ಬಯಸುವ ಸಣ್ಣ ವ್ಯಾಪಾರ ಮಾಲೀಕರು
- ಕೃಷಿ ಉದ್ಯಮದಲ್ಲಿ ಹೊಸ ಹೂಡಿಕೆ ಅವಕಾಶಗಳನ್ನು ಹುಡುಕುತ್ತಿರುವ ಆಸಕ್ತ ಹೂಡಿಕೆದಾರರು
- ಕೃಷಿ ಮತ್ತು ಅಗ್ರಿ-ಬಿಸಿನೆಸ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ವೃತ್ತಿಯನ್ನು ನಿರ್ಮಿಸಲು ಬಯಸುವ ಯಾರಾದರೂ


- ಮೊರಿಂಗಾಗೆ ಇರುವ ಮಾರುಕಟ್ಟೆಯ ಬೇಡಿಕೆ ಮತ್ತು ಸೂಪರ್ ಫುಡ್ ಆಗಿ ಅದರ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವುದು
- ಮೊರಿಂಗಾದೊಂದಿಗೆ ಕೃಷಿ-ವ್ಯಾಪಾರ ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯಗಳು
- ಮೊರಿಂಗಾವನ್ನು ಬೆಳೆಯಲು, ಕೊಯ್ಲು ಮಾಡಲು ಮತ್ತು ಸಂಸ್ಕರಿಸುವ ನಿಟ್ಟಿನಲ್ಲಿ ಉತ್ತಮ ಅಭ್ಯಾಸಗಳನ್ನು ಗುರುತಿಸುವುದು
- ಮೊರಿಂಗಾ-ಆಧಾರಿತ ಉತ್ಪನ್ನಗಳಿಗೆ ಯಶಸ್ವಿ ಬಿಸಿನೆಸ್ ಮಾಡೆಲ್ ಅನ್ನು ನಿರ್ಮಿಸುವುದು
- ಮೊರಿಂಗಾ ಉತ್ಪನ್ನಗಳನ್ನು ಪ್ರಮೋಟ್ ಮಾಡಲು ಮತ್ತು ಮಾರಾಟ ಮಾಡಲು ಮಾರ್ಕೆಟಿಂಗ್ ತಂತ್ರಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...