ffreedom app ನ ಭಾರತದಲ್ಲಿ ಹ್ಯಾಂಡಿಕ್ರಾಫ್ಟ್ ಬಿಸಿನೆಸ್‌ಗಳಿಗೆ ಸರ್ಕಾರದ ಯೋಜನೆಗಳು ಕೋರ್ಸ್ ಗೆ ಸುಸ್ವಾಗತ. ಈ ಕೋರ್ಸ್, ಕರಕುಶಲ ಕಸುಬನ್ನ ಪೂರ್ವಿಕರ ಕಾಲದಿಂದ ಮುನ್ನೆಡೆಸಿಕೊಂಡು ಬರುತ್ತಿರುವ ಮತ್ತು ಹ್ಯಾಂಡಿಕ್ರಾಫ್ಟ್ ಬಿಸಿನೆಸ್‌ನಲ್ಲಿ ವೃತ್ತಿ ಜೀವನ ಕಟ್ಟಿಕೊಳ್ಳಲು ಬಯಸುತ್ತಿರುವವರಿಗೆ ಸರ್ಕಾರದಿಂದ ಇರುವ ಯೋಜನೆಗಳ ಲಾಭ ಪಡೆಯೋದು ಹೇಗೆ ಅನ್ನುವುದನ್ನು ಕಲಿಸುತ್ತದೆ. ಜೊತೆಗೆ ಈ ಯೋಜನೆಗಳಿಗೆ ನೋಂದಾಯಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಅಗತ್ಯವಾದ ಕೌಶಲ್ಯ ಮತ್ತು ಜ್ಞಾನ ಒದಗಿಸುತ್ತದೆ
ಸರ್ಕಾರಿ ಯೋಜನೆಯ ಅಡಿ ಕರಕುಶಲ ಕರ್ಮಿಗಳಿಗೆ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ, ಸಾಲ, ಸಬ್ಸಿಡಿ ಸೇರಿದಂತೆ ಹಲವು ಅನುಕೂಲಗಳನ್ನು ಮಾಡಿಕೊಡುವ ಮೂಲಕ, ಅವರ ಉತ್ಪನ್ನಗಳಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸೋದು ಈ ಯೋಜನೆಯ ಉದ್ದೇಶ. ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಗೆ ಸರ್ಕಾರ ಯಾವ ರೀತಿ ಸಹಕಾರ ನೀಡುತ್ತದೆ ಅನ್ನೋದನ್ನ ತಿಳಿಸುವ ದೃಷ್ಟಿಯಿಂದಲೇ ಫ್ರೀಡಂ ಆಪ್ ರಿಸರ್ಚ್ ಟೀಂ ಸಾಕಷ್ಟು ಅನ್ವೇಷಣೆ ಮಾಡಿ ಈ ಕೋರ್ಸ್ ಡಿಸೈನ್ ಮಾಡಿದೆ
ಕರಕುಶಲ ಕಲೆಯಲ್ಲೇ ವೃತ್ತಿ ಮುನ್ನಡೆಸಿಕೊಂಡು ಬರುತ್ತಿರುವ ಕುಶಲಕರ್ಮಿಗಳಿಗೆ ಸರ್ಕಾರಿ ಯೋಜನೆಗೆ ನೋಂದಾಯಿಸಿಕೊಳ್ಳೋದು ಹೇಗೆ? ಯೋಜನೆಗಳನ್ನ ತರುವಲ್ಲಿ ಸರ್ಕಾರದ ಉದ್ದೇಶ ಏನು? ಈ ಎಲ್ಲಾ ಯೋಜನೆಗಳಿಂದ ಕುಶಲಕರ್ಮಿಗಳಿಗೆ, ಸ್ವಸಹಾಯ ಸಂಘದವರಿಗೆ, ಕ್ಲಸ್ಟರ್‌ಗಳಿಗೆ ಯಾವ ರೀತಿಯ ಪ್ರಯೋಜನವಾಗತ್ತೆ ಅನ್ನೋದನ್ನ ಅರ್ಥ ಮಾಡಿಸಲಾಗತ್ತೆ. ಹಾಗೆಯೇ ನೇಕಾರಿಕೆ ವೃತ್ತಿಗೆ ನೇಕಾರ ಮುದ್ರಾ ಯೋಜನೆ ಹೇಗೆ ಪ್ರಯೋಜನಕಾರಿಯಾಗಿದೆ? ಬಿಮಾ ಯೋಜನೆ ಮಹತ್ವವೇನು? ಕಚ್ಛಾವಸ್ತು ಪೂರೈಕೆ ಯೋಜನೆಯಿಂದ ರಾ ಮೆಟಿರಿಯಲ್‌ಗಳು