ffreedom appನ "ಅಣಬೆ ಕೃಷಿಕರಿಗೆ ಸೇಲ್ಸ್ ಮತ್ತು ಮಾರ್ಕೆಟಿಂಗ್ ಸ್ಟ್ರಾಟಜಿ" ಕೋರ್ಸ್‌ಗೆ ಸುಸ್ವಾಗತ. ಕೃಷಿ ಭೂಮಿ ಇಲ್ಲದೆ ಮನೆಯಲ್ಲೇ ಅಣಬೆ ಕೃಷಿ ಮಾಡಿ ದೊಡ್ಡ ಆದಾಯ ಗಳಿಸಬಹುದು. ಕೃಷಿ ಉದ್ಯಮಿ ಆಗಿ ತಮ್ಮದೇ ಬ್ರ್ಯಾಂಡ್ ಸೃಷ್ಟಿಸಿ ಜಾಗತಿಕ ಮಟ್ಟದಲ್ಲೇ ಅಣಬೆ ಪ್ರಾಡಕ್ಟ್‌ನ ಸೇಲ್ ಮಾಡಿ ಯಶಸ್ವಿ ಉದ್ಯಮಿಯಾಗಲು ಬಯಸುವವರಿಗಾಗಿ ಮಾರಾಟ ಮತ್ತು ಮಾರ್ಕೆಟಿಂಗ್ ಜ್ಞಾನ ಸಿಗಬೇಕು ಅನ್ನೋ ದೃಷ್ಟಿಯಿಂದ ಈ ಕೋರ್ಸ್ ಡಿಸೈನ್ ಮಾಡಲಾಗಿದೆ. ಇಲ್ಲಿ ಅಣಬೆ ಉತ್ಪನ್ನಗಳನ್ನ ತಯಾರಿಸಿ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡುವ ಕುರಿತು ಯುವ ಕೃಷಿ ಉದ್ಯಮಿ ಮನಸ್ವಿ ಹೆಗ್ಡೆ ಕೆ. ಎನ್ ಅವರಿಂದ ನೀವು ಕಲಿಯುವಿರಿ. ಇವರು ಲಾಕ್‌ಡೌನ್ ಸಮಯದಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ಉದ್ಯೋಗ ಕಳೆದುಕೊಂಡು ಹುಟ್ಟೂರಿಗೆ ಮರಳಿ ಅಣಬೆ ಕೃಷಿ ಆರಂಭಿಸಿದ್ರು. ಬೆರಳೆಣಿಕೆ ತಿಂಗಳಲ್ಲೇ ಅಣಬೆ ಮೌಲ್ಯವರ್ಧನೆ ಶುರು ಮಾಡಿ ಸಕ್ಸಸ್‌ಫುಲ್ ಉದ್ಯಮಿ ಆಗಿದ್ದಾರೆ. ಅಣಬೆ ಕೃಷಿಯಿಂದ ಹಿಡಿದು ಅಣಬೆ ಉತ್ಪನ್ನಗಳ ತಯಾರಿಸಿ ಮಾರಾಟ ಮಾಡುವವರೆಗೆ ಅಪಾರ ಜ್ಞಾನ ಹೊಂದಿದ್ದಾರೆ.
ಅಣಬೆ ಬೆಳೆದ ನಂತರ ತಾಜಾ ಅಣಬೆ ಮಾರಾಟ ಮಾಡಬಹುದು. ಒಂದು ವೇಳೆ ಅಣಬೆ ಮಾರಾಟವಾಗದೇ ಉಳಿದ್ರೆ ಅಂತಹ ಅಣಬೆಗಳನ್ನ ಮೌಲ್ಯವರ್ಧನೆ ಮಾಡಿ ಹಾಳಾಗುವ ಅಣಬೆಯನ್ನ ವೇಸ್ಟ್ ಮಾಡದೆ ಉಳಿಸಿಕೊಂಡು ನಷ್ಟದಿಂದ ಬಚಾವಾಗಬಹುದು. ಹಾಗೆಯೇ ಅಣಬೆಯ ಪ್ರಾಡಕ್ಟ್ ಮಾಡಿ ವರ್ಷಗಳವರೆಗೆ ಇಟ್ಟುಕೊಂಡು ಮಾರಾಟ ಮಾಡಲು ಸಾಧ್ಯವಿದೆ. ತಮ್ಮದೇ ಒಂದು ಬ್ರ್ಯಾಂಡ್ ಸೃಷ್ಟಿಮಾಡಿಕೊಂಡು ಜಾಗತಿಕ ಮಟ್ಟದಲ್ಲೇ ಮಾರಾಟ ಮಾಡಿ ಪ್ರತೀ ತಿಂಗಳು ಲಕ್ಷ ಲಕ್ಷ ಸಂಪಾದನೆ ಮಾಡಲು ಸಾಧ್ಯವಿದೆ. ಇಂದು