ನಮ್ಮ ಈ ಕೋರ್ಸ್‌ನೊಂದಿಗೆ ಲಾಭದಾಯಕ ಹಂದಿ ಸಾಕಾಣಿಕೆಯ ಕಲೆಯನ್ನು ಕರಗತ ಮಾಡಿಕೊಳ್ಳಿ ಮತ್ತು ಇಂದೇ ನಿಮ್ಮ ಕೃಷಿ ಸಾಮರ್ಥ್ಯವನ್ನು ಹೆಚ್ಚಿಸಿ. ಪ್ರಾಕ್ಟಿಕಲ್ ಜ್ಞಾನ ಮತ್ತು ಪರಿಣತಿಯೊಂದಿಗೆ ಮಹತ್ವಾಕಾಂಕ್ಷಿ ರೈತರನ್ನು ಸಜ್ಜುಗೊಳಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಯಶಸ್ವಿ ಹಂದಿ ಫಾರ್ಮ್ ಅನ್ನು ಪ್ರಾರಂಭಿಸುವ ಮತ್ತು ನಿರ್ವಹಿಸುವ ಜಟಿಲತೆಗಳನ್ನು ಬಗ್ಗೆ ಇಲ್ಲಿ ಕಲಿಯುತ್ತೀರಿ.
ಬಿಡದಿ ಬಳಿಯ ರಾಮನಹಳ್ಳಿ ಗ್ರಾಮದ ಹೆಸರಾಂತ ಹಂದಿ ಸಾಕಾಣಿಕೆದಾರರಾದ ಮತ್ತು ಗೌರವಾನ್ವಿತ ಮಾರ್ಗದರ್ಶಕರಾದ ಮಂಜುನಾಥ್ ಅವರ ನೇತೃತ್ವದಲ್ಲಿ, ಈ ಕೋರ್ಸ್ ನಿಮಗೆ ಅಗತ್ಯವಾದ ಮತ್ತು ಅಮೂಲ್ಯವಾದ ಒಳನೋಟಗಳನ್ನು ನೀಡುತ್ತದೆ. ಹಂದಿ ಸಾಕಾಣಿಕೆಯಲ್ಲಿ ಮಂಜುನಾಥ್ ಅವರು ಅಪ್ರತಿಮವಾದ ಪರಿಣತಿಯನ್ನು ಹೊಂದಿದ್ದು, ಅವರು ಶ್ರದ್ಧೆಯಿಂದ ಯೋಜನೆಯನ್ನು ರೂಪಿಸುವ ಮೂಲಕ ಮತ್ತು ಪರಿಣಾಮಕಾರಿಯಾಗಿ ಅದಕ್ಕೆ ತಯಾರಿಯನ್ನು ಮಾಡಿಕೊಳ್ಳುವ ಮೂಲಕ ಹಂದಿಮಾಂಸ ಉತ್ಪಾದನೆಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ನೀವು ಅನನುಭವಿ ಅಥವಾ ಹಂದಿ ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳಲು ಬಯಸುವ ಅನುಭವಿ ರೈತರಾಗಿದ್ದರೂ ಸಹ, ಈ ಕೋರ್ಸ್ ನಿಮಗೆ ಮಾರ್ಗದರ್ಶ ನೀಡುತ್ತದೆ. ಇದರ ಮೂಲಕ ನೀವು ಸಾಲಿಡ್ ಹಂದಿ ಸಾಕಾಣಿಕೆ ಬಿಸಿನೆಸ್ ಪ್ಲಾನ್ ಅನ್ನು ಅಭಿವೃದ್ಧಿಪಡಿಸುವ ರಹಸ್ಯಗಳನ್ನು ತಿಳಿಯುವಿರಿ. ಜೊತೆಗೆ ಸರಿಯಾದ ತಳಿಯನ್ನು ಆಯ್ಕೆ ಮಾಡುವುದು ಮತ್ತು ಸೂಕ್ತವಾದ ವಸತಿ ಮತ್ತು ಆಹಾರ ವ್ಯವಸ್ಥೆಯನ್ನು ಸ್ಥಾಪಿಸುವುದರಿಂದ ಹಿಡಿದು ರೋಗ ನಿರ್ವಹಣೆ ಮತ್ತು ಮಾರುಕಟ್ಟೆ ತಂತ್ರಗಳವರೆಗೆ, ಹಂದಿ ಸಾಕಾಣಿಕೆಯ ಪ್ರತಿಯೊಂದು ಅಂಶವನ್ನು ಸಮಗ್ರವಾಗಿ ನೀವು ತಿಳಿಯುವಿರಿ.