ಹೇಗೆ ಸಿಗ್ತವೆ? ಕುಶಲಕರ್ಮಿಗಳ ಕ್ರೆಡಿಟ್ ಕಾರ್ಡ್ ಯೋಜನೆಯಿಂದ ಆಗುವ ಅನುಕೂಲವೇನು? ರಾಷ್ಟ್ರೀಯ ಕೈಮಗ್ಗ ಯೋಜನೆ, ಅಂಬೆಡ್ಕರ್ ಹಸ್ತಶಿಲ್ಪ್ ಯೋಜನೆ ಯಾವ ರೀತಿ ಕುಶಲ ಕರ್ಮಿಗಳಿಗೆ ಸಹಕಾರಿಯಾಗಿದೆ ಅನ್ನೋದು ಸೇರಿದಂತೆ ಸಾಲ, ಸಬ್ಸಿಡಿ, ಮಾರುಕಟ್ಟೆ ಹೀಗೆ ಪ್ರತಿಯೊಂದರ ಬಗ್ಗೆನೂ ನೀವು ಇಲ್ಲಿ ಕಲಿಬಹುದು
ವಂಶಪಾರಂಪರಿಕ ಮತ್ತು ಪ್ರಧಾನವೃತ್ತಿಯಾಗಿ ಕರಕುಶಲ ಕಸುಬನ್ನ ಮಾಡುತ್ತಿರುವವರಿಗೆ ಸರ್ಕಾರದಿಂದ ಇರುವ ಯೋಜನೆ ಬಗ್ಗೆ ತಿಳಿದು ಸದುಪಯೋಗ ಮಾಡಿಕೊಳ್ಳಲು ಈ ಕೋರ್ಸ್ ಅತ್ಯುತ್ತಮ ಆಯ್ಕೆ. ಹಾಗಾಗಿ ಈಗಲೇ ಸಂಪೂರ್ಣ ಕೋರ್ಸ್ ವೀಕ್ಷಿಸಿ ಹ್ಯಾಂಡಿಕ್ರಾಫ್ಟ್ ಕ್ಷೇತ್ರದಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ
ಈ ಮಾಡ್ಯೂಲ್‌ನಲ್ಲಿ ಕುಶಲಕರ್ಮಿಗಳಿಗೆ ಸರ್ಕಾರ ಹೇಗೆ ನೆರವಾಗುತ್ತಿದೆ ಮತ್ತು ಈ ಕೋರ್ಸ್‌ನಲ್ಲಿ ಯಾವೆಲ್ಲ ಸರ್ಕಾರದ ಯೋಜನೆಗಳಿವೆ ಅನ್ನೋದನ್ನ ಅರಿತುಕೊಳ್ಳಿ
ಈ ಮಾಡ್ಯೂಲ್‌ನಲ್ಲಿ ಕುಶಲಕರ್ಮಿಗಳು ಸರ್ಕಾರದ ಯೋಜನೆಗೆ ನೋಂದಾಯಿಸಿಕೊಳ್ಳುವುದರಿಂದ ಏನೆಲ್ಲ ಪ್ರಯೋಜನವಾಗಲಿದೆ ಮತ್ತು ಸರ್ಕಾರದ ಉದ್ದೇಶ ಏನು ಅನ್ನೋದನ್ನ ತಿಳಿದುಕೊಳ್ಳಿ
ಈ ಮಾಡ್ಯೂಲ್‌ನಲ್ಲಿ ನೇಕಾರ ಮುದ್ರಾ ಯೋಜನೆ ಮೂಲಕ ನೇಕಾರ ವೃತ್ತಿ ಮಾಡುವವರಿಗೆ ಏನೆಲ್ಲ ಪ್ರಯೋಜನವಾಗಲಿದೆ ಅನ್ನೋದನ್ನ ಅರ್ಥಮಾಡಿಕೊಳ್ಳಿ
ಈ ಮಾಡ್ಯೂಲ್‌ನಲ್ಲಿ ಕಚ್ಛಾವಸ್ತು ಪೂರೈಕೆ ಯೋಜನೆ ಮೂಲಕ ಸರ್ಕಾರ ಏನು ಗುರಿ ಇಟ್ಟುಕೊಂಡಿದೆ ಹಾಗೂ ಯಾವ ರೀತಿ ಸಪ್ಲೈ ಸಿಸ್ಟಂ ಮತ್ತು ಸಬ್ಸಿಡಿ ನೀಡಲಿದೆ ಅನ್ನೋದನ್ನ ಕಲಿತುಕೊಳ್ಳಿ
ಕುಶಲಕರ್ಮಿಗಳ ಕ್ರೆಡಿಟ್ ಕಾರ್ಡ್ ಯೋಜನೆ ಮೂಲಕ ಸಾಲ ಎಷ್ಟು ಸಿಗತ್ತೆ? ಮಾರ್ಜಿನ್ ಮನಿ ಎಷ್ಟಿರುತ್ತದೆ? ವ್ಯಾಲಿಡಿಟಿ ಮತ್ತು ರಿನಿವಲ್ ಪ್ರಕ್ರಿಯೆ ಹೇಗಿದೆ ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ
ಈ ಮಾಡ್ಯೂಲ್‌ನಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಎಂದರೇನು? ಪ್ರಯೋಜನವೇನು? ಹಣಕಾಸಿನ ನೆರವು ಯಾವ ರೀತಿ ಸಿಗತ್ತೆ ಅನ್ನೋದನ್ನ ಅರ್ಥಮಾಡಿಕೊಳ್ಳಿ
ನ್ಯಾಷನಲ್ ಹ್ಯಾಂಡ್ಲೂಮ್ ಡೆವಲಪ್‌ಮೆಂಟ್ ಪ್ರೋಗ್ರಾಂ ಮೂಲಕ ಕೈಮಗ್ಗ ಕೆಲಸ ಮಾಡುವವರಿಗೆ ಯಾವ ರೀತಿ ಅಭಿವೃದ್ಧಿ ಕಾರ್ಯ ಮಾಡಲಾಗ್ತಿದೆ ಅನ್ನೋದನ್ನ ತಿಳಿದುಕೊಳ್ಳಿ
ಅಂಬೇಡ್ಕರ್ ಹಸ್ತ ಶಿಲ್ಪ ವಿಕಾಸ್ ಯೋಜನೆಯ ಮೂಲಕ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ನಲ್ಲಿರುವ ಕಲಾವಿದರು. ಸ್ವಸಹಾಯ ಸಂಘಗಳಿಗೆ ಯಾವ ರೀತಿ ನೇರ ಲಾಭವಾಗುತ್ತದೆ ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ
ಸರ್ಕಾರಿ ಯೋಜನೆಯ ಸದುಪಯೋಗ ಮಾಡಿಕೊಳ್ಳಲು ಯಾವ ರೀತಿ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಅನ್ನೋದನ್ನ ಈ ಕೊನೇಯ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ
- ಸರ್ಕಾರದ ನೆರವು ಬಯಸುತ್ತಿರುವ ಕುಶಲಕರ್ಮಿಗಳು
- ಸರ್ಕಾರದಿಂದ ಸಾಲ, ಸಬ್ಸಿಡಿ ಪಡೆಯಬೇಕೆಂಬ ಹ್ಯಾಂಡಿಕ್ರಾಫ್ಟ್ ಉದ್ಯಮಿಗಳು
- ಪೂರ್ವಿಕರ ಕಲೆ ಮತ್ತು ಕಸುಬು ಉಳಿಸಿ ಬೆಳೆಸಬೇಕೆನ್ನುವವರು
- ಸರ್ಕಾರಿ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಿರುವವರು
- ಜಾಗತಿಕ ಮಟ್ಟದಲ್ಲಿ ಉದ್ಯಮ ಕಟ್ಟಿ ಬೆಳೆಸಬೇಕು ಎನ್ನುವವರು
- ಸರ್ಕಾರಿ ಯೋಜನೆಗೆ ನೋಂದಾಯಿಸಿಕೊಳ್ಳುವ ಪ್ರಕ್ರಿಯೆ
- ನೇಕಾರ ಮುದ್ರಾ ಯೋಜನೆ ಮತ್ತು ಬಿಮಾ ಯೋಜನೆ ಮಹತ್ವ
- ಕಚ್ಛಾವಸ್ತು ಪೂರೈಕೆ ಯೋಜನೆ ಮತ್ತು ಕುಶಲಕರ್ಮಿಗಳ ಕ್ರೆಡಿಟ್ ಕಾರ್ಡ್ ಯೋಜನೆ ಮಹತ್ವ
- ರಾಷ್ಟ್ರೀಯ ಕೈಮಗ್ಗ ಯೋಜನೆ ಮತ್ತು ಅಂಬೆಡ್ಕರ್ ಹಸ್ತ್‌ಶಿಲ್ಪ್ ಯೋಜನೆ ಮಹತ್ವ
- ಕಚ್ಛಾವಸ್ತು ಪೂರೈಕೆ ಯೋಜನೆ ಮತ್ತು ಪೂರ್ವಸಿದ್ಧತೆ ಮಾಡಿಕೊಳ್ಳುವ ಬಗ್ಗೆ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...