ದೇಶವಷ್ಟೇ ಅಲ್ಲದೆ ವಿದೇಶಗಳಲ್ಲೂ ಅಣಬೆ ಉತ್ಪನ್ನಗಳಿಗೆ ಬೇಡಿಕೆಯನ್ನ ಪೂರೈಸಲಾಗದಷ್ಟು ಡಿಮ್ಯಾಂಡ್ ಇದೆ. ಈ ದೃಷ್ಟಿಯಿಂದ ಅಣಬೆ ಬೆಳೆಯುವ ಕೃಷಿಕರು ಬರೀ ಕೃಷಿಕ ಮಾತ್ರ ಆಗಿರದೆ ಕೃಷಿ ಉದ್ಯಮಿ ಆಗಬೇಕು. ಕೃಷಿ ಉದ್ಯಮಿ ಆಗೋದಕ್ಕೆ ಬೇಕಾಗುವ ಮಾರ್ಕೆಟಿಂಗ್ ಸ್ಟ್ರಾಟಜಿ ತಿಳಿಯಬೇಕು ಅನ್ನೋ ಉದ್ದೇಶದಿಂದಾನೆ ಈ ಕೋರ್ಸ್ ಡಿಸೈನ್ ಆಗಿದೆ.
ಈ ಕೋರ್ಸ್ ಅಣಬೆ ಸೇಲ್ಸ್ ಮತ್ತು ಮಾರ್ಕೆಟಿಂಗ್ ಸ್ಟ್ರಾಟಜಿಗೆ ಸಂಬಂಧಪಟ್ಟಂತೆ ಹಲವಾರು ವಿಷಯಗಳನ್ನ ಒಳಗೊಂಡಿದೆ. ಅಣಬೆ ಮೌಲ್ಯವರ್ಧನೆಯಿಂದ ಏನು ಪ್ರಯೋಜನ? ಅಣಬೆ ಮಾರಾಟಕ್ಕೆ ಯಾವೆಲ್ಲ ಮಾರ್ಗಗಳಿವೆ? ಅಣಬೆ ಶೆಲ್ಫ್ ಲೈಫ್ ಹೆಚ್ಚಿಸುವುದು ಹೇಗೆ? ಬ್ರ್ಯಾಂಡ್ ಬಿಲ್ಡ್ ಮಾಡೋದು ಹೇಗೆ? ಗ್ಲೋಬಲ್ ಬ್ರ್ಯಾಂಡ್‌ಗಳ ಜೊತೆ ನೇರ ಮಾರ್ಕೆಟ್ ಮಾಡುವುದು ಹೇಗೆ? ಲಾಭದ ಲೆಕ್ಕಾಚಾರ ಮಾಡಿಕೊಳ್ಳೋದು ಹೇಗೆ? ಬಿಸಿನೆಸ್ ಮಾಡಲು ಯಾವ್ಯಾವ ಕಾನೂನಿನ ನಿಯಮಗಳನ್ನ ಪಾಲಿಸಬೇಕು ಅನ್ನೋದರ ಬಗ್ಗೆ ಈ ಕೋರ್ಸ್‌ನಲ್ಲಿ ಆಳವಾಗಿ ಮತ್ತು ಸ್ಪಷ್ಟವಾಗಿ ಕಲಿಯುತ್ತೀರಿ.
ಅಷ್ಟೇ ಅಲ್ಲ, ನೀವು ಕೂಡ ಅಣಬೆ ಕೃಷಿ ಮಾಡಿ, ಮೌಲ್ಯವರ್ಧನೆ ಮಾಡಿ ಕೃಷಿ ಉದ್ಯಮಿ ಆಗೋದಕ್ಕೆ ಬೇಕಿರುವ ಎಲ್ಲಾ ಕೌಶಲ್ಯಗಳನ್ನ ಈ ಕೋರ್ಸ್ ಒದಗಿಸುತ್ತದೆ. ಹಾಗೆನೆ ನಿಮ್ಮನ್ನ ಯಶಸ್ವಿ ಅಣಬೆ ಕೃಷಿ ಉದ್ಯಮಿ ಆಗುವಂತೆ ಈ ಕೋರ್ಸ್ ಸಂಪೂರ್ಣ ಸಜ್ಜುಗೊಳಿಸುತ್ತದೆ. ಹಾಗಾಗಿ ಈಗ್ಲೆ ಈ ಕೋರ್ಸ್ ಖರೀದಿಸಿ ಈ ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ ಮತ್ತು ಅಣಬೆ ಸೇಲ್ಸ್ ಮತ್ತು ಮಾರ್ಕೆಟಿಂಗ್ ಸ್ಟ್ರಾಟಜಿಗಳನ್ನ ತಿಳಿದು ಕೃಷಿ ಉದ್ಯಮಿ ಆಗೋ ನಿಮ್ಮ ಕನಸನ್ನ ನನಸು ಮಾಡಿಕೊಳ್ಳಿ. ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಿ.
