ffreedom app ನ "ಪಿಎಂ ವಿಶ್ವಕರ್ಮ ಯೋಜನೆ: ₹3 ಲಕ್ಷದವರೆಗೆ ಅಡಮಾನ ರಹಿತ ಲೋನ್ ಪಡೆಯಿರಿ" ಕೋರ್ಸ್ ಗೆ ಸುಸ್ವಾಗತ. ನೀವು ಆರ್ಥಿಕ ನೆರವಿನ ಹುಡುಕಾಟದಲ್ಲಿರುವ ಸ್ವಯಂ ಉದ್ಯೋಗಿ ಕುಶಲಕರ್ಮಿಗಳಾಗಿದ್ದರೆ, ಈ ಕೋರ್ಸ್ ನಿಮಗೆ ಸೂಕ್ತ ಆಯ್ಕೆ. ಪಿಎಂ ವಿಶ್ವಕರ್ಮ ಯೋಜನೆಯ ಎಲ್ಲ ಅಂಶಗಳನ್ನು ನಿಮಗೆ ವಿವರವಾಗಿ ತಿಳಿಸಲು ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ ಮತ್ತು ನಿಮ್ಮ ಬಿಸಿನೆಸ್ ವೆಂಚರ್ ಗಳಿಗೆ ಮೇಲಾಧಾರ-ರಹಿತ ಸಾಲಗಳನ್ನು ಪಡೆಯಲು ಇದು ನಿಮಗೆ ನೆರವಾಗುತ್ತದೆ.
ಕೇಂದ್ರ ಸರ್ಕಾರವು ದೇಶದ ಗ್ರಾಮೀಣ ಮತ್ತು ನಗರ ಪ್ರದೇಶದ ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ಸದೃಢಗೊಳಿಸಲು 'ಪಿಎಂ ವಿಶ್ವಕರ್ಮ ಯೋಜನೆ' ಜಾರಿಗೆ ತಂದಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ 13,000 ಕೋಟಿ ರೂ. ಹಣ ಮೀಸಲಿಟ್ಟಿದೆ. ಈ ಯೋಜನೆ ಅಡಿ ಶೇ 5ರಷ್ಟು ಬಡ್ಡಿದರದಲ್ಲಿ ಒಟ್ಟು 3 ಲಕ್ಷ ರೂಪಾಯಿಯ ಅಡಮಾನ ರಹಿತ ಬ್ಯಾಂಕ್ ಸಾಲ ದೊರೆಯಲಿದೆ. ಮೊದಲ ಕಂತಿನಲ್ಲಿ ದೊರೆತ 1 ಲಕ್ಷ ರೂಪಾಯಿ ಸಾಲಕ್ಕೆ 18 ತಿಂಗಳ ಮರುಪಾವತಿ ಗಡುವು ನೀಡಲಾಗುತ್ತದೆ. ಎರಡನೇ ಕಂತಿನಲ್ಲಿ ದೊರೆತ 2 ಲಕ್ಷ ರೂಪಾಯಿ ಸಾಲ ಮರುಪಾವತಿಗೆ 30 ತಿಂಗಳ ಗಡುವು ನೀಡಲಾಗುತ್ತದೆ. ಸಾಲ ನೀಡುವುದರ ಜೊತೆಗೆ ಕುಶಲಕರ್ಮಿಗಳಿಂದ ತಯಾರಿಸಲ್ಪಡುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಸಹ ಕಲ್ಪಿಸಲಾಗುತ್ತದೆ.18 ಬಗೆಯ ಸಾಂಪ್ರದಾಯಿಕ ಕರಕುಶಲ ಕಲೆಯಲ್ಲಿ ತೊಡಗಿರುವ ಕುಶಲಕರ್ಮಿಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ.