ಹಂತ-ಹಂತದ ಸೂಚನೆಗಳು, ಪ್ರಾಯೋಗಿಕ ಡೆಮೋನ್ಸ್ಟ್ರೇಷನ್ ಮತ್ತು ಇಂಟರ್ ಆಕ್ಟಿವ್ ಸೆಷನ್ ಗಳೊಂದಿಗೆ, ನಿಮ್ಮ ಹಂದಿ ಸಾಕಾಣಿಕೆ ಪ್ರಯಾಣವನ್ನು ಆತ್ಮವಿಶ್ವಾಸದಿಂದ ಆರಂಭಿಸಲು ಅಗತ್ಯವಿರುವ ಕೌಶಲ್ಯಗಳನ್ನು ನೀವು ಪಡೆಯುತ್ತೀರಿ. ಹೀಗಾಗಿ ಇಂದೇ ನಮ್ಮ ಈ ಕೋರ್ಸ್ ವೀಕ್ಷಿಸಿ ಮತ್ತು ಲಾಭದಾಯಕ ವೃತ್ತಿಜೀವನವನ್ನು ಕಟ್ಟಕೊಳ್ಳಿ.
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಸೂಕ್ತ ತಳಿಗಳ ಆಯ್ಕೆ
ಮಾರುಕಟ್ಟೆ ಬೇಡಿಕೆ ಮತ್ತು ಪೂರೈಕೆ
ಹಂದಿ ಸಾಕಣೆಯಲ್ಲಿ ಆರ್ಥಿಕ ನಿರ್ವಹಣೆ
ಹಂದಿ ಸಾಕಾಣಿಕೆಗೆ ಸರ್ಕಾರದ ಸೌಲಭ್ಯಗಳು
ಹಂದಿ ಫಾರ್ಮ್ ಗೆ ಸ್ಥಳ ಆಯ್ಕೆ
ಹಂದಿ ಫಾರ್ಮ್ ವಿನ್ಯಾಸ
ಹಂದಿಯ ಆಹಾರ ಮತ್ತು ಪೌಷ್ಟಿಕಾಂಶ
ತ್ಯಾಜ್ಯ ನಿರ್ವಹಣೆ
ಆರೋಗ್ಯ ಮತ್ತು ಜೈವಿಕ ಸುರಕ್ಷತಾ ಕ್ರಮ
ಅಗತ್ಯ ಪರವಾನಗಿ ಮತ್ತು ಅನುಮತಿ
ಕೆಲಸಗಾರರ ಆಯ್ಕೆ ಮತ್ತು ತರಬೇತಿ
ಯುನಿಟ್ ಎಕನಾಮಿಕ್ಸ್
ಮಾರ್ಗದರ್ಶಕರ ಕಿವಿಮಾತು
- ಮಹತ್ವಾಕಾಂಕ್ಷಿ ಹಂದಿ ಕೃಷಿಕರು
- ಹಂದಿ ಸಾಕಾಣಿಕೆಗೆ ತಮ್ಮ ಬಿಸಿನೆಸ್ ವಿಸ್ತರಿಸಲು ಬಯಸುವ ಅನುಭವಿ ರೈತರು
- ಕೃಷಿ ಆಸಕ್ತರು
- ಹಂದಿಮಾಂಸ ಉತ್ಪಾದನೆಯಲ್ಲಿ ಆಸಕ್ತಿ ಹೊಂದಿರುವವರು
- ಲಾಭದಾಯಕ ಕೃಷಿ ಉದ್ಯಮವನ್ನು ಪ್ರಾರಂಭಿಸಲು ಬಯಸುವವರು


- ಹಂದಿ ಫಾರ್ಮ್ ಆರಂಭಿಸುವುದು ಮತ್ತು ನಿರ್ವಹಣೆ
- ಸಮಗ್ರ ಬಿಸಿನೆಸ್ ಪ್ಲಾನ್ ಅನ್ನು ಅಭಿವೃದ್ಧಿಪಡಿಸುವುದು
- ಗರಿಷ್ಠ ಲಾಭಕ್ಕಾಗಿ ಸರಿಯಾದ ಹಂದಿ ತಳಿಗಳ ಆಯ್ಕೆ
- ಪರಿಣಾಮಕಾರಿ ವಸತಿ ಮತ್ತು ಆಹಾರ ವ್ಯವಸ್ಥೆ ಅನುಷ್ಠಾನಗೊಳಿಸುವುದು
- ರೋಗ ನಿರ್ವಹಣೆ ಮತ್ತು ಮಾರುಕಟ್ಟೆ ತಂತ್ರಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...