ಮಶ್ರೂಮ್ ರೆವೆಲ್ಯೂಷನ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಅಣಬೆ ಮತ್ತು ಅಣಬೆ ಉತ್ಪನ್ನಗಳಿಗೆ ಬೇಡಿಕೆ ಬರಲು ಕಾರಣ, ಕೃಷಿಕರು ಯಾಕೆ ಅಣಬೆ ಮೌಲ್ಯವರ್ಧನೆ ಬಿಸಿನೆಸ್ ಮಾಡಬೇಕು ಅನ್ನೋದನ್ನ ಕಲಿಯುತ್ತೀರಿ
ಅಣಬೆಯ ಪ್ರಾಡಕ್ಟ್‌ಗಳನ್ನ ತಯಾರಿಸಿ ಲೋಕಲ್‌ನಿಂದ ಹಿಡಿದು ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಮಾರಾಟ ಮಾಡುತ್ತಿರುವ ಸಕ್ಸಸ್‌ಫುಲ್ ಮಾರ್ಗದರ್ಶಕರ ಪರಿಚಯ ಮಾಡಿಕೊಳ್ಳುತ್ತೀರಿ
ಹಸಿ ಮತ್ತು ಒಣ ಅಣಬೆಗಳನ್ನ ಯಾವ್ಯಾವುದಕ್ಕೆ ಬಳಕೆ ಮಾಡಲಾಗುತ್ತದೆ? ಅಣಬೆಯಿಂದ ಯಾವೆಲ್ಲ ಉತ್ಪನ್ನ ತಯಾರಿಸಬಹುದು ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ಕಲಿಯುತ್ತೀರಿ
ಶೆಲ್ಫ್‌ಲೈಫ್ ಕಡಿಮೆ ಇರುವ ಅಣಬೆ ಹಾಳಾಗದಂತೆ ತಡೆದು ಮೌಲ್ಯವರ್ಧನೆ ಮಾಡಿ ಪ್ರಾಡಕ್ಟ್ ಮಾಡಿದ್ರೆ ಏನೆಲ್ಲ ಉಪಯೋಗವಿದೆ ಅನ್ನೋದನ್ನ ತಿಳಿದುಕೊಳ್ಳುತ್ತೀರಿ
ಾಜಾ ಅಣಬೆ ಮತ್ತು ಅಣಬೆ ಉತ್ಪನ್ನಗಳನ್ನ ಮಾರಾಟ ಮಾಡಲು ಯಾವೆಲ್ಲ ಡಿಸ್ಟ್ರಿಬ್ಯೂಷನ್ ಚಾನೆಲ್‌ಗಳಿವೆ ಅನ್ನೋದನ್ನ ಅರ್ಥಮಾಡಿಕೊಳ್ಳುತ್ತೀರಿ
ಅಣಬೆ ಮತ್ತು ಅಣಬೆ ಉತ್ಪನ್ನಗಳ ಶೆಲ್ಪ್ ಲೈಫ್ ಹೆಚ್ಚಿಸಿ ನಷ್ಟವನ್ನ ತಪ್ಪಿಸುವುದು ಮತ್ತು ಲಾಭ ಹೆಚ್ಚಿಸಿಕೊಳ್ಳುವುದು ಹೇಗೆ ಅನ್ನೋದನ್ನ ಕಲಿಯುತ್ತೀರಿ
ಸ್ವಂತ ಬ್ರ್ಯಾಂಡ್ ಮಾಡಿಕೊಂಡು ಆನ್‌ಲೈನ್ ಪ್ರೆಸೆನ್ಸ್ ಮೂಲಕ ಹೆಚ್ಚು ಗ್ರಾಹರನ್ನ ತಲುಪುವುದು ಹೇಗೆ ಅನ್ನೋದನ್ನ ತಿಳಿದುಕೊಳ್ಳಿ
ಅಣಬೆ ಪ್ರಾಡಕ್ಟ್ ಮಾಡಿದ ಮೇಲೆ ಅದನ್ನ ಅಚ್ಚುಕಟ್ಟಾಗಿ ಮತ್ತು ಆಕರ್ಷಕವಾಗಿ ಪ್ಯಾಕಿಂಗ್ ಮಾಡುವುದು ಹೇಗೆ ಅನ್ನೋದನ್ನ ಕಲಿಯಿರಿ