ನೀವೂ ಕೂಡ ಈ ಯೋಜನೆಗೆ ಅರ್ಹರಾಗಿದ್ದೀರಾ ಎಂಬುದನ್ನು ತಿಳಿಯಲು ಬಯಸುವಿರಾ? ಹಾಗಿದ್ದರೆ ನಾವು ನಿಮಗೆ ಸಹಾಯ ಮಾಡುತ್ತೇವೆ! 'ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ'ಯ ಅರ್ಹತಾ ಮಾನದಂಡಗಳ ಬಗ್ಗೆ ಅಗತ್ಯ ಮಾಹಿತಿಯನ್ನು ನಿಮಗೆ ಇಲ್ಲಿ ಒದಗಿಸಿದ್ದೇವೆ. ಇದರ ಜೊತೆಗೆ ಈ ಯೋಜನೆಯ ಉದ್ದೇಶಗಳು, ಪ್ರಯೋಜನಗಳು ಮತ್ತು ನಿಮ್ಮ ಬಿಸಿನೆಸ್ ನ ಭವಿಷ್ಯವನ್ನು ಅದು ಹೇಗೆ ಪರಿವರ್ತಿಸುತ್ತದೆ ಎಂಬುದರ ಕುರಿತು ಆಳವಾದ ಮಾಹಿತಿಯೂ ಈ ಕೋರ್ಸ್‌ನಲ್ಲಿ ಸಿಗುತ್ತದೆ. ಅಲ್ಲದೆ ಯೋಜನೆಯ ವ್ಯಾಪ್ತಿಯಲ್ಲಿ ಬರುವ 18 ಬಗೆಯ ಸಾಂಪ್ರದಾಯಿಕ ಕರಕುಶಲ ಕಲೆಗಳು ಯಾವುವು? ಸರ್ಕಾರದ ಈ ಸೌಲಭ್ಯದ ಮೂಲಕ 3 ಲಕ್ಷ ರೂಪಾಯಿ ಸಾಲ ಪಡೆದುಕೊಳ್ಳುವುದು ಹೇಗೆ? ಏನೇನು ದಾಖಲೆಗಳು ನೀಡಬೇಕಾಗುತ್ತದೆ? ಲೋನ್‌ಗೆ ಅರ್ಜಿ ಸಲ್ಲಿಸುವುದು ಹೇಗೆ? ಪಿ.ಎಂ. ವಿಶ್ವಕರ್ಮ ಮೊಬೈಲ್ ಆ್ಯಪ್ ಬಳಕೆ ಹೇಗೆ? ಅನ್ನುವ ಬಗ್ಗೆಯೂ ಈ ಕೋರ್ಸ್‌ನಲ್ಲಿ ನಿಮ್ಗೆ ಕಲಿಸಲಾಗುತ್ತದೆ. ಅಭಿಷೇಕ್ ರಾಮಪ್ಪ ಅವರ ಮಾರ್ಗದರ್ಶನದಲ್ಲಿ, ನೀವು ಪಿಎಂ ವಿಶ್ವಕರ್ಮ ಯೋಜನೆಯ ಬಗ್ಗೆ ಅಮೂಲ್ಯವಾದ ಜ್ಞಾನವನ್ನು ಪಡೆಯುತ್ತೀರಿ.
ಹೀಗಾಗಿ ಈಗಲೇ ffreedom appನಲ್ಲಿ ನಮ್ಮ ಈ ಕೋರ್ಸ್‌ಗೆ ನೋಂದಾಯಿಸಿಕೊಳ್ಳಿ ಮತ್ತು ಸರ್ಕಾರದ ಈ ಯೋಜನೆಯ ಅವಕಾಶವನ್ನು ಬಳಸಿಕೊಳ್ಳಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಿರಿ. ನೀವು ನಿಮ್ಮ ಬಿಸಿನೆಸ್ ಪ್ರಯಾಣ ಪ್ರಾರಂಭಿಸಲು 3 ಲಕ್ಷ ರೂಪಾಯಿಯನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳಿ ಮತ್ತು ನಿಮ್ಮ ಬಿಸಿನೆಸ್ ನಲ್ಲಿ ಯಶಸ್ಸು ಸಾಧಿಸಿ.