್ಥಳೀಯ ಮಾರುಕಟ್ಟೆಯಿಂದ ಹಿಡಿದು ರಾಷ್ಟ್ರೀಯ ಮತ್ತು ಗ್ಲೋಬಲ್ ಮಾರುಕಟ್ಟೆಯಲ್ಲಿ ಡೈರೆಕ್ಟ್ ಸೇಲ್ ಮಾಡುವುದು ಹೇಗೆ ಅನ್ನೋದನ್ನ ತಿಳಿದುಕೊಳ್ಳಿ
ಈ ಬಿಸಿನೆಸ್‌ನಲ್ಲಿ ಖರ್ಚು, ಆದಾಯ ಮತ್ತು ಲಾಭದ ಲೆಕ್ಕಾಚಾರವನ್ನ ಕಂಪ್ಲೀಟ್ ಆಗಿ ತಿಳಿದುಕೊಳ್ಳಿ
ಅಣಬೆ ಬಿಸಿನೆಸ್‌ನಲ್ಲಿ ಯಾವೆಲ್ಲ ಕಾನೂನಿನ ನೀತಿ ನಿಯಮಗಳನ್ನ ಪಾಲಿಸಬೇಕಾಗುತ್ತದೆ ಅನ್ನೋದನ್ನ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ
ಮಶ್ರೂಮ್ ಬಿಸಿನೆಸ್‌ನಲ್ಲಿ ಯಾವೆಲ್ಲ ಸವಾಲುಗಳು ಎದುರಾಗುತ್ತವೆ? ಮಾರ್ಗದರ್ಶಕರು ಸವಾಲನ್ನ ಎದುರಿಸಲು ಏನು ಸಲಹೆ ನೀಡ್ತಾರೆ ಅನ್ನೋದನ್ನ ತಿಳಿದುಕೊಳ್ಳಿ
- ಕೃಷಿ ಉದ್ಯಮಿ ಆಗಬಯಸುವ ಕೃಷಿಕರು
- ಕೃಷಿಯಲ್ಲಿ ಸಾಧನೆ ಮಾಡಬೇಕು ಅಂತಿರುವ ಉದ್ಯಮಿಗಳು
- ಅಣಬೆ ಕೃಷಿಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
- ಜಾಗದ ಸದ್ಬಳಕೆ ಮಾಡಬೇಕು ಅಂತಿರುವ ಕೃಷಿಕರು
- ಪಾರ್ಟ್ ಟೈಂ ಕೃಷಿ ಉದ್ಯಮ ಮಾಡಬಯಸುವ ಉದ್ಯೋಗಿಗಳು
- ಕೃಷಿಯಲ್ಲಿ ಆಸಕ್ತಿ ಹೊಂದಿರುವ ಹೊಸಬರು
- ಅಣಬೆ ಮೌಲ್ಯವರ್ಧನೆಯ ತಂತ್ರಗಳನ್ನ ಕಲಿಯಬಹುದು
- ಅಣಬೆ ಉಪಉತ್ಪನ್ನಗಳ ಬಳಕೆ ಅರ್ಥಮಾಡಿಕೊಳ್ಳಬಹುದು
- ಅಣಬೆ ಮಾರ್ಕೆಟಿಂಗ್ ಸ್ಟ್ರಾಟಜಿ ಕಲಿತುಕೊಳ್ಳಬಹುದು
- ಗ್ಲೋಬಲ್ ಬ್ರ್ಯಾಂಡ್‌ಗಳ ಜೊತೆ ಸೇಲ್ಸ್ ಮತ್ತು ಮಾರ್ಕೆಟಿಂಗ್ ತಂತ್ರಗಳನ್ನ ತಿಳಿಯಬಹುದು
- ಕೃಷಿಕನಿಂದ ಕೃಷಿ ಉದ್ಯಮಿ ಆಗೋದು ಹೇಗೆ ಅಂತ ತಿಳಿಯಬಹುದು
- ಮಶ್ರೂಂ ಇಂಡಸ್ಟ್ರಿನಲ್ಲಿ ಗ್ರಾಹಕನ ಟ್ರೆಂಡ್ ಏನಿದೆ ಅನ್ನೋದು ಅರ್ಥಮಾಡಿಕೊಳ್ಳಬಹುದು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...