ಈ ಮಾಡ್ಯೂಲ್ ನಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಎಂದರೇನು? ಈ ಸರ್ಕಾರಿ ಯೋಜನೆಯ ಉದ್ದೇಶಗಳೇನು ಅನ್ನುವ ಬಗ್ಗೆ ತಿಳಿದುಕೊಳ್ಳಿ
ಈ ಮಾಡ್ಯೂಲ್ ನಲ್ಲಿ ಪಿಎಂ ವಿಶ್ವಕರ್ಮ ಯೋಜನೆಯ ಅನುಕೂಲಗಳು ಮತ್ತು ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ
ಈ ಮಾಡ್ಯೂಲ್ ನಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಒಳಗೊಳ್ಳುವ ಗ್ರಾಮೀಣ ಮತ್ತು ನಗರ ಪ್ರದೇಶದ 18 ವರ್ಗದ ಕುಶಲಕರ್ಮಿಗಳು ಯಾರು ಅನ್ನುವ ಬಗ್ಗೆ ತಿಳಿದುಕೊಳ್ಳಿ
ಈ ಮಾಡ್ಯೂಲ್‌ನಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಲಾಭ ಪಡೆದುಕೊಳ್ಳಲು ಬೇಕಾಗಿರುವ ಅರ್ಹತಾ ಮಾನದಂಡಗಳು ಮತ್ತು ಬೇಕಾಗುವ ದಾಖಲೆಗಳ ಬಗ್ಗೆ ತಿಳಿದುಕೊಳ್ಳಿ
ಈ ಮಾಡ್ಯೂಲ್ ನಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಿಂದ 3 ಲಕ್ಷ ಸಾಲ ಪಡೆಯುವುದು ಹೇಗೆ? ಸಾಲ ನೀಡುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಯಾವುವು ಅನ್ನುವುದನ್ನು ತಿಳಿದುಕೊಳ್ಳಿ
ಈ ಮಾಡ್ಯೂಲ್ ನಲ್ಲಿ ಪಿಎಂ ವಿಶ್ವಕರ್ಮ ಮೊಬೈಲ್ ಅಪ್ಲಿಕೇಶನ್ ಬಳಸುವುದು ಹೇಗೆಂದು ತಿಳಿಯಿರಿ
ಈ ಮಾಡ್ಯೂಲ್ ನಲ್ಲಿ ಪಿಎಂ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳಿ
ಈ ಮಾಡ್ಯೂಲ್ ನಲ್ಲಿ ಸಲಹೆ ಮತ್ತು ಕಿವಿಮಾತುಗಳನ್ನು ಪಡೆದುಕೊಳ್ಳಿ
- ಅಡಮಾನ-ಮುಕ್ತ ಸಾಲ ಪಡೆಯಲು ಬಯಸುವ ಕುಶಲಕರ್ಮಿಗಳು
- ತಮ್ಮ ಸಾಂಪ್ರದಾಯಿಕ ವ್ಯವಹಾರಗಳನ್ನು ವಿಸ್ತರಿಸಲು ಬಯಸುವ ಕುಶಲಕರ್ಮಿಗಳು
- ಕುಶಲಕರ್ಮಿ ಗ್ರಾಹಕರಿಗೆ ಸಹಾಯ ಮಾಡುವ ಆರ್ಥಿಕ ಸಲಹೆಗಾರರು
- ಕುಶಲಕರ್ಮಿಗಳ ಅಭಿವೃದ್ಧಿಯನ್ನು ಬೆಂಬಲಿಸುವ NGOಗಳು
- ಕುಶಲಕರ್ಮಿಗಳ ಕಲ್ಯಾಣದಲ್ಲಿ ತೊಡಗಿರುವ ಸಾಮಾಜಿಕ ಕಾರ್ಯಕರ್ತರು
- ಪಿಎಂ ವಿಶ್ವಕರ್ಮ ಯೋಜನೆ ಮತ್ತು ಅದರ ಪ್ರಯೋಜನಗಳ ಅವಲೋಕನ
- ಅರ್ಹತಾ ಮಾನದಂಡಗಳು ಮತ್ತು ಅಪ್ಲಿಕೇಶನ್ ಹಂತಗಳು
- 3 ಲಕ್ಷಗಳವರೆಗೆ ಅಡಮಾನ-ಮುಕ್ತ ಸಾಲ ಪಡೆಯುವುದು ಹೇಗೆ?
- ಒಳಗೊಂಡಿರುವ 18 ವಹಿವಾಟುಗಳ ವಿವರವಾದ ಮಾಹಿತಿ
- PM ವಿಶ್ವಕರ್ಮ ಮೊಬೈಲ್ ಅಪ್ಲಿಕೇಶನ್ ಬಳಸುವ ಬಗ್ಗೆ ಮಾರ್ಗದರ್ಶನ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...